Farmers: ಪಿಎಂ ಕಿಸಾನ್ ಯೋಜನೆ; ರೈತರಿಗೆ ಸಿಗಲಿದೆ 8,000 ರೂ ಹಣ; ಕಂತುಗಳ ಸಂಖ್ಯೆ 4ಕ್ಕೆ ಏರಿಕೆ ಸಾಧ್ಯತೆ

|

Updated on: Jan 08, 2024 | 2:37 PM

PM Kisan samman Nidhi Yojana: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ರೈತರಿಗೆ ಒಂದು ವರ್ಷಕ್ಕೆ ಒದಗಿಸುವ 6,000 ರೂ ಹಣವನ್ನು 8,000 ರೂಗೆ ಏರಿಸುವ ಸಾಧ್ಯತೆ ಇದೆ. ಏಪ್ರಿಲ್ ಮೇ ತಿಂಗಳಲ್ಲಿ ಇರುವ ಲೋಕಸಭೆ ಚುನಾವಣೆಗೆ ಮುನ್ನ ಯೋಜನೆಯ ಹಣ ಹೆಚ್ಚಿಸುವ ನಿರ್ಧಾರ ಪ್ರಕಟಿಸಬಹುದು. 2019ರಲ್ಲಿ ಆರಂಭವಾದ ಈ ಯೋಜನೆಯಲ್ಲಿ ಇದೂವರೆಗೆ 15 ಕಂತುಗಳನ್ನು ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ.

Farmers: ಪಿಎಂ ಕಿಸಾನ್ ಯೋಜನೆ; ರೈತರಿಗೆ ಸಿಗಲಿದೆ 8,000 ರೂ ಹಣ; ಕಂತುಗಳ ಸಂಖ್ಯೆ 4ಕ್ಕೆ ಏರಿಕೆ ಸಾಧ್ಯತೆ
ರೈತರಿಗೆ ಧನ ಸಹಾಯ
Follow us on

ನವದೆಹಲಿ, ಜನವರಿ 8: ರೈತರ ವ್ಯವಸಾಯಕ್ಕೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಧನಸಹಾಯ ಒದಗಿಸುವ ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi Yojana) ಯೋಜನೆಯಲ್ಲಿ ಹಣದ ಮೊತ್ತ ಹೆಚ್ಚಿಸಲು ಕೇಂದ್ರ ಸರ್ಕಾರ ಯೋಜಿಸಿದೆ. ವರ್ಷದ ಹಿಂದೆಯೇ ಈ ಬಗ್ಗೆ ವರದಿಗಳಿದ್ದವು. ಈಗ ಈ ವಿಚಾರ ದಟ್ಟವಾಗುತ್ತಿದೆ. ಸದ್ಯ ವರ್ಷಕ್ಕೆ ಒಟ್ಟು 6,000 ರೂಗಳನ್ನು ಮೂರು ಕಂತುಗಳಲ್ಲಿ ಸರ್ಕಾರವು ಫಲಾನುಭವಿಗಳಿಗೆ ಒದಗಿಸುತ್ತಿದೆ. ಈ ಹಣವನ್ನು ಎಂಟು ಸಾವಿರ ರೂಗೆ ಹೆಚ್ಚಿಸಬಹುದು. ಈ ಎಂಟು ಸಾವಿರ ರೂ ಹಣವನ್ನು ನಾಲ್ಕು ಕಂತುಗಳಲ್ಲಿ ಕೊಡುವುದು ಸರ್ಕಾರದ ಚಿಂತನೆ ಆಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್​ಬಿಸಿ ಟಿವಿ18 ವಾಹಿನಿಯಲ್ಲಿ ವರದಿಯಾಗಿದೆ. ಈ ವರದಿ ಪ್ರಕಾರ, ಲೋಕಸಭೆಗೆ ಮುನ್ನ ಸರ್ಕಾರದಿಂದ ಘೋಷಣೆ ಆಗುವ ಸಾಧ್ಯತೆ ಇದೆ.

ಪಿಎಂ ಕಿಸಾನ್ ಯೋಜನೆ ಮಾತ್ರವಲ್ಲ, ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಮೊತ್ತವನ್ನೂ ಸರ್ಕಾರ ಹೆಚ್ಚಿಸುವ ಸಾಧ್ಯತೆ ಇದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಫೆಬ್ರುವರಿಯಲ್ಲಿ ಸರ್ಕಾರದಿಂದ ಈ ಬಗ್ಗೆ ಪ್ರಕಟಣೆ ಬರಬಹುದು.

ಇದನ್ನೂ ಓದಿ: ವಂಚಕರಿದ್ದಾರೆ ಹುಷಾರ್..! ಆಧಾರ್ ನಂಬರ್ ಬಹಿರಂಗಪಡಿಸಬೇಡಿ; ಅರೆಮುಚ್ಚಿದ ನಂಬರ್​ನ ಆಧಾರ್ ಡೌನ್​ಲೋಡ್ ಮಾಡಿ

ಪಿಎಂ ಕಿಸಾನ್ ಯೋಜನೆಯಲ್ಲಿ ಪ್ರತೀ ನಾಲ್ಕು ತಿಂಗಳಿಗೊಮ್ಮೆ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ 2,000 ರೂ ಹಣವನ್ನು ಸರ್ಕಾರ ವರ್ಗಾಯಿಸುತ್ತದೆ. ಈಗ ಕಂತುಗಳ ಸಂಖ್ಯೆಯನ್ನು 3ರಿಂದ 4ಕ್ಕೆ ಏರಿಸಲಾಗಬಹುದು. ಅಂದರೆ, ಪ್ರತೀ ಮೂರು ತಿಂಗಳಿಗೊಮ್ಮೆ ರೈತರಿಗೆ 2,000 ರೂ ಸಿಗಬಹುದು.

2019ರಲ್ಲಿ ಆರಂಭವಾದ ಪಿಎಂ ಕಿಸಾನ್ ಯೋಜನೆಯಲ್ಲಿ ಇದೂವರೆಗೂ 15 ಕಂತುಗಳನ್ನು ಸರ್ಕಾರ ನೀಡಿದೆ. ಒಟ್ಟಾರೆ 2.75 ಲಕ್ಷ ಕೋಟಿ ರೂ ಹಣವನ್ನು ರೈತರ ಖಾತೆಗಳಿಗೆ ಹಾಕಲಾಗಿದೆ.

ಇದನ್ನೂ ಓದಿ: Tax Evasion: ದೇಶಾದ್ಯಂತ 7 ತಿಂಗಳಲ್ಲಿ 29,273 ಬೋಗಸ್ ಸಂಸ್ಥೆಗಳಿಂದ 44 ಸಾವಿರ ಕೋಟಿ ರೂ ಮೊತ್ತದ ಜಿಎಸ್​ಟಿ ವಂಚನೆ

15ನೇ ಕಂತಿನ ಹಣವನ್ನು ನವೆಂಬರ್ 15ರಂದು ಹಾಕಲಾಗಿತ್ತು. ಅದಕ್ಕೂ ಹಿಂದಿನ 14ನೇ ಕಂತಿನ ಹಣವನ್ನು ಜುಲೈ ಕೊನೆಯ ವಾರದಲ್ಲಿ ನೀಡಲಾಗಿತ್ತು. ಫೆಬ್ರುವರಿ 27ರಂದು ಬೆಳಗಾವಿಯ ಸಮಾವೇಶವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 13ನೇ ಕಂತಿನ ಹಣ ಬಿಡುಗಡೆಯನ್ನು ಘೋಷಿಸಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ