AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stock Market Updates: ಸತತವಾಗಿ ಹೊರಹೋಗುತ್ತಿದೆ ವಿದೇಶಿ ಬಂಡವಾಳ, ಕಾರಣವೇನು?

ಸೆಪ್ಟೆಂಬರ್​ನಲ್ಲಿ ವಿದೇಶಿ ಹೂಡಿಕೆದಾರರು 7,624 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂಬುದು ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್ ಅಂಕಿಅಂಶಗಳಿಂದ ತಿಳಿದುಬಂದಿದೆ.

Stock Market Updates: ಸತತವಾಗಿ ಹೊರಹೋಗುತ್ತಿದೆ ವಿದೇಶಿ ಬಂಡವಾಳ, ಕಾರಣವೇನು?
ಸಾಂದರ್ಭಿಕ ಚಿತ್ರImage Credit source: PTI
TV9 Web
| Updated By: Ganapathi Sharma|

Updated on:Oct 24, 2022 | 11:13 AM

Share

ನವದೆಹಲಿ: ಭಾರತೀಯ ಷೇರು ಮಾರುಕಟ್ಟೆಗಳಿಂದ (Indian Stock Market) ಹೂಡಿಕೆ ಹಿಂಪಡೆಯುವ ಪ್ರಕ್ರಿಯೆಯನ್ನು ವಿದೇಶಿ ಬಂಡವಾಳ ಹೂಡಿಕೆದಾರರು (FPIs) ಮುಂದುವರಿಸಿದ್ದಾರೆ. ಸತತ ಎರಡನೇ ತಿಂಗಳು ಸಹ ವಿದೇಶಿ ಬಂಡವಾಳ ಹೂಡಿಕೆದಾರರು ಭಾರತೀಯ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಅಮೆರಿಕನ್ ಡಾಲ್ ಮೌಲ್ಯ (US dollar index) ವೃದ್ಧಿ, ರೂಪಾಯಿ ಮೌಲ್ಯ ಕುಸಿತ (Rupee Value) ಹಾಗೂ ಆರ್​ಬಿಐ ಹಣಕಾಸು ನೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.

ಸೆಪ್ಟೆಂಬರ್​ನಲ್ಲಿ ವಿದೇಶಿ ಹೂಡಿಕೆದಾರರು 7,624 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂಬುದು ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್ ಅಂಕಿಅಂಶಗಳಿಂದ ತಿಳಿದುಬಂದಿದೆ. 2022ರಲ್ಲಿ ಈವರೆಗೆ ವಿದೇಶಿ ಬಂಡವಾಳ ಹೂಡಿಕೆದಾರರು 1,74,781 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಜುಲೈ ಹಾಗೂ ಆಗಸ್ಟ್ ಹೊರತುಪಡಿಸಿದರೆ ಕಳೆದ ವರ್ಷದಿಂದಲೂ ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಗಳಿಂದ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಅನೇಕ ಕಾರಣಗಳಿಂದ ಈ ಪ್ರಕ್ರಿಯೆ ನಡೆದುಬಂದಿದೆ.

ಇದನ್ನೂ ಓದಿ
Image
Dhanteras 2022: ಭಾರತ-ಪಾಕ್ ಪಂದ್ಯದ ವೇಳೆ ಬಿಕೋ ಎಂದ ಆಭರಣ ಮಾರುಕಟ್ಟೆ; ನಂತರ ಚೇತರಿಸಿದ ಮಾರಾಟ
Image
Share Market Predictions: ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ ರಜೆ, ತ್ರೈಮಾಸಿಕ ಫಲಿತಾಂಶ, ಮಾಸಾಂತ್ಯ…
Image
ICICI Bank Q2 Result: ತ್ರೈಮಾಸಿಕ ಫಲಿತಾಂಶ; ಐಸಿಐಸಿಐ ಬ್ಯಾಂಕ್ ನಿವ್ವಳ ಲಾಭದಲ್ಲಿ ಭಾರೀ ಜಿಗಿತ
Image
Dhanteras 2022: ದೀಪಾವಳಿಯ ಎರಡು ದಿನ 40 ಸಾವಿರ ಕೋಟಿ ರೂ. ವಹಿವಾಟು ನಿರೀಕ್ಷೆ; ಸಿಎಐಟಿ

ಇದನ್ನೂ ಓದಿ: Diwali Muhurat Trading: ದೀಪಾವಳಿ ಮುಹೂರ್ತ ಟ್ರೇಡಿಂಗ್ ಬಗ್ಗೆ ಇಲ್ಲಿದೆ ವಿವರ

ಆರ್ಥಿಕ ನಿಯಮಗಳಲ್ಲಿ ಬಿಗಿಗೊಳಿಸಿರುವುದು, ಡಾಲರ್ ಆಧಾರಿತ ಸರಕುಗಳ ಮೇಲೆ ಹೆಚ್ಚುತ್ತಿರುವ ಬೇಡಿಕೆ, ಅಮೆರಿಕನ್ ಡಾಲರ್ ಮೌಲ್ಯ ವೃದ್ಧಿಯಾಗಿರುವುದು ಭಾರತೀಯ ಮಾರುಕಟ್ಟೆಗಳಿಂದ ಬಂಡವಾಳ ಹೊರಹೋಗಲು ಕಾರಣ. ಮಾರುಕಟ್ಟೆ ಅನಿಶ್ಚಿತತೆಯ ಸಮಯದಲ್ಲಿ ಹೂಡಿಕೆದಾರರು ಸ್ಥಿರ ಮಾರುಕಟ್ಟೆಗಳನ್ನು ಬಯಸುತ್ತಾರೆ ಎನ್ನಲಾಗಿದೆ.

ಹೆಚ್ಚುತ್ತಿರುವ ಹಣದುಬ್ಬರ ತಡೆಗೆ ಆರ್​ಬಿಐ ಕಳೆದ ಕಲವು ಹಣಕಾಸು ನೀತಿಯಲ್ಲಿ ರೆಪೊ ದರ ಹೆಚ್ಚಳ ಮಾಡಿತ್ತು. ಈ ಮಧ್ಯೆ, ರೂಪಾಯಿ ಮೌಲ್ಯ ಕೂಡ ಕುಸಿಯುತ್ತಿದೆ. ಈ ವರ್ಷದಲ್ಲಿ ಈವರೆಗೆ ರೂಪಾಯಿ ಮೌಲ್ಯದಲ್ಲಿ ಶೇಕಡಾ 11ರಿಂದ 12ರಷ್ಟು ಕುಸಿತವಾಗಿದೆ ಎನ್ನುತ್ತವೆ ಮಾರುಕಟ್ಟೆ ಅಂಕಿಅಂಶಗಳು. ಕಳೆದ ಬುಧವಾರವಷ್ಟೇ ರೂಪಾಯಿ ಮೌಲ್ಯ ಅಮೆರಿಕನ್ ಡಾಲರ್ ಎದುರು 83ರ ವರೆಗೂ ಕುಸಿದು ಬಳಿಕ ಚೇತರಿಸಿತ್ತು.

ಭಾರತದ ಫಾರಿನ್ ಎಕ್ಸ್​ಚೇಂಕ್ ರಿಸರ್ವ್​ ಕೂಡ ಅಕ್ಟೋಬರ್​ 14ಕ್ಕೆ ಕೊನೆಗೊಂಡ ವಾರದಲ್ಲಿ 2 ವರ್ಷಗಳ ಕನಿಷ್ಠಕ್ಕೆ ಕುಸಿದಿತ್ತು. ಈ ಎಲ್ಲ ಕಾರಣಗಳೂ ವಿದೇಶಿ ಬಂಡವಾಳ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಮನಮಾಡುವಂತೆ ಮಾಡುತ್ತಿವೆ ಎಂದು ಮಾರುಕಟ್ಟೆ ಮೂಲಗಳು ಹೇಳಿವೆ.

ಇದನ್ನೂ ಓದಿ: Dhanteras 2022: ಭಾರತ-ಪಾಕ್ ಪಂದ್ಯದ ವೇಳೆ ಬಿಕೋ ಎಂದ ಆಭರಣ ಮಾರುಕಟ್ಟೆ; ನಂತರ ಚೇತರಿಸಿದ ಮಾರಾಟ

ಈ ಮಧ್ಯೆ, ದೀಪಾವಳಿಯ ಮುಹೂರ್ತ ಟ್ರೇಡಿಂಗ್ ಇಂದು ಸಂಜೆ ನಡೆಯಲಿರುವುದು ಹೂಡಿಕೆದಾರರಲ್ಲಿ ತುಸು ಭರವಸೆ ಮೂಡಿಸಿದೆ. ಸಂಜೆ 6.15ರಿಂದ 7.15ರ ವರೆಗೆ ಮುಹೂರ್ತ ಟ್ರೇಡಿಂಗ್ ನಡೆಯಲಿದೆ. ಮುಹೂರ್ತ ವಹಿವಾಟಿನಲ್ಲಿ ಭಾಗಿಯಾಗುವುದರಿಂದ ಹಾಗೂ ಖರೀದಿ ಮಾಡುವುದರಿಂದ ವರ್ಷವಿಡೀ ಮಾರುಕಟ್ಟೆಯಲ್ಲಿ ಉತ್ತಮ ಗಳಿಕೆಯಾಗಲಿದೆ ಎಂಬ ನಂಬಿಕೆ ಹೂಡಿಕೆದಾರರಲ್ಲಿದೆ. ಹೀಗಾಗಿ ಈ ಟ್ರೇಡಿಂಗ್ ಅವಧಿಯಲ್ಲಿ ಉತ್ತಮ ಹೂಡಿಕೆ ಹರಿದುಬರುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:08 am, Mon, 24 October 22