Petrol Price Today: ಸತತ 24 ದಿನಗಳಿಂದ ಸ್ಥಿರತೆಯನ್ನು ಕಾಯ್ದುಕೊಂಡ ಪೆಟ್ರೋಲ್​, ಡೀಸೆಲ್ ​ದರ!

Petrol Rate Today: ಮೇ 1 ರಿಂದ ಇಲ್ಲಿಯವರೆಗೆ ಪೆಟ್ರೋಲ್ ಬೆಲೆ 41 ದಿನಗಳವರೆಗೆ ಹೆಚ್ಚಾಗಿದೆ. ರಾಜಧಾನಿ ದೆಹಲಿಯಲ್ಲಿ, ಈ 41 ದಿನಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 11.44 ರೂ. ಏರಿಕೆಯಾದರೆ. ಅದೇ ಸಮಯದಲ್ಲಿ, ಡೀಸೆಲ್ ದರ ಪ್ರತಿ ಲೀಟರ್‌ಗೆ 09.14 ರೂಪಾಯಿಗೆ ಏರಿಕೆಯಾಗಿತ್ತು.

Petrol Price Today: ಸತತ 24 ದಿನಗಳಿಂದ ಸ್ಥಿರತೆಯನ್ನು ಕಾಯ್ದುಕೊಂಡ ಪೆಟ್ರೋಲ್​, ಡೀಸೆಲ್ ​ದರ!
ಪ್ರಾತಿನಿಧಿಕ ಚಿತ್ರ
Edited By:

Updated on: Aug 11, 2021 | 8:00 AM

Petrol Diesel Rate Today | ದೆಹಲಿ: ಇಂದು ( ಆಗಸ್ಟ್ 10, ಮಂಗಳವಾರ) ಪೆಟ್ರೋಲ್ (Petrol Price), ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಗಳಿಲ್ಲ. ಸತತ 24 ದಿನಗಳಿಂದ ಇಂಧನ ದರ (Fuel Price) ಸ್ಥಿರವಾಗಿಯೇ ಉಳಿದಿದೆ. ಜುಲೈ ತಿಂಗಳಿನಲ್ಲಿ ಎರಡು ಬಾರಿ ಡೀಸೆಲ್ ದರವನ್ನು (Diesel Price) ಇಳಿಕೆ ಮಾಡಲಾಯಿತು. ಆ ಬಳಿಕ ಇನ್ನೇನು ಇಂಧನ ದರ ಇಳಿಕೆಯಾಗುತ್ತದೆ ಎಂಬ ನೀರಿಕ್ಷೆಯಲ್ಲಿದ್ದ ವಾಹನ ಸವಾರರಿಗೆ ನಿರಾಸೆಯಾಗಿದೆ. ಆದರೆ ದರ ಸ್ಥಿರವಾಗಿ ಉಳಿದಿರುವುದು ದರ ಏರಿಕೆಗಿಂತ ನಿರಾಳವಾಗಿದೆ ಎನ್ನುವುದು ಮಾತ್ರ ಸತ್ಯ.

ಮೇ 1 ರಿಂದ ಇಲ್ಲಿಯವರೆಗೆ ಪೆಟ್ರೋಲ್ ಬೆಲೆ 41 ದಿನಗಳವರೆಗೆ ಹೆಚ್ಚಾಗಿದೆ. ರಾಜಧಾನಿ ದೆಹಲಿಯಲ್ಲಿ, ಈ 41 ದಿನಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 11.44 ರೂ. ಏರಿಕೆಯಾದರೆ. ಅದೇ ಸಮಯದಲ್ಲಿ, ಡೀಸೆಲ್ ದರ ಪ್ರತಿ ಲೀಟರ್‌ಗೆ 09.14 ರೂಪಾಯಿಗೆ ಏರಿಕೆಯಾಗಿತ್ತು. ಈ ದರ ಏರಿಕೆಯ ನಂತರ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಾಖಲೆ ಮಟ್ಟವನ್ನು ತಲುಪಿದೆ.

ಮಹಾನಗರಗಳಲ್ಲಿ ಇಂದು ಪೆಟ್ರೋಲ್ ಮತ್ತು ಡೀಸೆಲ್ ದರ ಎಷ್ಟು?
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 101.84 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 89.87 ರೂಪಾಯಿಗೆ ಏರಿಕೆಯಾಗಿದೆ. ಇನ್ನು ಮುಂಬೈನಲ್ಲಿ ಲೀಟರ್ ಪೆಟ್ರೋಲ್​ಗೆ 107.83 ಹಾಗೂ ಲೀಟರ್ ಡೀಸೆಲ್ಗೆ 97.45 ರೂಪಾಯಿ ಕೊಟ್ಟು ಗ್ರಾಹಕರು ಕೊಳ್ಳುತ್ತಿದ್ದಾರೆ.

ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 102.49 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 94.39 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 102.08 ರೂಪಾಯಿ ಇದೆ. ಲೀಟರ್ ಡೀಸೆಲ್ ದರ 93.02 ರೂಪಾಯಿ ಇದೆ. ಅದೇ ರೀತಿ ಭೋಪಾಲ್ನಲ್ಲಿ ಲೀಟರ್ ಪೆಟ್ರೋಲ್ ದರ 110.20 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 98.67 ರೂಪಾಯಿ ಇದೆ.

ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 105.25 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 95.26 ರೂಪಾಯಿ ಇದೆ. ಲಕ್ನೋದಲ್ಲಿ ಲೀಟರ್ ಪೆಟ್ರೋಲ್ ದರ 98.92 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 90.26 ರೂಪಾಯಿ ಇದೆ. ಪ್ರಮುಖ ಎಲ್ಲಾ ಮಹಾನಗರಗಳಿಲ್ಲಿಯೂ ಸಹ ಹಳೆದ 24 ದಿನಗಳಿಂದ ಇಂಧನ ದರ ಸ್ಥಿರವಾಗಿ ಉಳಿದಿದೆ.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುವ ಕೆಲಸವನ್ನು ಮಾಡುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.

ಇದನ್ನೂ ಓದಿ:
ವಿವಿಧ ನಗರದಲ್ಲಿ ಪೆಟ್ರೋಲ್​ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:
https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:
https://tv9kannada.com/business/diesel-price-today.html

Published On - 7:46 am, Tue, 10 August 21

TV9 Web

TV9 Kannada

Read More
Follow Us