
ನವದೆಹಲಿ, ನವೆಂಬರ್ 21: ಪಿಎಂ ಕಿಸಾನ್ ಸ್ಕೀಮ್ನ (PM Kisan Scheme) 21ನೇ ಕಂತಿನ ಹಣ ಮೊನ್ನೆ (ನ. 19) ಬಿಡುಗಡೆ ಆಗಿದೆ. 9 ಕೋಟಿ ರೈತರಿಗೆ (farmers) ತಲಾ 2,000 ರೂನಂತೆ ಒಟ್ಟು 18,000 ಕೋಟಿ ರೂ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಈ ಹಿಂದಿನ ಕಂತುಗಳಲ್ಲಿ ಸುಮಾರು 10 ಕೋಟಿ ರೈತರಿಗೆ ಹಣ ನೀಡಲಾಗಿತ್ತು. 21ನೇ ಕಂತಿನಲ್ಲಿ ಹಣ ಪಡೆದವರ ಸಂಖ್ಯೆ ಕಡಿಮೆ ಆಗಿದೆ. ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿದ ಹಲವರಿಗೆ ಹಣ ಸಿಕ್ಕಿಲ್ಲ. ಬೇರೆ ಬೇರೆ ಕಾರಣದಿಂದ ಹಲವರು ಯೋಜನೆಯಿಂದ ವಂಚಿತರಾಗಿದ್ದಾರೆ.
ಪಿಎಂ ಕಿಸಾನ್ ಯೋಜನೆಯು ಕೃಷಿ ಭೂಮಿ ಹೊಂದಿರುವ ಎಲ್ಲಾ ರೈತರಿಗೂ ಲಭ್ಯ ಇರುತ್ತದೆ. ಆದರೆ, ವೃತ್ತಿಪರ ಕೆಲಸ ಮಾಡುವವರು, ಹಾಲಿ ಮತ್ತು ಮಾಜಿ ಸಚಿವರು, ಶಾಸಕರು, ಜಿಪಂ ಅಧ್ಯಕ್ಷರು, ಸಂಸದರು ಇತ್ಯಾದಿ ಜನಪ್ರತಿನಿಧಿಗಳು, ಸರ್ಕಾರಿ ನೌಕರರು, ಪಿಂಚಣಿದಾರರು, ಐಟಿ ಪಾವತಿದಾರರು ಮೊದಲಾದವರು ಕೃಷಿ ಜಮೀನು ಹೊಂದಿದರೂ ಯೋಜನೆಯ ಫಲಾನುಭವಿಯಾಗಲು ಅರ್ಹರಿರುವುದಿಲ್ಲ.
ಇದನ್ನೂ ಓದಿ: ಗಮನ ಸೆಳೆಯುತ್ತಿದೆ ಕರ್ನಾಟಕದ ಐಟಿ, ಸ್ಪೇಸ್ಟೆಕ್, ಸ್ಟಾರ್ಟಪ್ ನೀತಿಗಳು; ಬೆಂಗಳೂರಿನಲ್ಲಿ ದಟ್ಟಣೆ ತಪ್ಪಿಸಲೂ ಕ್ರಮ
ಬಹಳಷ್ಟು ಜನರಿಗೆ ಈ ಮೇಲಿನ ಮೂರು ಅಂಶಗಳು ತಿಳಿಯದೇ ಗೊಂದಲ ಆಗುತ್ತಿದೆ. ಹಾಗೆಯೇ, ಯೋಜನೆಗೆ ನೊಂದಾಯಿಸಿದ ಬಳಿಕ ಒಮ್ಮೆಯೂ ಇಕೆವೈಸಿ ಮಾಡಿಸದೇ ಇದ್ದರೂ ಪಿಎಂ ಕಿಸಾನ್ ಹಣ ಸಿಗೋದಿಲ್ಲ. ಈಗ ಇಕೆವೈಸಿ ಕಡ್ಡಾಯವಾಗಿದೆ. ಭೌತಿಕವಾಗಿಯೂ ಎಲ್ಲಾ ಫಲಾನುಭವಿಗಳ ದಾಖಲೆ ಪರೀಕ್ಷೆ ಮಾಡಲಾಗುತ್ತಿದೆ. ಯೋಜನೆಗೆ ನೀಡಿರುವ ಬ್ಯಾಂಕ್ ಖಾತೆಯ ಮಾಹಿತಿ ತಪ್ಪಾಗಿದ್ದರೆ ಅಥವಾ ಖಾತೆಗೆ ಆಧಾರ್ ಜೋಡಿತವಾಗದೇ ಇದ್ದಾಗಲೂ ಹಣ ಬರೋದಿಲ್ಲ.
ಇದನ್ನೂ ಓದಿ: ಕಾರ್ಮಿಕ ಕ್ಷೇತ್ರದಲ್ಲಿ ದೊಡ್ಡ ಸುಧಾರಣೆ; ಹಳೆಯ 29 ಕಾನೂನುಗಳ ಬದಲು ಹೊಸ 4 ಕಾನೂನು ಸಂಹಿತೆ ಜಾರಿಗೆ
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್ಸೈಟ್ ವಿಳಾಸ: pmkisan.gov.in/
ಇಲ್ಲಿ ತುಸು ಕೆಳಗೆ ಸ್ಕ್ರೋಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಕಾಣುತ್ತದೆ. ಅದರಲ್ಲಿ ಬೆನಿಫಿಶಿಯರಿ ಲಿಸ್ಟ್ ಕ್ಲಿಕ್ ಮಾಡಿದರೆ, ನಿಮ್ಮ ಊರಿನ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ನೋಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ