Adani Enterprises FPO: ಅದಾನಿ ಎಂಟರ್​ಪ್ರೈಸಸ್ ಎಫ್​ಪಿಒ; ಶೇ 10ರಿಂದ 15 ರಿಯಾಯಿತಿ ನೀಡಲಿದ್ದಾರೆ ಅದಾನಿ

ಅದಾನಿ ಎಂಟರ್​ಪ್ರೈಸಸ್ ದೊಡ್ಡ ಪ್ರಮಾಣದ ಹೂಡಿಕೆದಾರರಿಗೆ ಶೇ 10ರಿಂದ 15ರ ವರೆಗೆ ರಿಯಾಯಿತಿ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

Adani Enterprises FPO: ಅದಾನಿ ಎಂಟರ್​ಪ್ರೈಸಸ್ ಎಫ್​ಪಿಒ; ಶೇ 10ರಿಂದ 15 ರಿಯಾಯಿತಿ ನೀಡಲಿದ್ದಾರೆ ಅದಾನಿ
ಗೌತಮ್ ಅದಾನಿ (ಸಂಗ್ರಹ ಚಿತ್ರ)Image Credit source: PTI
Follow us
TV9 Web
| Updated By: Ganapathi Sharma

Updated on: Jan 19, 2023 | 4:19 PM

ಮುಂಬೈ: ಎಫ್​ಪಿಒ (Follow-On Public Offer) ಮೂಲಕ ಬಂಡವಾಳ ಸಂಗ್ರಹಕ್ಕೆ ಮುಂದಾಗಿರುವ ಅದಾನಿ ಎಂಟರ್​ಪ್ರೈಸಸ್ (Adani Enterprises) ದೊಡ್ಡ ಪ್ರಮಾಣದ ಹೂಡಿಕೆದಾರರಿಗೆ ಶೇ 10ರಿಂದ 15ರ ವರೆಗೆ ರಿಯಾಯಿತಿ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಹೊಸ ಷೇರುಗಳ ಬಿಡುಗಡೆ ಮೂಲಕ 20,000 ಕೋಟಿ ರೂ. ಸಂಗ್ರಹದ ಗುರಿಯನ್ನು ಕಂಪನಿ ಹೊಂದಿದ್ದು, ಷೇರು ಬೆಲೆ 3,112 ರೂ.ನಿಂದ 3,276 ರೂ. ನಡುವೆ ಇರಲಿದೆ ಎಂಬುದು ಕಂಪನಿಯು ಮಾರುಕಟ್ಟೆ ನಿಯಂತ್ರಕಕ್ಕೆ ಸಲ್ಲಿಸಿರುವ ದಾಖಲೆಗಳಿಂದ ತಿಳಿದುಬಂದಿದೆ. ದೊಡ್ಡ ಹೂಡಿಕೆದಾರರಿಗೆ ಈಗಿನ ಮಾರುಕಟ್ಟೆ ದರದಲ್ಲಿ ಶೇ 10ರ ರಿಯಾಯಿತಿ ದೊರೆಯುವ ಸಾಧ್ಯತೆ ಇದೆ ಎಂದು ‘ಬ್ಲೂಮ್​ಬರ್ಗ್’ ತಾಣ ಈಗಾಗಲೇ ವರದಿ ಮಾಡಿದೆ. ಜನವರಿ 27ರಿಂದ 31ರ ವರೆಗೆ ಎಫ್​ಪಿಒ ನಡೆಯಲಿದ್ದು, ದೇಶದ ಅತಿದೊಡ್ಡ ಐಪಿಒ ಇದಾಗಿರಲಿದೆ.

ಷೇರು ಮಾರಾಟದಿಂದ ದೊರೆತ ಒಟ್ಟು ಮೊತ್ತದ ಅರ್ಧದಷ್ಟನ್ನು ವಿಮಾನ ನಿಲ್ದಾಣಗಳ ವಿಸ್ತರಣೆ, ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಬಳಸಿಕೊಳ್ಳಲು ಕಂಪನಿ ಉದ್ದೇಶಿಸಿದ್ದು, ಉಳಿದ ಮೊತ್ತದಲ್ಲಿ ಒಂದು ಪಾಲನ್ನು ಅಂಗಸಂಸ್ಥೆಗಳ ಸಾಲ ತೀರಿಸಲು ಬಳಸಲು ಉದ್ದೇಶಿಸಿದೆ. ಆ್ಯಂಕರ್ ಇನ್ವೆಸ್ಟರ್​ಗಳಿಗೆ (ಸಾರ್ವಜನಿಕರಿಗೆ ಷೇರುಗಳನ್ನು ಮಾರಾಟ ಮಾಡುವ ಮೊದಲು ನಿಗದಿತ ಬೆಲೆಗೆ ಷೇರು ಖರೀದಿಸಲು ಮುಂದಾಗುವ ಸಂಸ್ಥೆಗಳು) ಜನವರಿ 25ರಂದು ಅವಕಾಶ ನೀಡಲಾಗಿದೆ. ನಂತರ ಜನವರಿ 27ರಿಂದ 31ರ ವರೆಗೆ ಎಫ್​ಪಿಒ ನಡೆಯಲಿದೆ.

ಇದನ್ನೂ ಓದಿ: Adani Enterprises FPO: ಅದಾನಿ ಎಂಟರ್​ಪ್ರೈಸಸ್ ಎಫ್​ಪಿಒ ದಿನಾಂಕ ಘೋಷಣೆ; ಇಲ್ಲಿದೆ ವಿವರ

ಅಪಾರ ಪ್ರಮಾಣದ ಷೇರು ಮಾರಾಟದಿಂದ ಅದಾನಿಗೆ ಹಲವು ಗುರಿಗಳನ್ನು ಸಾಧಿಸಲು ಸಾಧ್ಯವಾಗಲಿದೆ. ಹೂಡಿಕೆಯ ನೆಲೆ ವಿಸ್ತರಣೆಯೂ ಸಾಧ್ಯವಾಗಲಿದೆ. ಅದಾನಿ ಎಂಟರ್​ಪ್ರೈಸೆಸ್ ಷೇರುಗಳು ಕಳೆದ ಒಂದು ವರ್ಷದಲ್ಲಿ ಶೇ 95ರಷ್ಟು ವೃದ್ಧಿಯಾಗಿ 3,596.7 ರೂ.ಗೆ ತಲುಪಿದೆ. ಕಂಪನಿಯ ಷೇರು ಒಂದು ವರ್ಷದ ಮುಂಗಡ ಗಳಿಕೆಗಿಂತ 141 ಪಟ್ಟು ಹೆಚ್ಚು ಮೌಲ್ಯದಲ್ಲಿ ವಹಿವಾಟು ನಡೆಸುತ್ತಿದೆ ಎಂದು ವರದಿ ಉಲ್ಲೇಖಿಸಿದೆ.

ಎಫ್​ಪಿಒ ಮೂಲಕ 20,000 ಕೋಟಿ ರೂ. ಸಂಗ್ರಹಿಸುವ ಪ್ರಸ್ತಾವನೆಗೆ 2022ರ ನವೆಂಬರ್​​ನಲ್ಲಿ ಅದಾನಿ ಎಂಟರ್​ಪ್ರೈಸಸ್​​​ನ ನಿರ್ದೇಶಕರ ಮಂಡಳಿಯು ಅನುಮೋದನೆ ನೀಡಿತ್ತು. ಶೇ 3.5ರಷ್ಟು ಷೇರುಗಳನ್ನು ಎಫ್​ಪಿಒ ಮೂಲಕ ಮಾರಾಟ ಮಾಡಲು ಅದಾನಿ ಎಂಟರ್​ಪ್ರೈಸಸ್ ಉದ್ದೇಶಿಸಿದೆ. ಪ್ರಸ್ತುತ ಪ್ರವರ್ತಕರ ಸಮೂಹವು ಶೇ 72.63ರಷ್ಟು ಷೇರುಗಳನ್ನು ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?