ಭಾರತಕ್ಕೆ ಸೌರಶಕ್ತಿ: ಸಿಲಿಕಾನ್ ವೇಫರ್, ಇನ್ಗೋಟ್ಗಳ ತಯಾರಿಕೆಗೆ ಉತ್ತೇಜಿಸಲು ಸರ್ಕಾರದಿಂದ ಬಿಲಿಯನ್ ಡಾಲರ್ ಸಬ್ಸಿಡಿ ಸ್ಕೀಮ್
Solar manufacturing industry in India: ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ಗೆ ಪಿಎಲ್ಐ ಸ್ಕೀಮ್ ಪುಷ್ಟಿ ನೀಡಿದ ರೀತಿಯಲ್ಲಿ ಸೋಲಾರ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೂ ಪುಷ್ಟಿ ನೀಡಲು ಸರ್ಕಾರ ಯೋಜಿಸಿದೆ. ಸೌರಶಕ್ತಿ ಉತ್ಪಾದನಾ ಕ್ಷೇತ್ರಕ್ಕೆ ಅಗತ್ಯವಾಗಿರುವ ಸಿಲಿಕಾನ್ ವೇಫರ್ ಮತ್ತು ಇನ್ಗೋಟ್ಗಳ ತಯಾರಿಕೆಗೆ ಸರ್ಕಾರ 1 ಬಿಲಿಯನ್ ಡಾಲರ್ ಸಬ್ಸಿಡಿ ಪ್ಲಾನ್ ಹಾಕಿದೆ. ಖುದ್ದು ನರೇಂದ್ರ ಮೋದಿ ಅವರೇ ಈ ಯೋಜನೆಗೆ ಬೆನ್ನೆಲುಬಾಗಿ ನಿಂತಿರುವುದರಿಂದ ಸದ್ಯದಲ್ಲೇ ಇದು ಜಾರಿಯಾಗಬಹುದೆಂದು ನಿರೀಕ್ಷಿಸಬಹುದು.

ನವದೆಹಲಿ, ಫೆಬ್ರುವರಿ 25: ಭಾರತದಲ್ಲಿ ಸೌರ ಉದ್ಯಮಕ್ಕೆ ಪುಷ್ಟಿ ನೀಡಲು ಕೇಂದ್ರ ಸರ್ಕಾರ ಮೆಗಾ ಪ್ಲಾನ್ ಮಾಡುತ್ತಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಬ್ಲೂಮ್ಬರ್ಗ್ ಏಜೆನ್ಸಿಯ ವರದಿ ಪ್ರಕಾರ, ಸೌರಶಕ್ತಿ ಉತ್ಪಾದನೆಯ ಉದ್ಯಮಕ್ಕಾಗಿ ಸರ್ಕಾರ ಒಂದು ಬಿಲಿಯನ್ ಡಾಲರ್ನ ಸಬ್ಸಿಡಿ ಪ್ಲಾನ್ವೊಂದನ್ನು ರೂಪಿಸಿದ್ದು, ಇದು ಸದ್ಯದಲ್ಲೇ ಜಾರಿಗೆ ಬರುವ ಸಾಧ್ಯತೆ ಇದೆ. ಹೊಸ ಮತ್ತು ಮರುಬಳಕೆ ಇಂಧನ ಸಚಿವಾಲಯದಿಂದ ಇಂಥದ್ದೊಂದು ಪ್ಲಾನ್ಗೆ ಪ್ರಸ್ತಾವ ಸಲ್ಲಿಕೆ ಆಗಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಈ ಪ್ಲಾನ್ಗೆ ಬೆನ್ನೆಲುಬಾಗಿ ನಿಂತಿರುವುದರಿಂದ, ಯೋಜನೆ ಜಾರಿಯಾಗುವ ಎಲ್ಲಾ ಸಾಧ್ಯತೆ ಇದೆ.
ಜಾಗತಿಕವಾಗಿ ಸೌರಶಕ್ತಿ ಹಾಗೂ ಅದರ ಉತ್ಪಾದನೆಗೆ ಅಗತ್ಯವಾಗಿರುವ ಬಿಡಿಭಾಗಗಳಿಗೆ ಭಾರೀ ಬೇಡಿಕೆ ಇದೆ. ಭಾರತದಲ್ಲಿ ಈ ಉದ್ಯಮವು ಹೆಚ್ಚಾಗಿ ಚೀನಾ ಮೇಲೆ ಅವಲಂಬಿತವಾಗಿದೆ. ಇದನ್ನು ತಪ್ಪಿಸಲು ಸರ್ಕಾರ ಹೊಸ ಪ್ರಯತ್ನಕ್ಕೆ ಕೈಹಾಕುತ್ತಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿರುವ ಸಿಲಿಕಾನ್ ವೇಫರ್ ಮತ್ತು ಇನ್ಗೋಟ್ಗಳನ್ನು ತಯಾರಿಸುವ ಸಂಸ್ಥೆಗಳಿಗೆ ಸರ್ಕಾರ ಸಬ್ಸಿಡಿ ಸ್ಕೀಮ್ ಮೂಲಕ ಉತ್ತೇಜಿಸಲು ಯೋಜಿಸಿದೆ.
ಇದನ್ನೂ ಓದಿ: ವಿಮಾನ ಚಾಲಕರ ಲೈಸೆನ್ಸ್ಗೆ ಸ್ಮಾರ್ಟ್ಕಾರ್ಡ್ ಅಲ್ಲ, ಡಿಜಿಟಲ್ನಲ್ಲೇ ಲಭ್ಯ; ಇ-ಲೈಸೆನ್ಸ್ ನೀಡುವ ಎರಡನೇ ದೇಶ ಭಾರತ
ವೇಫರ್ ಮತ್ತು ಇನ್ಗೋಟ್ಗಳು ಸೌರಫಲಕಗಳ ತಯಾರಿಕೆಗೆ ಬೇಕಾದ ಮೂಲಭೂತ ವಸ್ತುಗಳಾಗಿವೆ. ಸೌರ ಉದ್ಯಮದಲ್ಲಿ ಸ್ವಾವಲಂಬನೆ ಸಾಧಿಸಲು ಇವೆರಡೂ ಕೂಡ ಬಹಳ ಮುಖ್ಯ ಎನಿಸಿವೆ. ಹೀಗಾಗಿ, ಇವುಗಳ ಉತ್ಪಾದನೆ ಹೆಚ್ಚಿಸಲು ಸರ್ಕಾರ ಒಂದು ಬಿಲಿಯನ್ ಡಾಲರ್ನಷ್ಟು ಸಬ್ಸಿಡಿ ಪ್ಲಾನ್ ಹಾಕಿದೆ ಎನ್ನಲಾಗಿದೆ.
ಈ ಯೋಜನೆ ಯಶಸ್ವಿಯಾದರೂ ವೇಫರ್ ಮತ್ತು ಇನ್ಗೋಟ್ ತಯಾರಿಕೆಯಲ್ಲಿ ಪೂರ್ಣ ಸ್ವಾವಲಂಬನೆ ಸಾಧಿಸುವುದು ಕಷ್ಟ ಎಂದೂ ಹೇಳಲಾಗುತ್ತಿದೆ. ಯಾಕೆಂದರೆ, ವೇಫರ್ ಮತ್ತು ಇನ್ಗೋಟ್ಗಳನ್ನು ಪಾಲಿಸಿಲಿಕಾನ್ನಿಂದ ತಯಾರಿಸಲಾಗುತ್ತದೆ. ಭಾರತದಲ್ಲಿ ಇದನ್ನು ತಯಾರಿಸಲಾಗುವುದಿಲ್ಲ. ವಿದೇಶಗಳಿಂದಲೇ ಆಮದು ಮಾಡಿಕೊಳ್ಳಬೇಕಾಗುತ್ತದೆ.
ಇದನ್ನೂ ಓದಿ: ಪಿಎಂ ಕಿಸಾನ್; ಬ್ಯಾಂಕ್ ಖಾತೆಗೆ ಹಣ ಬಂದಿಲ್ಲವಾ? ಕಾರಣಗಳೇನು, ಮಾರ್ಗೋಪಾಯಗಳೇನು? ಇಲ್ಲಿದೆ ಡೀಟೇಲ್ಸ್
ಈ ತೊಡಕುಗಳ ನಡುವೆಯೂ ಉದ್ದಿಮೆಯ ಬೆಳವಣಿ ಮಾಡುವ ಪ್ರಯತ್ನ ಗಮನಾರ್ಹ. ಸ್ಮಾರ್ಟ್ಫೋನ್ ಮ್ಯಾನುಫ್ಯಾಕ್ಚರಿಂಗ್ನಲ್ಲಿ ಕಂಡ ಯಶಸ್ಸನ್ನು ಸೌರ ಕ್ಷೇತ್ರದಲ್ಲೂ ದಾಖಲಿಸುವ ಉತ್ಸಾಹ ಸರ್ಕಾರದ್ದಾಗಿದೆ. ಹಂತ ಹಂತವಾಗಿ ಈ ಕ್ಷೇತ್ರದಲ್ಲೂ ಭಾರತ ಸ್ವಾವಲಂಬನೆ ಸಾಧಿಸುವ ಗುರಿ ಇಟ್ಟುಕೊಂಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




