AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Kisan: ಪಿಎಂ ಕಿಸಾನ್: ಶೀಘ್ರದಲ್ಲೇ 14ನೇ ಕಂತಿನ ಹಣ ಬಿಡುಗಡೆ; ಸ್ವಯಂಪ್ರೇರಿತವಾಗಿ ಸ್ಕೀಮ್ ಬಿಟ್ಟುಕೊಡುವ ಅವಕಾಶ

Voluntary Surrender of PM Kisan Benefits: ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ಜುಲೈ 27ರಂದು ಬಿಡುಗಡೆ ಆಗುವ ಸಾಧ್ಯತೆ ಇದೆ. ಹಾಗೆಯೇ, ಯೋಜನೆಯ ಹಣ ತಮಗೆ ಬೇಡ ಎಂದನಿಸಿದವರು ಅದನ್ನು ಬಿಟ್ಟುಕೊಡುವ ಆಯ್ಕೆಯೂ ಇದೆ.

PM Kisan: ಪಿಎಂ ಕಿಸಾನ್: ಶೀಘ್ರದಲ್ಲೇ 14ನೇ ಕಂತಿನ ಹಣ ಬಿಡುಗಡೆ; ಸ್ವಯಂಪ್ರೇರಿತವಾಗಿ ಸ್ಕೀಮ್ ಬಿಟ್ಟುಕೊಡುವ ಅವಕಾಶ
ಪಿಎಂ ಕಿಸಾನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 26, 2023 | 12:37 PM

Share

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Scheme) ಯೋಜನೆಯ 14ನೇ ಕಂತಿನ ಹಣ ಬಿಡುಗಡೆಗೆ ಒಂದು ದಿನ ಬಾಕಿ ಇದೆ. ವರದಿಗಳ ಪ್ರಕಾರ ಜುಲೈ 27ಕ್ಕೆ 14ನೇ ಕಂತಿನ ಹಣ ರಿಲೀಸ್ ಆಗುವ ನಿರೀಕ್ಷೆ ಇದೆ. ಪಿಎಂ ಕಿಸಾನ್ ಯೋಜನೆಯ 8 ಕೋಟಿಗೂ ಹೆಚ್ಚು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಗುರುವಾರ 2,000 ರೂ ಹಣ ನೇರವಾಗಿ ವರ್ಗಾವಣೆ ಆಗಲಿದೆ. 2019ರಲ್ಲಿ ಆರಂಭವಾದ ಪಿಎಂ ಕಿಸಾನ್ ಯೋಜನೆಯು ಬಡ ಮತ್ತು ಮಧ್ಯಮ ರೈತರಿಗೆ ವ್ಯವಸಾಯಕ್ಕೆ ಧನಸಹಾಯ ಕೊಡುವ ಉದ್ದೇಶ ಒಳಗೊಂಡಿದೆ. ಕೇಂದ್ರ ಸರ್ಕಾರ ವರ್ಷಕ್ಕೆ 6,000 ರೂ ಹಣವನ್ನು ಫಲಾನುಭವಿ ರೈತರಿಗೆ ಕೊಡುತ್ತದೆ. ಒಮ್ಮೆಗೇ 6,000 ರೂ ಕೊಡುವ ಬದಲು 2,000 ರೂಗಳ 3 ಕಂತುಗಳಲ್ಲಿ ಹಣ ವರ್ಗಾವಣೆ ಮಾಡುತ್ತದೆ.

ಸ್ವ ಇಚ್ಛೆಯಿಂದ ಯೋಜನೆ ಬಿಟ್ಟುಕೊಡುವ ಅವಕಾಶ

ಪಿಎಂ ಕಿಸಾನ್ ಯೋಜನೆ ಮೂಲವಾಗಿ ಬಡ ರೈತರನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ. ನಂತರದ ದಿನಗಳಲ್ಲಿ ತೆರಿಗೆ ಪಾವತಿದಾರರು, ವೃತ್ತಿಪರರು, ಸರ್ಕಾರಿ ಅಧಿಕಾರಿಗಳು, ಶಾಸಕ ಸಂಸದ ಇತ್ಯಾದಿ ಜನಪ್ರತಿನಿಧಿಗಳು, ಪಿಂಚಣಿದಾರರು ಹೊರತುಪಡಿಸಿ ಕೃಷಿ ಮಾಡುತ್ತಿರುವ ಎಲ್ಲಾ ರೈತರನ್ನೂ ಇದರಲ್ಲಿ ಒಳ್ಳಗೊಳ್ಳಲಾಗಿದೆ.

ಒಂದು ವೇಳೆ ಯೋಜನೆಯ ಲಾಭ ಪಡೆಯುತ್ತಿರುವ ರೈತರಲ್ಲಿ ಯಾರಿಗಾದರೂ ಈ ಯೋಜನೆ ತಮಗೆ ಬೇಡ ಎಂದು ಅನಿಸಿದಲ್ಲಿ ಸ್ವಯಂಪ್ರೇರಿತವಾಗಿ ಬಿಟ್ಟುಕೊಡುವ ಅವಕಾಶವನ್ನು ಇತ್ತೀಚೆಗೆ ಒದಗಿಸಲಾಗಿದೆ.

ಇದನ್ನೂ ಓದಿ: Arecanut Price 25 July: ಅಡಿಕೆ ಧಾರಣೆ, ಪ್ರಮುಖ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಮತ್ತು ಕೋಕೋ ದರ ಹೀಗಿದೆ

ಪಿಎಂ ಕಿಸಾನ್ ಲಾಭ ಬಿಟ್ಟುಕೊಡುವುದು ಹೇಗೆ?

  • ಪಿಎಂ ಕಿಸಾನ್ ವೆಬ್​ಸೈಟ್​ಗೆ ಹೋಗಿ: pmkisan.gov.in
  • ಫಾರ್ಮರ್ಸ್ ಕಾರ್ನರ್ ಅಡಿಯಲ್ಲಿ ‘ವಾಲಂಟರಿ ಸರೆಂಡರ್ ಆಫ್ ಪಿಎಂ ಕಿಸಾನ್ ಬೆನಿಫಿಟ್ಸ್’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
  • ರಿಜಿಸ್ಟ್ರೇಶನ್ ನಂಬರ್, ಕ್ಯಾಪ್ಚಾ ಕೋಡ್ ಹಾಕಿ ಒಟಿಪಿ ಪಡೆಯಿರಿ.
  • ಒಟಿಪಿ ಹಾಕಿದ ಮೇಲೆ ನೀವು ಆವರೆಗೂ ಪಡೆದ ಒಟ್ಟು ಕಂತುಗಳ ಹಣದ ವಿವರ ಕಾಣುತ್ತದೆ
  • ಪಿಎಂ ಕಿಸಾನ್ ಬೆನಿಫಿಟ್ ಬಿಟ್ಟುಕೊಡಲು ಬಯಸುತ್ತೀರಾ ಎಂದು ಕೇಳಲಾಗುತ್ತದೆ. ಅದಕ್ಕೆ ಯೆಸ್ ಎಂದು ಕ್ಲಿಕ್ ಮಾಡಿ, ಒಟಿಪಿ ಹಾಕಿರಿ

ಇದಾದ ಬಳಿಕ ನಿಮಗೆ ಮುಂದಿನ ಕಂತುಗಳು ಸಿಗುವುದಿಲ್ಲ.

ಇದನ್ನೂ ಓದಿ: Indian Economy: ಮೂರ್ನಾಲ್ಕು ದಶಕದಲ್ಲಿ ಭಾರತವೇ ವಿಶ್ವದ ನಂಬರ್ ಒನ್: ಬ್ರಿಟನ್ ಸಂಸದ ಲಾರ್ಡ್ ಕರಣ್ ಬಿಲಿಮೋರಿಯಾ

ಪಿಎಂ ಕಿಸಾನ್ ಯೋಜನೆಯಲ್ಲಿ ಹಿಂದೆ ಬಂದ ಹಣವನ್ನು ವಾಪಸ್ ಕೊಡಬೇಕಾ?

ನೀವು ಪಿಎಂ ಕಿಸಾನ್ ಯೋಜನೆಯ ಬೆನಿಫಿಟ್ ಅನ್ನು ಬಿಟ್ಟುಕೊಡುವಾಗ ನಿಮಗೆ ಹಿಂದೆ ಸಂದಾಯವಾದ ಹಣದ ವಿವರ ಕಾಣುತ್ತದೆ. ಅಷ್ಟು ಹಣವನ್ನು ನೀವು ಬಿಟ್ಟುಕೊಡಬೇಕು ಎಂದು ಅಲ್ಲ. ನಿಮಗೆ ಹಿಂದೆ ಬಂದ ಆ ಹಣವನ್ನು ವಾಪಸ್ ಮಾಡಬೇಕಾಗಿಲ್ಲ. ಮುಂದಿನ ಕಂತುಗಳಷ್ಟೇ ಬರುವುದು ನಿಲ್ಲುತ್ತವೆ.

ಅಷ್ಟೇ ಅಲ್ಲ, ನಿಮಗೆ ಸರ್ಕಾರದಿಂದ ಪ್ರಶಂಸಾ ಪತ್ರವೂ ಸಿಗುತ್ತದೆ. ಹಿಂದೆ ಗ್ಯಾಸ್ ಸಬ್ಸಿಡಿ ವಿಚಾರದಲ್ಲೂ ಸರ್ಕಾರ ಗಿವ್ ಅಪ್ ಕೆಂಪೇನ್ ಮಾಡಿತ್ತು. ಆಗಲೂ ಕೋಟ್ಯಂತರ ಜನರು ಸಬ್ಸಿಡಿ ಬೇಡವೆಂದು ನಿರ್ಧರಿಸಿದ್ದರು. ಪಿಎಂ ಕಿಸಾನ್ ಯೋಜನೆಯಲ್ಲೂ ಜನರು ಸ್ವಯಂಪ್ರೇರಿತವಾಗಿ ಬಿಟ್ಟುಕೊಡುವ ಅವಕಾಶ ಕೊಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ
ನೆಲಮಂಗಲ: ಗನ್​ ತೋರಿಸಿ ಹೆದರಿಸಿ, ಚಿನ್ನದ ದೋಚಿದ ಆರೋಪಿಗಳು, ವಿಡಿಯೋ ವೈರಲ್
ನೆಲಮಂಗಲ: ಗನ್​ ತೋರಿಸಿ ಹೆದರಿಸಿ, ಚಿನ್ನದ ದೋಚಿದ ಆರೋಪಿಗಳು, ವಿಡಿಯೋ ವೈರಲ್
ಸಿದ್ದರಾಮಯ್ಯ ಪಕ್ಕದಲ್ಲಿ ನಿಂತಿದ್ದ ಶಿವಕುಮಾರ್ ಮುಖದಲ್ಲಿ ಅನ್ಯಮನಸ್ಕತೆ
ಸಿದ್ದರಾಮಯ್ಯ ಪಕ್ಕದಲ್ಲಿ ನಿಂತಿದ್ದ ಶಿವಕುಮಾರ್ ಮುಖದಲ್ಲಿ ಅನ್ಯಮನಸ್ಕತೆ
ಕೋಯ್ನಾ ಜಲಾಶಯದಿಂದ ನೀರು ಬಿಡುಗಡೆ: ಕೃಷ್ಣ ನದಿ ಬಳಿ ತೆರಳದಂತೆ ಸೂಚನೆ
ಕೋಯ್ನಾ ಜಲಾಶಯದಿಂದ ನೀರು ಬಿಡುಗಡೆ: ಕೃಷ್ಣ ನದಿ ಬಳಿ ತೆರಳದಂತೆ ಸೂಚನೆ
ದುರಹಂಕಾರ ಸಿದ್ದರಾಮಯ್ಯ ವಂಶವಾಹಿನಿಯಲ್ಲಿ ಹರಿಯುತ್ತಿದೆ: ವಿಶ್ವನಾಥ್
ದುರಹಂಕಾರ ಸಿದ್ದರಾಮಯ್ಯ ವಂಶವಾಹಿನಿಯಲ್ಲಿ ಹರಿಯುತ್ತಿದೆ: ವಿಶ್ವನಾಥ್
ಜಪಾನ್​ನಲ್ಲಿ ಹೇಗಿವೆ ಬನ್ನೇರುಘಟ್ಟದ ಆನೆಗಳು: ಇಲ್ಲಿದೆ ವಿಡಿಯೋ
ಜಪಾನ್​ನಲ್ಲಿ ಹೇಗಿವೆ ಬನ್ನೇರುಘಟ್ಟದ ಆನೆಗಳು: ಇಲ್ಲಿದೆ ವಿಡಿಯೋ
‘ಒಡಲಾಳ’ ನಾಟಕ; 21ನೇ ವಯಸ್ಸಿಗೆ ಹಣ್ಣಣ್ಣು ಅಜ್ಜಿಯ ಪಾತ್ರ ಮಾಡಿದ್ದ ಉಮಾಶ್ರೀ
‘ಒಡಲಾಳ’ ನಾಟಕ; 21ನೇ ವಯಸ್ಸಿಗೆ ಹಣ್ಣಣ್ಣು ಅಜ್ಜಿಯ ಪಾತ್ರ ಮಾಡಿದ್ದ ಉಮಾಶ್ರೀ
ತುಂಗಭದ್ರಾ ಏತ ನೀರಾವರಿ ಕಾಮಗಾರಿ ಪೈಪ್ ಒಡೆದು ಆಕಾಶದೆತ್ತರ ಚಿಮ್ಮಿದ ನೀರು!
ತುಂಗಭದ್ರಾ ಏತ ನೀರಾವರಿ ಕಾಮಗಾರಿ ಪೈಪ್ ಒಡೆದು ಆಕಾಶದೆತ್ತರ ಚಿಮ್ಮಿದ ನೀರು!
ರಾಜಣ್ಣಗಿರುವ ಮಾಹಿತಿ ನಂಗಿರಲ್ಲ, ನಾನೊಬ್ಬ ಸಣ್ಣ ಕಾರ್ಯಕರ್ತ: ಸುರೇಶ್
ರಾಜಣ್ಣಗಿರುವ ಮಾಹಿತಿ ನಂಗಿರಲ್ಲ, ನಾನೊಬ್ಬ ಸಣ್ಣ ಕಾರ್ಯಕರ್ತ: ಸುರೇಶ್