Petrol Diesel Price on August 16: ಕಚ್ಚಾತೈಲ ಬೆಲೆ ಏರಿಳಿತ, ದೇಶಾದ್ಯಂತ ಇಂದು ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?

|

Updated on: Aug 16, 2024 | 7:11 AM

ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಆಗಸ್ಟ್​ 16, ಶುಕ್ರವಾರದ ಪೆಟ್ರೋಲ್, ಡೀಸೆಲ್ ದರಗಳನ್ನು ಬಿಡುಗಡೆ ಮಾಡಿವೆ. ಇಂದು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಳಿತ ಕಾಣುತ್ತಿದೆ. ಇಂಧನ ಬೆಲೆ ಸ್ಥಿರವಾಗಿದೆ.

Petrol Diesel Price on August 16: ಕಚ್ಚಾತೈಲ ಬೆಲೆ ಏರಿಳಿತ,  ದೇಶಾದ್ಯಂತ ಇಂದು ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?
ಪೆಟ್ರೋಲ್
Image Credit source: IB Times India
Follow us on

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾಗಿದೆ. ಕಚ್ಚಾ ತೈಲ ಬೆಲೆಯಲ್ಲಿನ ಏರಿಳಿತಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಮೇಲೂ ಪರಿಣಾಮ ಬೀರುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಪ್ರತಿದಿನ ಇತ್ತೀಚಿನ ಇಂಧನ ದರಗಳನ್ನು ಬಿಡುಗಡೆ ಮಾಡುವ ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಅಂದರೆ OMC ಗಳ ಮೇಲೆ ಎಲ್ಲರ ಚಿತ್ತವಿದೆ. ಆಗಸ್ಟ್ 16 ರಂದು ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್​ಗೆ 79.95 ಡಾಲರ್​ ಆಗಿದೆ, ಡಬ್ಲ್ಯೂಟಿಐ ಕಚ್ಚಾತೈಲವು ಪ್ರತಿ ಬ್ಯಾರೆಲ್​ಗೆ 77.22 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ.

ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು
ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 94.76 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 87.66 ರೂ.

ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 103.43 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 89.95 ರೂ.

ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 104.93 ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 91.75 ರೂ.

ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100.73 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 92.32 ರೂ.

ಮತ್ತಷ್ಟು ಓದಿ: Petrol Diesel Price on August 15: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಮತ್ತಷ್ಟು ಹೆಚ್ಚಳ

ಇತರ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು
ನೋಯ್ಡಾ: ಪ್ರತಿ ಲೀಟರ್ ಪೆಟ್ರೋಲ್ ರೂ 94.81 ಮತ್ತು ಡೀಸೆಲ್ ಲೀಟರ್‌ಗೆ ರೂ 87.94

ಗುರುಗ್ರಾಮ: ಪೆಟ್ರೋಲ್ ಲೀಟರ್‌ಗೆ 95.18 ಮತ್ತು ಡೀಸೆಲ್ ಲೀಟರ್‌ಗೆ 88.03 ರೂ.

ಬೆಂಗಳೂರು: ಪೆಟ್ರೋಲ್ ಲೀಟರ್‌ಗೆ 102.84 ಮತ್ತು ಡೀಸೆಲ್ ಲೀಟರ್‌ಗೆ 88.92 ರೂ.

ಚಂಡೀಗಢ: ಪ್ರತಿ ಲೀಟರ್ ಪೆಟ್ರೋಲ್ 94.22 ರೂ. ಮತ್ತು ಡೀಸೆಲ್ ಲೀಟರ್ ಗೆ 82.38 ರೂ

ಹೈದರಾಬಾದ್: ಪೆಟ್ರೋಲ್ ಲೀಟರ್‌ಗೆ 107.39 ರೂ. ಮತ್ತು ಡೀಸೆಲ್ ಲೀಟರ್‌ಗೆ 95.63 ರೂ.

ಜೈಪುರ: ಪೆಟ್ರೋಲ್ ಲೀಟರ್‌ಗೆ 104.86 ಮತ್ತು ಡೀಸೆಲ್ ಲೀಟರ್‌ಗೆ 90.34 ರೂ.

ಪಾಟ್ನಾ: ಪೆಟ್ರೋಲ್ ಲೀಟರ್‌ಗೆ 105.16 ರೂ. ಮತ್ತು ಡೀಸೆಲ್ ಲೀಟರ್‌ಗೆ 92.03 ರೂ.

ಲಕ್ನೋ: ಪ್ರತಿ ಲೀಟರ್ ಪೆಟ್ರೋಲ್ 94.63 ರೂ. ಮತ್ತು ಡೀಸೆಲ್ ಲೀಟರ್‌ಗೆ 87.74 ರೂ.

ಪೆಟ್ರೋಲ್, ಡೀಸೆಲ್ ನಿಖರ ಬೆಲೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯಮಟ್ಟದಲ್ಲಿ ಪೆಟ್ರೋಲ್​ಗೆ ವಿಧಿಸಲಾದ ತೆರಿಗೆಯಿಂದಾಗಿ, ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಭಿನ್ನವಾಗಿವೆ. ನೀವು ನಿಮ್ಮ ಮೊಬೈಲ್​ನಿಂದ ಎಸ್​ಎಂಎಸ್ ಮಾಡುವ ಮೂಲಕ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ತಿಳಿದುಕೊಳ್ಳಬಹುದು. ಇಂಡಿಯನ್ ಆಯಿಲ್ ಗ್ರಾಹಕರು ಆರ್​ಎಸ್​ಪಿ ಕೋಡ್ ಬರೆದು 9224992249 ಸಂಖ್ಯೆಗೆ ಕಳುಹಿಸಬೇಕು.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ