Fuel Price on October 24: ಕಳೆದ ಕೆಲವು ದಿನಗಳಿಂದ ಕಚ್ಚಾ ತೈಲ ದರವು ದಾಖಲೆಯ ಮಟ್ಟಕ್ಕೆ ಕುಸಿದ ನಂತರ ಈಗ ಮತ್ತೆ ಏರಿಕೆಯಾಗುತ್ತಿದೆ. ಉತ್ಪಾದನೆಯ ಕಡಿತದಿಂದ ಕಚ್ಚಾತೈಲದ ಬೆಲೆ ಏರಿಕೆಯಾಗುತ್ತಿದೆ. ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 90 ರೂ.ಗಿಂತ ಹೆಚ್ಚು ಏರುತ್ತಿದೆ. ಎರಡು ತಿಂಗಳಿನಿಂದ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆಯಾಗಿತ್ತಾದರೂ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿರಲಿಲ್ಲ. ಆದರೆ, ಉತ್ತರ ಪ್ರದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅಗ್ಗವಾಗಿದೆ.
ಮೇ 22ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕೊನೆಯ ಬದಲಾವಣೆಯಾಗಿತ್ತು. ಇಷ್ಟು ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿರುವುದು ಇದೇ ಮೊದಲು. ಮೇ 22ರಂದು ಸರ್ಕಾರವು ಅಬಕಾರಿ ಸುಂಕವನ್ನು ಕಡಿಮೆ ಮಾಡಿತ್ತು. ಅಬಕಾರಿ ಕಡಿತದಿಂದಾಗಿ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಅಗ್ಗವಾಯಿತು. ಇದರ ನಂತರ, ಮಹಾರಾಷ್ಟ್ರದಲ್ಲಿ ತೈಲದ ಮೇಲಿನ ವ್ಯಾಟ್ ಅನ್ನು ಕಡಿಮೆಗೊಳಿಸಲಾಯಿತು. ಇದರಿಂದಾಗಿ ಇಂಧನದ ಬೆಲೆ ಕಡಿಮೆಯಾಯಿತು.
ಇಂದು ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 96.72 ರೂ. ಇದ್ದು, ಡೀಸೆಲ್ ದರ ಲೀಟರ್‌ಗೆ 89.62 ರೂ. ಇದೆ. ಕಳೆದ 5 ತಿಂಗಳಿಂದ ರಾಷ್ಟ್ರ ರಾಜಧಾನಿ ನವದೆಹಲಿ, ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತ್ತಾ ಸೇರಿ ಹಲವು ಪ್ರಮುಖ ನಗರಗಳಲ್ಲಿ ಇಂಧನದ ದರ ಒಂದೇ ರೀತಿಯಲ್ಲಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ದರ 1 ಲೀಟರ್‌ಗೆ 101.94 ರೂ, ಡೀಸೆಲ್‌ಗೆ 87.89 ರೂ. ಇದೆ. ದೆಹಲಿಯಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 96.72 ರೂ., 1 ಲೀಟರ್ ಡೀಸೆಲ್ ಪ್ರತಿ ಲೀಟರ್‌ಗೆ 89.62 ರೂ. ಇದೆ. ಕೋಲ್ಕತ್ತಾದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 106.03 ರೂ., 1 ಲೀಟರ್ ಡೀಸೆಲ್ ಲೀಟರ್‌ಗೆ 92.76 ರೂ. ಇದೆ. ಹೈದರಾಬಾದ್ನಲ್ಲಿ ಪೆಟ್ರೋಲ್ ಬೆಲೆ 1 ಲೀಟರ್‌ಗೆ 109.66 ರೂ., ಡೀಸೆಲ್ ಬೆಲೆ 1 ಲೀಟರ್‌ಗೆ 97.82 ರೂ. ಇದೆ.
ಮುಂಬೈನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 106.31 ರೂ., 1 ಲೀಟರ್ ಡೀಸೆಲ್ ಪ್ರತಿ ಲೀಟರ್‌ಗೆ 89.62 ರೂ. ಇದೆ. ಚೆನ್ನೈನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 102.63 ರೂ., 1 ಲೀಟರ್ ಡೀಸೆಲ್ ಪ್ರತಿ ಲೀಟರ್‌ಗೆ 94.24 ರೂ. ಇದೆ. ತಿರುವನಂತಪುರಂನಲ್ಲಿ ಪೆಟ್ರೋಲ್ ಬೆಲೆ 107.71 ರೂ., ಡೀಸೆಲ್ ಬೆಲೆ 96.52 ರೂ. ಇದೆ.
ಸರ್ಕಾರಿ ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಶೀಲಿಸಿದ ನಂತರ ದರವನ್ನು ನಿಗದಿಪಡಿಸುತ್ತವೆ. ನಿಮ್ಮ ನಗರದ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪ್ರತಿದಿನ SMS ಮೂಲಕ ಪರಿಶೀಲಿಸಬಹುದು. ನೀವು ಇಂಡಿಯನ್ ಆಯಿಲ್‌ನ ಗ್ರಾಹಕರಾಗಿದ್ದರೆ, ನೀವು RSP ಡೀಲರ್ ಕೋಡ್ ಅನ್ನು ಬರೆಯುವ ಮೂಲಕ 9224992249 ಸಂಖ್ಯೆಗೆ SMS ಕಳುಹಿಸಬಹುದು ಮತ್ತು ನೀವು HPCL ಗ್ರಾಹಕರಾಗಿದ್ದರೆ ನೀವು HPPRICE ಡೀಲರ್ ಕೋಡ್ ಅನ್ನು ಟೈಪ್ ಮಾಡುವ ಮೂಲಕ 9222201122 ಸಂಖ್ಯೆಗೆ SMS ಕಳುಹಿಸಬಹುದು. BPCL ಗ್ರಾಹಕರು ಡೀಲರ್ ಕೋಡ್ ಅನ್ನು ನಮೂದಿಸುವ ಮೂಲಕ 9223112222ಗೆ RSP ಅನ್ನು ಕಳುಹಿಸಬಹುದು.
ಇದನ್ನೂ ಓದಿ: Petrol Price Today: ಇಳಿಕೆಯಾಯಿತಾ ಪೆಟ್ರೋಲ್ ಬೆಲೆ?; ನಿಮ್ಮ ನಗರಗಳಲ್ಲಿ ಇಂದಿನ ಡೀಸೆಲ್ ದರ ಹೀಗಿದೆ
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಹೆಚ್ಚಾಗಿ ಡಾಲರ್ ದರದಿಂದ ಪ್ರಭಾವಿತವಾಗಿರುತ್ತದೆ. ಡಾಲರ್ ದುಬಾರಿಯಾಗಿದ್ದರೆ, ಕಚ್ಚಾ ತೈಲವನ್ನು ಖರೀದಿಸುವುದು ಹೆಚ್ಚು ದುಬಾರಿಯಾಗಬಹುದು ಮತ್ತು ಇದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸುತ್ತದೆ. ಮಾರುಕಟ್ಟೆಯಲ್ಲಿ ಮಾರಾಟವಾಗುವ ಪೆಟ್ರೋಲ್ ಮತ್ತು ಡೀಸೆಲ್‌ಗೆ ಜನರು ಪಾವತಿಸುವ ಅರ್ಧಕ್ಕಿಂತ ಹೆಚ್ಚು ಹಣವು ಕೇಂದ್ರ ಸರ್ಕಾರ ಮತ್ತು ರಾಜ್ಯಗಳಿಂದ ತೆರಿಗೆ ರೂಪದಲ್ಲಿದೆ. ಜನರಿಂದ ಪೆಟ್ರೋಲ್ ಮೇಲೆ ಶೇ.55.5 ಮತ್ತು ಡೀಸೆಲ್ ಮೇಲೆ ಶೇ.47.3 ತೆರಿಗೆ ಸಂಗ್ರಹವಾಗಿದೆ ಎನ್ನಲಾಗಿದೆ.
ಭಾರತದ ಇಂಧನ ಮಾರಾಟವು ಅಕ್ಟೋಬರ್‌ನ ಆರಂಭದಲ್ಲಿ ಹೆಚ್ಚಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ. 22-26ರಷ್ಟು ಹೆಚ್ಚುತ್ತಿದೆ. ಅಕ್ಟೋಬರ್ ಮೊದಲಾರ್ಧದಲ್ಲಿ ತಿಂಗಳಿನಿಂದ ತಿಂಗಳಿಗೆ ಇಂಧನದ ಬೆಲೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1.05 ಮಿಲಿಯನ್ ಟನ್ ಬಳಕೆಗೆ ಹೋಲಿಸಿದರೆ ಅಕ್ಟೋಬರ್ 1ರಿಂದ 15ರ ಅವಧಿಯಲ್ಲಿ ಪೆಟ್ರೋಲ್ ಮಾರಾಟವು ಶೇ. 22.7ರಷ್ಟು ಏರಿಕೆಯಾಗಿ 1.28 ಮಿಲಿಯನ್ ಟನ್‌ಗಳಿಗೆ ತಲುಪಿದೆ.