ಎಐ ಇಂಪ್ಯಾಕ್ಟ್ ಸಮಿಟ್​ಗೆ ಪೂರ್ವಭಾವಿಯಾಗಿ 12 ಸ್ಟಾರ್ಟಪ್​ಗಳೊಂದಿಗೆ ಪ್ರಧಾನಿ ಮೋದಿ ಸಭೆ

PM Narendra Modi chairs meeting with Indian AI startups: ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸದಲ್ಲಿ 12 ಎಐ ಸ್ಟಾರ್ಟಪ್​ಗಳ ಮುಖ್ಯಸ್ಥರನ್ನು ಕರೆಸಿ ಸಭೆ ನಡೆಸಿದ್ದಾರೆ. ಫೆಬ್ರುವರಿಯಲ್ಲಿ ನಡೆಯುವ ಎಐ ಇಂಪ್ಯಾಕ್ಟ್ ಸಮಿಟ್​ನ ಒಂದು ಭಾಗದಲ್ಲಿ ಈ 12 ಸ್ಟಾರ್ಟಪ್​ಗಳು ಪಾಲ್ಗೊಳ್ಳುತ್ತಿವೆ. ಇವುಗಳೊಂದಿಗೆ ಪ್ರಧಾನಿ ಮೋದಿ ಈ ದುಂಡುಮೇಜಿನ ಸಭೆಯಲ್ಲಿ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ.

ಎಐ ಇಂಪ್ಯಾಕ್ಟ್ ಸಮಿಟ್​ಗೆ ಪೂರ್ವಭಾವಿಯಾಗಿ 12 ಸ್ಟಾರ್ಟಪ್​ಗಳೊಂದಿಗೆ ಪ್ರಧಾನಿ ಮೋದಿ ಸಭೆ
ಎಐ ಸ್ಟಾರ್ಟಪ್​ಗಳೊಂದಿಗೆ ಪ್ರಧಾನಿ ಸಭೆ

Updated on: Jan 08, 2026 | 4:21 PM

ನವದೆಹಲಿ, ಜನವರಿ 8: ಫೆಬ್ರುವರಿಯಲ್ಲಿ ನಡೆಯಲಿರುವ ಎಐ ಇಂಪ್ಯಾಕ್ಟ್ ಸಮಿಟ್​ಗೆ (AI Impact Summit 2026) ಪೂರ್ವಭಾವಿಯಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾರತೀಯ ಎಐ ಸ್ಟಾರ್ಟಪ್​ಗಳ ಸಭೆ ನಡೆಸಿದರು. ಲೋಕಕಲ್ಯಾಣ ಮಾರ್ಗ್​ನಲ್ಲಿರುವ ತಮ್ಮ ನಿವಾಸದಲ್ಲಿ ಪ್ರಧಾನಿಗಳು ದುಂಡು ಮೇಜಿನ ಸಭೆಯ ಅಧ್ಯಕ್ಷತೆ ವಹಿಸಿದ್ದರು. 12 ಸ್ಟಾರ್ಟಪ್​ಗಳು ಈ ಸಭೆಯಲ್ಲಿ ಭಾಗವಹಿಸಿ, ತಮ್ಮ ಕೆಲಸ ಹಾಗೂ ಐಡಿಯಾಗಳನ್ನು ಪ್ರಧಾನಿಯವರ ಹಂಚಿಕೊಂಡಿವೆ.

ಮುಂದಿನ ತಿಂಗಳು ನಡೆಯುವ ಸಮಿಟ್​ನಲ್ಲಿ ‘ಎಐ ಫಾರ್ ಆಲ್: ಗ್ಲೋಬಲ್ ಇಂಪ್ಯಾಕ್ಟ್ ಚಾಲೆಂಜ್’ ಅಧಿವೇಶನದಲ್ಲಿ ಪಾಲ್ಗೊಳ್ಳಲು ಈ 12 ಸ್ಟಾರ್ಟಪ್​ಗಳು ಅರ್ಹತೆ ಪಡೆದಿವೆ. ಅವತಾರ್, ಭಾರತ್​ಜೆನ್, ಫ್ರಾಕ್ಟಲ್, ಗ್ಯಾನ್, ಜೆನ್​ಲೂಪ್, ಜ್ಞಾನಿ, ಇಂಟೆಲಿಹೆಲ್ತ್, ಸರ್ವಂ, ಶೋಧ್ ಎಐ, ಸಾಕೆಟ್ ಎಐ, ಟೆಕ್ ಮಹೀಂದ್ರ ಮತ್ತು ಝೆನ್​ಟೀಕ್ ಆ 12 ಸ್ಟಾರ್ಟಪ್​ಗಳಾಗಿವೆ. ಪ್ರಧಾನಿ ಜೊತೆಗಿನ ಸಭೆಯಲ್ಲಿ ಈ 12 ಸ್ಟಾರ್ಟಪ್​ಗಳ ಸಿಇಒಗಳು, ಮುಖ್ಯಸ್ಥರು ಮತ್ತು ಪ್ರತಿನಿಧಿಗಳು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ರೌಂಡ್​ಟೇಬಲ್ ಮೀಟಿಂಗ್​ನಲ್ಲಿ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಜಿತಿನ್ ಪ್ರಸಾದ ಅವರೂ ಪಾಲ್ಗೊಂಡಿದ್ದರು.

ಇದನ್ನೂ ಓದಿ: ಕರ್ನಾಟಕದ ಕಾಫಿಗೆ ಯೂರೋಪ್​ನಲ್ಲಿ ಬಲು ಬೇಡಿಕೆ; 2025ರಲ್ಲಿ 2 ಬಿಲಿಯನ್ ಡಾಲರ್ ಮುಟ್ಟಿದ ಭಾರತದ ಒಟ್ಟಾರೆ ಕಾಫಿ ರಫ್ತು

ಸಮಾಜದಲ್ಲಿ ಪರಿವರ್ತನೆ ತರಲು ಎಐ ಎಷ್ಟು ಮಹತ್ವದ್ದು ಎಂಬುದನ್ನು ಮೋದಿ ಈ ಸಂದರ್ಭದಲ್ಲಿ ಆಂಟ್ರಪ್ರನ್ಯೂರ್​ಗಳಿಗೆ ವಿವರಿಸಿದರು. ಎಐ ಆಂಟ್ರಪ್ರನ್ಯೂರ್​ಗಳು ಮತ್ತು ಸ್ಟಾರ್ಟಪ್​ಗಳು ಭಾರತದ ಭವಿಷ್ಯದ ನಿರ್ಮಾತೃಗಳಾಗಿವೆ ಎಂದ ಅವರು, ಭಾರತದಿಂದ ಅನನ್ಯವಾದಂತಹ ಎಐ ಮಾಡಲ್ ಅನ್ನು ಜಗತ್ತಿಗೆ ಕೊಡಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಎಐ ಸ್ಟಾರ್ಟಪ್​ಗಳ ಮುಖಂಡರು, ಭಾರತದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಇಕೋಸಿಸ್ಟಂ ಬೆಳೆಸಲು ಸರ್ಕಾರ ಹೊಂದಿರುವ ಬದ್ಧತೆಯನ್ನು ಶ್ಲಾಘಿಸಿದ್ದಾರೆ. ಎಐ ಇನ್ನೋವೇಶನ್​ಗಳ ಕೇಂದ್ರಬಿಂದು ಭಾರತದತ್ತ ವಾಲುತ್ತಿದೆ. ಎಐ ಅಭಿವೃದ್ಧಿಗೆ ಬೇಕಾದ ಸಮೃದ್ಧ ವಾತಾವರಣ ಭಾರತದಲ್ಲಿ ಇದೆ. ಜಾಗತಿಕ ಎಐ ನಕ್ಷೆಯಲ್ಲಿ ಭಾರತದ ಸ್ಥಾನ ಗುರುತರವಾಗಿದೆ ಎಂದು ಈ ನವೋದ್ಯಮಿಗಳು ಹೇಳಿದ್ದಾರೆ.

ಇದನ್ನೂ ಓದಿ: 2024-25ರಲ್ಲಿ ಶೇ. 6.5, 2025-26ರಲ್ಲಿ ಶೇ. 7.4; ಈ ವರ್ಷಕ್ಕೆ ಸರ್ಕಾರದ ಆರ್ಥಿಕ ಬೆಳವಣಿಗೆ ಅಂದಾಜು

ಈ 12 ಸ್ಟಾರ್ಟಪ್​ಗಳು ಬೇರೆ ಬೇರೆ ಎಐ ವಿಭಾಗಗಳಲ್ಲಿ ಕಾರ್ಯನಿರತವಾಗಿವೆ. ಭಾರತೀಯ ಭಾಷಾ ಫೌಂಡೇಶನ್ ಮಾಡಲ್​ಗಳು, ಬಹುಭಾಷೆಗಳ ಎಲ್​ಎಲ್​ಎಂಗಳು, ಸ್ಪೀಚ್ ಟು ಟೆಕ್ಸ್ಟ್, ಟೆಕ್ಸ್ಟ್ ಟು ಆಡಿಯೋ, ಟೆಕ್ಸ್ಟ್ ಟು ವಿಡಿಯೋ, ಜನರೇಟಿವ್ ಎಐ ಬಳಸಿ ಮಾಡುವ 3ಡಿ ಕಂಟೆಂಟ್, ಎಂಜಿನಿಯರಿಂಗ್ ಸಿಮುಲೇಶನ್, ಮೆಟೀರಿಯಲ್ ರಿಸರ್ಚ್, ಹೆಲ್ತ್​ಕೇರ್ ಡಯಾಗ್ನಾಸ್ಟಿಕ್ಸ್ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಈ ಎಐ ಸ್ಟಾರ್ಟಪ್​ಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ