ನವದೆಹಲಿ, ಫೆಬ್ರುವರಿ 28: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (Pradhan Mantri Kisan Samman Nidhi Yojana) 16ನೇ ಕಂತಿನ ಹಣ ಇಂದು ಬುಧವಾರ ಬಿಡುಗಡೆ ಆಗುತ್ತಿದೆ. ಒಂಬತ್ತು ಕೋಟಿಗೂ ಹೆಚ್ಚು ಫಲಾನುಭವಿ ರೈತರ ಖಾತೆಗಳಿಗೆ ತಲಾ 2,000 ರೂ ಹಣ ಇವತ್ತಿನಿಂದ ಜಮೆ ಆಗಲು ಶುರುವಾಗಲಿದೆ. ಡಿಸೆಂಬರ್ನಿಂದ ಮಾರ್ಚ್ವರೆಗಿನ ಅವಧಿಯ 2,000 ರೂ ಹಣ ರೈತರ ಖಾತೆಗೆ ನೇರವಾಗಿ ವರ್ಗಾವಣೆ ಆಗಲಿದೆ. 16ನೇ ಕಂತಿನ ಹಣದ ಬಿಡುಗಡೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಘೋಷಿಸಲಿದ್ದಾರೆ.
ರೈತರ ವ್ಯವಸಾಯ ಕಾರ್ಯಕ್ಕೆ ಅನುಕೂಲವಾಗಲೆಂದು ಸರ್ಕಾರ 2019ರಲ್ಲಿ ಆರಂಭಿಸಿದ ಯೋಜನೆ ಪಿಎಂ ಕಿಸಾನ್ ಸಮ್ಮಾನ್ ನಿಧಿ. ಇದರ ಅಡಿಯಲ್ಲಿ ರೈತರಿಗೆ 2,000 ರೂಗಳ 3 ಕಂತುಗಳಂತೆ ವರ್ಷಕ್ಕೆ 6,000 ರೂ ಹಣವನ್ನು ಸರ್ಕಾರ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತದೆ. ಏಪ್ರಿಲ್ನಿಂದ ಜುಲೈ, ಆಗಸ್ಟ್ನಿಂದ ನವೆಂಬರ್, ಮತ್ತು ಡಿಸೆಂಬರ್ನಿಂದ ಮಾರ್ಚ್ವರೆಗೆ ಈ ಮೂರು ಅವಧಿಯಲ್ಲಿ ರೈತರಿಗೆ 2,000 ರೂ ಹಣ ಸಿಗುತ್ತದೆ.
ಇದನ್ನೂ ಓದಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಛೇರ್ಮನ್ ಸ್ಥಾನದಿಂದ ವಿಜಯ್ ಶೇಖರ್ ಶರ್ಮಾ ಹೊರಕ್ಕೆ; ಬ್ಯಾಂಕ್ ಮಂಡಳಿ ಪುನಾರಚನೆ
ನೀವು ಪಿಎಂ ಕಿಸಾನ್ ಯೊಜನೆಗೆ ಹೆಸರು ನೊಂದಾಯಿಸಿದ್ದರೆ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸಲಾಗಿರುತ್ತದೆ. ಈ ಪಟ್ಟಿಯನ್ನು ನೋಡುವ ಕ್ರಮ ಇಲ್ಲಿದೆ.
ಇದನ್ನೂ ಓದಿ: ಸರ್ಕಾರದಿಂದ ಸಿಎನ್ಎಪಿ ಅಸ್ತ್ರ; ಟ್ರೂಕಾಲರ್ಗೆ ಇದು ಮಾರಕಾಸ್ತ್ರವಾ? ಟೆಲಿಕಾಂ ಕಂಪನಿಗಳಿಗೂ ತಲೆನೋವು
ಒಂದು ವೇಳೆ ನೀವು ಯೋಜನೆಗೆ ನೊಂದಾಯಿಸಿದ್ದೂ ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಅದಕ್ಕೆ ಬೇರೆ ಕಾರಣಗಳಿರಬಹುದು. ನೀವು ಇಕೆವೈಸಿ ಮಾಡಿಲ್ಲದೇ ಇರಬಹುದು. ಅಥವಾ ತಡವಾಗಿ ಯೋಜನೆಗೆ ನೊಂದಾಯಿಸಿರಬಹುದು.
ನೀವು ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಕೆವೈಸಿ ಅಪ್ಡೇಟ್ ಮಾಡಬಹುದು. ಅಥವಾ ಆನ್ಲೈನ್ನಲ್ಲೇ ಇಕೆವೈಸಿ ನೀಡಬಹುದು. ಪಿಎಂ ಕಿಸಾನ್ ಪೋರ್ಟಲ್ನ ಫಾರ್ಮರ್ಸ್ ಕಾರ್ನರ್ನಲ್ಲಿ ಮೊದಲ ಟ್ಯಾಬ್ನಲ್ಲೇ ಇಕೆವೈಸಿ ಲಿಂಕ್ ಕಾಣಬಹುದು. ಅದನ್ನು ಕ್ಲಿಕ್ ಮಾಡಿ ನಿಮ್ಮ ಆಧಾರ್ ದಾಖಲೆಯನ್ನು ಅಪ್ಡೇಟ್ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ