AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತಿವೇಗದ ಆರ್ಥಿಕತೆ; ಮುಂಬರುವ ವರ್ಷಗಳಲ್ಲೂ ಭಾರತ ಮುಂಚೂಣಿಯಲ್ಲಿ: ಮಧ್ಯಪ್ರದೇಶದಲ್ಲಿ ಪ್ರಧಾನಿ ಹೇಳಿಕೆ

PM Narendra Modi inaugurates Invest MP GIS 2025: ಮಧ್ಯಪ್ರದೇಶ ರಾಜಧಾನಿ ಭೋಪಾಲ್​ನಲ್ಲಿ ಎರಡು ದಿನಗಳ ಗ್ಲೋಬಲ್ ಇನ್ವೆಸ್ಟರ್ಸ್ ಸಮಿಟ್ 2025 ಅನ್ನು ಪ್ರಧಾನಿಗಳು ಉದ್ಘಾಟನೆ ಮಾಡಿದ್ದಾರೆ. ಮಧ್ಯಪ್ರದೇಶದಲ್ಲಿ ಬಿಜೆಪಿ ನೇತೃತ್ವದಲ್ಲಿ ಡಬಲ್ ಎಂಜಿನ್ ಸರ್ಕಾರ ಇರುವುದರಿಂದ ರಾಜ್ಯದ ಬೆಳವಣಿಗೆಯ ವೇಗ ಎರಡು ಪಟ್ಟು ಹೆಚ್ಚಾಗಿದೆ ಎಂದಿದ್ದಾರೆ. ಮುಂದಿನ ಕೆಲ ವರ್ಷಗಳು ಭಾರತವೇ ಅತಿವೇಗದ ಬೆಳವಣಿಗೆಯ ಆರ್ಥಿಕತೆಯ ದೇಶವಾಗಿ ಮುಂದುವರಿಯಲಿದೆ ಎಂದು ಮೋದಿ ತಿಳಿಸಿದ್ದಾರೆ.

ಅತಿವೇಗದ ಆರ್ಥಿಕತೆ; ಮುಂಬರುವ ವರ್ಷಗಳಲ್ಲೂ ಭಾರತ ಮುಂಚೂಣಿಯಲ್ಲಿ: ಮಧ್ಯಪ್ರದೇಶದಲ್ಲಿ ಪ್ರಧಾನಿ ಹೇಳಿಕೆ
ಮಧ್ಯಪ್ರದೇಶದಲ್ಲಿ ನರೇಂದ್ರ ಮೋದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 24, 2025 | 2:53 PM

Share

ಭೋಪಾಲ್, ಫೆಬ್ರುವರಿ 24: ಭಾರತ ಮುಂದಿನ ಹಲವು ವರ್ಷ ವಿಶ್ವದಲ್ಲಿ ಅತಿವೇಗವಾಗಿ ಬೆಳೆಯುವ ಆರ್ಥಿಕತೆಯ ದೇಶವಾಗಿ ಮುಂದುವರಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದ ರಾಜಧಾನಿ ನಗರಿಯಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡುತ್ತಿದ್ದ ಪ್ರಧಾನಿಗಳು, ದೇಶದ ಬೆಳವಣಿಗೆ ಬಗ್ಗೆ ವಿಶ್ವಬ್ಯಾಂಕ್ ಪ್ರಕಟಿಸಿದ ವರದಿಯೊಂದನ್ನು ಉಲ್ಲೇಖಿಸಿ ಈ ವಿಚಾರ ತಿಳಿಸಿದ್ದಾರೆ.

ಜಾಗತಿಕ ಏರೋಸ್ಪೇಸ್ ಕಂಪನಿಗಳಿಗೆ ಪ್ರಮುಖ ಸರಬರಾಜು ಸರಪಳಿಯಾಗಿ ಭಾರತ ಹೊರಹೊಮ್ಮುತ್ತಿದೆ. ಭಾರತದಲ್ಲಿ ಈ ಜಗತ್ತಿನ ಭವಿಷ್ಯ ಅಡಕವಾಗಿದೆ. ಭಾರತದಲ್ಲಿ ಪರಿಹಾರ ಎನ್ನುವ ಮಂತ್ರ ಜಾಗತಿಕವಾಗಿ ಕೇಳಿಬರುತ್ತಿದೆ ಎಂದು ನರೇಂದ್ರ ಮೋದಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: PM Kisan 19th Instalment: ಇವತ್ತು ಪಿಎಂ ಕಿಸಾನ್ ಹೊಸ ಕಂತು ಬಿಡುಗಡೆ; ಇಕೆವೈಸಿ ಆಗದಿದ್ದರೆ ಹಣ ಸಿಗಲ್ಲ; ಇಲ್ಲಿದೆ ಡೀಟೇಲ್ಸ್

ಇವತ್ತು ಮತ್ತು ನಾಳೆ ನಡೆಯುವ ಎರಡು ದಿನಗಳ ‘ಇನ್ವೆಸ್ಟ್ ಎಂಪಿ, ಗ್ಲೋಬಲ್ ಇನ್ವೆಸ್ಟರ್ಸ್ ಸಮಿಟ್’ 2025 ಕಾರ್ಯಕ್ರಮವನ್ನು ನರೇಂದ್ರ ಮೋದಿ ಇಂದು ಬೆಳಗ್ಗೆ ಚಾಲನೆಗೊಳಿಸಿದ್ದಾರೆ. ಈ ಶೃಂಗಸಭೆಯಲ್ಲಿ 60 ದೇಶಗಳಿಂದ ಉದ್ಯಮಿಗಳು, ಹಲವು ರಾಯಭಾರಿಗಳು, ಜೊತೆಗೆ ಭಾರತದ ಬಿರ್ಲಾ, ಅದಾನಿ, ಗೋದ್ರೇಜ್, ಕಲ್ಯಾಣಿ ಇತ್ಯಾದಿ ದೊಡ್ಡ ದೊಡ್ಡ ಬಿಸಿನೆಸ್ ಕುಟುಂಬಗಳ ಮುಖ್ಯಸ್ಥರು ಪಾಲ್ಗೊಳ್ಳುತ್ತಿದ್ದಾರೆ.

‘ಮಧ್ಯಪ್ರದೇಶದಲ್ಲಿ ಡಬಲ್ ಎಂಜಿನ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅಭಿವೃದ್ಧಿಯ ವೇಗ ದ್ವಿಗುಣಗೊಂಡಿದೆ. ರಾಜ್ಯದ ಪ್ರತಿಭಾ ಸಮೂಹ ಹಾಗೂ ಕೈಗಾರಿಕೆಗಳು ಪ್ರಬಲವಾಗಿದ್ದು, ಬಿಸಿನೆಸ್ ಸ್ಥಾಪಿಸಲು ಇದು ಆದ್ಯತೆಯ ಪ್ರದೇಶವಾಗಿ ಬೆಳೆಯುತ್ತಿದೆ’ ಎಂದು ನರೇಂದ್ರ ಮೋದಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಮಧ್ರಪ್ರದೇಶ ರಾಜ್ಯವನ್ನು ಹೊಗಳಿಸಿದ್ದಾರೆ. ಪ್ರಧಾನಿಗಳು ಇದೇ ವೇಳೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ 19ನೇ ಕಂತಿನ ಹ ಣವನ್ನು ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: ನೋವು ನಿವಾರಕ ಟ್ಯಾಪೆಂಟಡೋಲ್, ಕ್ಯಾರಿಸೋಪ್ರೊಡೋಲ್ ಸಂಯೋಜನೆಯ ಔಷಧ ನಿಷೇಧ; ಮುಂಬೈನಲ್ಲಿ ಒಂದು ಕೋಟಿಗೂ ಅಧಿಕ ಮಾತ್ರೆಗಳು ವಶಕ್ಕೆ

ಅದಾನಿಯಿಂದ ಭರ್ಜರಿ ಹೂಡಿಕೆ

ಅದಾನಿ ಗ್ರೂಪ್ ಛೇರ್ಮನ್ ಗೌತಮ್ ಅದಾನಿ ಅವರು ಮಧ್ಯಪ್ರದೇಶ ರಾಜ್ಯದಲ್ಲಿ 1.10 ಲಕ್ಷ ಕೋಟಿ ರೂಗಳ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ. ವಿವಿಧ ವಲಯಗಳಲ್ಲಿ ಅದಾನಿ ಗ್ರೂಪ್​ನ ಹೂಡಿಕೆಗಳು ಇರಲಿದ್ದು, 2030ರೊಳಗೆ ಇವುಗಳಿಂದ 1.2 ಲಕ್ಷ ಉದ್ಯೋಗಗಳ ಸೃಷ್ಟಿಯಾಗುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ