ಬೆಂಗಳೂರು, ಫೆಬ್ರುವರಿ 25: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಸೋಮವಾರ ಪಿಎಂ ಕಿಸಾನ್ ಯೋಜನೆ ಅಡಿ 19ನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ. 10 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ 22,000 ಕೋಟಿ ರೂ ಹಣವನ್ನು ಡಿಬಿಟಿ ಮೂಲಕ ರವಾನೆ ಮಾಡಲಾಗಿದೆ. 2018-19ರಲ್ಲಿ ಆರಂಭವಾದ ಈ ಯೋಜನೆಯಲ್ಲಿ ಈವರೆಗೂ ಮೂರೂವರೆ ಲಕ್ಷ ಕೋಟಿ ರೂಗೂ ಅಧಿಕ ಮೊತ್ತದ ಹಣವನ್ನು ರೈತರಿಗೆ ನೇರವಾಗಿ ನೀಡಲಾಗಿದೆ.
ಕೃಷಿ ಜಮೀನು ಇರುವ ರೈತರಿಗೆ ವ್ಯವಸಾಯಕ್ಕೆ ಅನುಕೂಲವಾಗಲು ಸರ್ಕಾರ ವರ್ಷಕ್ಕೆ 6,000 ರೂ ಧನಸಹಾಯ ಒದಗಿಸುತ್ತದೆ. ನೀವು ಯೋಜನೆಗೆ ಅರ್ಹರಾಗಿದ್ದು, ನೊಂದಣಿ ಮಾಡಿಸಿದ್ದರೂ ಕೆಲ ಕಾರಣಕ್ಕೆ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲದೇ ಇರಬಹುದು. ಹಣ ಬರದೇ ಇರಲು ಕೆಲ ಕಾರಣಗಳು ಈ ಕೆಳಕಂಡಂತಿವೆ:
ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ 22,000 ಕೋಟಿ ರೂ. ಬಿಡುಗಡೆ ಮಾಡಿದ ಪ್ರಧಾನಿ ಮೋದಿ
ಪಿಎಂ ಕಿಸಾನ್ ಯೋಜನೆಗೆ ನೀವು ನೊಂದಾಯಿಸಿದ್ದರೆ, ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಖಾತ್ರಿಪಡಿಸಿಕೊಳ್ಳಿ. ಈ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಡುವುದು ಸುಲಭ. ಈ ಮುಂದಿನ ಕ್ರಮಗಳನ್ನು ಅನುಸರಿಸಿ.
ಇಲ್ಲಿ ಪಿಎಂ ಕಿಸಾನ್ ಯೋಜನೆ ಅಡಿ ಆ ಗ್ರಾಮದಲ್ಲಿ ಇರುವ ಎಲ್ಲಾ ಫಲಾನುಭವಗಳ ಪಟ್ಟಿಯನ್ನು ಕಾಣಬಹುದು. ಅದರಲ್ಲಿ ನಿಮ್ಮ ಹೆಸರಿದೆಯಾ ಎಂದು ಪರಿಶೀಲಿಸಿ.
ಇದನ್ನೂ ಓದಿ: ಅತಿವೇಗದ ಆರ್ಥಿಕತೆ; ಮುಂಬರುವ ವರ್ಷಗಳಲ್ಲೂ ಭಾರತ ಮುಂಚೂಣಿಯಲ್ಲಿ: ಮಧ್ಯಪ್ರದೇಶದಲ್ಲಿ ಪ್ರಧಾನಿ ಹೇಳಿಕೆ
ಯೋಜನೆಗೆ ನೊಂದಣಿ ಮಾಡಿಸಿದ್ದು, ಫಲಾನುಭವಿಗಳ ಪಟ್ಟಿಯಲ್ಲಿ ಹೆಸರಿದ್ದೂ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲದೇ ಇದ್ದರೆ ಕಾರಣವೇನೆಂದು ತಿಳಿಯಲು ಕೆಲ ಮಾರ್ಗಗಳಿಗೆ. ನಿಮ್ಮ ಊರಿನ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ವಿಚಾರಿಸಬಹುದು.
ಅಥವಾ ಪಿಎಂ ಕಿಸಾನ್ ಸಹಾಯವಾಣಿ 1800-115-526 ಅನ್ನು ಡಯಲ್ ಮಾಡಿ ಮಾತನಾಡಬಹುದು.
ಪಿಎಂ ಕಿಸಾನ್ ವೆಬ್ಸೈಟ್ನಲ್ಲಿ ಹೆಲ್ಪ್ಡೆಸ್ಕ್ ಇರುತ್ತದೆ. ಅಲ್ಲಿ ನೀವು ದೂರು ದಾಖಲಿಸಬಹುದು. pmkisan-ict@gov.in ಅಥವಾ pmkisan-funds@gov.in ಇಮೇಲ್ ಐಡಿಗಳಿಗೆ ನೀವು ಮೇಲ್ ಕಳುಹಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ