Mental Health Insurance: ಮಾನಸಿಕ ಆರೋಗ್ಯ ವಿಮೆ ಮಾಡಿಸುತ್ತೀರಾ? ಈ ವಿಷಯಗಳು ನಿಮಗೆ ತಿಳಿದಿರಲಿ

| Updated By: Ganapathi Sharma

Updated on: Oct 21, 2022 | 1:02 PM

‘ಮಾನಸಿಕ ಆರೋಗ್ಯ ಕಾಯ್ದೆ’ಯ ಆಧಾರದಲ್ಲಿ, ಮಾನಸಿಕ ಆರೋಗ್ಯ ಸಮಸ್ಯೆಗಳನ್ನೂ ವಿಮಾ ಸೌಲಭ್ಯಗಳಲ್ಲಿ ಸೇರಿಸಿಕೊಳ್ಳುವಂತೆ ಎಲ್ಲ ವಿಮಾ ಕಂಪನಿಗಳಿಗೆ ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಇತ್ತೀಚೆಗೆ ಸೂಚಿಸಿದೆ.

Mental Health Insurance: ಮಾನಸಿಕ ಆರೋಗ್ಯ ವಿಮೆ ಮಾಡಿಸುತ್ತೀರಾ? ಈ ವಿಷಯಗಳು ನಿಮಗೆ ತಿಳಿದಿರಲಿ
ಸಾಂದರ್ಭಿಕ ಚಿತ್ರ
Image Credit source: PTI
Follow us on

ಮಾನಸಿಕ ಅನಾರೋಗ್ಯ (Mental Illness) ಕೂಡ ಇತ್ತೀಚಿನ ದಿನಗಳಲ್ಲಿ ಜನರನ್ನು ಹೆಚ್ಚು ಕಾಡುತ್ತಿರುವ ಸಮಸ್ಯೆಯಾಗಿದೆ. ಕೋವಿಡ್-19 ಸಾಂಕ್ರಾಮಿಕದ ಬಳಿಕವಂತೂ ಮಾನಸಿಕ ಆರೋಗ್ಯ (Mental Health) ಸಮಸ್ಯೆಗಳಲ್ಲಿ ಹೆಚ್ಚಳ ಕಂಡುಬರುತ್ತಿದೆ. ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅನೇಕ ಅಭಿಯಾನಗಳು ನಡೆಯುತ್ತಿವೆ. ಅನೇಕ ಮಾಧ್ಯಮಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಗಳೂ ನಡೆಯುತ್ತಿವೆ. ಆದಾಗ್ಯೂ, ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಅನೇಕರು ಅವುಗಳನ್ನು ಹೇಳಿಕೊಳ್ಳಲು ಹಿಂದೇಟು ಹಾಕುತ್ತಾರೆ.

ದೈಹಿಕ ಅನಾರೋಗ್ಯ ಮತ್ತು ಗಾಯಗಳಿಗೆ ಪಡೆಯುವಂತೆಯೇ ಮಾನಸಿಕ ಸಮಸ್ಯೆಗಳಿಗೂ ವೈದ್ಯಕೀಯ ಸಹಾಯ ಪಡೆಯಬೇಕಾದದ್ದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ 2017ರಲ್ಲಿ ‘ಮಾನಸಿಕ ಆರೋಗ್ಯ ಕಾಯ್ದೆ’ಯನ್ನು ಸರ್ಕಾರ ಅನುಷ್ಠಾನಗೊಳಿಸಿದೆ. ಮಾನಸಿಕ ಅನಾರೋಗ್ಯ ಹೊಂದಿರುವವರ ರಕ್ಷಣೆ, ಚಿಕಿತ್ಸೆ, ಅವರಿಗೆ ಬೆಂಬಲ ನೀಡುವುದು ಹಾಗೂ ಅವರ ಹಕ್ಕುಗಳನ್ನು ರಕ್ಷಿಸುವ ಉದ್ದೇಶದೊಂದಿಗೆ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ.

ಪ್ರತಿಯೊಬ್ಬ ಆರೋಗ್ಯ ವಿಮಾದಾರರು ದೈಹಿಕ ಕಾಯಿಲೆಗಳಿಗೆ ವಿಮೆ ಸೌಲಭ್ಯ ಒದಗಿಸುವಂತೆಯೇ ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ವಿಮಾ ಸೌಲಭ್ಯ (Mental Health Insurance) ನೀಡಬೇಕು ಎಂದು ಕಾಯ್ದೆಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ
Petrol Price Today: ಇಳಿಕೆಯಾಯಿತಾ ಪೆಟ್ರೋಲ್ ಬೆಲೆ?; ನಿಮ್ಮ ನಗರಗಳಲ್ಲಿ ಇಂದಿನ ಡೀಸೆಲ್ ದರ ಹೀಗಿದೆ
Gold Price Today: ಚಿನ್ನ-ಬೆಳ್ಳಿ ದರದಲ್ಲಿ ಇಳಿಕೆ, ಪ್ರಮುಖ ನಗರಗಳ ಬೆಲೆ ಇಲ್ಲಿದೆ
Health Insurance: ಆರೋಗ್ಯ ವಿಮೆ ಮಾಡಿಸುತ್ತಿದ್ದೀರಾ? ಅಸ್ತಿತ್ವದಲ್ಲಿರುವ ಕಾಯಿಲೆಗಳ ವಿವರ ನೀಡಲು ಮರೆಯಬೇಡಿ
Amazon Great Indian Festival: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ ಸೇಲ್​, ಕೋಟ್ಯಧಿಪತಿಗಳಾದ 650 ಮಾರಾಟಗಾರರು

ಇದನ್ನೂ ಓದಿ: Bima Sugam: ಅಗ್ಗವಾಗಲಿದೆ ವಿಮೆ, ಖರ್ಚು ಕಡಿಮೆ ಮಾಡಲಿದೆ ಆನ್​ಲೈನ್ ತಾಣ ಬಿಮಾ ಸುಗಮ್

‘ಮಾನಸಿಕ ಆರೋಗ್ಯ ಕಾಯ್ದೆ’ಯ ಆಧಾರದಲ್ಲಿ, ಮಾನಸಿಕ ಆರೋಗ್ಯ ಸಮಸ್ಯೆಗಳನ್ನೂ ವಿಮಾ ಸೌಲಭ್ಯಗಳಲ್ಲಿ ಸೇರಿಸಿಕೊಳ್ಳುವಂತೆ ಎಲ್ಲ ವಿಮಾ ಕಂಪನಿಗಳಿಗೆ ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಇತ್ತೀಚೆಗೆ ಸೂಚಿಸಿದೆ. ಈ ಕುರಿತು ಅಕ್ಟೋಬರ್ 31ರ ಒಳಗೆ ಕ್ರಮ ಕೈಗೊಳ್ಳಬೇಕು ಎಂದೂ ಹೇಳಿದೆ ಎಂಬುದಾಗಿ ‘ದಿ ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಮಾಡಿದೆ.

ಮಾನಸಿಕ ಆರೋಗ್ಯ ವಿಮೆಯಲ್ಲಿ ಏನೇನು ಸೌಲಭ್ಯ?

ಮಾನಸಿಕ ಆರೋಗ್ಯ ವಿಮೆಯಲ್ಲಿ ವೈದ್ಯಕೀಯ ವೆಚ್ಚ, ರೋಗ ಪತ್ತೆ ಮತ್ತು ನಿರ್ಣಯ, ಚಿಕಿತ್ಸಾ ವೆಚ್ಚ, ಆ್ಯಂಬುಲೆನ್ಸ್ ಶುಲ್ಕ, ಕೊಠಡಿ ಬಾಡಿಗೆ ಅಡಕವಾಗಿರಲಿದೆ. ಇದು ವಿವಿಧ ವಿಮಾ ಕಂಪನಿಗಳಲ್ಲಿ ತುಸು ಭಿನ್ನವಾಗಿರಬಹುದು.

ಖಿನ್ನತೆ, ಬೈಪೋಲಾರ್ ಡಿಸಾರ್ಡರ್, ಅತಿಯಾಗಿ ತಿನ್ನುವ ಚಾಳಿ, ಅಪಘಾತದ ನಂತರದ ಒತ್ತಡದ ಅಸ್ವಸ್ಥತೆ, ಸ್ಕಿಜೋಫ್ರೇನಿಯಾ ಇತ್ಯಾದಿಗಳು ಮಾನಸಿಕ ಅನಾರೋಗ್ಯಗಳ ವ್ಯಾಪ್ತಿಯಲ್ಲಿ ಬರುತ್ತವೆ.

ಆದರೆ ಮಾನಸಿಕ ಆರೋಗ್ಯ ವಿಮೆಯನ್ನು ಖರೀದಿಸುವ ಮೊದಲು, ಈ ವಿಮೆಯ ಕವರೇಜ್‌ನಲ್ಲಿ ಕೆಲವು ವಿನಾಯಿತಿಗಳಿವೆ ಎಂಬುದನ್ನು ಗಮನಿಸಬೇಕು.

ಇದನ್ನೂ ಓದಿ: Mental Health: ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಲ್ಲಿವೆ ಉತ್ತಮ ಸಲಹೆ

ಸದ್ಯದ ಪರಿಸ್ಥಿತಿಯಲ್ಲಿ ಬುದ್ಧಿಮಾಂದ್ಯತೆ ಅಥವಾ ಬೌದ್ಧಿಕ ಅಸಾಮಾರ್ಥ್ಯವು ಮಾನಸಿಕ ಆರೋಗ್ಯ ವಿಮೆ ವ್ಯಾಪ್ತಿಯಲ್ಲಿ ಬರುವುದಿಲ್ಲ. ಮಾದಕ ದ್ರವ್ಯ ಹಾಗೂ ಆಲ್ಕೋಹಾಲ್ ಸೇವನೆಯಿಂದ ಉಂಟಾಗುವ ಮಾನಸಿಕ ಆರೋಗ್ಯ ಸಮಸ್ಯೆಗಳು ಕೂಡ ವಿಮೆ ವ್ಯಾಪ್ತಿಗೆ ಸೇರುವುದಿಲ್ಲ ಎಂದು ‘ಎನ್​ಡಿ ಟಿವಿ ಪ್ರಾಫಿಟ್’ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಮಾನಸಿಕ ಆರೋಗ್ಯ ವಿಮೆ ಮಾಡಿಸುವ ಮೊದಲು ನಮ್ಮ ಮುಂದಿರುವ ವಿವಿಧ ಆಯ್ಕೆಗಳನ್ನು ಪರಿಶೀಲಿಸುವುದು ಉತ್ತಮ. ಮಾನಸಿಕ ಆರೋಗ್ಯ ವಿಮೆಯ ಮೊತ್ತ ಕಂಪನಿಗಳಿಗೆ ಅನುಗುಣವಾಗಿ ಭಿನ್ನವಾಗಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ