ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ನಂತರ ಲಾಭಗಳಿಸುತ್ತಿವೆ ಸರ್ಕಾರಿ ಕಂಪನಿ ಷೇರುಗಳು

ವಾರದ ಕೊನೆಯ ವಹಿವಾಟಿನ ದಿನದ ಆರಂಭಿಕ ಅವಧಿಯಲ್ಲಿ, ಎಲ್ಐಸಿಯ ಷೇರುಗಳಲ್ಲಿ ಏರಿಕೆ ಕಂಡುಬಂದಿದೆ. ಬೆಳಗ್ಗೆ 10.51ರ ವೇಳೆಗೆ ಎಲ್‌ಐಸಿ ಷೇರುಗಳು ಶೇ.3.16ರಷ್ಟು ಏರಿಕೆ ದಾಖಲಿಸುತ್ತಿವೆ. ನಿನ್ನೆಯ ಭಾಷಣದಲ್ಲಿ ಪ್ರಧಾನಿ ಮೋದಿ ಎಲ್‌ಐಸಿ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಎಲ್‌ಐಸಿ ಹೂಡಿಕೆದಾರರು ಇಂದು (ಶುಕ್ರವಾರ) ಬೆಳಗ್ಗೆ ಖುಷಿಯಾಗಿದ್ದಾರೆ. ಅದೇ ಭಾರತ್ ಹೆವಿ ಎಲೆಕ್ಟ್ರಿಕ್ ಅಂದರೆ ಬಿಇಎಲ್ ಷೇರುಗಳು ಶೇ.2.20ರಷ್ಟು ಪ್ರಬಲ ಬೆಳವಣಿಗೆ ದಾಖಲಿಸುತ್ತಿವೆ.

ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ನಂತರ ಲಾಭಗಳಿಸುತ್ತಿವೆ ಸರ್ಕಾರಿ ಕಂಪನಿ ಷೇರುಗಳು
ನರೇಂದ್ರ ಮೋದಿ

Updated on: Aug 11, 2023 | 1:45 PM

ದೆಹಲಿ ಆಗಸ್ಟ್ 11: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗುರುವಾರ ಸಂಸತ್​​​ನಲ್ಲಿ ಅವಿಶ್ವಾಸ ನಿರ್ಣಯದ (No confidence motion )ಚರ್ಚೆಗೆ ಪ್ರತಿಕ್ರಿಯೆಯಾಗಿ ಸುಮಾರು 2 ಗಂಟೆ 13 ನಿಮಿಷಗಳ ಸುದೀರ್ಘ ಭಾಷಣ ಮಾಡಿದ್ದಾರೆ. ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಈ ಭಾಷಣದಲ್ಲಿ ಪ್ರಧಾನಿಯವರು ಸರ್ಕಾರಿ ಕಂಪನಿಗಳನ್ನೂ ಪ್ರಸ್ತಾಪಿಸಿದರು. ಷೇರುಪೇಟೆಯ ಹೂಡಿಕೆದಾರರಿಗೆ ಸಲಹೆ ನೀಡಿದ ಪ್ರಧಾನಿ ಮೋದಿ, ಪ್ರತಿಪಕ್ಷಗಳು ವಿರೋಧಿಸುವ ಸರ್ಕಾರಿ ಕಂಪನಿಗಳಲ್ಲಿ ಹೂಡಿಕೆ ಮಾಡಿ ಏಕೆಂದರೆ ಅವು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತವೆ ಎಂದು ಹೇಳಿದರು. ಪ್ರಧಾನಿ ಮೋದಿ ಎಚ್‌ಎಎಲ್ ಮತ್ತು ಎಲ್‌ಐಸಿಯ ಉದಾಹರಣೆಯನ್ನೂ ನೀಡಿದ್ದಾರೆ. ಹಾಗಾದರೆ, ನಿನ್ನೆ ಪ್ರಧಾನಿ ಮೋದಿಯವರ ಭಾಷಣದ ನಂತರ, ಸರ್ಕಾರಿ ಕಂಪನಿಗಳ ಷೇರುಗಳಲ್ಲಿನ ಹೂಡಿಕೆ ಮಾಡಿದರೆ ಅದರಲ್ಲಿ ಲಾಭಗಳಿಸಬಹುದೇ? ಇಲ್ಲವೇ? ನೋಡೋಣ ಬನ್ನಿ.

ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 232 ಅಂಕಗಳ ಕುಸಿತ ಕಾಣುತ್ತಿದೆ. ಆದರೆ ಸರ್ಕಾರಿ ಷೇರುಗಳ ಬಗ್ಗೆ ಮಾತನಾಡುವಾಗ, ಅವುಗಳು ವೇಗವಾಗಿ ಮೇಲೇರುತ್ತಿವೆ. ಅದು ಭಾರತ್ ಹೆವಿ ಎಲೆಕ್ಟ್ರಿಕ್ ಅಥವಾ ಲೈಫ್ ಇನ್ಶುರೆನ್ಸ್ ಕಾರ್ಪೊರೇಶನ್ ಅಥವಾ ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ SBI ಆಗಿರಬಹುದು. ಎಲ್ಲೆಡೆ ಇದು ಏರಿಕೆ ಕಂಡಿದೆ.

ಎಲ್ಐಸಿ ಹೂಡಿಕೆದಾರರಲ್ಲಿ ಹೆಚ್ಚಿನ ಉತ್ಸಾಹ

ವಾರದ ಕೊನೆಯ ವಹಿವಾಟಿನ ದಿನದ ಆರಂಭಿಕ ಅವಧಿಯಲ್ಲಿ, ಎಲ್ಐಸಿಯ ಷೇರುಗಳಲ್ಲಿ ಏರಿಕೆ ಕಂಡುಬಂದಿದೆ. ಬೆಳಗ್ಗೆ 10.51ರ ವೇಳೆಗೆ ಎಲ್‌ಐಸಿ ಷೇರುಗಳು ಶೇ.3.16ರಷ್ಟು ಏರಿಕೆ ದಾಖಲಿಸುತ್ತಿವೆ. ನಿನ್ನೆಯ ಭಾಷಣದಲ್ಲಿ ಪ್ರಧಾನಿ ಮೋದಿ ಎಲ್‌ಐಸಿ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಎಲ್‌ಐಸಿ ಹೂಡಿಕೆದಾರರು ಇಂದು (ಶುಕ್ರವಾರ) ಬೆಳಗ್ಗೆ ಖುಷಿಯಾಗಿದ್ದಾರೆ. ಅದೇ ಭಾರತ್ ಹೆವಿ ಎಲೆಕ್ಟ್ರಿಕ್ ಅಂದರೆ ಬಿಇಎಲ್ ಷೇರುಗಳು ಶೇ.2.20ರಷ್ಟು ಪ್ರಬಲ ಬೆಳವಣಿಗೆ ದಾಖಲಿಸುತ್ತಿವೆ. ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‌ಬಿಐ ಹೂಡಿಕೆದಾರರಲ್ಲಿಯೂ ಉತ್ಸಾಹ ಹೆಚ್ಚಾಗಿದೆ. ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಈ ಸ್ಟಾಕ್ 0.44 ರಷ್ಟು ಲಾಭವನ್ನು ಕಾಣುತ್ತಿದೆ.

ನಷ್ಟದಿಂದ ಲಾಭಕ್ಕೆ ಮರಳಿದ ಸರ್ಕಾರಿ ಕಂಪನಿ

ಶುಕ್ರವಾರ ಮತ್ತೊಂದು ಸರ್ಕಾರಿ ಸ್ಟಾಕ್ ನಲ್ಲಿ ಶೇಕಡಾ 5 ಕ್ಕಿಂತ ಹೆಚ್ಚು ಲಾಭ ದಾಖಲಾಗುತ್ತಿದೆ. ಈ ಸ್ಟಾಕ್ NBCC ಯದು. ವಾಸ್ತವವಾಗಿ ಈ ಸರ್ಕಾರಿ ಕಂಪನಿಯ ಫಲಿತಾಂಶಗಳು ನಿನ್ನೆ ಸಂಜೆಯಷ್ಟೇ ಬಂದಿವೆ. ವಿಶೇಷವೆಂದರೆ ಈ ಸರ್ಕಾರಿ ಸಂಸ್ಥೆಯು ನಷ್ಟದಿಂದ ಲಾಭದಾಯಕವಾಗಿದೆ. ಅದೇ ರೀತಿ ನಿನ್ನೆ ಪ್ರಧಾನಿ ಮೋದಿ ಕೂಡ ಸರ್ಕಾರಿ ಕಂಪನಿಗಳು ನಷ್ಟದಿಂದ ಚೇತರಿಸಿಕೊಂಡು ಲಾಭದತ್ತ ಮರಳುತ್ತಿವೆ ಎಂದು ಹೇಳಿದ್ದರು. ಈ ಕಂಪನಿಯ ಫಲಿತಾಂಶಗಳಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತದೆ.

ಇದನ್ನೂ ಓದಿ: ದೇಶವೇ ನಿಮ್ಮ ಜತೆಗಿದೆ: ಮಣಿಪುರದ ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಆಶ್ವಾಸನೆ ನೀಡಿದ ಮೋದಿ

ಈ ಸರ್ಕಾರಿ ಷೇರುಗಳಲ್ಲೂ ಆಗಿದೆ ಏರಿಕೆ

HAL ಹೆಸರಿನ ಇನ್ನೊಂದು ಸರ್ಕಾರಿ ಕಂಪನಿ ಇದೆ. ನಿನ್ನೆಯ ಭಾಷಣದಲ್ಲಿ ಪ್ರಧಾನಿ ಮೋದಿಯವರು ಕೂಡ ಈ ಕಂಪನಿಯನ್ನು ಪ್ರಸ್ತಾಪಿಸಿದ್ದರು. ಇಂದು ಈ ಕಂಪನಿಯ ಷೇರುಗಳು ಬೆಳಗಿನ ಅವಧಿಯಲ್ಲಿ ಶೇಕಡಾ 1.20 ರಷ್ಟು ಏರಿಕೆಯನ್ನು ದಾಖಲಿಸುತ್ತಿದೆ. ಅದೇ ಸಮಯದಲ್ಲಿ, ಕಳೆದ 6 ತಿಂಗಳಲ್ಲಿ ಈ ಸರ್ಕಾರಿ ಕಂಪನಿಯು ಹೂಡಿಕೆದಾರರಿಗೆ ಶೇಕಡಾ 55 ಕ್ಕಿಂತ ಹೆಚ್ಚು ಲಾಭವನ್ನು ನೀಡಿದೆ. ಇದಲ್ಲದೆ, ದೇಶದ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಪೈಕಿ ಬ್ಯಾಂಕ್ ಆಫ್ ಬರೋಡಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಷೇರುಗಳು ಬೆಳಗಿನ ಅವಧಿಯಲ್ಲಿ ವೇಗದ ಪ್ರವೃತ್ತಿಯನ್ನು ಹೊಂದಿವೆ. ಅದೇ ಪವರ್ ಗ್ರಿಡ್‌ನ ಷೇರುಗಳು ಶೇಕಡಾ 1 ಕ್ಕಿಂತ ಹೆಚ್ಚು ವೇಗದಲ್ಲಿ ವಹಿವಾಟು ನಡೆಸುವುದನ್ನು ಕಾಣಬಹುದು.

ಮತ್ತಷ್ಟು ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:39 pm, Fri, 11 August 23