Petrol Diesel Price on April 07: ರಾಜಸ್ಥಾನ ಹಾಗೂ ಬಿಹಾರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕುಸಿತ

|

Updated on: Apr 07, 2024 | 7:39 AM

ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಏಪ್ರಿಲ್​ 07, ಭಾನುವಾರದ ಪೆಟ್ರೋಲ್, ಡೀಸೆಲ್ ದರಗಳನ್ನು ಬಿಡುಗಡೆ ಮಾಡಿವೆ, ಬಿಹಾರ, ಜಾರ್ಖಂಡ್​ ಹಾಗೂ ರಾಜಸ್ಥಾನದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕಡಿಮೆಯಾಗಿದೆ.

Petrol Diesel Price on April 07: ರಾಜಸ್ಥಾನ ಹಾಗೂ ಬಿಹಾರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕುಸಿತ
ಪೆಟ್ರೋಲ್
Image Credit source: ReAgent
Follow us on

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಭಾನುವಾರ ಬೆಳಗ್ಗೆ ಸುಮಾರು 7 ಗಂಟೆಗೆ ಡಬ್ಲ್ಯುಟಿಐ ಕಚ್ಚಾ ತೈಲವನ್ನು ಪ್ರತಿ ಬ್ಯಾರೆಲ್‌ಗೆ 86.91 ಡಾಲರ್​ಗೆ ಮಾರಾಟ ಮಾಡಲಾಗುತ್ತಿದೆ. ಅದೇ ಸಮಯದಲ್ಲಿ, ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 91.17 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ. ದೇಶದ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಇತ್ತೀಚಿನ ದರಗಳನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜೂನ್ 2017 ರ ಮೊದಲು, ಪ್ರತಿ 15 ದಿನಗಳಿಗೊಮ್ಮೆ ಬೆಲೆ ಪರಿಷ್ಕರಣೆ ಮಾಡಲಾಗುತ್ತಿತ್ತು.

ಛತ್ತೀಸ್‌ಗಢದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ 48 ಪೈಸೆಗಳಷ್ಟು ಅಗ್ಗವಾಗಿದೆ. ಪಶ್ಚಿಮ ಬಂಗಾಳದಲ್ಲಿ ಪೆಟ್ರೋಲ್ 42 ಪೈಸೆ ಮತ್ತು ಡೀಸೆಲ್ 39 ಪೈಸೆ ಕಡಿಮೆಯಾಗಿದೆ. ಅದೇ ರೀತಿ ಉತ್ತರ ಪ್ರದೇಶದಲ್ಲಿ ಪೆಟ್ರೋಲ್ ಬೆಲೆ 28 ಪೈಸೆ ಹಾಗೂ ಡೀಸೆಲ್ ಬೆಲೆ 32 ಪೈಸೆ ಇಳಿಕೆಯಾಗಿದೆ. ರಾಜಸ್ಥಾನ, ಜಾರ್ಖಂಡ್ ಮತ್ತು ಬಿಹಾರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕುಸಿದಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಆಂಧ್ರಪ್ರದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದೆ.

ಮಹಾನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ
– ದೆಹಲಿಯಲ್ಲಿ ಪೆಟ್ರೋಲ್ 94.72 ರೂ. ಮತ್ತು ಡೀಸೆಲ್ ಲೀಟರ್‌ಗೆ 87.62 ರೂ.
– ಮುಂಬೈನಲ್ಲಿ ಪೆಟ್ರೋಲ್ 104.21 ರೂ. ಮತ್ತು ಡೀಸೆಲ್ 92.15 ರೂ.
– ಕೋಲ್ಕತ್ತಾದಲ್ಲಿ ಪೆಟ್ರೋಲ್ 103.94 ರೂ. ಮತ್ತು ಡೀಸೆಲ್ 90.76 ರೂ.
-ಚೆನ್ನೈನಲ್ಲಿ 90.76 ರೂ. ಮತ್ತು ಡೀಸೆಲ್ ಲೀಟರ್‌ಗೆ 94.34 ರೂ
ಬೆಂಗಳೂರು: ಪೆಟ್ರೋಲ್ ಲೀಟರ್ ಗೆ 99.84 ಮತ್ತು ಡೀಸೆಲ್ ಲೀಟರ್ ಗೆ 85.93 ರೂ.

ಮತ್ತಷ್ಟು ಓದಿ: Petrol Diesel Price on April 05: ಬೆಂಗಳೂರು ಸೇರಿದಂತೆ ದೇಶದ ಎಲ್ಲೆಡೆ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ

ಈ ನಗರಗಳಲ್ಲಿ ಬೆಲೆಗಳು ಎಷ್ಟು ಬದಲಾಗಿವೆ
ನೋಯ್ಡಾದಲ್ಲಿ ಪೆಟ್ರೋಲ್ 94.94 ರೂ ಮತ್ತು ಡೀಸೆಲ್ ಲೀಟರ್‌ಗೆ 88.08 ರೂ ಆಗಿದೆ.
– ಗಾಜಿಯಾಬಾದ್‌ನಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 94.65 ರೂ ಮತ್ತು ಡೀಸೆಲ್ ಲೀಟರ್‌ಗೆ 87.75 ರೂ ಆಗಿದೆ.
– ಲಕ್ನೋದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 94.53 ರೂ ಮತ್ತು ಡೀಸೆಲ್ 87.62 ರೂ ಆಗಿದೆ.
– ಪಾಟ್ನಾದಲ್ಲಿ, ಪ್ರತಿ ಲೀಟರ್ ಪೆಟ್ರೋಲ್ 106.06 ರೂ ಮತ್ತು ಡೀಸೆಲ್ 92.87 ರೂ. ಆಗಿದೆ.
– ಪೋರ್ಟ್ ಬ್ಲೇರ್‌ನಲ್ಲಿ ಪೆಟ್ರೋಲ್ ಲೀಟರ್‌ಗೆ 84.10 ರೂ ಮತ್ತು ಡೀಸೆಲ್ 79.74 ರೂ ಆಗಿದೆ.

ಪೆಟ್ರೋಲ್, ಡೀಸೆಲ್ ನಿಖರ ಬೆಲೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಬೆಳಗ್ಗೆ 6 ಗಂಟೆಗೆ ಹೊಸ ದರಗಳು ಬಿಡುಗಡೆಯಾಗುತ್ತೆ
ಪ್ರತಿದಿನ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬದಲಾವಣೆ ಮತ್ತು ಹೊಸ ದರಗಳು ಬಿಡುಗಡೆಯಾಗುತ್ತವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕ, ಡೀಲರ್ ಕಮಿಷನ್, ವ್ಯಾಟ್ ಮತ್ತು ಇತರ ವಸ್ತುಗಳನ್ನು ಸೇರಿಸಿದ ನಂತರ, ಅದರ ಬೆಲೆಯು ಮೂಲ ಬೆಲೆಗಿಂತ ದ್ವಿಗುಣಗೊಳ್ಳುತ್ತದೆ. ಈ ಕಾರಣದಿಂದಲೇ ನಾವು ಪೆಟ್ರೋಲ್, ಡೀಸೆಲ್ ಅನ್ನು ದುಬಾರಿ ಬೆಲೆಗೆ ಖರೀದಿಸಬೇಕಾಗಿದೆ.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ