Fact Check: ಅದಾನಿ, ಅಂಬಾನಿ, ಟಾಟಾ, ಬಿರ್ಲಾ ಮೊದಲಾದವರಿಗೆ ಜಿ20 ಔತಣಕೂಟಕ್ಕೆ ಆಹ್ವಾನಿಸಲಾಗಿಲ್ಲ; ಪಿಐಬಿ ಫ್ಯಾಕ್ಟ್ ಚೆಕ್

|

Updated on: Sep 08, 2023 | 1:56 PM

G20 Dinner Party at New Delhi: ಸೆಪ್ಟೆಂಬರ್ 9ರಂದು ನವದೆಹಲಿಯ ಭಾರತ್ ಮಂಡಪಂನಲ್ಲಿ ಆಯೋಜಿಸಲಾಗಿರುವ ರಾತ್ರಿ ಔತಣಕೂಟಕ್ಕೆ ಭಾರತದ ಪ್ರಮುಖ 500 ಉದ್ಯಮಿಗಳನ್ನು ಆಹ್ವಾನಿಸಲಾಗಿದೆ ಎಂದು ರಾಯ್ಟರ್ಸ್ ವರದಿಯನ್ನಾಧರಿಸಿ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಸರ್ಕಾರದ ಪಿಐಬಿ ವಿಭಾಗದ ಫ್ಯಾಕ್ಟ್ ಚೆಕ್ ತಂಡವು ಈ ಸುದ್ದಿ ಸುಳ್ಳು ಎಂದು ಹೇಳಿದೆ. ಯಾವ ಉದ್ಯಮಿಯನ್ನೂ ಔತಣಕೂಟಕ್ಕೆ ಆಹ್ವಾನಿಸಿಲ್ಲ ಎಂದು ಹೇಳಿದೆ.

Fact Check: ಅದಾನಿ, ಅಂಬಾನಿ, ಟಾಟಾ, ಬಿರ್ಲಾ ಮೊದಲಾದವರಿಗೆ ಜಿ20 ಔತಣಕೂಟಕ್ಕೆ ಆಹ್ವಾನಿಸಲಾಗಿಲ್ಲ; ಪಿಐಬಿ ಫ್ಯಾಕ್ಟ್ ಚೆಕ್
ಜಿ20 ಡಿನ್ನರ್​ಗೆ ಉದ್ಯಮಿಗಳನ್ನು ಆಹ್ವಾನಿಸಿಲ್ಲ: ಪಿಐಬಿ ಫ್ಯಾಕ್ಟ್ ಚೆಕ್
Follow us on

ನವದೆಹಲಿ, ಸೆಪ್ಟೆಂಬರ್ 8: ಜಿ20 ಶೃಂಗಸಭೆ (G20 Leaders Summit) ನಿಮಿತ್ತ ಸೆಪ್ಟೆಂಬರ್ 9ರಂದು ಆಯೋಜಿಸಲಾದ ವಿಶೇಷ ಔತಣಕೂಟಕ್ಕೆ ಗೌತಮ್ ಅದಾನಿ, ಮುಕೇಶ್ ಅಂಬಾನಿ ಸೇರಿದಂತೆ ಭಾರತದ 500 ಪ್ರಮುಖ ಉದ್ಯಮಿಗಳನ್ನು (Indian Business Leaders) ಅಹ್ವಾನಿಸಲಾಗಿದೆ ಎಂಬ ಸುದ್ದಿ ಎರಡು ದಿನಗಳ ಹಿಂದೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಸೆಪ್ಟೆಂಬರ್ 9ರಂದು ನಡೆಯುವ ಸ್ಪೆಷಲ್ ಡಿನ್ನರ್ ಕಾರ್ಯಕ್ರಮದಲ್ಲಿ ಯಾವ ಉದ್ಯಮಿಗಳನ್ನೂ ಆಹ್ವಾನಿಸಲಾಗಿಲ್ಲ ಎಂದು ಸರ್ಕಾರದ ಸಾರ್ವಜನಿಕ ಮಾಹಿತಿ ವಿಭಾಗ (PIB) ಸ್ಪಷ್ಟಪಡಿಸಿದೆ.

‘ಸೆಪ್ಟೆಂಬರ್ 9ರಂದು ಭಾರತ್ ಮಂಡಪಂನಲ್ಲಿ ಆಯೋಜಿಸಲಾಗುವ ಜಿ20 ಇಂಡಿಯಾ ಸ್ಪೆಷಲ್ ಡಿನ್ನರ್ (G20 India Special dinner) ಕಾರ್ಯಕ್ರಮದಲ್ಲಿ ಪ್ರಮುಖ ಬಿಸಿನೆಸ್ ಲೀಡರ್​ಗಳನ್ನು ಆಹ್ವಾನಿಸಲಾಗಿದೆ ಎಂದು ರಾಯ್ಟರ್ಸ್ ಸುದ್ದಿಸಂಸ್ಥೆಯ ಲೇಖನವನ್ನಾಧರಿಸಿ ಮಾಧ್ಯಮಗಳಲ್ಲಿ ವರದಿಗಳಾಗಿದ್ದವು. ಈ ಸುದ್ದಿ ತಪ್ಪು. ಔತಣಕೂಟಕ್ಕೆ ಯಾವ ಉದ್ಯಮಿಗಳನ್ನೂ ಆಹ್ವಾನಿಸಲಾಗಿಲ್ಲ’ ಎಂದು ಪಿಐಬಿ ಫ್ಯಾಕ್ಟ್ ಚೆಕ್​ನ ಎಕ್ಸ್ ಖಾತೆಯಿಂದ ಟ್ವೀಟ್ ಆಗಿದೆ.


ಇದನ್ನೂ ಓದಿ: ಐವತ್ತು ವರ್ಷದಲ್ಲಿ ಆಗುವಂಥದ್ದನ್ನು ಆರೇ ವರ್ಷದಲ್ಲಿ ಸಾಧಿಸಿದೆ ಭಾರತ: ವಿಶ್ವಬ್ಯಾಂಕ್ ಪ್ರಶಂಸೆ

ರಾಯ್ಟರ್ಸ್ ವರದಿಯನ್ನಾಧರಿಸಿ ಪ್ರಕಟವಾದ ಸುದ್ದಿಗಳ ಪ್ರಕಾರ, ಜಿ20 ನಿಮಿತ್ತ ನಡೆಸಲಾಗುವ ರಾತ್ರಿ ಔತಣಕೂಟ ಕಾರ್ಯಕ್ರಮಕ್ಕೆ 500 ಮಂದಿ ಪ್ರಮುಖ ಉದ್ಯಮಿಗಳಿಗೆ ಆಹ್ವಾನ ಹೋಗಿದೆ. ಇವರಲ್ಲಿ ಮುಕೇಶ್ ಅಂಬಾನಿ, ಗೌತಮ್ ಅದಾನಿ, ಕುಮಾರ ಮಂಗಲಂ ಬಿರ್ಲಾ, ಸುನಿಲ್ ಮಿಟ್ಟಲ್, ಎನ್ ಚಂದ್ರಶೇಖರನ್ (ಟಾಟಾ ಸನ್ಸ್ ಛೇರ್ಮನ್) ಮೊದಲಾದವರೂ ಇದ್ದಾರೆ. ಈ ಔತಣಕೂಟದಲ್ಲಿ ಜಿ20 ದೇಶಗಳ ಮುಖ್ಯಸ್ಥರೂ ಇರಲಿದ್ದು, ಭಾರತದ ಪ್ರಮುಖ 500 ಉದ್ಯಮಿಗಳೊಂದಿಗೆ ನೇರವಾಗಿ ಸಂವಾದ ನಡೆಸಲು ಅನುಕೂಲವಾಗುತ್ತದೆ ಎಂದು ರಾಯ್ಟರ್ಸ್ ವರದಿಯಲ್ಲಿ ತಿಳಿಸಲಾಗಿತ್ತು. ಆದರೆ, ಈಗ ಈ ಸುದ್ದಿಯನ್ನು ಸರ್ಕಾರ ತಳ್ಳಿಹಾಕಿದೆ.

ಎರಡು ದಿನ ನಡೆಯುವ ಜಿ20 ಶೃಂಗಸಭೆ

ವಿಶ್ವದ ಪ್ರಮುಖ ಆರ್ಥಿಕತೆಯ ದೇಶಗಳ ಗುಂಪಾಗಿರುವ ಜಿ20ಗೆ ಈ ವರ್ಷ ಭಾರತ ಅಧ್ಯಕ್ಷನಾಗಿದೆ. ಈಗಾಗಲೇ ಕಳೆದ ಹಲವು ತಿಂಗಳುಗಳಿಂದ ದೇಶದ ವಿವಿಧೆಡೆ ಜಿ20 ಪೂರಕ ಸಭೆಗಳು ನಡೆದು ಹಲವಾರು ಅಜೆಂಡಾಗಳನ್ನು ಚರ್ಚಿಸಿ ಅಂತಿಮಗೊಳಿಸಲಾಗಿದೆ.

ಇದನ್ನೂ ಓದಿ: G20 ಶೃಂಗಸಭೆಗೆ ಆಗಮಿಸುತ್ತಿರುವ ವಿದೇಶಿ ನಾಯಕರನ್ನು ಬರಮಾಡಿಕೊಳ್ಳುತ್ತಿರುವವರು ಯಾರು? ಯಾರಿಗೆ ಯಾವ ಜವಾಬ್ದಾರಿ?

ಸೆಪ್ಟೆಂಬರ್ 9 ಮತ್ತು 10ರಂದು ಎರಡು ದಿನಗಳ ಕಾಲ ನವದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯಲಿದೆ. ಈ ಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಪಸ್ಥಿತರಿರುವ ಸಾಧ್ಯತೆ ಕಡಿಮೆ. ಉಳಿದೆಲ್ಲಾ ದೇಶಗಳ ಮುಖ್ಯಸ್ಥರು ಪಾಲ್ಗೊಳ್ಳುತ್ತಿದ್ದಾರೆ.

ಈ ಜಾಗತಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸರ್ಕಾರ ಸಕಲ ಸಿದ್ಧತೆ ನಡೆಸಿಯಾಗಿದೆ. ಭಾರತದಲ್ಲಿ ಯಾವತ್ತೂ ಎಲ್ಲಿಯೂ ಕಂಡುಬರದಷ್ಟು ಭದ್ರತಾ ವ್ಯವಸ್ಥೆಯನ್ನು ನವದೆಹಲಿಯಲ್ಲಿ ಕೈಗೊಳ್ಳಲಾಗಿದೆ.

ಇನ್ನಷ್ಟು ಜಿ20 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ