PF Rules Change: ಯುಎಎನ್ ಜತೆಗೆ ಆಧಾರ್ ಜೋಡಣೆ ಆಗದಿದ್ದಲ್ಲಿ ಉದ್ಯೋಗಿ ಪಿಎಫ್​ ಖಾತೆಗೆ ಹಣ ಜಮೆ ಆಗಲ್ಲ

| Updated By: Srinivas Mata

Updated on: Jun 17, 2021 | 5:44 PM

ಒಂದು ವೇಳೆ ಸೆಪ್ಟೆಂಬರ್ 1ರೊಳಗೆ ಪಿಎಫ್​ ಯುಎಎನ್​ ಜತೆಗೆ ಆಧಾರ್ ಜೋಡಣೆ ಆಗದಿದ್ದಲ್ಲಿ ಉದ್ಯೋಗದಾತರಿಂದ ಉದ್ಯೋಗಿಗಳಿಗೆ ಪಿಎಫ್​ ಕೊಡುಗೆ ಮತ್ತಿತರ ಅನುಕೂಲಗಳು ದೊರೆಯುವುದಿಲ್ಲ.

PF Rules Change: ಯುಎಎನ್ ಜತೆಗೆ ಆಧಾರ್ ಜೋಡಣೆ ಆಗದಿದ್ದಲ್ಲಿ ಉದ್ಯೋಗಿ ಪಿಎಫ್​ ಖಾತೆಗೆ ಹಣ ಜಮೆ ಆಗಲ್ಲ
ಸಾಂದರ್ಭಿಕ ಚಿತ್ರ
Follow us on

ಕಾರ್ಮಿಕ ಭವಿಷ್ಯ ನಿಧಿ (ಇಪಿಎಫ್​) ಚಂದಾದಾರರು ತಮ್ಮ ಆಧಾರ್​ ಕಾರ್ಡ್​ ಅನ್ನು ಪ್ರಾವಿಡೆಂಟ್​ ಫಂಡ್​ (ಪಿಎಫ್​) ಖಾತೆಗೆ ಜೋಡಣೆ ಮಾಡುವುದಕ್ಕೆ ಸೆಪ್ಟೆಂಬರ್ 1ರ ತನಕ ಕಾಲಾವಧಿ ವಿಸ್ತರಣೆ ಆಗಿದೆ. ಪಿಎಫ್​ ಯುಎಎನ್​ (ಯೂನಿವರ್ಸಲ್ ಅಕೌಂಟ್ ನಂಬರ್)ಗೆ ಆಧಾರ್ ಕಾರ್ಡ್ ಜೋಡಣೆ ಮಾಡುವುದನ್ನು ಕಾರ್ಮಿಕರ ಭವಿಷ್ಯ ನಿಧಿ ಒಕ್ಕೂಟ (ಇಪಿಎಫ್​ಒ)ದಿಂದ ಕಡ್ಡಾಯಗೊಳಿಸಲಾಗಿದೆ. ಹೀಗೆ ಮಾಡಿದರಷ್ಟೇ ಉದ್ಯೋಗದಾತರ ಪಿಎಫ್ ಕೊಡುಗೆ ಮತ್ತು ಇತರ ಅನುಕೂಲಗಳು ದೊರೆಯುತ್ತವೆ. ಈ ಹಿಂದೆ ಇದಕ್ಕಾಗಿ ಜೂನ್ 1, 2021ರ ಗಡುವು ಇತ್ತು. ಅದನ್ನು ಸೆಪ್ಟೆಂಬರ್ 1, 2021ಕ್ಕೆ ವಿಸ್ತರಿಸಲಾಯಿತು. “ಯುಎಎನ್​ ಜೊತೆಗೆ ಆಧಾರ್ ಜೋಡಣೆ ಕಡ್ಡಾಯ. ಒಂದು ವೇಳೆ ಜೋಡಣೆ ಆಗದಿದ್ದಲ್ಲಿ ಸೆಪ್ಟೆಂಬರ್ 1, 2021ರಿಂದ ಜಾರಿಗೆ ಬರುವಂತೆ ಉದ್ಯೋಗದಾತರಿಗೆ ಪಿಎಫ್ ಹಣ ಹಾಕಲು ಆಗುವುದಿಲ್ಲ,” ಎಂದು ತಿಳಿಸಲಾಗಿದೆ.

ಈ ಹೊಸ ನಿಯಮವನ್ನು ಜಾರಿಗೆ ತರುವುದರ ಸಲುವಾಗಿ ಸಾಮಾಜಿಕ ಭದ್ರತೆ ಸಂಹಿತೆ 2020, ಸೆಕ್ಷನ್ 142ಕ್ಕೆ ಕಾರ್ಮಿಕ ಸಚಿವಾಲಯದಿಂದ ತಿದ್ದುಪಡಿ ತರಲಾಗಿದೆ. ಸೆಕ್ಷನ್ 142ರ ಪ್ರಕಾರ, ಉದ್ಯೋಗಿ ಅಥವಾ ಅಸಂಘಟಿತ ವಲಯದ ಕಾರ್ಮಿಕರು ಅಥವಾ ಇನ್ಯಾವುದೇ ವ್ಯಕ್ತಿಗಳು ಈ ಸಂಹಿತೆ ಅಡಿಯಲ್ಲಿ ಅನುಕೂಲ ಪಡೆಯಲು ಆಧಾರ್ ಸಂಖ್ಯೆ ಮೂಲಕ ಗುರುತಿಸಬೇಕು. ಯುಎಎನ್​ ಜತೆ ಆಧಾರ್ ವೆರಿಫೈ ಆದ ಎಲೆಕ್ಟ್ರಾನಿಕ್ ಚಲನ್ ಕಮ್ ರೆಸಿಟ್ ಅಥವಾ ಪಿಎಫ್​ ರಿಟರ್ನ್ (ಇಸಿಆರ್) ಫೈಲಿಂಗ್​ ಜಾರಿಗೆ ಆಗುವುದಕ್ಕೆ ಸೆಪ್ಟೆಂಬರ್​ 1, 2021ಕ್ಕೆ ವಿಸ್ತರಣೆ ಆಗಿದೆ. ಇಪಿಎಫ್​ಒ ಹೇಳಿದ ಪ್ರಕಾರ, ಯಾವ ಉದ್ಯೋಗಿಯ ಪಿಎಫ್​ ಯುಎಎನ್ ಜತೆಗೆ ಆಧಾರ್​ ಜೋಡಣೆ ಆಗಿರುತ್ತದೋ ಅಂಥವರ ಇಸಿಆರ್ ಫೈಲ್ ಮಾಡುವುದಕ್ಕೆ ಮಾತ್ರ ಉದ್ಯೋಗದಾತರಿಗೆ ಸಾಧ್ಯವಾಗುತ್ತದೆ. ಯುಎಎನ್​ ಜತೆಗೆ ಆಧಾರ್ ಜೋಡಣೆ ಆಗದ್ದಕ್ಕೆ ಉದ್ಯೋಗದಾತರು ಪ್ರತ್ಯೇಕವಾಗಿ ಇಸಿಆರ್​ ಫೈಲ್ ಮಾಡಬಹುದು ಎಂದು ಹೇಳಲಾಗಿದೆ.

ಎಲ್ಲ ಬಗೆಯ ಅನುಕೂಲಕ್ಕೂ ಇಪಿಎಫ್​ಒ ಆನ್​ಲೈನ್​ಗೆ ಬದಲಾಗುತ್ತಿದೆ. ಅದು ಕೆವೈಸಿ ಅಪ್​ಡೇಷನ್ ಇರಬಹುದು, ಮುಂಗಡಕ್ಕೆ ಮನವಿ, ವಿಥ್​ಡ್ರಾ ಮುಂತಾದವಕ್ಕೆ ಇರಬಹುದು. ಆದ್ದರಿಂದ ಫಲಾನುಭವಿಯ ಗುರುತನ್ನು ರೂಪಿಸುವುದು ಬಹಳ ಮುಖ್ಯ. ಅದಕ್ಕಾಗಿ ಆಧಾರ್ ಸೂಚಿಸಲಾಗಿದೆ ಎನ್ನುತ್ತಾರೆ ತಜ್ಞರು. ಅಧಾರ್ ಮಾಹಿತಿ ಅಪ್​ಡೇಟ್​ ಆಗಲಿಲ್ಲ ಎಂದಾದಲ್ಲಿ ಇಪಿಎಫ್​ನ ಇತರ ಅನುಕೂಲಗಳು ಸಹ ಕಳೆದುಕೊಳ್ಳಬೇಕಾಗುತ್ತದೆ. ಕೊವಿಡ್- 19 ಅಡ್ವಾನ್ಸ್, ಪಿಎಫ್​ ಖಾತೆಗೆ ಜೋಡಣೆಯಾದ ಇನ್ಷೂರೆನ್ಸ್ ಸಿಗಲ್ಲ. ಪ್ಯಾನ್​ ಕಾರ್ಡ್​ ಜತೆಗೆ ಆಧಾರ್​ ಜೋಡಣೆ ಆಗುವುದು ಎಲ್ಲ ಬ್ಯಾಂಕ್​ಗಳು, ಪಿಪಿಎಫ್ ಖಾತೆಗಳು ಮತ್ತು ಇಎಫ್​ಪಿ ಖಾತೆಗಳಿಗೆ ಪ್ರಾಥಮಿಕ ಕೆವೈಸಿ ಅಗತ್ಯ. ಒಂದು ವೇಳೆ ಇದು ಆಗದಿದ್ದಲ್ಲಿ ಬಡ್ಡಿ ಜಮೆ ಹಾಗೂ ವಿಥ್​ಡ್ರಾ ಕ್ಲೇಮ್​ ತಿರಸ್ಕೃತವಾಗುತ್ತದೆ. ಉದ್ಯೋಗದಾತರು ಈಗಿನ ವಿಸ್ತರಣೆಯಾದ ಸಮಯವನ್ನು ಬಳಸಿಕೊಂಡು ಉದ್ಯೋಗಿಗಳಿಗೆ ಮಾಹಿತಿ ರವಾನಿಸಬೇಕು. ಒಂದು ವೇಳೆ ಜೋಡಣೆ ಆಗದಿದ್ದಲ್ಲಿ ಅದರ ಪರಿಣಾಮ ಏನು ಹಾಗೂ ಜೋಡಿಸುವುದು ಹೇಗೆ ಎಂಬುದನ್ನು ಮಾರ್ದರ್ಶನ ನೀಡಿ, ಅದನ್ನು ಪೂರ್ಣಗೊಳಿಸಲು ಸಹಕರಿಸಬೇಕು ಎನ್ನುತ್ತಾರೆ ವಿಶ್ಲೇಷಕರು.

ಇದನ್ನೂ ಓದಿ: Aadhaar matching deferred: ಆಧಾರ್ ಜತೆ ಉದ್ಯೋಗಿ ಮಾಹಿತಿ ತಾಳೆ ಆಗಲು ಸೆ.​1ಕ್ಕೆ ಗಡುವು ಮುಂದೂಡಿದ ಇಪಿಎಫ್​ಒ

(If employees not followed new rules money will not be credited to EPF account by employer)