G20 ಶೃಂಗಸಭೆಗೆ ಆಗಮಿಸುತ್ತಿರುವ ವಿದೇಶಿ ನಾಯಕರನ್ನು ಬರಮಾಡಿಕೊಳ್ಳುತ್ತಿರುವವರು ಯಾರು? ಯಾರಿಗೆ ಯಾವ ಜವಾಬ್ದಾರಿ?

ದೆಹಲಿಗೆ ಶುಕ್ರವಾರ ಸಂಜೆ 6.55 ಕ್ಕೆ ಆಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಸ್ವಾಗತಿಸಲು ಜನರಲ್ ವಿಕೆ ಸಿಂಗ್ (ನಿವೃತ್ತ) ಅವರನ್ನು ನಿಯೋಜಿಸಲಾಗಿದೆ. ಈ ಹಿಂದೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿದ್ದ ಕೇಂದ್ರ ಸಚಿವರು ಚೀನಾದ ಪ್ರಧಾನಿ ಲಿ ಕಿಯಾಂಗ್ ಅವರನ್ನು ಸಹ ಬರಮಾಡಿಕೊಳ್ಳಲಿದ್ದಾರೆ.

G20 ಶೃಂಗಸಭೆಗೆ ಆಗಮಿಸುತ್ತಿರುವ ವಿದೇಶಿ ನಾಯಕರನ್ನು ಬರಮಾಡಿಕೊಳ್ಳುತ್ತಿರುವವರು ಯಾರು? ಯಾರಿಗೆ ಯಾವ ಜವಾಬ್ದಾರಿ?
ಜಿ 20 ಶೃಂಗಸಭೆ
Follow us
ರಶ್ಮಿ ಕಲ್ಲಕಟ್ಟ
|

Updated on:Sep 08, 2023 | 2:07 PM

ದೆಹಲಿ ಸೆಪ್ಟೆಂಬರ್ 08: ಸೆಪ್ಟೆಂಬರ್ 9 ಮತ್ತು 10 ರಂದು ದೆಹಲಿಯಲ್ಲಿ ಜಿ 20 ನಾಯಕರ ಶೃಂಗಸಭೆಗೆ (G20 Summit) ಆಗಮಿಸುವ ವಿದೇಶಿ ಗಣ್ಯರನ್ನು ಸ್ವಾಗತಿಸುವ ಜವಾಬ್ದಾರಿಯನ್ನು ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರವು ಸಚಿವ ಸಂಪುಟದ ಸಚಿವರಿಗೆ ವಹಿಸಿದೆ. ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಬುಧವಾರ ದೆಹಲಿ ತಲುಪಿದ್ದು ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಅವರನ್ನು ಬರ ಮಾಡಿಕೊಂಡಿದ್ದಾರೆ. ಅಂತರಾಷ್ಟ್ರೀಯ ಸಮಾರಂಭದಲ್ಲಿ ಯುರೋಪಿಯನ್ ಯೂನಿಯನ್ ಮತ್ತು ಆಹ್ವಾನಿತ ಅತಿಥಿ ದೇಶಗಳ 30 ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು ಮತ್ತು ಉನ್ನತ ಅಧಿಕಾರಿಗಳು ಮತ್ತು 14 ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸುತ್ತಿದ್ದಾರೆ.

ದೆಹಲಿಗೆ ಶುಕ್ರವಾರ ಸಂಜೆ 6.55 ಕ್ಕೆ ಆಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಸ್ವಾಗತಿಸಲು ಜನರಲ್ ವಿಕೆ ಸಿಂಗ್ (ನಿವೃತ್ತ) ಅವರನ್ನು ನಿಯೋಜಿಸಲಾಗಿದೆ. ಈ ಹಿಂದೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿದ್ದ ಕೇಂದ್ರ ಸಚಿವರು ಚೀನಾದ ಪ್ರಧಾನಿ ಲಿ ಕಿಯಾಂಗ್ ಅವರನ್ನು ಸಹ ಬರಮಾಡಿಕೊಳ್ಳಲಿದ್ದಾರೆ.ಬುಧವಾರ ಸಚಿವರ ಪರಿಷತ್ತಿನ ಅನೌಪಚಾರಿಕ ಸಭೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಹೋದ್ಯೋಗಿಗಳಿಗೆ ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿನಿಧಿಸುವ ಭಾರತೀಯ ಉಡುಗೆಯಲ್ಲಿ ಗಣ್ಯರನ್ನು ಬರಮಾಡಿಕೊಳ್ಳುವಂತೆ ಹೇಳಿದ್ದಾರೆ.

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮಧ್ಯಾಹ್ನ 1.40 ಕ್ಕೆ ಆಗಮಿಸಲಿದ್ದಾರೆ. ಅವರನ್ನು ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಬರಮಾಡಿಕೊಳ್ಳಲಿದ್ದಾರೆ. ಇದಾದ ನಂತರ ಚೌಬೆ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರನ್ನು ಮಧ್ಯಾಹ್ನ 2.15 ಕ್ಕೆ ಬರಮಾಡಿಕೊಳ್ಳಲಿದ್ದಾರೆ.ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ರೈಲ್ವೆ ಮತ್ತು ಜವಳಿ ಖಾತೆ ಸಚಿವ ದರ್ಶನಾ ಜರ್ದೋಶ್ ಅವರು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರನ್ನು ಬರಮಾಡಿಕೊಳ್ಳಲಿದ್ದಾರೆ. ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೆಯೋಲ್ ಅವರನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಬರಮಾಡಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಜಿ20 ಶೃಂಗಸಭೆಗಾಗಿ G20 ಇಂಡಿಯಾ ಮೊಬೈಲ್ ಆ್ಯಪ್ ಬಿಡುಗಡೆ; ವೈಶಿಷ್ಟ್ಯಗಳು, ಪ್ರಯೋಜನಗಳು ಏನೇನು?

ಶನಿವಾರ (ಸೆಪ್ಟೆಂಬರ್ 9) ಆಗಮಿಸಲಿರುವ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ವಾಣಿಜ್ಯ ಖಾತೆ ಸಚಿವ ಅನುಪ್ರಿಯಾ ಪಟೇಲ್ ಬರಮಾಡಿಕೊಳ್ಳಲಿದ್ದಾರೆ. ಅದೇ ದಿನ ಆಗಮಿಸುತ್ತಿರುವ ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರನ್ನು ಕೇಂದ್ರ ಸಚಿವ ಬಿಎಲ್ ವರ್ಮಾ ಅವರು ಬರಮಾಡಿಕೊಳ್ಳಲಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್ ಬರಮಾಡಿಕೊಳ್ಳಲಿದ್ದಾರೆ. ಕೇಂದ್ರ ಸಚಿವ ಎಲ್ ಮುರುಗನ್ ಅವರು ಸಿಂಗಾಪುರದಿಂದ ಬರುವ ಗಣ್ಯರನ್ನು ಸ್ವಾಗತಿಸಲಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:39 pm, Fri, 8 September 23