Petrol Price on January 20: ಇಳಿಕೆಯಾಗಿದ್ದ ಕಚ್ಚಾ ತೈಲದ ಬೆಲೆ ಮತ್ತೆ ಏರಿಕೆ; ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ

| Updated By: ಸುಷ್ಮಾ ಚಕ್ರೆ

Updated on: Jan 20, 2023 | 8:01 AM

Fuel Price Today: ರಾಜಸ್ಥಾನ, ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ ಇಂಧನದ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದೆ. ಮೆಟ್ರೋಪಾಲಿಟನ್ ನಗರಗಳ ಪೈಕಿ ಚೆನ್ನೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮಾತ್ರ ಸ್ವಲ್ಪ ಬದಲಾವಣೆಯಾಗಿದೆ.

Petrol Price on January 20: ಇಳಿಕೆಯಾಗಿದ್ದ ಕಚ್ಚಾ ತೈಲದ ಬೆಲೆ ಮತ್ತೆ ಏರಿಕೆ; ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ
ಪೆಟ್ರೋಲ್ ಬೆಲೆ
Follow us on

ನವದೆಹಲಿ: ಇಂದು (ಶುಕ್ರವಾರ) ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Fuel Price) ಬೆಲೆಯಲ್ಲಿ ಮತ್ತೆ ಜಿಗಿತ ಕಂಡುಬಂದಿದೆ. ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 86.16 ಡಾಲರ್ ತಲುಪಿದೆ. ಹಾಗೇ, WTI ಪ್ರತಿ ಬ್ಯಾರೆಲ್‌ಗೆ 80.80 ಡಾಲರ್​ಗೆ ಮಾರಾಟವಾಗುತ್ತಿದೆ. ಪ್ರತಿದಿನದಂತೆ ಇಂದು ಕೂಡ ಸರ್ಕಾರಿ ತೈಲ ಕಂಪನಿಗಳು ದೇಶದಲ್ಲಿ ಪೆಟ್ರೋಲ್ (Petrol Price) ಮತ್ತು ಡೀಸೆಲ್ (Diesel Price) ಹೊಸ ಬೆಲೆಗಳನ್ನು ಬಿಡುಗಡೆ ಮಾಡಿದೆ. ದೇಶದ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಬದಲಾವಣೆ ಕಂಡು ಬರುತ್ತಿದೆ.

ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಬೆಲೆ 25 ಪೈಸೆ ಹೆಚ್ಚಾಗಿ 106.21 ರೂ. ಆಗಿದೆ. ಡೀಸೆಲ್ ಬೆಲೆ 24 ಪೈಸೆ ಏರಿಕೆಯಾಗಿ 92.73 ರೂ. ಆಗಿದೆ. ಪಂಜಾಬ್‌ನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 25 ಪೈಸೆಗಳಷ್ಟು ಅಗ್ಗವಾಗಿ 96.35 ರೂ. ಆಗಿದೆ. ಡೀಸೆಲ್ ಬೆಲೆ ಕೂಡ 25 ಪೈಸೆ ಅಗ್ಗವಾಗಿದ್ದು, 86.71 ರೂ.ಗೆ ಮಾರಾಟವಾಗುತ್ತಿದೆ. ರಾಜಸ್ಥಾನ, ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ ಇಂಧನದ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದೆ. ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗುರುವಾರದಂತೆಯೇ ಇದೆ. ಮೆಟ್ರೋಪಾಲಿಟನ್ ನಗರಗಳ ಪೈಕಿ ಚೆನ್ನೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮಾತ್ರ ಸ್ವಲ್ಪ ಬದಲಾವಣೆಯಾಗಿದೆ.

ಇದನ್ನೂ ಓದಿ: Petrol Price on January 4: ಕಚ್ಚಾ ತೈಲದ ಬೆಲೆ 3 ಡಾಲರ್ ಕುಸಿತ; ಭಾರತದಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ:

ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 96.72 ರೂ. ಮತ್ತು ಡೀಸೆಲ್ ಬೆಲೆ 89.62 ರೂ. ಆಗಿದೆ.
ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 106.31 ರೂ. ಮತ್ತು ಡೀಸೆಲ್ ಬೆಲೆ 94.27 ರೂ. ಆಗಿದೆ.
ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 102.63 ರೂ. ಮತ್ತು ಡೀಸೆಲ್ 94.24 ರೂ. ಆಗಿದೆ.
ಕೊಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 106.03 ರೂ. ಮತ್ತು ಡೀಸೆಲ್ ಬೆಲೆ 92.76 ರೂ. ಆಗಿದೆ.
ನೊಯ್ಡಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 96.64 ರೂ. ಮತ್ತು ಡೀಸೆಲ್ ಬೆಲೆ 89.83 ರೂ. ಆಗಿದೆ.
ಘಾಜಿಯಾಬಾದ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 96.58 ರೂ. ಮತ್ತು ಡೀಸೆಲ್ ಬೆಲೆ 89.75 ರೂ. ಆಗಿದೆ.
ಪಾಟ್ನಾದಲ್ಲಿ ಪೆಟ್ರೋಲ್ ಲೀಟರ್‌ಗೆ 108.12 ರೂ. ಮತ್ತು ಡೀಸೆಲ್ 94.86 ರೂ. ಆಗಿದೆ.
ಗಂಗಾನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 113.20 ರೂ. ಮತ್ತು ಡೀಸೆಲ್ ಬೆಲೆ 97.98 ರೂ. ಆಗಿದೆ.

ಇದನ್ನೂ ಓದಿ: Petrol Price on January 19: ಇಂಧನದ ಗ್ರಾಹಕರಿಗೆ ಗುಡ್ ನ್ಯೂಸ್; ಬಜೆಟ್​ಗೂ ಮೊದಲೇ ಕೊಂಚ ಕುಸಿದ ಪೆಟ್ರೋಲ್, ಡೀಸೆಲ್ ಬೆಲೆ

ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಬದಲಾವಣೆಯಾಗುತ್ತದೆ. ಹೊಸ ದರಗಳು ಬೆಳಗ್ಗೆ 6 ಗಂಟೆಯಿಂದಲೇ ಅನ್ವಯವಾಗಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕ, ಡೀಲರ್ ಕಮಿಷನ್, ವ್ಯಾಟ್ ಮತ್ತು ಇತರ ವಸ್ತುಗಳನ್ನು ಸೇರಿಸಿದ ನಂತರ, ಅದರ ಬೆಲೆ ಮೂಲ ಬೆಲೆಗಿಂತ ದ್ವಿಗುಣಗೊಳ್ಳುತ್ತದೆ. ಇದೇ ಕಾರಣಕ್ಕೆ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ.

ನೀವು ಎಸ್‌ಎಂಎಸ್ ಮೂಲಕ ಪೆಟ್ರೋಲ್ ಡೀಸೆಲ್‌ನ ದೈನಂದಿನ ದರವನ್ನು ಸಹ ತಿಳಿಯಬಹುದು. ಇಂಡಿಯನ್ ಆಯಿಲ್ ಗ್ರಾಹಕರು RSP ಮತ್ತು ಅವರ ಸಿಟಿ ಕೋಡ್ ಮತ್ತು BPCL ಗ್ರಾಹಕರು RSP ಮತ್ತು ಅವರ ಸಿಟಿ ಕೋಡ್ ಅನ್ನು 9223112222ಗೆ ಟೈಪ್ ಮಾಡುವ ಮೂಲಕ 9224992249ಗೆ SMS ಕಳುಹಿಸುವ ಮೂಲಕ ಮಾಹಿತಿಯನ್ನು ಪಡೆಯಬಹುದು. HPCL ಗ್ರಾಹಕರು HPPrice ಮತ್ತು ಅವರ ಸಿಟಿ ಕೋಡ್ ಅನ್ನು 9222201122ಗೆ ಕಳುಹಿಸುವ ಮೂಲಕ ಬೆಲೆಯನ್ನು ತಿಳಿದುಕೊಳ್ಳಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ