- Kannada News Photo gallery Tata Consultancy Services tweaked appraisal system to make employees work from office
Work From Office: ಕಚೇರಿಗೆ ಬಂದಿದ್ದಕ್ಕೂ ಭತ್ಯೆ ನೀಡುತ್ತೆ ಈ ಕಂಪನಿ; ಉದ್ಯೋಗಿಗಳನ್ನು ಆಫೀಸ್ಗೆ ಕರೆಸಿಕೊಳ್ಳಲೂ ಸಾಹಸ
ಕೋವಿಡ್ ಸಾಂಕ್ರಾಮಿಕದ ಆರಂಭದಲ್ಲಿ ವರ್ಕ್ ಫ್ರಂ ಹೋಮ್ ಆರಂಭಿಸಿದ್ದ ಟೆಕ್ ಕಂಪನಿಗಳಿಗೆ ಇದೀಗ ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳುವುದೇ ಸಾಹಸವಾಗಿದೆ. ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳುವುದಕ್ಕಾಗಿ ಟಿಸಿಎಸ್ ಕಂಪನಿ ‘ಕಚೇರಿಯಿಂದ ಕಾರ್ಯನಿರ್ವಹಿಸುವವರಿಗೆ ಭತ್ಯೆ’ ನೀಡುವುದಾಗಿ ಘೋಷಿಸಿದೆ.
Updated on: Jan 19, 2023 | 5:49 PM

ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳುವುದಕ್ಕಾಗಿ ದೇಶದ ಅತಿದೊಡ್ಡ ಐಟಿ ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಅಪ್ರೈಸಲ್ ವ್ಯವಸ್ಥೆಯಲ್ಲೇ ಬದಲಾವಣೆ ಮಾಡಿದೆ. ಕಚೇರಿಯಿಂದ ಕಾರ್ಯನಿರ್ವಹಿಸಿದ ದಿನಗಳ ಲೆಕ್ಕದಲ್ಲಿ ಉದ್ಯೋಗಿಗಳಿಗೆ ಅಂಕಗಳನ್ನು ನೀಡುವ ಬಗ್ಗೆ ಅಪ್ರೈಸಲ್ ನಿಯಮದಲ್ಲಿ ತಿದ್ದುಪಡಿ ಮಾಡಿದೆ.

ಕಚೇರಿಗೆ ಮರಳುವ ಗುರಿಯ ಬಗ್ಗೆ ನಿಮ್ಮ ತಂಡಗಳ ಎಲ್ಲ ಸದಸ್ಯರಿಗೆ ಸೂಚಿಸಿ ಎಂದು ಟೀಮ್ ಲೀಡರ್ಗಳಿಗೆ ಮತ್ತು ಮ್ಯಾನೇಜರ್ಗಳಿಗೆ ಇತ್ತೀಚೆಗೆ ಕಳುಹಿಸಿರುವ ಇ-ಮೇಲ್ ಸಂದೇಶದಲ್ಲಿ ಟಿಸಿಎಸ್ ಉಲ್ಲೇಖಿಸಿದೆ.

ಕಚೇರಿಗೆ ಮರಳುವ ಗುರಿಯಂತೆ, ವಾರದಲ್ಲಿ ಕನಿಷ್ಠ ಮೂರು ದಿನವಾದರೂ ಉದ್ಯೋಗಿಗಳು ಕಚೇರಿಯಿಂದ ಕಾರ್ಯನಿರ್ವಹಿಸುವಂತೆ ಮಾಡಬೇಕು ಎಂದು ಇ-ಮೇಲ್ ಸಂದೇಶದಲ್ಲಿ ಕಂಪನಿ ತಿಳಿಸಿದೆ. ಜತೆಗೆ ಕಚಚೇರಿಯಿಂದ ಕಾರ್ಯನಿರ್ವಹಿಸುವವರಿಗೆ ಭತ್ಯೆ ನೀಡುವ ಬಗ್ಗೆಯೂ ಪ್ರಸ್ತಾಪಿಸಿದೆ.

ಕಾರ್ಯಕ್ಷಮತೆ, ಸಹಯೋಗದೊಂದಿಗೆ ಕೆಲಸ, ವೃತ್ತಿಪರ ನಡವಳಿಕೆ, ಕಲಿಕೆ ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಮ್ಮ ಅಪ್ರೈಸಲ್ ಅಥವಾ ಮೌಲ್ಯಮಾಪನ ವಿಧಾನವನ್ನು ರೂಪಿಸಲಾಗಿದೆ ಎಂದು ಟಿಸಿಎಸ್ ವಕ್ತಾರರೊಬ್ಬರು ತಿಳಿಸಿದ್ದಾರೆ.

25/25/25 ಮಾದರಿಯನ್ನು ಕಂಪನಿ ಅನುಸರಿಸಲಿದೆ ಎಂದು ಸಿಒಒ ಇತ್ತೀಚೆಗೆ ತಿಳಿಸಿದ್ದರು. ಇದರಂತೆ, 2025ರ ವೇಳೆಗೆ ಉದ್ಯೋಗಿಗಳು ತಮ್ಮ ಶೇ 25ರಷ್ಟು ಸಮಯ ಕಚೇರಿಯಲ್ಲಿ ಕಳೆಯಬೇಕು. ನಿರ್ದಿಷ್ಟ ಸಮಯದಲ್ಲಿ ಶೇ 25ರಷ್ಟು ಉದ್ಯೋಗಿಗಳು ಭೌತಿಕವಾಗಿ ಕಚೇರಿಯಲ್ಲಿರಬೇಕು ಎಂದು ಅವರು ಹೇಳಿದ್ದಾರೆ.

ಟಿಸಿಎಸ್ನ ಈ ಕ್ರಮಕ್ಕೆ ಮಾನವ ಸಂಪನ್ಮೂಲ ತಜ್ಞರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಮೌಲ್ಯಮಾಪನ ವ್ಯವಸ್ಥೆಯಲ್ಲಿ ಕಚೇರಿಯಿಂದ ಕೆಲವ ಮಾಡುವವರಿಗೆ ಅಂಕವನ್ನು ನೀಡುವುದು ಉದ್ಯೋಗಿಯ ಕಾರ್ಯಕ್ಷಮತೆಯನ್ನು ನಿರ್ಣಯಿಸುವಲ್ಲಿ ಸಹಾಯ ಮಾಡದಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಕಚೇರಿಯಿಂದ ಕೆಲಸ ಮಾಡುವ ಉದ್ಯೋಗಿಗಳು ಅವರ ಗುರಿಗಳನ್ನು ಪೂರೈಸದಿದ್ದರೆ, ಕೇವಲ ಕಚೇರಿಯಿಂದ ಕೆಲಸ ಮಾಡುವುದಕ್ಕೆ ಅವರಿಗೆ ಅಂಕಗಳನ್ನು ನೀಡುವುದರಿಂದ ಪ್ರಯೋಜನವಾಗದು. ಅವರ ಕಾರ್ಯಕ್ಷಮತೆ ಸುಧಾರಿಸಲೂ ಪ್ರಯೋಜನವಾಗದು ಎಂದು ಕೆಲವು ತಜ್ಞರು ಹೇಳಿದ್ದಾರೆ.



















