Pinterest Layoff: ಪಿಂಟ್​​ರೆಸ್ಟ್​​ನಿಂದಲೂ ಉದ್ಯೋಗ ಕಡಿತ; 150 ಮಂದಿ ವಜಾ

2009ರ ಡಿಸೆಂಬರ್​​​ನಲ್ಲಿ ಸ್ಥಾಪನೆಯಾಗಿರುವ ಪಿಂಟ್​ರೆಸ್ಟ್​ ಸ್ಯಾನ್​ ಫ್ರಾನ್ಸಿಸ್ಕೊದಲ್ಲಿ ಪ್ರಧಾನ ಕಚೇರಿ ಹೊಂದಿದೆ. 445 ದಶಲಕ್ಷ ಮಾಸಿಕ ಸಕ್ರಿಯ ಬಳಕೆದಾರರನ್ನು ಪಿಂಟ್​​ರೆಸ್ಟ್ ಹೊಂದಿದೆ.

Pinterest Layoff: ಪಿಂಟ್​​ರೆಸ್ಟ್​​ನಿಂದಲೂ ಉದ್ಯೋಗ ಕಡಿತ; 150 ಮಂದಿ ವಜಾ
ಸಾಂದರ್ಭಿಕ ಚಿತ್ರ
Follow us
|

Updated on:Feb 02, 2023 | 10:31 AM

ನವದೆಹಲಿ: ಉದ್ಯೋಗ ಕಡಿತ ಮಾಡುತ್ತಿರುವ ಟೆಕ್ ಕಂಪನಿಗಳ ಸಾಲಿಗೆ ಇದೀಗ ಪಿಂಟ್​​​ರೆಸ್ಟ್ (Pinterest) ಕೂಡ ಸೇರಿದೆ. ಕಂಪನಿಯ ಒಟ್ಟು ಉದ್ಯೋಗಿಗಳ ಪೈಕಿ ಶೇ 5ರಷ್ಟು, ಅಂದರೆ 150 ಮಂದಿಯನ್ನು ಕಂಪನಿ (Layoff) ವಜಾಗೊಳಿಸಿದೆ. ಪಿಂಟ್​​​ರೆಸ್ಟ್ ಒಂದು ಸಮಾಜಿಕ ಮಾಧ್ಯಮ ಮತ್ತು ಇಮೇಜ್ ಶೇರಿಂಗ್ ತಾಣವಾಗಿದ್ದು, ಮೂಲತಃ ಅಮೆರಿಕದ ಕಂಪನಿಯಾಗಿದೆ. ‘ಬ್ಲೂಮ್​ಬರ್ಗ್’ ತಾಣದ ವರದಿಯ ಪ್ರಕಾರ, ಉದ್ಯೋಗಿಗಳ ವಜಾದ ಬಗ್ಗೆ ‘ಪಿಂಟ್​ರೆಸ್ಟ್’ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ ಎಂದು ವರದಿ ತಿಳಿಸಿದೆ. ಆದರೆ, ದೀರ್ಘಾವಧಿಯ ತಂತ್ರಗಾರಿಕೆ ಮತ್ತು ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ನಾವು ಸಂಘಟನಾತ್ಮಕ ಬದಲಾವಣೆಗಳನ್ನು ಮಾಡುತ್ತಿದ್ದೇವೆ. ಉದ್ಯೋಗ ಕಡಿತದಿಂದ ತೊಂದರೆಗೆ ಒಳಗಾಗುವ ಉದ್ಯೋಗಿಗಳಿಗೆ ಬೇರ್ಪಡಿಕೆಯ ಪ್ಯಾಕೇಜ್ ನೀಡುವ ಮೂಲಕ ನೆರವಾಗಲಿದ್ದೇವೆ. ಇತರ ಪ್ರಯೋಜನಗಳನ್ನೂ ಒದಗಿಸಿಕೊಡಲಿದ್ದೇವೆ ಎಂದು ಕಂಪನಿಯ ವಕ್ತಾರರು ತಿಳಿಸಿರುವುದಾಗಿ ‘ರಾಯಿಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

2009ರ ಡಿಸೆಂಬರ್​​​ನಲ್ಲಿ ಸ್ಥಾಪನೆಯಾಗಿರುವ ಪಿಂಟ್​ರೆಸ್ಟ್​ ಸ್ಯಾನ್​ ಫ್ರಾನ್ಸಿಸ್ಕೊದಲ್ಲಿ ಪ್ರಧಾನ ಕಚೇರಿ ಹೊಂದಿದೆ. 445 ದಶಲಕ್ಷ ಮಾಸಿಕ ಸಕ್ರಿಯ ಬಳಕೆದಾರರನ್ನು ಪಿಂಟ್​​ರೆಸ್ಟ್ ಹೊಂದಿದೆ. ಈ ಪೈಕಿ ಹೆಚ್ಚಿನವರು ಮಹಿಳೆಯರು ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಪುರುಷ ಬಳಕೆದಾರರ ಸಂಖ್ಯೆಯೂ ಹೆಚ್ಚುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: Philips Layoff: ಮತ್ತೆ 6,000 ಉದ್ಯೋಗಿಗಳ ವಜಾಗೊಳಿಸಿದ ಫಿಲಿಪ್ಸ್

ಜಾಗತಿಕವಾಗಿ ಶೇ 15ರಷ್ಟು, ಅಂದರೆ 1,500 ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದಾಗಿ ಒಎಲ್​​ಎಕ್ಸ್​ ಗ್ರೂಪ್ ಸೋಮವಾರ ತಿಳಿಸಿತ್ತು. ಸ್ಥೂಲ ಆರ್ಥಿಕತೆ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವೆಚ್ಚ ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಒಎಲ್​ಎಕ್ಸ್ ವಕ್ತಾರರು ತಿಳಿಸಿದ್ದರು. ಉದ್ಯೋಗ ಕಡಿತವು ಒಎಲ್​ಎಕ್ಸ್ ಆಟೋಸ್ ಹಾಗೂ ಒಎಲ್​ಎಕ್ಸ್​ನ ಭಾರತದ ಘಟಕದ ಮೇಲೂ ಪರಿಣಾಮ ಬೀರಲಿವೆ ಎಂದು ಹೇಳಲಾಗಿದೆ.

ಇತ್ತೀಚೆಗಷ್ಟೇ ಅಲ್ಫಾಬೆಟ್​​ನ ಗೂಗಲ್, ಅಮೆಜಾನ್​​ನ ಜರ್ಮನ್ ಸಾಫ್ಟ್​ವೇರ್ ಕಂಪನಿ ಎಸ್​ಎಪಿ ಉದ್ಯೋಗ ಕಡಿತ ಘೋಷಿಸಿದ್ದವು. 2023ರ ಮೊದಲ 15 ದಿನಗಳಲ್ಲಿ ಜಾಗತಿಕವಾಗಿ 91 ಕಂಪನಿಗಳು 24,000 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿದ್ದವು. ಕಳೆದ ವರ್ಷ ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿಗಳಾದ ಮೆಟಾ, ಟ್ವಿಟರ್, ಮೈಕ್ರೋಸಾಫ್ಟ್ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ಕಡಿತ ಮಾಡಿದ್ದವು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:28 am, Thu, 2 February 23

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು