ಭಾರತದ ಫಾರೆಕ್ಸ್ ರಿಸರ್ವ್ಸ್ 645 ಬಿಲಿಯನ್ ಡಾಲರ್​ಗೆ ಏರಿಕೆ; ಸಾರ್ವಕಾಲಿಕ ಗರಿಷ್ಠ ಮಟ್ಟ

Forex Reserves of India: ಭಾರತದ ಫಾರೆಕ್ಸ್ ರಿಸರ್ವ್ಸ್ ಸತತ ಆರು ವಾರ ಹೆಚ್ಚಳವಾಗಿದೆ. ಆರ್​ಬಿಐ ಏಪ್ರಿಲ್ 5ರಂದು ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಮಾರ್ಚ್ 29ಕ್ಕೆ ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ ಸಂಪತ್ತು 645.583 ಬಿಲಿಯನ್ ಡಾಲರ್​ಗೆ ಏರಿದೆ. ಹಿಂದಿನ ವಾರದಲ್ಲಿ 642 ಬಿಲಿಯನ್ ಡಾಲರ್​ನಷ್ಟು ಫಾರೆಕ್ಸ್ ಸಂಪತ್ತು ಇದು. ಈ ಬಾರಿ 2.951 ಬಿಲಿಯನ್ ಡಾಲರ್​ನಷ್ಟು ಹೆಚ್ಚಾಗಿದೆ. ಇದು ಸಾರ್ವಕಾಲಿಕ ಗರಿಷ್ಠ ಫಾರೆಕ್ಸ್ ರಿಸರ್ವ್ಸ್ ನಿಧಿಯಾಗಿದೆ.

ಭಾರತದ ಫಾರೆಕ್ಸ್ ರಿಸರ್ವ್ಸ್ 645 ಬಿಲಿಯನ್ ಡಾಲರ್​ಗೆ ಏರಿಕೆ; ಸಾರ್ವಕಾಲಿಕ ಗರಿಷ್ಠ ಮಟ್ಟ
ಫಾರೆಕ್ಸ್ ರಿಸರ್ವ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 07, 2024 | 10:27 AM

ನವದೆಹಲಿ, ಏಪ್ರಿಲ್ 7: ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿರುವ ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ (Forex Reserves of India) ಇನ್ನಷ್ಟು ಹೆಚ್ಚಾಗಿದೆ. ಮಾರ್ಚ್ 29ಕ್ಕೆ ಅಂತ್ಯಗೊಂಡ ವಾರದಲ್ಲಿ 2.951 ಬಿಲಿಯನ್ ಡಾಲರ್​ನಷ್ಟು ಏರಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ 5ರಂದು ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಮಾರ್ಚ್ 29ರಂದು ಫಾರೀನ್ ಎಕ್ಸ್​ಚೇಂಜ್ ರಿಸರ್ವ್ಸ್ 645.583 ಬಿಲಿಯನ್ ಡಾಲರ್ ಇದೆ. ಹಿಂದಿನ ವಾರದಲ್ಲಿ ಮೀಸಲು ಸಂಪತ್ತು 642.631 ಬಿಲಿಯನ್ ಡಾಲರ್ ಇತ್ತು. ಒಟ್ಟಾರೆ ಸತತ ಆರು ವಾರ ಕಾಲ ಫಾರೆಕ್ಸ್ ರಿಸರ್ವ್ಸ್ ಹೆಚ್ಚಳ ಕಂಡಿದ್ದು, ಹೊಸ ದಾಖಲೆಯ ಮಟ್ಟಕ್ಕೆ ಹೋಗಿದೆ. 2021ರ ಸೆಪ್ಟಂಬರ್​ನಲ್ಲಿ ಫಾರೆಕ್ಸ್ ರಿಸರ್ವ್ಸ್ 642 ಬಿಲಿಯನ್ ಡಾಲರ್​ಗೆ ಏರಿ ಸಾರ್ವಕಾಲಿಕ ಗರಿಷ್ಠ ಮಟ್ಟ ಎಂಬ ದಾಖಲೆ ನಿರ್ಮಿಸಿತ್ತು. ಈ ವರ್ಷ ಈ ದಾಖಲೆ ಮುರಿಯಲಾಗಿದೆ.

ಹಿಂದಿನ ವಾರದಲ್ಲಿ 140 ಮಿಲಿಯನ್ ಡಾಲರ್​ನಷ್ಟು ಮೀಸಲು ನಿಧಿ ಹೆಚ್ಚಾಗಿದ್ದರೂ ಗೋಲ್ಡ್ ರಿಸರ್ವ್ಸ್ ಹೊರತುಪಡಿಸಿ ಉಳಿದ ಸಂಪತ್ತು ಕಡಿಮೆ ಆಗಿತ್ತು. ಈ ಬಾರಿ ಚಿನ್ನದ ಸಂಗ್ರಹದ ಜೊತೆಗೆ ವಿದೇಶೀ ಕರೆನ್ಸಿ ಆಸ್ತಿಗಳ ಸಂಗ್ರಹವೂ ಹೆಚ್ಚಾಗಿದೆ.

ಇದನ್ನೂ ಓದಿ: ಮಾಲ್ಡೀವ್ಸ್​ನಲ್ಲಿ ಭಾರತ ವಿರೋಧಿ ಸರ್ಕಾರ ಇದ್ದರೂ ಆ ದೇಶಕ್ಕೆ ಅವಶ್ಯಕ ವಸ್ತುಗಳ ಸರಬರಾಜು ಹೆಚ್ಚಿಸಲು ಭಾರತ ಸಮ್ಮತಿ

ಆರ್​ಬಿಐ ದತ್ತಾಂಶದ ಪ್ರಕಾರ ಫಾರೆಕ್ಸ್ ಮೀಸಲು ನಿಧಿಯಲ್ಲಿ ಪ್ರಮುಖ ಭಾಗವಾಗಿರುವ ಫಾರೀನ್ ಕರೆನ್ಸಿ ಆಸ್ತಿ 2.354 ಬಿಲಿಯನ್ ಡಾಲರ್​ನಷ್ಟು ಹೆಚ್ಚಾಗಿದೆ. ಚಿನ್ನದ ಮೀಸಲು ನಿಧಿ 673 ಮಿಲಿಯನ್ ಡಾಲರ್​ನಷ್ಟು ಏರಿದೆ. ಆದರೆ ಸ್ಪೆಷನ್ ಡ್ರಾಯಿಂಗ್ ರೈಟ್ಸ್ ಮತ್ತು ಐಎಂಎಫ್​ನೊಂದಿಗಿನ ನಿಧಿಯಲ್ಲಿ ಇಳಿಕೆ ಆಗಿದೆ. ಎಸ್​ಡಿಆರ್ 73 ಮಿಲಿಯನ್ ಡಾಲರ್​ನಷ್ಟು ಕಡಿಮೆ ಆದರೆ, ಐಎಂಎಫ್​ನೊಂದಿಗಿನ ಮೀಸಲು ನಿಧಿ 2 ಮಿಲಿಯನ್ ಡಾಲರ್​ನಷ್ಟು ಇಳಿದಿದೆ

ಭಾರತದ ಫಾರೆಕ್ಸ್ ಮೀಸಲು ನಿಧಿ, ಮಾರ್ಚ್ 29ಕ್ಕೆ

ಒಟ್ಟು ಫಾರೆಕ್ಸ್ ಮೀಸಲು ನಿಧಿ: 645.583 ಬಿಲಿಯನ್ ಡಾಲರ್

  • ವಿದೇಶೀ ಕರೆನ್ಸಿ ಆಸ್ತಿ: 570.618 ಬಿಲಿಯನ್ ಡಾಲರ್
  • ಚಿನ್ನದ ಮೀಸಲು ಸಂಪತ್ತು: 52.16 ಬಿಲಿಯನ್ ಡಾಲರ್
  • ಎಸ್​ಡಿಆರ್: 18.145 ಬಿಲಿಯನ್ ಡಾಲರ್
  • ಐಎಂಎಫ್​ನಲ್ಲಿರುವ ನಿಧಿ: 4.66 ಬಿಲಿಯನ್ ಡಾಲರ್

ಇದನ್ನೂ ಓದಿ: ಕಡಿಮೆ ಸಂಬಳ ಇದ್ದರೆ, ಉದ್ಯೋಗ ಕಳೆದುಕೊಂಡರೆ ಸಿಬಿಲ್ ಸ್ಕೋರ್ ಕಡಿಮೆ ಆಗುತ್ತಾ? ಇಲ್ಲಿದೆ ವಾಸ್ತವಿಕ ಅಂಶಗಳು

ಬೇರೆ ದೇಶಗಳಲ್ಲಿ ಎಷ್ಟಿದೆ ಫಾರೆಕ್ಸ್ ರಿಸರ್ವ್ಸ್ ನಿಧಿ

ಜಾಗತಿಕವಾಗಿ ಅತಿಹೆಚ್ಚು ವಿದೇಶೀ ವಿನಿಮಯ ಮೀಸಲು ನಿಧಿ ಹೊಂದಿದ ದೇಶಗಳಲ್ಲಿ ಭಾರತ 4ನೇ ಸ್ಥಾನದಲ್ಲಿ ಮುಂದುವರಿದಿದೆ. ಚೀನಾ 3,225 ಬಿಲಿಯನ್ ಡಾಲರ್​ನಷ್ಟು ಫಾರೆಕ್ಸ್ ಮೀಸಲು ನಿಧಿ ಹೊಂದಿದೆ. ಜಪಾನ್ ಬಳಿಕ 1,290 ಬಿಲಿಯನ್ ಡಾಲರ್, ಸ್ವಿಟ್ಜರ್​ಲ್ಯಾಂಡ್ ಬಳಿ 868 ಬಿಲಿಯನ್ ಡಾಲರ್​ನಷ್ಟು ಫಾರೆಕ್ಸ್ ರಿಸರ್ವ್ಸ್ ಆಸ್ತಿ ಇದೆ. ಇದಾದ ಬಳಿಕ ನಾಲ್ಕನೇ ಸ್ಥಾನದಲ್ಲಿ ಭಾರತ ಇದೆ. ನಂತರದ ಸ್ಥಾನದಲ್ಲಿ ರಷ್ಯಾ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ