Petrol- Diesel Price Hike: ಒಂದೂವರೆ ವರ್ಷದಲ್ಲಿ ಪೆಟ್ರೋಲ್ ಲೀಟರ್‌ಗೆ 36 ರೂ., ಡೀಸೆಲ್ 26.58 ರೂ., ಏರಿಕೆ
2020ರ ಮೇ ತಿಂಗಳಿಂದ ಈಚೆಗೆ ಪೆಟ್ರೋಲ್ ಲೀಟರ್‌ಗೆ 36 ರೂಪಾಯಿ, ಡೀಸೆಲ್ ರೂ. 26.58 ಹೆಚ್ಚಳ ಆಗಿದ್ದು, ಭಾರತದ ಬಹುತೇಕ ರಾಜ್ಯಗಳಲ್ಲಿ ಡೀಸೆಲ್ 100 ರುಪಾಯಿ ದಾಟಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸತತ ನಾಲ್ಕನೇ ದಿನವಾದ ಶನಿವಾರದಂದು ಲೀಟರ್‌ಗೆ 35 ಪೈಸೆಗಳಷ್ಟು ಏರಿಕೆಯಾಗಿದ್ದು, 18 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಪೆಟ್ರೋಲ್‌ನ ಮೇಲಿನ ದರ ಲೀಟರ್‌ಗೆ 36 ರೂಪಾಯಿ ಮತ್ತು ಡೀಸೆಲ್‌ನ ಮೇಲೆ 26.58 ರೂಪಾಯಿ ಏರಿಕೆ ಆಗಿದೆ. ಎಲ್ಲ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಈಗ ಲೀಟರ್‌ಗೆ 100 ರೂಪಾಯಿಗಿಂತ ಹೆಚ್ಚಿದೆ. ಆದರೆ ಡೀಸೆಲ್ ಹನ್ನೆರಡಕ್ಕೂ ಹೆಚ್ಚು ರಾಜ್ಯಗಳಲ್ಲಿ ನೂರು ರೂಪಾಯಿಯ ಗಡಿಯನ್ನು ದಾಟಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಈಗ ಲೀಟರ್‌ಗೆ 107.24 ರೂಪಾಯಿ ಮತ್ತು ಡೀಸೆಲ್ ಬೆಲೆ 95.97 ರೂಪಾಯಿ ಆಗಿದೆ. ಮಧ್ಯಪ್ರದೇಶದ ಗಡಿಯ ಜಿಲ್ಲೆಯಾದ ಅನುಪ್ಪುರದಲ್ಲಿ ಪೆಟ್ರೋಲ್ ದರ ಲೀಟರ್‌ಗೆ ರೂ. 119 ಮತ್ತು ಡೀಸೆಲ್ ಲೀಟರ್‌ಗೆ 108 ರೂಪಾಯಿ ಆಗಿದೆ.
ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢದೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿರುವ ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ ಕ್ರಮವಾಗಿ 118.25 ರೂಪಾಯಿ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 107.46 ರೂಪಾಯಿಗೆ ತಲುಪಿದೆ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಇದು ಸ್ವಲ್ಪ ಕಡಿಮೆಯಾಗಿ, ಲೀಟರ್‌ಗೆ ಕ್ರಮವಾಗಿ 115.90 ರೂಪಾಯಿ ಮತ್ತು 105.27 ರೂಪಾಯಿ ಮುಟ್ಟಿದೆ. ಅಬಕಾರಿ ಸುಂಕವನ್ನು ದಾಖಲೆ ಮಟ್ಟಕ್ಕೆ ಏರಿಸಲು ಸರ್ಕಾರ ನಿರ್ಧರಿಸಿದ ದಿನ ಮೇ 5, 2020ರಿಂದ ಈಚೆಗೆ ಒಟ್ಟು ಬೆಲೆ ಏರಿಕೆಯು ಇಲ್ಲಿಯವರೆಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ ರೂ. 35.98 ಮತ್ತು ಡೀಸೆಲ್‌ಗೆ ರೂ. 26.58 ಹೆಚ್ಚಳವಾಗಿದೆ.
ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಬೆಲೆ ಏರಿಕೆಯ ಬಗ್ಗೆ ಸರ್ಕಾರವನ್ನು ಟೀಕಿಸಿವೆ ಮತ್ತು ತೆರಿಗೆಗಳನ್ನು ಕಡಿತಗೊಳಿಸಬೇಕೆಂದು ಒತ್ತಾಯಿಸಿವೆ. ಆದರೆ ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಬಡವರಿಗೆ ಲಸಿಕೆಗಳು ಹಂಚಲು ಮತ್ತು ಯೋಜನೆಗಳಿಗೆ ಸುಂಕದ ಹಣವನ್ನು ನೀಡಲಾಗುತ್ತವೆ ಎಂದು ಸರ್ಕಾರ ಹೇಳಿದೆ. ಇಂಧನ ಬೆಲೆಗಳ ಹೆಚ್ಚಳವು ಹಣದುಬ್ಬರದ ಮೇಲೆ ಕಳವಳವನ್ನು ಉಂಟುಮಾಡಿದೆ. ಏಕೆಂದರೆ ಡೀಸೆಲ್ ಕೃಷಿ ಸರಕುಗಳನ್ನು ಒಳಗೊಂಡಂತೆ ಸರಕುಗಳನ್ನು ಸಾಗಿಸಲು ಬಳಸುವ ಮುಖ್ಯ ಇಂಧನವಾಗಿದೆ.
ಇದನ್ನೂ ಓದಿ: ಲೀಟರ್ ಪೆಟ್ರೋಲ್ ಬೆಲೆ ರೂ.112 ಆಗಿದ್ದೇ ಅಚ್ಛೇ ದಿನಗಳಾ ಎಂದು ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದ ಸಿದ್ದರಾಮಯ್ಯ!