Fuel Price Today | ಬೆಂಗಳೂರು: ಸೌದಿ ಅರೇಬಿಯಾ ನೇತೃತ್ವದ ಮಧ್ಯಪ್ರಾಚ್ಯದ ತೈಲೋತ್ಪಾದನೆ ದೇಶಗಳ ಒಕ್ಕೂಟವಾದ ‘ಒಪೆಕ್’ (Organization of the Petroleum Exporting Countries – OPEC) ತೈಲೋತ್ಪಾದನೆಯನ್ನು ಕಡಿಮೆ ಮಾಡುವುದಾಗಿ ಘೋಷಿಸಿದೆ. ಒಪೆಕ್ ಒಕ್ಕೂಟದ ಘೋಷಣೆಯ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಪ್ರಾತಿನಿಧಿಕ ಉತ್ಪನ್ನ ‘ಬ್ರೆಂಟ್ ಕ್ರೂಡ್’ನ ಬೆಲೆಯು 32 ಸೆಂಟ್ಸ್ ಹೆಚ್ಚಾಗಿದ್ದು, ಒಂದು ಬ್ಯಾರೆಲ್ ಕಚ್ಚಾತೈಲದ ದರವು 96.80 ಡಾಲರ್ ಮುಟ್ಟಿದೆ. ಇತ್ತೀಚಿನ ದಿನಗಳಲ್ಲಿ ಬೆಂಚ್ಮಾರ್ಕ್ ದರವು ಶೇ 12ರಷ್ಟು ಕಡಿಮೆಯಾದ ಹಿನ್ನೆಲೆಯಲ್ಲಿ ಉತ್ಪಾದನೆ ಕಡಿತಗೊಳಿಸುವ ಮೂಲಕ ಬೆಲೆಯಲ್ಲಿ ಸ್ಥಿರತೆ ಕಾಪಾಡಲು ಒಪೆಕ್ ನಿರ್ಧರಿಸಿತು.
ಈ ನಡುವೆ ಉಕ್ರೇನ್ ರಷ್ಯಾ-ಯುದ್ಧದ ಹಿನ್ನೆಲೆಯಲ್ಲಿ ಯೂರೋಪ್ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಇಂಧನ ಪೂರೈಕೆಗೆ ಸಮಸ್ಯೆಯಾಗಿದೆ. ಈ ನಡುವೆ ರಷ್ಯಾದ ತೈಲ ಸಾಗಿಸಲು ಕಜಕಸ್ತಾನ ಮಾರ್ಗವಾಗಿ ರೂಪಿಸಿದ್ದ ಪೈಪ್ಲೈನ್ನಲ್ಲಿ ಸಮಸ್ಯೆ ಕಾಣಿಸಿಕೊಂಡಿರುವುದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಹೆಚ್ಚಾಗಲು ಇದು ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತದಲ್ಲಿ ಹೇಗಿದೆ ಇಂಧನ ದರ?
ಉಕ್ರೇನ್ ಮೇಲಿನ ರಷ್ಯಾ ದಾಳಿಯ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರವು ಸತತ ಏರಿಕೆ ಕಂಡಿತ್ತು. ಕೇಂದ್ರ ಸರ್ಕಾರವು ಕಳೆದ ಜುಲೈ 20ರಂದು ಆಮದು ಮಾಡಿಕೊಳ್ಳುವ ಒಂದು ಲೀಟರ್ ಪೆಟ್ರೋಲ್ ಮೇಲಿನ ತೆರಿಗೆಯನ್ನು ₹ 6ರಷ್ಟು ಕಡಿಮೆ ಮಾಡಿತ್ತು. ವೈಮಾನಿಕ ಕ್ಷೇತ್ರದಲ್ಲಿ ಬಳಸುವ ಇಂಧನದ ತೆರಿಗೆಯನ್ನೂ ₹ 2 ಕಡಿಮೆ ಮಾಡಿತ್ತು. ಡೀಸೆಲ್ ಮೇಲಿನ ತೆರಿಗೆಯಲ್ಲಿಯೂ ₹ 2ರ ವಿನಾಯ್ತಿ ಸಿಗುವ ಸಾಧ್ಯತೆಗಳ ಬಗ್ಗೆ ಸಚಿವಾಲಯ ಇಣುಕುನೋಟ ನೀಡಿತ್ತು. ಭಾರತದಲ್ಲಿಯೇ ಉತ್ಪಾದನೆಯಾಗುವ ಕಚ್ಚಾತೈಲದ ಮೇಲಿನ ತೆರಿಗೆಯನ್ನು ಬ್ಯಾರೆಲ್ಗೆ ₹ 23,250ರಿಂದ ₹ 17,000ಕ್ಕೆ ಇಳಿಸಿತ್ತು. ಚಿಲ್ಲರೆ ಮಾರಾಟಗಾರರ ಬಳಿ ಪೆಟ್ರೋಲಿಯಂ ಉತ್ಪನ್ನಗಳ ಧಾರಣೆ ಇನ್ನೂ ಕಡಿಮೆಯಾಗಿಲ್ಲ.
ಮಹಾರಾಷ್ಟ್ರ ಸರ್ಕಾರವು ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿಕ (VAT) ತೆರಿಗೆಯನ್ನು ಕ್ರಮವಾಗಿ ₹ 5 ಮತ್ತು ₹ 3ರಷ್ಟು ಕಡಿಮೆ ಮಾಡಿತ್ತು. ಈ ಬೆಳವಣಿಗೆ ಹೊರತುಪಡಿಸಿದರೆ ಕಳೆದ ಮೂರು ತಿಂಗಳುಗಳಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಧಾರಣೆಯಲ್ಲಿ ವ್ಯತ್ಯಯವಾಗಿಲ್ಲ. ಮೂರು ತಿಂಗಳ ಹಿಂದೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪೆಟ್ರೋಲ್ ಮೇಲೆ ₹ 8 ಮತ್ತು ಡೀಸೆಲ್ ಮೇಲೆ ₹ 6ರ ಅಬಕಾರಿ ಸುಂಕ ವಿನಾಯ್ತಿ ಘೋಷಿಸಿದ್ದರು.
ಪ್ರಸ್ತುತ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ₹ 101.94, ಡೀಸೆಲ್ ₹ 87.89ಕ್ಕೆ ಮಾರಾಟವಾಗುತ್ತಿದೆ. ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ₹ 96.72, ಡೀಸೆಲ್ ₹ 89.62ಕ್ಕೆ ಮಾರಾಟವಾಗುತ್ತಿದೆ. ಉಳಿದಂತೆ ಮುಂಬೈನಲ್ಲಿ ₹ 106.31 (ಪೆಟ್ರೋಲ್), ₹ 94.27 (ಡೀಸೆಲ್ ದರವಿದೆ). ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 102.63 ರೂ. ಮತ್ತು ಡೀಸೆಲ್ ಲೀಟರ್‌ಗೆ 94.24 ರೂ. ಆಗಿದೆ. ಕೊಲ್ಕತ್ತಾ ಪೆಟ್ರೋಲ್ ಬೆಲೆ 106.03 ರೂ. ಮತ್ತು ಡೀಸೆಲ್ ಲೀಟರ್‌ಗೆ 92.76 ರೂ. ಆಗಿದೆ.
ತೈಲ ಮಾರುಕಟ್ಟೆ ಕಂಪನಿಗಳು ದೇಶದಲ್ಲಿ ಗ್ರಾಹಕರಿಗೆ ಅಬಕಾರಿ ಸುಂಕ ಕಡಿತವನ್ನು ವರ್ಗಾಯಿಸಿದರೂ ಸಹ ಪೆಟ್ರೋಲ್ ಮೇಲೆ 13.08 ರೂ ಮತ್ತು ಡೀಸೆಲ್ ಮೇಲೆ 24.09 ರೂ. ನಷ್ಟವನ್ನು ಅನುಭವಿಸುತ್ತಿವೆ. ಭಾರತವು ತನ್ನ ಶೇ. 80ರಷ್ಟು ಇಂಧನ ಅಗತ್ಯವನ್ನು ಆಮದಿನ ಮೂಲಕ ಪೂರೈಸುತ್ತದೆ. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಕಚ್ಚಾ ತೈಲದ ಬೆಲೆ ಮೊದಲಿನ ಸ್ಥಿತಿಗೆ ಇಳಿಯುತ್ತಿಲ್ಲ, ಹಾಗಾಗಿ, ಬೆಲೆ ಏರಿಳಿತಗಳ ಈ ಕಣ್ಣಾಮುಚ್ಚಾಲೆ ಆಟ ನಡೆಯುತ್ತಲೇ ಇದೆ. 2 ತಿಂಗಳಿಗೂ ಹೆಚ್ಚು ಕಾಲ ಪೆಟ್ರೋಲ್-ಡೀಸೆಲ್ ಬೆಲೆ ಒಂದೇ ಕಡೆ ಸ್ಥಿರವಾಗಿದೆ. ಇವುಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಅಬಕಾರಿ ಸುಂಕವನ್ನು ಸರ್ಕಾರವು ಮೇ 21ರಂದು ಕಡಿತಗೊಳಿಸಿದೆ. ಅನೇಕ ಮಾಧ್ಯಮ ವರದಿಗಳ ಪ್ರಕಾರ ಶೀಘ್ರದಲ್ಲೇ ತೈಲದ ಬೆಲೆಗಳು ಕಡಿಮೆಯಾಗುವ ನಿರೀಕ್ಷೆಯಿದೆ.
ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಧಾರಣೆ
ದೆಹಲಿ ಪೆಟ್ರೋಲ್ ರೂ 96.72 ಮತ್ತು ಡೀಸೆಲ್ ರೂ 89.62 ಪ್ರತಿ ಲೀಟರ್ – ಮುಂಬೈ ಪೆಟ್ರೋಲ್ ರೂ 106.31 ಮತ್ತು ಡೀಸೆಲ್ ರೂ 9427 ಪ್ರತಿ ಲೀಟರ್ – ಚೆನ್ನೈ ಪೆಟ್ರೋಲ್ ರೂ 102.63 ಮತ್ತು ಡೀಸೆಲ್ ರೂ 94.24 ಪ್ರತಿ ಲೀಟರ್ – ಕೋಲ್ಕತ್ತಾ ಪೆಟ್ರೋಲ್ ರೂ 106.03 ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ರೂ 92.76 – ನೋಯ್ಡಾದಲ್ಲಿ ಪೆಟ್ರೋಲ್ 96.57 ರೂ ಮತ್ತು ಡೀಸೆಲ್ ಲೀಟರ್‌ಗೆ 89.96 ರೂ – ಲಕ್ನೋದಲ್ಲಿ ಪೆಟ್ರೋಲ್ ರೂ 96.57 ಮತ್ತು ಡೀಸೆಲ್ ಲೀಟರ್‌ಗೆ ರೂ 89.76 – ಜೈಪುರದಲ್ಲಿ ಪೆಟ್ರೋಲ್ 108.48 ರೂ ಮತ್ತು ಡೀಸೆಲ್ ಲೀಟರ್‌ಗೆ 93.72 ರೂ – ತಿರುವನಂತಪುರದಲ್ಲಿ ಪೆಟ್ರೋಲ್ ರೂ 107.71 ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ರೂ 96.52 – ಪೋರ್ಟ್ ಬ್ಲೇರ್‌ನಲ್ಲಿ ಪೆಟ್ರೋಲ್ ರೂ 84.10 ಮತ್ತು ಡೀಸೆಲ್ ಲೀಟರ್‌ಗೆ 79.74 ರೂ – ಪಾಟ್ನಾದಲ್ಲಿ ಪೆಟ್ರೋಲ್ ರೂ 107.24 ಮತ್ತು ಡೀಸೆಲ್ ಲೀಟರ್‌ಗೆ 94.04 ರೂ. – ಗುರುಗ್ರಾಮ್‌ನಲ್ಲಿ ಪ್ರತಿ ಲೀಟರ್‌ಗೆ 97.18 ಮತ್ತು ಡೀಸೆಲ್ 90.05 ರೂ – ಬೆಂಗಳೂರಿನಲ್ಲಿ ಪೆಟ್ರೋಲ್ 101.94 ರೂ ಮತ್ತು ಡೀಸೆಲ್ ಲೀಟರ್‌ಗೆ 87.89 ರೂ. – ಭುವನೇಶ್ವರದಲ್ಲಿ ಪೆಟ್ರೋಲ್ ರೂ 103.19 ಮತ್ತು ಡೀಸೆಲ್ ಲೀಟರ್‌ಗೆ ರೂ 94.76 – ಚಂಡೀಗಢದಲ್ಲಿ ಪೆಟ್ರೋಲ್ 96.20 ರೂ. ಮತ್ತು ಡೀಸೆಲ್ ಲೀಟರ್‌ಗೆ 84.26 ರೂ – ಹೈದರಾಬಾದ್‌ನಲ್ಲಿ ಪೆಟ್ರೋಲ್ 109.66 ರೂ ಮತ್ತು ಡೀಸೆಲ್ ಲೀಟರ್‌ಗೆ 97.82 ರೂ. ಆಗಿದೆ.
ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:55 am, Wed, 24 August 22