AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷಿ ಕ್ಷೇತ್ರಕ್ಕೆ ಎಐ ಟೆಕ್ನಾಲಜಿ ಎಷ್ಟು ಲಾಭಕಾರಿ ಗೊತ್ತಾ? ಭಾರತೀಯ ರೈತರ ಉದಾಹರಣೆ ಕೊಟ್ಟ ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯಾ ನಾದೆಲ್ಲ

Microsoft CEO Satya Nadella speaks of AI tools in agriculture: ಎಐ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಕೆ ಮಾಡಿದರೆ ಪ್ರತಿಯೊಂದು ಕ್ಷೇತ್ರಕ್ಕೂ ನಾನಾ ತರಹದ ಪ್ರಯೋಜನಗಳಿವೆ. ಕೃಷಿಯಲ್ಲಿ ಎಐ ಪರಿಕರಗಳನ್ನು ಬಳಸಿ ಉತ್ಪನ್ನಶೀಲತೆ ಹೆಚ್ಚಿಸುವುದು ಹೇಗೆ ಎಂದು ಮಹಾರಾಷ್ಟ್ರದ ಬಾರಾಮತಿಯ ಸಹಕಾರಿ ಗುಂಪು ನಿದರ್ಶನವಾಗಿದೆ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಈ ಬಗ್ಗೆ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮೈಕ್ರೋಸಾಫ್ಟ್​ನ ಎಐ ಪರಿಕರಗಳನ್ನು ರೈತರು ಹೇಗೆ ಬಳಸುತ್ತಿದ್ದಾರೆ ಎಂಬುದನ್ನು ತಿಳಿಸಿದ್ದಾರೆ.

ಕೃಷಿ ಕ್ಷೇತ್ರಕ್ಕೆ ಎಐ ಟೆಕ್ನಾಲಜಿ ಎಷ್ಟು ಲಾಭಕಾರಿ ಗೊತ್ತಾ? ಭಾರತೀಯ ರೈತರ ಉದಾಹರಣೆ ಕೊಟ್ಟ ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯಾ ನಾದೆಲ್ಲ
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 25, 2025 | 2:16 PM

Share

ಬೆಂಗಳೂರು, ಫೆಬ್ರುವರಿ 25: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎನ್ನುವುದು ಉದ್ಯೋಗ ಕಸಿದುಕೊಳ್ಳುವ ಪರಿಕರ ಅಲ್ಲ, ಅದು ಬದುಕು ಪರಿವರ್ತಿಸುವ, ಉತ್ಪನ್ನಶೀಲತೆ ಹೆಚ್ಚಿಸುವ ಸಾಧನ ಎಂದು ಸಾಕಷ್ಟು ತಜ್ಞರು ಹೇಳುತ್ತಾರೆ. ಎಐ ಟೆಕ್ನಾಲಜಿ ಸಾಮಾನ್ಯ ಜನರಿಗೆ ಹೇಗೆ ಸಹಾಯವಾಗಬಲ್ಲುದು ಎಂಬುದಕ್ಕೆ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಒಂದು ನಿದರ್ಶನ ನೀಡಿದ್ದಾರೆ. ಮಹಾರಾಷ್ಟ್ರದ ಬರಪೀಡಿತ ಬಾರಾಮತಿ ಪ್ರದೇಶದ ರೈತರ ಬದುಕನ್ನು ಈ ಎಐ ಹೇಗೆ ಸುಧಾರಣೆ ಮಾಡುತ್ತಿದೆ ಎಂಬುದನ್ನು ಅವರು ಹಂಚಿಕೊಂಡಿದ್ದಾರೆ. ಸ್ವತಃ ಇಲಾನ್ ಮಸ್ಕ್ ಕೂಡ ಈ ಪೋಸ್ಟ್​ಗೆ ಪ್ರತಿಕ್ರಿಯಿಸಿ, ಎಐನಿಂದ ಇನ್ನೂ ಬಹಳಷ್ಟು ಸಾಧ್ಯ ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.

ಬಾರಾಮತಿ ಸಹಕಾರಿ ಸಂಸ್ಥೆಗೆ ಜೋಡಿತವಾಗಿರುವ ಸಣ್ಣ ರೈತರು ಮೈಕ್ರೋಸಾಫ್ಟ್​ನ ಎಐ ಟೆಕ್ನಾಲಜಿಯ ಪರಿಕರಗಳನ್ನು ಬಳಸಿ ತಮ್ಮ ಜಮೀನಿನಲ್ಲಿ ಹೆಚ್ಚು ಫಸಲು ಪಡೆಯಲು ಯಶಸ್ವಿಯಾಗಿದ್ದನ್ನು ಸತ್ಯ ನಾದೆಲ್ಲ ವಿವರಿಸಿದ್ದಾರೆ.

ಡ್ರೋನ್​ಗಳು, ಸೆಟಿಲೈಟ್​ಗಳು, ಮಣ್ಣು ಇತ್ಯಾದಿಯಿಂದ ಡಾಟಾ ಪಡೆಯುವ ಎಐ ಪರಿಕರಗಳು, ರೈತರಿಗೆ ಸ್ಥಳೀಯ ಭಾಷೆಯಲ್ಲಿ ಅರ್ಥವಾಗುವ ರೀತಿಯಲ್ಲಿ ಸಲಹೆ ಸೂಚನೆಗಳನ್ನು ನೀಡುತ್ತವೆ. ಬಾರಾಮತಿಯ ಕೃಷಿ ಅಭಿವೃದ್ಧಿ ಟ್ರಸ್ಟ್ (ಎಡಿಟಿ) 2024ರ ಜನವರಿಯಲ್ಲಿ ಎಐ ಸಾಧನಗಳನ್ನು ಕೃಷಿಗೆ ಬಳಸುವ ಐಡಿಯಾವನ್ನು ಜಾರಿಗೆ ತರಲು ನಿರ್ಧರಿಸಿತ್ತು. ಈ ಪ್ರಯೋಗ ಈಗ ಯಶಸ್ವಿಯಾಗಿದೆ.

ಇದನ್ನೂ ಓದಿ: ಭಾರತಕ್ಕೆ ಸೌರಶಕ್ತಿ: ಸಿಲಿಕಾನ್ ವೇಫರ್, ಇನ್ಗೋಟ್​ಗಳ ತಯಾರಿಕೆಗೆ ಉತ್ತೇಜಿಸಲು ಸರ್ಕಾರದಿಂದ ಬಿಲಿಯನ್ ಡಾಲರ್ ಸಬ್ಸಿಡಿ ಸ್ಕೀಮ್

ನೀರಿಗೆ ತತ್ವಾರ ಇರುವ ಬಾರಾಮತಿ ಪ್ರದೇಶದಲ್ಲಿ ಈ ಎಐ ಪ್ರಯೋಗದಿಂದ ಕಬ್ಬಿನ ಇಳುವರಿ ಗಮನಾರ್ಹವಾಗಿ ಹೆಚ್ಚಾಗಿದೆ. ಈ ಪ್ರಯೋಗಕ್ಕಾಗಿ ಬಾರಾಮತಿಯ ಕೆಲ ರೈತರನ್ನು ಆಯ್ದುಕೊಳ್ಳಲಾಗಿತ್ತು. ಮೈಕ್ರೋಸಾಫ್ಟ್​ನ ಎಐ ತಂತ್ರಜ್ಞಾನವನ್ನು ಬಳಸಿ ವಿವಿಧ ಪ್ರಯೋಗಗಳನ್ನು ಮಾಡಲು ಈ ರೈತರಿಗೆ ಅನುವು ಮಾಡಿಕೊಡಲಾಗಿತ್ತು.

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ತಮ್ಮ ಪೋಸ್ಟ್​ವೊಂದರಲ್ಲಿ ಈ ಪ್ರಯೋಗದ ಬಗ್ಗೆ ಬರೆಯಲಾದ ಬ್ಲಾಗ್​ವೊಂದರ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ. ಆ ಲೇಖನದಲ್ಲಿ ಸುರೇಶ್ ಜಗತಾಪ್ ಎನ್ನುವ ರೈತನ ಪ್ರಯೋಗವನ್ನು ಉಲ್ಲೇಖಿಸಲಾಗಿದೆ. ಇವರ ಒಂದು ಎಕರೆಯ ಪ್ರದೇಶದಲ್ಲಿ ಪ್ರಯೋಗ ಮಾಡಲಾಗಿದೆ. ಒಂದು ಸ್ಥಳದಲ್ಲಿ ಉದ್ದದ ಕಂಬ ನೆಡಲಾಗಿದೆ. ಈ ಕಂಬದ ಮೇಲ್ಗಡೆ ಗಾಳಿ, ನೀರು, ಸೌರ, ಉಷ್ಣ, ತೇವಾಂಶ ಇತ್ಯಾದಿ ಡಾಟಾ ಪಡೆಯುವ ಸೆನ್ಸಾರ್​ಗಳಿರುವ ಉಪಕರಣಗಳಿವೆ. ಕೆಳಗೆ ಮಣ್ಣಿನಲ್ಲಿ ತೇವಾಂಶ, ಎಲೆಕ್ಟ್ರಿಕಲ್ ಕಂಡಕ್ಟಿವಿಟಿ, ಪಿಎಚ್, ಮಣ್ಣಿನ ಪೋಷಕಾಂಶಗಳು ಇತ್ಯಾದಿಯನ್ನು ಅಳೆಯುವ ಸೆನ್ಸರ್​ಗಳನ್ನು ಹಾಕಲಾಗಿದೆ.

ಇದನ್ನೂ ಓದಿ: ಪಿಎಂ ಕಿಸಾನ್; ಬ್ಯಾಂಕ್ ಖಾತೆಗೆ ಹಣ ಬಂದಿಲ್ಲವಾ? ಕಾರಣಗಳೇನು, ಮಾರ್ಗೋಪಾಯಗಳೇನು? ಇಲ್ಲಿದೆ ಡೀಟೇಲ್ಸ್

ಇವುಗಳಿಂದ ಪಡೆದ ದತ್ತಾಂಶ ಹಾಗೂ ಸೆಟಿಲೈಟ್, ಡ್ರೋನ್ ಇತ್ಯಾದಿಯಿಂದ ಪಡೆದ ದತ್ತಾಂಶಗಳನ್ನು ಸೇರಿಸಿ, ರೈತರಿಗೆ ನಿರ್ದಿಷ್ಟ ಮೊಬೈಲ್ ಆ್ಯಪ್ ಮೂಲಕ ಅಲರ್ಟ್ ಮೆಸೇಜ್​ಗಳನ್ನು ನೀಡುತ್ತದೆ. ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆ ಕಂಡು ಬಂದರೆ ಗೊಬ್ಬರ ಹಾಕಬೇಕೆಂದು ಸಂದೇಶ ಬರುತ್ತದೆ. ನೀರಿನ ಕೊರತೆ ಇದ್ದರೆ ಅಲರ್ಟ್ ಬರುತ್ತದೆ. ಅಷ್ಟೇ ಅಲ್ಲ, ಜಮೀನಿನ ಯಾವ ಸ್ಥಳದಲ್ಲಿ ನೀರು ಅಥವಾ ರಸಗೊಬ್ಬರದ ಅವಶ್ಯಕತೆ ಇದೆ, ಯಾವ ಜಾಗದಲ್ಲಿ ಕಿಟಬಾಧೆ ಇದೆ ಎಂಬುದನ್ನು ನಕ್ಷೆ ಮೂಲಕ ತೋರಿಸುತ್ತದೆಯಂತೆ.

ಮೈಕ್ರೋಸಾಫ್ಟ್ ವೆಬ್​ಸೈಟ್​ನಲ್ಲಿ ಪ್ರಕಟವಾದ ಈ ಲೇಖನದಲ್ಲಿ ಪೂರ್ಣ ವಿವರ ಇದೆ. ಅದರ ಲಿಂಕ್ ಇಲ್ಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ಭೀಕರ ಅಪಘಾತ: ಡಿಕ್ಕಿ ರಭಸಕ್ಕೆ ಎರಡು ಪೀಸ್ ಆದ ಟೆಂಪೊ, EXCLUSIVE ದೃಶ್ಯ
ಭೀಕರ ಅಪಘಾತ: ಡಿಕ್ಕಿ ರಭಸಕ್ಕೆ ಎರಡು ಪೀಸ್ ಆದ ಟೆಂಪೊ, EXCLUSIVE ದೃಶ್ಯ