Gold Silver Price on 28th February: ಬೆಳ್ಳಿ ಬೆಲೆ ಮತ್ತಷ್ಟು ಇಳಿಕೆ; ಚಿನ್ನದ ದರದಲ್ಲಿ ವ್ಯತ್ಯಯ ಇಲ್ಲ; ಇಲ್ಲಿದೆ ಇವತ್ತಿನ ಚಿನ್ನ, ಬೆಳ್ಳಿ ಬೆಲೆ ವಿವರ
Bullion Market 2024: ಭಾರತದಲ್ಲಿ ಬೆಳ್ಳಿ ಬೆಲೆ ಸತತವಾಗಿ ಇಳಿದಿದೆ. ಗ್ರಾಮ್ಗೆ 50 ಪೈಸೆ ಕಡಿಮೆ ಆಗಿದೆ. ವಿದೇಶಗಳಲ್ಲಿ ಚಿನ್ನ ತುಸು ಬೆಲೆ ಇಳಿದಿದೆ. ಚಿನ್ನ ಗ್ರಾಮ್ಗೆ 10 ರೂ ಬೆಲೆ ಇಳಿಕೆ ಕಂಡಿದೆ. ಭಾರತದಲ್ಲಿ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 57,600 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 62,840 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್ಗೆ 74 ರು ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಮ್ ಚಿನ್ನದ ಬೆಲೆ 57,600 ರೂ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,150 ರೂ ಇದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.
ಬೆಂಗಳೂರು, ಫೆಬ್ರುವರಿ 28: ಚಿನ್ನ ಮತ್ತು ಬೆಳ್ಳಿ ಬೆಲೆಗಳ (Gold and silver Rates) ಹೊಯ್ದಾಟ ಮುಂದುವರಿದಿದೆ. ಭಾರತದಲ್ಲಿ ಇಂದು ಚಿನ್ನದ ಬೆಲೆಯಲ್ಲಿ ವ್ಯತ್ಯಯವಾಗದಿದ್ದರೂ ಬೆಳ್ಳಿ ಬೆಲೆ ತಗ್ಗಿದೆ. ಇಂದು ಗ್ರಾಮ್ಗೆ ಬೆಳ್ಳಿ ಬೆಲೆ 50 ಪೈಸೆ ಇಳಿಮುಖವಾಗಿದೆ. ಚಿನ್ನದ ಬೆಲೆ ಭಾರತದಲ್ಲಿ ಯಥಾಸ್ಥಿತಿಯಲ್ಲಿದ್ದರೂ ವಿದೇಶದ ಕೆಲವೆಡೆ ಬೆಲೆ ಇಳಿದಿದೆ. ಅದರಲ್ಲೂ ಮುಖ್ಯವಾಗಿ ಅಮೆರಿಕದಲ್ಲಿ ಚಿನ್ನ ತುಸು ಅಗ್ಗಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 57,600 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 62,840 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,400 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 57,600 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,150 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಫೆಬ್ರುವರಿ 28ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,600 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 62,840 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 740 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,600 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 62,840 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 715 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 57,600 ರೂ
- ಚೆನ್ನೈ: 58,150 ರೂ
- ಮುಂಬೈ: 57,600 ರೂ
- ದೆಹಲಿ: 57,750 ರೂ
- ಕೋಲ್ಕತಾ: 57,600 ರೂ
- ಕೇರಳ: 57,600 ರೂ
- ಅಹ್ಮದಾಬಾದ್: 57,650 ರೂ
- ಜೈಪುರ್: 57,750 ರೂ
- ಲಕ್ನೋ: 57,750 ರೂ
- ಭುವನೇಶ್ವರ್: 57,600 ರೂ
ಇದನ್ನೂ ಓದಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಛೇರ್ಮನ್ ಸ್ಥಾನದಿಂದ ವಿಜಯ್ ಶೇಖರ್ ಶರ್ಮಾ ಹೊರಕ್ಕೆ; ಬ್ಯಾಂಕ್ ಮಂಡಳಿ ಪುನಾರಚನೆ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಮಲೇಷ್ಯಾ: 3,110 ರಿಂಗಿಟ್ (54,132 ರುಪಾಯಿ)
- ದುಬೈ: 2,282.50 ಡಿರಾಮ್ (51,493 ರುಪಾಯಿ)
- ಅಮೆರಿಕ: 620 ಡಾಲರ್ (51,382 ರುಪಾಯಿ)
- ಸಿಂಗಾಪುರ: 850 ಸಿಂಗಾಪುರ್ ಡಾಲರ್ (52,447 ರುಪಾಯಿ)
- ಕತಾರ್: 2,345 ಕತಾರಿ ರಿಯಾಲ್ (53,293 ರೂ)
- ಸೌದಿ ಅರೇಬಿಯಾ: 2,350 ಸೌದಿ ರಿಯಾಲ್ (51,927 ರುಪಾಯಿ)
- ಓಮನ್: 248 ಒಮಾನಿ ರಿಯಾಲ್ (53,385 ರುಪಾಯಿ)
- ಕುವೇತ್: 195 ಕುವೇತಿ ದಿನಾರ್ (52,526 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 7,150 ರೂ
- ಚೆನ್ನೈ: 7,550 ರೂ
- ಮುಂಬೈ: 7,400 ರೂ
- ದೆಹಲಿ: 7,400 ರೂ
- ಕೋಲ್ಕತಾ: 7,400 ರೂ
- ಕೇರಳ: 7,550 ರೂ
- ಅಹ್ಮದಾಬಾದ್: 7,400 ರೂ
- ಜೈಪುರ್: 7,400 ರೂ
- ಲಕ್ನೋ: 7,400 ರೂ
- ಭುವನೇಶ್ವರ್: 7,550 ರೂ
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ