ಪಿಎಂ ಇಂಟರ್ನ್​ಶಿಪ್ ಸ್ಕೀಮ್; 2ನೇ ಸುತ್ತಿನಲ್ಲಿ 1 ಲಕ್ಷ ಇಂಟರ್ನಿಗಳಿಗೆ ಅವಕಾಶ

PM Internship scheme, 2nd round: ಪ್ರಧಾನಮಂತ್ರಿ ಇಂಟರ್ನ್​ಶಿಪ್ ಯೋಜನೆಯ ಮೊದಲ ಸೀಸನ್ ಭರ್ಜರಿ ಯಶಸ್ಸು ಕಂಡಿದೆ. ನಿರೀಕ್ಷೆಮೀರಿದ ಸಂಖ್ಯೆಯಲ್ಲಿ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆಯಾಗಿತ್ತು. ಈಗ ಎರಡನೇ ಸುತ್ತು ಆರಂಭವಾಗಿದೆ. 2025ರ ಮಾರ್ಚ್ 12ರವರೆಗೂ ಅರ್ಜಿ ಸಲ್ಲಿಕೆಗೆ ಕಾಲಾವಕಾಶ ಇದೆ. ಈ ಸ್ಕೀಮ್​ನಲ್ಲಿ ಆಯ್ಕೆಯಾದವರಿಗೆ ದೊಡ್ಡ ಕಂಪನಿಗಳಲ್ಲಿ ಇಂಟರ್ನ್ ಆಗುವ ಅವಕಾಶದ ಜೊತೆಗೆ 12 ತಿಂಗಳ ಕಾಲ ತಿಂಗಳಿಗೆ 5,000 ರೂ ಸಹಾಯಧನವೂ ಸಿಗುತ್ತದೆ.

ಪಿಎಂ ಇಂಟರ್ನ್​ಶಿಪ್ ಸ್ಕೀಮ್; 2ನೇ ಸುತ್ತಿನಲ್ಲಿ 1 ಲಕ್ಷ ಇಂಟರ್ನಿಗಳಿಗೆ ಅವಕಾಶ
ಇಂಟರ್ನ್​ಶಿಪ್

Updated on: Feb 20, 2025 | 6:58 PM

ನವದೆಹಲಿ, ಫೆಬ್ರುವರಿ 20: ಪಿಎಂ ಇಂಟರ್ನ್​ಶಿಪ್ ಸ್ಕೀಮ್​ನ ಮೊದಲ ಸುತ್ತಿನಲ್ಲಿ ಉದ್ಯಮ ವಲಯ ಹಾಗೂ ಉದ್ಯೋಗಾಕಾಂಕ್ಷಿಗಳು ಎರಡೂ ಕಡೆಯಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಮೊದಲ ಸುತ್ತಿನಲ್ಲಿ ಏಳು ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈಗ ಎರಡನೇ ಸುತ್ತಿನಲ್ಲಿ ಒಂದು ಲಕ್ಷದಷ್ಟು ಇಂಟರ್ನ್​ಗಳಿಗೆ ಅವಕಾಶ ಸಿಗುವಂತೆ ಮಾಡಲಾಗುತ್ತಿದೆ. ಈ ಬಾರಿ ಇನ್ನೂ ಹೆಚ್ಚಿನ ಯುವಕರು ಮತ್ತು ಯುವತಿಯರು ಈ ಸ್ಕೀಮ್​ಗಾಗಿ ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ.

ಏನಿದು ಪಿಎಂ ಇಂಟರ್ನ್​ಶಿಪ್ ಯೋಜನೆ?

ಇದು ಶಿಕ್ಷಣ ಮುಗಿಸಿರುವ ಮತ್ತು ಇನ್ನೂ ಕೆಲಸಕ್ಕೆ ಸೇರದ ಯುವಕ ಮತ್ತು ಯುವತಿಯರಿಗೆ ನೈಜ ಕೆಲಸದ ಅನುಭವ ಒದಗಿಸಿ ಕೌಶಲ್ಯಾಭಿವೃದ್ಧಿ ಹೆಚ್ಚಿಸಲು ಸರ್ಕಾರ ಇಂಟರ್ನ್​ಶಿಪ್ ಯೋಜನೆ ಆರಂಭಿಸಿದೆ. ಇದರಲ್ಲಿ ದೇಶದ ಪ್ರಮುಖ ಕಂಪನಿಗಳಲ್ಲಿ ನಿರ್ದಿಷ್ಟ ವಿಭಾಗಗಳಲ್ಲಿ ಇಂಟರ್ನ್​ಗಳಾಗಿ (ತರಬೇತಿ) ಕೆಲಸ ಮಾಡುವ ಅವಕಾಶ ನೀಡಲಾಗುತ್ತದೆ.

ಇದನ್ನೂ ಓದಿ: ಮುಖ್ಯ ಆರ್ಥಿಕ ಸಲಹೆಗಾರರಾಗಿ ಮುಂದುವರಿಯಲಿರುವ ಅನಂತನಾಗೇಶ್ವರನ್; ಎರಡು ವರ್ಷ ಅವರ ಅಧಿಕಾರಾವಧಿ ವಿಸ್ತರಣೆ

12 ತಿಂಗಳು ಇಂಟರ್ನ್ ಅವಧಿ ಇರುತ್ತದೆ. ಇಂಟರ್ನ್ ಆಗಿ ಆಯ್ಕೆಯಾದವರಿಗೆ ಸರ್ಕಾರ ಹಾಗು ಕಂಪನಿ ವತಿಯಿಂದ ಪ್ರತೀ ತಿಂಗಳು 5,000 ರೂ ಧನಸಹಾಯ ಸಿಗುತ್ತದೆ. 12 ತಿಂಗಳು ಇಂಟರ್ನ್ ಆಗಿ ಕೆಲಸ ಮಾಡಿದ ಬಳಿಕ ಕಂಪನಿ ಇಚ್ಛಿಸಿದರೆ ರೆಗ್ಯುಲರ್ ಉದ್ಯೋಗಿಯಾಗಿ ನೇಮಕ ಮಾಡಬಹುದು. ಇಲ್ಲದಿದ್ದರೆ, 12 ತಿಂಗಳಲ್ಲಿ ಯುವಕ ಅಥವಾ ಯುವತಿಗೆ ನೈಜ ಕೆಲಸದ ಅನುಭವ ದೊರೆತಿರುತ್ತದೆ.

ಎರಡನೇ ಸುತ್ತಿನ ಎಂಟರ್ನ್​ಶಿಪ್ ಸ್ಕೀಮ್​ನಲ್ಲಿ 300ಕ್ಕೂ ಹೆಚ್ಚು ದೊಡ್ಡ ಕಂಪನಿಗಳು ಪಾಲ್ಗೊಳ್ಳುತ್ತಿವೆ. 730 ಜಿಲ್ಲೆಗಳಲ್ಲಿ ಕೆಲಸದ ಅವಕಾಶ ಇದೆ. ಒಬ್ಬ ಅಭ್ಯರ್ಥಿ ಡೆಡ್​ಲೈನ್​ಗೆ ಮುಂಚೆ ಗರಿಷ್ಠ 3 ಇಂಟರ್ನ್​ಶಿಪ್​ಗಳಿಗೆ ಅರ್ಜಿ ಸಲ್ಲಿಸಲು ಈ ಬಾರಿ ಅವಕಾಶ ಕೊಡಲಾಗಿದೆ.

ಪಿಎಂ ಇಂಟರ್ನ್​ಶಿಪ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಇಂಟರ್ನ್​ಶಿಪ್ ಯೋಜನೆಯ ವೆಬ್​ಸೈಟ್​ನ ವಿಳಾಸ: pminternship.mca.gov.in/login/
  • ಇಲ್ಲಿ ಲಾಗಿನ್ ಆದ ಬಳಿಕ ರಿಜಿಸ್ಟರ್ ನೌ ಎಂಬುದನ್ನು ಕ್ಲಿಕ್ ಮಾಡಿ.
  • ನಿಮ್ಮ ಮೊಬೈಲ್ ನಂಬರ್ ಹಾಕಿ, ‘ಕಂಪ್ಲೀಟ್’ ಕ್ಲಿಕ್ ಮಾಡಿ.

ಇದನ್ನೂ ಓದಿ: ಧೂಮಪಾನಿಗಳಿಗೆ ಮತ್ತಷ್ಟು ಬಿಸಿ..! ಸಿಗರೇಟ್ ಹಾಗೂ ತಂಬಾಕು ಉತ್ಪನ್ನಗಳ ಮೇಲೆ ಮತ್ತಷ್ಟು ತೆರಿಗೆ ಹಾಕಲು ಸರ್ಕಾರ ಯೋಜನೆ

ನೀವು ಸ್ಕೀಮ್​ಗೆ ನೊಂದಾಯಿಸಲು 2025ರ ಮಾರ್ಚ್ 12ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ