AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Price Today: ಕಚ್ಚಾ ತೈಲದ ಬೆಲೆ ಇಳಿಕೆ; ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್​​ ದರ ಎಷ್ಟಿದೆ ನೋಡಿ

Petrol Rate Today, 19-12-2021: ನವೆಂಬರ್​ 4ರಂದು ಪೆಟ್ರೋಲ್​-ಡೀಸೆಲ್​ ಬೆಲೆಯಲ್ಲಿ ಬದಲಾವಣೆಯಾಗಿತ್ತು. ಪೆಟ್ರೋಲ್​-ಡೀಸೆಲ್​ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿದ ಹಿನ್ನೆಲೆಯಲ್ಲಿ ದೇಶದಲ್ಲಿ ಅದಾಗಲೇ ಗಗನಕ್ಕೇರಿದ್ದ ಇಂಧನಗಳ ಬೆಲೆ ತಗ್ಗಿತ್ತು. ಅಂದಿನಿಂದಲೂ ರಾಷ್ಟ್ರಾದ್ಯಂತ ತೈಲ ಬೆಲೆ ಸ್ಥಿರವಾಗಿಯೇ ಇದೆ.

Petrol Price Today: ಕಚ್ಚಾ ತೈಲದ ಬೆಲೆ ಇಳಿಕೆ; ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್​​ ದರ ಎಷ್ಟಿದೆ ನೋಡಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on: Dec 19, 2021 | 7:56 AM

Petrol Diesel Price Today| ದೆಹಲಿ: ಕೊರೊನಾದ ಹೊಸ ರೂಪಾಂತರಿ ವೈರಸ್​ ಒಮಿಕ್ರಾನ್​​ನಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ಹಾಗಂತ ದೇಶಾದ್ಯಂತ ಇನ್ನೂ ಪೆಟ್ರೋಲ್-ಡೀಸೆಲ್​ ದರ ಇಳಿಕೆಯಾಗಿಲ್ಲ. ಸತತ ಒಂದೂವರೆ ತಿಂಗಳಿಂದಲೂ ವಾಹನಗಳ ಇಂಧನ ದರ ((Fuel Price) ಸ್ಥಿರವಾಗಿಯೇ ಇದೆ. ಇಂದು ಕೂಡ (ಡಿಸೆಂಬರ್​ 19, ಭಾನುವಾರ) ಪೆಟ್ರೋಲ್-ಡೀಸೆಲ್​ ದರ (Diesel Price) ಸ್ಥಿರವಾಗಿದೆ.  ಕಳೆದ ತಿಂಗಳು ಅಂದರೆ ನವೆಂಬರ್​ 4ರಂದು ಪೆಟ್ರೋಲ್​-ಡೀಸೆಲ್​ ಬೆಲೆಯಲ್ಲಿ ಬದಲಾವಣೆಯಾಗಿತ್ತು. ಪೆಟ್ರೋಲ್​ (Petrol Price), ಡೀಸೆಲ್​ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿದ ಹಿನ್ನೆಲೆಯಲ್ಲಿ ದೇಶದಲ್ಲಿ ಅದಾಗಲೇ ಗಗನಕ್ಕೇರಿದ್ದ ಇಂಧನಗಳ ಬೆಲೆ ತಗ್ಗಿತ್ತು. ಅಂದಿನಿಂದಲೂ ರಾಷ್ಟ್ರಾದ್ಯಂತ ತೈಲ ಬೆಲೆ ಸ್ಥಿರವಾಗಿಯೇ ಇದೆ. ಇತ್ತೀಚೆಗೆ ದೆಹಲಿ ಸರ್ಕಾರ ಪೆಟ್ರೋಲ್​ ಮೇಲಿನ ವ್ಯಾಟ್​ ಕಡಿತಗೊಳಿಸಿದ್ದರಿಂದ ಅಲ್ಲಿ 103 ರೂ.ಇದ್ದ ದರ 95 ರೂ.ಗೆ ಇಳಿಕೆಯಾಗಿದೆ. ಆದರೆ ಡೀಸೆಲ್ ದರ ಸ್ಥಿರವಾಗಿದ್ದು, ಲೀಟರ್​ಗೆ 86.67 ರೂಪಾಯಿ ನಿಗದಿಯಾಗಿದೆ.

ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 100.58 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 85.01 ರೂಪಾಯಿ ದಾಖಲಾಗಿದೆ.  ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 109.98 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 94.14 ರೂಪಾಯಿ ಇದೆ. ಅದೇ ರೀತಿ ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 101.40 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 91.43 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ಬೆಲೆ 104.67 ರೂಪಾಯಿ ಹಾಗೂ ಲೀಟರ್ ಡೀಸೆಲ್ ಡೀಸೆಲ್ ದರ 89.79 ರೂಪಾಯಿ ನಿಗದಿಯಾಗಿದೆ.

ಹೈದರಾಬಾದ್​ನಲ್ಲಿ ಲೀಟರ್ ಪೆಟ್ರೋಲ್ ದರ 108.20 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 94.62 ರೂಪಾಯಿ ನಿಗದಿಯಾಗಿದೆ. ಗುಜರಾತ್​ನ ಗಾಂಧಿನಗರದಲ್ಲಿ ಲೀಟರ್ ಪೆಟ್ರೋಲ್ ದರ 95.35 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 89.33 ರೂಪಾಯಿ ನಿಗದಿಯಾಗಿದೆ. ಕೇರಳದ ತಿರುವನಂತಪುರಂನಲ್ಲಿ ಲೀಟರ್ ಪೆಟ್ರೋಲ್​ಗೆ 106.36 ರೂಪಾಯಿ ಇದ್ದು, ಲೀಟರ್ ಡೀಸೆಲ್ ಬೆಲೆ 93.47 ರೂಪಾಯಿ ನಿಗದಿಯಾಗಿದೆ. ಲಕ್ನೋದಲ್ಲಿ ಲೀಟರ್ ಪೆಟ್ರೋಲ್ ದರ 95.28 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 86.80 ರೂಪಾಯಿ ನಿಗದಿಯಾಗಿದೆ.

ಶ್ರೀಗಂಗಾನಗರದಲ್ಲಿ ಲೀಟರ್ ಪೆಟ್ರೋಲ್​ಗೆ 114.01 ರೂಪಾಯಿ ಹಾಗೂ ಲೀಟರ್ ಡೀಸೆಲ್​ಗೆ 98.39 ರೂಪಾಯಿ ದಾಖಲಾಗಿದೆ. ಭೋಪಾಲ್​ನಲ್ಲಿ ಲೀಟರ್ ಪೆಟ್ರೋಲ್ ದರ 107.23 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 90.87 ರೂಪಾಯಿ ಇದೆ. ಗುವಾಹಟಿಯಲ್ಲಿ ಲೀಟರ್ ಪೆಟ್ರೋಲ್ ದರ 94.58 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 86.80 ರೂಪಾಯಿ ನಿಗದಿಯಾಗಿದೆ.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.

ಇದನ್ನೂ ಓದಿ: ವಿವಿಧ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.htm

ಗೃಹ ಸಚಿವ ಕೇವಲ ತಮ್ಮ ಗೃಹಕ್ಕೆ ಮಾತ್ರ ಸಚಿವರು: ಆರ್ ಅಶೋಕ
ಗೃಹ ಸಚಿವ ಕೇವಲ ತಮ್ಮ ಗೃಹಕ್ಕೆ ಮಾತ್ರ ಸಚಿವರು: ಆರ್ ಅಶೋಕ
ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಸರ್ಕಾರ ಸಮಗ್ರ ತನಿಖೆ ಮಾಡಿಸಿದೆ: ಗೃಹ ಸಚಿವ
ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಸರ್ಕಾರ ಸಮಗ್ರ ತನಿಖೆ ಮಾಡಿಸಿದೆ: ಗೃಹ ಸಚಿವ
ತುಂಬಿ ಹರಿಯುತ್ತಿರುವ ಗೊನ್ವಾರ ಗ್ರಾಮ ಹೊರವಲಯದಲ್ಲಿರುವ ಹೊಳೆ
ತುಂಬಿ ಹರಿಯುತ್ತಿರುವ ಗೊನ್ವಾರ ಗ್ರಾಮ ಹೊರವಲಯದಲ್ಲಿರುವ ಹೊಳೆ
ಹುಬ್ಬಳ್ಳಿ ಜನರ ಸಮಸ್ಯೆಗಳಿಗೆ ಜನಪ್ರತಿನಿಧಿಗಳಿಂದ ನೀರಸ ಪ್ರತಿಕ್ರಿಯೆ
ಹುಬ್ಬಳ್ಳಿ ಜನರ ಸಮಸ್ಯೆಗಳಿಗೆ ಜನಪ್ರತಿನಿಧಿಗಳಿಂದ ನೀರಸ ಪ್ರತಿಕ್ರಿಯೆ
ಬರ್ತ್​ಡೇ ಪಾರ್ಟಿಯಲ್ಲಿ ಡ್ರಗ್ಸ್, ಗಾಯಕಿ ಮಂಗ್ಲಿ ಸ್ಪಷ್ಟನೆ
ಬರ್ತ್​ಡೇ ಪಾರ್ಟಿಯಲ್ಲಿ ಡ್ರಗ್ಸ್, ಗಾಯಕಿ ಮಂಗ್ಲಿ ಸ್ಪಷ್ಟನೆ
ಮೋದಿ ಸರ್ಕಾರದ ಆಡಳಿತ ವೈಖರಿ, ಜನಾಭಿಪ್ರಾಯ ಸಂಗ್ರಹಕ್ಕೆ ಜನ್ ಮನ್ ಸಮೀಕ್ಷೆ
ಮೋದಿ ಸರ್ಕಾರದ ಆಡಳಿತ ವೈಖರಿ, ಜನಾಭಿಪ್ರಾಯ ಸಂಗ್ರಹಕ್ಕೆ ಜನ್ ಮನ್ ಸಮೀಕ್ಷೆ
ಜೆಕೆ ರಾಜುಗೆ ಎಂದೂ ಮರೆಯಲಾಗದ ಉಡುಗೊರೆ ನೀಡಿದ ವಿಜಯ್ ಪ್ರಕಾಶ್
ಜೆಕೆ ರಾಜುಗೆ ಎಂದೂ ಮರೆಯಲಾಗದ ಉಡುಗೊರೆ ನೀಡಿದ ವಿಜಯ್ ಪ್ರಕಾಶ್
ಹುಲಿಯ ನಿರ್ಭೀತ ನಡಿಗೆ, ಗತ್ತು ನೋಡಿ ನೀವೂ ರೋಮಾಂಚಿತರಾಗುತ್ತೀರಿ!
ಹುಲಿಯ ನಿರ್ಭೀತ ನಡಿಗೆ, ಗತ್ತು ನೋಡಿ ನೀವೂ ರೋಮಾಂಚಿತರಾಗುತ್ತೀರಿ!
ಭಾರಿ ಮಳೆ, ಕಾರವಾರ ಕೆಎಸ್ಆರ್​ಟಿಸಿ ಡಿಪೋ ಜಲಾವೃತ
ಭಾರಿ ಮಳೆ, ಕಾರವಾರ ಕೆಎಸ್ಆರ್​ಟಿಸಿ ಡಿಪೋ ಜಲಾವೃತ
ಮೂಲ ನಕ್ಷತ್ರದಲ್ಲಿ ಚಂದ್ರ ಸಂಚಾರ: ಈ ದಿನದ ರಾಶಿ ಭವಿಷ್ಯ ಇಲ್ಲಿ ನೋಡಿ
ಮೂಲ ನಕ್ಷತ್ರದಲ್ಲಿ ಚಂದ್ರ ಸಂಚಾರ: ಈ ದಿನದ ರಾಶಿ ಭವಿಷ್ಯ ಇಲ್ಲಿ ನೋಡಿ