AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

22 ವರ್ಷಗಳಿಂದ ಒಂದೇ ಸಂಬಳ ಕೊಡುತ್ತಿರುವ ಈ ಐಟಿ ಕಂಪನಿಯಲ್ಲಿ ಈ ವರ್ಷ ಆದ ಸ್ಯಾಲರಿ ಹೈಕ್ ಶೇ. 1 ಮಾತ್ರ

IT company Cognizant's salary hike: ಮೋಮೋ ಶಾಪ್​ನಲ್ಲಿ ಕೆಲಸಕ್ಕೆ ಕೊಡುವ ಸಂಬಳಕ್ಕಿಂತಲೂ ಕಡಿಮೆ ಸಂಬಳವನ್ನು ಆಫರ್ ಮಾಡಲಾಗುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಾಗ್ನೈಜೆಂಟ್ ಅನ್ನು ಟ್ರೋಲ್ ಮಾಡಲಾಗುತ್ತಿದೆ. ಈಗ ಈ ಐಟಿ ಕಂಪನಿ ತನ್ನ ಉದ್ಯೋಗಿಗಳಿಗೆ ಶೇ. 1ರಿಂದ 5ರಷ್ಟು ಮಾತ್ರವೇ ಸ್ಯಾಲರಿ ಹೈಕ್ ಮಾಡಿದೆ ಎನ್ನುವಂತಹ ಸುದ್ದಿ ಇದೆ. ಕಳೆದ ವರ್ಷ ಈ ಕಂಪನಿ ಶೇ. 7ರಷ್ಟು ಸಂಬಳ ಹೆಚ್ಚಳ ಮಾಡಿತ್ತು.

22 ವರ್ಷಗಳಿಂದ ಒಂದೇ ಸಂಬಳ ಕೊಡುತ್ತಿರುವ ಈ ಐಟಿ ಕಂಪನಿಯಲ್ಲಿ ಈ ವರ್ಷ ಆದ ಸ್ಯಾಲರಿ ಹೈಕ್ ಶೇ. 1 ಮಾತ್ರ
ಕಾಗ್ನೈಜೆಂಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 15, 2024 | 5:15 PM

Share

ನವದೆಹಲಿ, ಆಗಸ್ಟ್ 15: ಪ್ರಮುಖ ಐಟಿ ಸರ್ವಿಸ್ ಕಂಪನಿಯಾದ ಕಾಗ್ನೈಜೆಂಟ್ ತನ್ನ ಹೊಸ ನೇಮಕಾತಿಯಲ್ಲಿ ವರ್ಷಕ್ಕೆ 2.5 ಲಕ್ಷ ರೂ ಸಂಬಳ ಆಫರ್ ಮಾಡುತ್ತಿರುವುದು ಸೋಷಿಯಲ್ ಮೀಡಿಯಾದಲ್ಲಿ ಬಹಳ ಟ್ರೋಲ್ ಆಗುತ್ತಿದೆ. ಇದೇ ಹೊತ್ತಲ್ಲಿ ಕಾಗ್ನೈಜೆಂಟ್ ಕಂಪನಿ ತನ್ನ ಉದ್ಯೋಗಿಗಳಿಗೆ ಶೇ. 1ರಿಂದ ಶೇ. 5ರ ಶ್ರೇಣಿಯಲ್ಲಿ ಸಂಬಳ ಹೆಚ್ಚಳ ಮಾಡಲಾಗಿದೆ ಎಂಬಂತಹ ಸುದ್ದಿ ಕೇಳಿಬರುತ್ತಿದೆ. ಈ ವಿಚಾರ ಕೂಡ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯ ಸರಕಾಗಿದೆ.

ವಿಪರ್ಯಾಸ ಎಂದರೆ ಕಾಗ್ನೈಜೆಂಟ್​ನ ಸಿಇಒ ಆಗಿರುವ ರವಿಕುಮಾರ್ ಭಾರತದ ಐಟಿ ವಲಯದಲ್ಲಿ ಅತಿಹೆಚ್ಚು ಸಂಬಳ ಪಡೆಯುವ ಸಿಇಒ ಎನಿಸಿದ್ದಾರೆ. 2023ರಲ್ಲಿ ರವಿಕುಮಾರ್ ಅವರಿಗೆ ಸಿಕ್ಕ ವಾರ್ಷಿಕ ಸ್ಯಾಲರಿ ಪ್ಯಾಕೇಜ್ ಬರೋಬ್ಬರಿ 22.56 ಮಿಲಿಯನ್ ಡಾಲರ್. ಅಂದರೆ ಸುಮಾರು 186 ಕೋಟಿ ರೂ. ಕಾಗ್ನೈಜೆಂಟ್​ನ ಉದ್ಯೋಗಿಗಳ ಸರಾಸರಿ ಸಂಬಳಕ್ಕಿಂತ ಸಿಇಒ ಸಂಬಳ 556 ಪಟ್ಟು ಹೆಚ್ಚು.

ಇದನ್ನೂ ಓದಿ: ಹಣಕಾಸು ಸ್ವಾತಂತ್ರ್ಯ ಕಲ್ಪಿಸುವ FIRE ಪ್ಲಾನ್; ಜೀವನ ಆನಂದಿಸಲು ಇದು ಸೂಪರ್ ಸೂತ್ರವಾ?

2002ರಿಂದಲೂ ಕಾಗ್ನೈಜೆಂಟ್​ನ ಆರಂಭಿಕ ಸಂಬಳ ಅಷ್ಟೇ ಇದೆ…

ಹೊಸಬ ಎಂಜಿನಿಯರುಗಳಿಗೆ ಕಾಗ್ನೈಜೆಂಟ್ ಕಂಪನಿ ವರ್ಷಕ್ಕೆ 2.5 ಲಕ್ಷ ರೂ ಸಂಬಳ ಆಫರ್ ಮಾಡುತ್ತಿರುವ ವಿಚಾರ ಟ್ರೋಲ್ ಆಗುತ್ತಿರುವುದು ಹೌದು. ಸೋಷಿಯಲ್ ಮೀಡಿಯಾದಲ್ಲಿ ಯಾರೋ ಒಬ್ಬರು ಈ ಬಗ್ಗೆ ಪೋಸ್ಟ್ ಹಾಕಿದ್ದು, ಮೋಮೋ ಶಾಪ್​ನಲ್ಲಿ ಕೆಲಸ ಮಾಡುವವರಿಗೆ 3 ಲಕ್ಷ ರೂ ಸಂಬಳ ಆಫರ್ ಮಾಡಿರುವುದನ್ನು ಹೋಲಿಕೆ ಮಾಡಿ ಕಾಗ್ನೈಜೆಂಟ್ ಅನ್ನು ಟ್ರೋಲ್ ಮಾಡಿದ್ದಾರೆ.

ಕುತೂಹಲ ಎಂದರೆ, 2002ರಲ್ಲಿ ಕಾಗ್ನೈಜೆಂಟ್ ಕಂಪನಿ ಫ್ರೆಷರ್ಸ್​ಗೆ 2.5 ಲಕ್ಷ ರೂ ಸಂಬಳ ಆಫರ್ ಮಾಡುತ್ತಿತ್ತು. 22 ವರ್ಷಗಳ ಬಳಿಕವೂ ಅದರಲ್ಲಿ ಯಾವ ಬದಲಾವಣೆಯೂ ಆಗಿಲ್ಲ.

ಇದನ್ನೂ ಓದಿ: ಒಳ್ಳೆಯ ದೇಶದಲ್ಲಿ, ಒಳ್ಳೆಯ ಕಾಲಘಟ್ಟದಲ್ಲಿ ಹುಟ್ಟಿರುವ ನೀವು ನಾವೇ ಪುಣ್ಯವಂತರು: ಡಾ. ದೇವಿಶೆಟ್ಟಿ

ಕಾಗ್ನೈಜೆಂಟ್ ಯುಕೆ ಮೂಲದ ಐಟಿ ಸರ್ವಿಸ್ ಕಂಪನಿ. ಜಾಗತಿಕವಾಗಿ ಮೂರು ಲಕ್ಷಕ್ಕಿಂತಲೂ ಹೆಚ್ಚು ಉದ್ಯೋಗಿಗಳಿದ್ದಾರೆ. ಇವರಲ್ಲಿ ಶೇ. 70ರಷ್ಟು ಉದ್ಯೋಗಿಗಳು ಭಾರತದಲ್ಲಿದ್ದಾರೆ. ಅದರ ಭಾರತೀಯ ಕಚೇರಿಗಳಲ್ಲಿ ಒಟ್ಟು ಇರುವ ಉದ್ಯೋಗಿಗಳ ಸಂಖ್ಯೆ ಎರಡೂವರೆ ಲಕ್ಷಕ್ಕೂ ಹೆಚ್ಚು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ