Swiggy Layoff: ಶೇ 8ರಿಂದ 10ರಷ್ಟು ಉದ್ಯೋಗಿಗಳ ವಜಾಕ್ಕೆ ಸ್ವಿಗ್ಗಿ ಚಿಂತನೆ

2022ರ ಅಕ್ಟೋಬರ್​​ನಲ್ಲಿ ಸ್ವಿಗ್ಗಿ ಉದ್ಯೋಗಿಗಳ ಕಾರ್ಯಕ್ಷಮತೆಯ ಮೌಲ್ಯಮಾಪನ ಮಾಡಿದ್ದು, ಇದರ ಆಧಾರದಲ್ಲಿ ರೇಟಿಂಗ್ಸ್, ಬಡ್ತಿ ಘೋಷಿಸಿತ್ತು. ಉತ್ತಮ ಕಾರ್ಯಕ್ಷಮತೆ ಹೊಂದಿಲ್ಲ ಎಂಬ ಕಾರಣ ಮುಂದಿಟ್ಟುಕೊಂಡು ಹಲವು ಉದ್ಯೋಗಿಗಳಿಗೆ ಕೆಲಸದಿಂದ ವಜಾಗೊಳಿಸುವ ಬಗ್ಗೆ ಸ್ವಿಗ್ಗಿ ಆಗಲೇ ಸುಳಿವು ನೀಡಿತ್ತು.

Swiggy Layoff: ಶೇ 8ರಿಂದ 10ರಷ್ಟು ಉದ್ಯೋಗಿಗಳ ವಜಾಕ್ಕೆ ಸ್ವಿಗ್ಗಿ ಚಿಂತನೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Jan 19, 2023 | 6:41 PM

ನವದೆಹಲಿ: ವೆಚ್ಚ ಕಡಿತಗೊಳಿಸುವ ಸಲುವಾಗಿ ಆಹಾರ ಮತ್ತು ದಿನಸಿ ವಿತರಣಾ ಕಂಪನಿ ಸ್ವಿಗ್ಗಿ (Swiggy) ಶೇ 8ರಿಂದ 10ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲು (Layoff) ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಕಂಪನಿಯು ಸುಮಾರು 6,000 ಉದ್ಯೋಗಿಗಳನ್ನು ಹೊಂದಿದೆ. ಉದ್ದೇಶಿತ ವಜಾ ಪ್ರಕ್ರಿಯೆಯು ಪ್ರಾಡಕ್ಟ್, ಎಂಜಿನಿಯರಿಂಗ್ ಮತ್ತು ಕಾರ್ಯಾಚರಣೆ ವಿಭಾಗಗಳ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ‘ಫೈನಾನ್ಶಿಯಲ್ ಎಕ್ಸ್​ಪ್ರೆಸ್’ ವರದಿ ಮಾಡಿದೆ. ಆರಂಭಿಕ ಸಾರ್ವಜನಿಕ ಕೊಡುಗೆ ಅಥವಾ ಐಪಿಒ ಮೂಲಕ ಷೇರು ಮಾರಾಟಕ್ಕೆ ಸ್ವಿಗ್ಗಿ ಚಿಂತನೆ ನಡೆಸಿತ್ತು. ಆದರೆ ಐಪಿಒಗೂ ಮುನ್ನ ಕಂಪನಿಯು ಲಾಭದ ಹಾದಿಗೆ ಮರಳಬೇಕೆಂಬುದು ನಮ್ಮ ಗುರಿಯಾಗಿದೆ ಎಂದು ಸ್ವಿಗ್ಗಿ ಹೇಳಿತ್ತು. ಇತ್ತೀಚಿನ ತಿಂಗಳುಗಳಲ್ಲಿ ಕಂಪನಿಯು ಆರ್ಥಿಕವಾಗಿ ಕಳಪೆ ಪ್ರದರ್ಶನ ತೋರಿರುವುದರಿಂದ ಐಪಿಒವನ್ನು ಮುಂದೂಡುತ್ತಾ ಬರಲಾಗಿದೆ.

2022ರ ಅಕ್ಟೋಬರ್​​ನಲ್ಲಿ ಸ್ವಿಗ್ಗಿ ಉದ್ಯೋಗಿಗಳ ಕಾರ್ಯಕ್ಷಮತೆಯ ಮೌಲ್ಯಮಾಪನ ಮಾಡಿದ್ದು, ಇದರ ಆಧಾರದಲ್ಲಿ ರೇಟಿಂಗ್ಸ್, ಬಡ್ತಿ ಘೋಷಿಸಿತ್ತು. ಉತ್ತಮ ಕಾರ್ಯಕ್ಷಮತೆ ಹೊಂದಿಲ್ಲ ಎಂಬ ಕಾರಣ ಮುಂದಿಟ್ಟುಕೊಂಡು ಹಲವು ಉದ್ಯೋಗಿಗಳಿಗೆ ಕೆಲಸದಿಂದ ವಜಾಗೊಳಿಸುವ ಬಗ್ಗೆ ಸ್ವಿಗ್ಗಿ ಆಗಲೇ ಸುಳಿವು ನೀಡಿತ್ತು. ಸುಮಾರು 250 ಉದ್ಯೋಗಿಗಳನ್ನು ಕೆಲಸದಿಂದ ತೆಗದುಹಾಕಲು ಚಿಂತನೆ ನಡೆಸಿದೆ ಎಂದು ಅಕ್ಟೋಬರ್​ನಲ್ಲಿ ವರದಿಯಾಗಿತ್ತು. ಆದರೆ ಈ ವಿಚಾರವಾಗಿ ಸ್ವಿಗ್ಗಿ ಅಧಿಕೃತ ಪ್ರತಿಕ್ರಿಯೆ ನೀಡಿರಲಿಲ್ಲ.

ಐಪಿಒಗೂ ಮುನ್ನ ಆರ್ಥಿಕ ಗುರಿ ಸಾಧಿಸುವುದಕ್ಕಾಗಿ ಸ್ವಿಗ್ಗಿ ಆಡಳಿತ ಮಂಡಳಿಯು ತಂಡಗಳನ್ನು ಮರು ನಿಯೋಜನೆ ಮಾಡುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಉದ್ಯೋಗಿಗಳು ಅತೀವ ಕೆಲಸದ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: Work From Office: ಕಚೇರಿಗೆ ಬಂದಿದ್ದಕ್ಕೂ ಭತ್ಯೆ ನೀಡುತ್ತೆ ಈ ಕಂಪನಿ; ಉದ್ಯೋಗಿಗಳನ್ನು ಆಫೀಸ್​ಗೆ ಕರೆಸಿಕೊಳ್ಳಲೂ ಸಾಹಸ

ಜಾಗತಿಕ ಆರ್ಥಿಕ ಹಿಂಜರಿತದ ಭೀತಿ, ಅನಿಶ್ಚಿತತೆಯಿಂದಾಗಿ ಭಾರತದ ಭಾರತದ ಸ್ಟಾರ್ಟಪ್​ಗಳೂ ಸಮಸ್ಯೆಗೆ ಸಿಲುಕಿವೆ. 2022ರ ನವೆಂಬರ್​ನಲ್ಲಿ ಪ್ರತಿಸ್ಪರ್ಧಿ ಜೊಮೆಟೋ ವಿರುದ್ಧ ಸ್ವಿಗ್ಗಿಗೆ ಬಂಡವಾಳ ಮಾರುಕಟ್ಟೆ ವಿಚಾರದಲ್ಲಿ ಹಿನ್ನಡೆಯಾಗಿತ್ತು. 22ನೇ ಹಣಕಾಸು ವರ್ಷದಲ್ಲಿ ಸ್ವಿಗ್ಗಿ 3,628.90 ಕೋಟಿ ರೂ. ನಷ್ಟ ಅನುಭವಿಸಿತ್ತು. ಒಟ್ಟು ಆದಾಯದಲ್ಲಿ ಚೇತರಿಕೆ ಕಾಣುವ ಪ್ರಯತ್ನದಿಂದ ಲಾಭದಲ್ಲಿ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗಿತ್ತು. 22ನೇ ಹಣಕಾಸು ವರ್ಷದಲ್ಲಿ ಕಂಪನಿಯ ಒಟ್ಟು ಆದಾಯ ಶೇ 124ರಷ್ಟು ಹೆಚ್ಚಾಗಿ 5,705 ಕೋಟಿ ರೂ. ತಲುಪಿತ್ತು. 21ನೇ ಹಣಕಾಸು ವರ್ಷದಲ್ಲಿ ಒಟ್ಟು ಆದಾಯ 2,547 ಕೋಟಿ ರೂ. ಇತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ