ಒಂದು ಕಾಲದಲ್ಲಿ ಇಡೀ ಭಾರತವನ್ನಾಳಿದ್ದ ಈಸ್ಟ್ ಇಂಡಿಯಾ ಕಂಪನಿಯನ್ನೇ ಖರೀದಿಸಿದ ಭಾರತೀಯ ವ್ಯಕ್ತಿಯ ಕಥೆ

Relaunch of East India Company: 18ನೇ ಶತಮಾನದಿಂದ 19ನೇ ಶತಮಾನದ ಮಧ್ಯಭಾಗದವರೆಗೂ ಭಾರತವನ್ನು ಆಳಿದ್ದ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯನ್ನು 2005ರಲ್ಲಿ ಭಾರತೀಯ ಉದ್ಯಮಿ ಸಂಜೀವ್ ಮೆಹ್ತಾ ಖರೀದಿಸಿದ್ದರು. ವಜ್ರದ ವ್ಯಾಪಾರಿಯ ಮಗನಾದ ಸಂಜೀವ್ ಮೆಹ್ತಾ ಈ ಈಸ್ಟ್ ಇಂಡಿಯಾ ಕಂಪನಿ ಮೂಲಕ ಉತ್ಕೃಷ್ಟ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಭಾರತವನ್ನು ಆಳಿದ ಸಂಸ್ಥೆಯನ್ನು ಭಾರತೀಯನಾಗಿ ಖರೀದಿಸಿದ್ದಕ್ಕೆ ಅವರು ಹೆಮ್ಮೆ ಪಟ್ಟಿದ್ದಾರೆ.

ಒಂದು ಕಾಲದಲ್ಲಿ ಇಡೀ ಭಾರತವನ್ನಾಳಿದ್ದ ಈಸ್ಟ್ ಇಂಡಿಯಾ ಕಂಪನಿಯನ್ನೇ ಖರೀದಿಸಿದ ಭಾರತೀಯ ವ್ಯಕ್ತಿಯ ಕಥೆ
ಸಂಜೀವ್ ಮೆಹ್ತಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 16, 2024 | 11:35 AM

ಭಾರತದ 78ನೇ ಸ್ವಾತಂತ್ರ್ಯೋತ್ಸವ ಮುಗಿದು ಒಂದು ದಿನವಾಗಿದೆ. ಬ್ರಿಟಿಷರು ಈ ದೇಶವನ್ನು ಲೂಟಿ ಮಾಡಿದ ಕಥೆ ಹಲವರಿಗೆ ತಿಳಿದಿರಬಹುದು. ಹಾಗೆಯೇ, ಭಾರತದಲ್ಲಿ ಬ್ರಿಟಿಷ್ ಅರಸರ ಆಳ್ವಿಕೆ ಶುರುವಾಗುವ ಮುನ್ನ ಬ್ರಿಟಿಷರ ಒಂದು ಕಂಪನಿಯ ಆಡಳಿತ ಇತ್ತು ಎಂಬುದು ಗಮನಾರ್ಹ. ಬ್ರಿಟಿಷ್ ವ್ಯಾಪಾರಿಗಳು ಭಾರತದ ಹಲವು ಅರಸೊತ್ತಿಗೆಗಳನ್ನು ಒಂದೊಂದಾಗಿ ಆಕ್ರಮಿಸಿಕೊಳ್ಳುತ್ತಾ ಇಡೀ ಭಾರತವನ್ನು ಕಪಿಮುಷ್ಟಿಯಲ್ಲಿ ಇಟ್ಟುಕೊಂಡ ಸಂಗತಿ ನಿಜಕ್ಕೂ ಎಲ್ಲಾ ದೇಶಪ್ರೇಮಿಗಳಿಗೂ ತಿಳಿದಿರಬೇಕಾದ್ದು. ಇಂಥ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯನ್ನು ಭಾರತೀಯ ಉದ್ಯಮಿಯೊಬ್ಬರು 2005ರಲ್ಲಿ ಖರೀದಿಸಿ ಪುನಾರಂಭಿಸಿದ್ದಾರೆ. ಇವರು ಗುಜರಾತ್ ಮೂಲದ ಉದ್ಯಮಿ ಸಂಜೀವ್ ಮೆಹ್ತಾ. ಚಹಾ, ಗೋಲ್ಡ್ ಕಾಯಿನ್, ಬುಕ್ ಇತ್ಯಾದಿ ವಸ್ತುಗಳ ವ್ಯವಹಾರ ಮಾಡುತ್ತಿದ್ದಾರೆ.

ವಿಶ್ವದ ಅರ್ಧಕ್ಕಿಂತ ಹೆಚ್ಚು ವ್ಯಾಪಾರ ಮಾಡುತ್ತಿದ್ದ ಇಐಸಿ

16 ಮತ್ತು 17ನೇ ಶತಮಾನದಲ್ಲಿ ಆರಂಭವಾದ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿ 17ನೇ ಶತಮಾನದ ಕೊನೆಯಷ್ಟರಲ್ಲಿ ವಿಶ್ವದ ನಂಬರ್ ಒನ್ ಸಂಸ್ಥೆಯಾಗಿತ್ತು. ಜಾಗತಿಕ ವ್ಯಾಪಾರದಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲು ಅದರದ್ದಾಗಿತ್ತು. ಈ ಉದ್ಯಮಿಗಳು ತಮ್ಮದೇ ಸೇನಾ ಪಡೆಗಳನ್ನು ಕಟ್ಟಿಕೊಂಡಿದ್ದರು. ಭಾರತದಲ್ಲಿ ವ್ಯಾಪಾರಕ್ಕೆಂದು ಬಂದವರು ಒಗ್ಗಟ್ಟಿಲ್ಲದೇ ಛಿದ್ರವಾಗಿದ್ದ ಒಂದೊಂದೇ ಭಾರತೀಯ ಸಾಮ್ರಾಜ್ಯಗಳನ್ನು ವಶಕ್ಕೆ ಪಡೆದುಕೊಳ್ಳುತ್ತಾ ಹೋಗಿದ್ದರು. ಬ್ರಿಟಿಷ್ ರಾಣಿಯ ಅನುಮತಿ ಪಡೆದುಕೊಂಡೇ ಇವರು ಭಾರತವನ್ನು ಆಳ್ವಿಕೆ ಮಾಡುತ್ತಿದ್ದರು.

ಇದನ್ನೂ ಓದಿ: ಸ್ವಾತಂತ್ರ್ಯ ಬಂದಾಗ ಭಾರತದ ಆರ್ಥಿಕತೆ ಹೇಗಿತ್ತು? ಬ್ರಿಟಿಷರು ಬರುವ ಮುನ್ನ ಹೇಗಿತ್ತು?

1757ರಲ್ಲಿ ಅಫ್ಘಾನಿಸ್ತಾನದಿಂದ ಹಿಡಿದು ಬಾಂಗ್ಲಾದೇಶದವರೆಗೆ ಭಾರತೀಯ ಉಪಖಂಡದ ಬಹುತೇಕ ಪ್ರದೇಶಗಳು ಈಸ್ಟ್ ಇಂಡಿಯಾ ತೆಕ್ಕೆಗೆ ಹೋಗಿದ್ದವು. 1857ರಲ್ಲಿ ನಡೆದ ಸಿಪಾಯಿ ದಂಗೆಯಲ್ಲಿ ಬ್ರಿಟಿಷ್ ಸೇನೆಯಲ್ಲಿದ್ದ ಬಹಳಷ್ಟು ಭಾರತೀಯ ಸೈನಿಕರು ಬಂಡೆದಿದ್ದರು. ಆದರೆ, ಈ ದಂಗೆ ಸಫಲವಾಗಲಿಲ್ಲ. ಭಾರತದ ಮೇಲೆ ಬ್ರಿಟಿಷರ ಹಿಡಿತ ಇನ್ನಷ್ಟು ಹೆಚ್ಚಾಯಿತು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತವನ್ನು ಬ್ರಿಟಿಷ್ ಅರಸರು ಹಿಂಪಡೆದುಕೊಂಡರು. ನೇರವಾಗಿ ಬ್ರಿಟಿಷ್ ರಾಣಿಯೇ ಭಾರತವನ್ನು ಆಳ್ವಿಕೆ ಮಾಡತೊಡಗಿದರು.

ತಮ್ಮ ಸ್ವಂತ ಬಲದಲ್ಲಿ ಭಾರತವನ್ನು ಆಕ್ರಮಿಸಿಕೊಂಡಿದ್ದ ಈಸ್ಟ್ ಇಂಡಿಯಾ ಕಂಪನಿ ಅನೂರ್ಜಿತಗೊಂಡಿತು. ಇತಿಹಾಸ ಪುಟ ಸೇರಿಕೊಂಡಿತು. 1980ರ ದಶಕದಲ್ಲಿ ಬ್ರಿಟನ್ ರಾಣಿಯ ಅನುಮತಿ ಪಡೆದು ಲಂಡನ್​ನ ಕೆಲವರು ಈಸ್ಟ್ ಇಂಡಿಯಾ ಕಂಪನಿಗೆ ಮರುಜೀವ ಕೊಟ್ಟು ಟೀ ಮತ್ತು ಕಾಫಿ ವ್ಯಾಪಾರ ಮಾಡತೊಡಗಿದರು.

ಇದನ್ನೂ ಓದಿ: ಹಿಂದೂಸ್ತಾನ್ ಜಿಂಕ್ ಕಂಪನಿಯ ಷೇರುದಾರರಿಗೆ ಸುಗ್ಗಿ; ಸಿಗಲಿದೆ ಬರೋಬ್ಬರಿ 14,000 ಕೋಟಿ ರೂ ಮೊತ್ತದಷ್ಟು ಲಾಭಾಂಶ

ಇಐಸಿ ಖರೀದಿಸಿದ ಸಂಜೀವ್ ಮೆಹ್ತಾ

ಸಂಜೀವ್ ಮೆಹ್ತಾ ತಂದೆ ಬ್ರಿಟಿಷರ ಕಾಲದಲ್ಲೇ ಬೆಲ್ಜಿಯಂನಲ್ಲಿ ದೊಡ್ಡ ವಜ್ರದ ವ್ಯಾಪಾರಿಯಾಗಿದ್ದರು. ಪ್ರಬಲ ಬಿಸಿನೆಸ್ ಹಿನ್ನೆಲೆಯಲ್ಲಿ ಬೆಳೆದ ಸಂಜೀವ್ ಮೆಹ್ತಾ ಅಮೆರಿಕದಲ್ಲಿ ಹರಳು ವಿದ್ಯೆಯಲ್ಲಿ ಪರಿಣಿತಿ ಪಡೆದರು. ರಫ್ತು ವ್ಯವಹಾರಗಳನ್ನು ಮಾಡುತ್ತಿದ್ದ ಅವರು ಈಸ್ಟ್ ಇಂಡಿಯಾ ಕಂಪನಿಯನ್ನು ಖರೀದಿಸುವ ಆಲೋಚನೆ ಮಾಡಿದರು. 2005ರಲ್ಲಿ ಆ ಕಂಪನಿಯ ಷೇರುಗಳನ್ನು ಖರೀದಿಸಿದರು.

ಭಾರತವನ್ನು ಆಳಿದ ಒಂದು ಕಂಪನಿಯನ್ನು ಭಾರತೀಯನಾಗಿ ಖರೀದಿಸುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ಸಂಜೀವ್ ಮೆಹ್ತಾ ಹೇಳುತ್ತಾರೆ. ಅವರ ಪಾಲಿಗೆ ಈ ಕಂಪನಿ ಲಾಭಕ್ಕೆ ಅಲ್ಲ, ಭಾವನಾತ್ಮಕವಾಗಿ ಮುಖ್ಯವಂತೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಎಕ್ಸಿಟ್ ಪೋಲ್​ಗಳು ನೀಡುವ ಭವಿಷ್ಯದ ಮೇಲೆ ವಿಶ್ವಾಸವಿಲ್ಲ: ಶಿವಲಿಂಗೇಗೌಡ
ಎಕ್ಸಿಟ್ ಪೋಲ್​ಗಳು ನೀಡುವ ಭವಿಷ್ಯದ ಮೇಲೆ ವಿಶ್ವಾಸವಿಲ್ಲ: ಶಿವಲಿಂಗೇಗೌಡ
ಪರ್ತ್​ ಟೆಸ್ಟ್‌ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಆಡುವ ಅವಕಾಶ..!
ಪರ್ತ್​ ಟೆಸ್ಟ್‌ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಆಡುವ ಅವಕಾಶ..!
ಬಡವರ ಅನ್ನ ಕಸಿದು ಮಂತ್ರಿಗಳ ಬಂಗ್ಲೆ ರಿನೋವೇಶನ್ ಗೆ ಹಣ ಬಳಕೆ: ಆರ್​. ಅಶೋಕ
ಬಡವರ ಅನ್ನ ಕಸಿದು ಮಂತ್ರಿಗಳ ಬಂಗ್ಲೆ ರಿನೋವೇಶನ್ ಗೆ ಹಣ ಬಳಕೆ: ಆರ್​. ಅಶೋಕ
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP