AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೂಸ್ತಾನ್ ಜಿಂಕ್ ಕಂಪನಿಯ ಷೇರುದಾರರಿಗೆ ಸುಗ್ಗಿ; ಸಿಗಲಿದೆ ಬರೋಬ್ಬರಿ 14,000 ಕೋಟಿ ರೂ ಮೊತ್ತದಷ್ಟು ಲಾಭಾಂಶ

Hindustan Zinc special dividend: ಜಿಂಕ್ ಮತ್ತು ಬೆಳ್ಳಿ ಗಣಿಗಾರಿಕೆ ನಡೆಸುವ ಹಿಂದೂಸ್ತಾನ್ ಜಿಂಕ್ ಸಂಸ್ಥೆಯ ಷೇರುದಾರರಿಗೆ 8,000 ಕೋಟಿ ರೂ ಸ್ಪೆಷಲ್ ಡಿವಿಡೆಂಡ್ ಘೋಷಣೆ ಆಗಲಿದೆ. ಸಂಸ್ಥೆಯ ಪ್ರಮುಖ ಷೇರುದಾರಿಕೆ ಹೊಂದಿರುವ ವೇದಾಂತ ಗ್ರೂಪ್ ಮತ್ತು ಸರ್ಕಾರಕ್ಕೆ ಭರ್ಜರಿ ಆದಾಯ ರವಾನೆಯಾಗಲಿದೆ. ಹಿಂದೂಸ್ತಾನ್ ಜಿಂಕ್​ನಲ್ಲಿ ಶೇ. 65ರಷ್ಟು ಷೇರುಪಾಲು ಹೊಂದಿರುವ ವೇದಾಂತ ಲಿ ಸಂಸ್ಥೆ ಶೇ. 3ಕ್ಕಿಂತ ಹೆಚ್ಚಿನ ಷೇರುಗಳನ್ನು ಮಾರುತ್ತಿದೆ.

ಹಿಂದೂಸ್ತಾನ್ ಜಿಂಕ್ ಕಂಪನಿಯ ಷೇರುದಾರರಿಗೆ ಸುಗ್ಗಿ; ಸಿಗಲಿದೆ ಬರೋಬ್ಬರಿ 14,000 ಕೋಟಿ ರೂ ಮೊತ್ತದಷ್ಟು ಲಾಭಾಂಶ
ಹಿಂದೂಸ್ತಾನ್ ಜಿಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 16, 2024 | 10:23 AM

Share

ನವದೆಹಲಿ, ಆಗಸ್ಟ್ 16: ವೇದಾಂತ ಗ್ರೂಪ್​ಗೆ ಸೇರಿದ ಹಿಂದೂಸ್ತಾನ್ ಜಿಂಕ್ ಸಂಸ್ಥೆ ಈ ಹಣಕಾಸು ವರ್ಷಕ್ಕೆ ತನ್ನ ಷೇರುದಾರರಿಗೆ 8,000 ಕೋಟಿ ರೂ ವಿಶೇಷ ಲಾಭಾಂಶ ನೀಡಲು ಯೋಜಿಸುತ್ತಿದೆ. ಇದು ವಾರ್ಷಿಕವಾಗಿ ನೀಡುವ 6,000 ಕೋಟಿ ರೂ ಡಿವಿಡೆಂಡ್​ಗೆ ಹೊರತಾಗಿ ಕೊಡಲಿರುವ ಹೆಚ್ಚುವರಿ ಪ್ಯಾಕೇಜ್ ಆಗಿದೆ. ಇತ್ತೀಚೆಗಷ್ಟೇ ಅದು ತನ್ನ ಷೇರುದಾರರಿಗೆ ಪ್ರತೀ ಷೇರಿಗೆ 10 ರೂನಂತೆ ಮಧ್ಯಂತರ ಲಾಭಾಂಶವನ್ನು ಘೋಷಿಸಿತ್ತು. ಇದೇ ಮಂಗಳವಾರದಂದು (ಆ. 20) ಹಿಂದೂಸ್ತಾನ್ ಜಿಂಕ್​ನ ಮಂಡಳಿ ಸಭೆ ನಡೆಯಲಿದ್ದು, ಅಲ್ಲಿ 8,000 ಕೋಟಿ ರೂ ಮೊತ್ತದ ಸ್ಪೆಷಲ್ ಡಿವಿಡೆಂಡ್ ಹಂಚಿಕೆ ಮಾಡುವ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಈ ಎಂಟು ಸಾವಿರ ಕೋಟಿ ರೂ ಡಿವಿಡೆಂಡ್​ನಲ್ಲಿ ಶೇ. 30ರಷ್ಟು, ಅಂದರೆ 2,400 ಕೋಟಿ ರೂ ಮೊತ್ತವು ಕೇಂದ್ರಕ್ಕೆ ಸಲ್ಲಿಕೆಯಾಗಲಿದೆ. ಹಿಂದೂಸ್ತಾನ್ ಜಿಂಕ್​ನಲ್ಲಿ ಮಾಲೀಕರ ಷೇರುಪಾಲು ಶೇ. 65ರಷ್ಟಿದೆ. ಸರ್ಕಾರ ಹೊಂದಿರುವ ಷೇರುಪಾಲು ಶೇ. 30ಕ್ಕೆ ಸನಿಹದಷ್ಟಿದೆ. ಈ ಎಂಟು ಸಾವಿರ ಕೋಟಿ ರೂ ವಿಶೇಷ ಲಾಭಾಂಶದಲ್ಲಿ ಮಾಲೀಕ ಸಂಸ್ಥೆಯಾದ ವೇದಾಂತ ಗ್ರೂಪ್​ಗೆ ಸುಮಾರು 5,100 ಕೋಟಿ ರೂನಷ್ಟು ಹಣ ವರ್ಗಾವಣೆ ಆಗಲಿದೆ. ಇದು ವೇದಾಂತ ಸಂಸ್ಥೆಯ ಸಾಲದ ಹೊರೆ ಕಡಿಮೆ ಮಾಡಲು ಸಹಾಯವಾಗಲಿದೆ.

ಇದನ್ನೂ ಓದಿ: 22 ವರ್ಷಗಳಿಂದ ಒಂದೇ ಸಂಬಳ ಕೊಡುತ್ತಿರುವ ಈ ಐಟಿ ಕಂಪನಿಯಲ್ಲಿ ಈ ವರ್ಷ ಆದ ಸ್ಯಾಲರಿ ಹೈಕ್ ಶೇ. 1 ಮಾತ್ರ

ಈ ವಿಶೇಷ ಡಿವಿಡೆಂಡ್ ಪ್ರತೀ ಷೇರಿಗೆ 14.20 ರೂನಂತೆ ವಿತರಣೆ ಆಗುತ್ತದೆ. ವಾರ್ಷಿಕ ಡಿವಿಡೆಂಡ್ ಜೊತೆಗೆ ಇದು ಹೆಚ್ಚುವರಿಯಾಗಿ ನೀಡುವ ಲಾಭಾಂಶವಾಗಿದೆ.

ಶೇ. 3.31ರಷ್ಟು ಷೇರುಪಾಲು ಮಾರಲಿರುವ ವೇದಾಂತ

ಹಿಂದೂಸ್ತಾನ್ ಜಿಂಕ್​ನಲ್ಲಿ ಶೇ. 65ರಷ್ಟು ಷೇರುಪಾಲು ಹೊಂದಿರುವ ವೇದಾಂತ ಸಂಸ್ಥೆ, ಇದರಲ್ಲಿ ಶೇ. 3.31ರಷ್ಟು ಪಾಲಿನ ಷೇರುಗಳನ್ನು ಮಾರಲು ಹೊರಟಿದೆ. ವರದಿಗಳ ಪ್ರಕಾರ, ಇಂದಿನಿಂದ, ಅಂದರೆ ಆಗಸ್ಟ್ 16ರಿಂದ 19ರವರೆಗೂ ಆಫರ್ ಫಾರ್ ಸೇಲ್ ಮೂಲಕ ಷೇರುಗಳ ಬಿಕರಿಯಾಗಲಿದೆ.

ಇದನ್ನೂ ಓದಿ: ಹಣಕಾಸು ಸ್ವಾತಂತ್ರ್ಯ ಕಲ್ಪಿಸುವ FIRE ಪ್ಲಾನ್; ಜೀವನ ಆನಂದಿಸಲು ಇದು ಸೂಪರ್ ಸೂತ್ರವಾ?

ಒಟ್ಟು ಸುಮಾರು 14 ಕೋಟಿ ಷೇರುಗಳು ಮಾರಾಟಕ್ಕಿರಲಿವೆ. ಪ್ರತೀ ಷೇರಿಗೆ 486 ರೂ ಬೆಲೆ ನಿಗದಿ ಮಾಡಲಾಗಿದೆ. ಅಂದರೆ ನಿನ್ನೆಯ ದಿನಾಂತ್ಯದಲ್ಲಿದ್ದ ಷೇರುಬೆಲೆಗಿಂತ ಶೇ. 15ರ ರಿಯಾಯಿತಿ ದರದಲ್ಲಿ ಇವುಗಳನ್ನು ಮಾರಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ