AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ನರೇಂದ್ರ ಮೋದಿ ಈಗಿನ ಸವಾಲು ದಾಟುತ್ತಾರಾ? ಭಾರತದ ಭವಿಷ್ಯ ಏನು? ಇಲ್ಲಿದೆ ಜ್ಯೋತಿಷ್ಯ ವಿಶ್ಲೇಷಣೆ

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಕಡಿಮೆ ಆಗುವುದಕ್ಕೆ, ಕಳೆದುಕೊಳ್ಳುವುದಕ್ಕೆ ಒಂದೇ ಒಂದು ನಡೆ ಸಾಕು ಎನಿಸುವಂಥ ಸ್ಥಿತಿ ಇದು. ಅವರು ಆಕ್ರಮಣಕಾರಿಯಾದ ನಿರ್ಧಾರ ತೆಗೆದುಕೊಂಡಲ್ಲಿ ಪರಿಸ್ಥಿತಿ ಮತ್ತೂ ಭೀಕರವಾಗುತ್ತದೆ. ಹಾಗಿದ್ದರೆ ಅವರು ಈ ಸವಾಲನ್ನು ದಾಟುತ್ತಾರಾ?

ಪ್ರಧಾನಿ ನರೇಂದ್ರ ಮೋದಿ ಈಗಿನ ಸವಾಲು ದಾಟುತ್ತಾರಾ? ಭಾರತದ ಭವಿಷ್ಯ ಏನು? ಇಲ್ಲಿದೆ ಜ್ಯೋತಿಷ್ಯ ವಿಶ್ಲೇಷಣೆ
ಪ್ರಧಾನಿ ನರೇಂದ್ರ ಮೋದಿ & ಜ್ಯೋತಿಷ್ಯ ವಿಶ್ಲೇಷಣೆ ಸಂಬಂಧಿತ ಚಿತ್ರ
TV9 Web
| Updated By: Ganapathi Sharma|

Updated on: Aug 05, 2023 | 5:07 PM

Share

ಮುಂದಿನ ವಾರ ನರೇಂದ್ರ ಮೋದಿ ನೇತೃತ್ವದಲ್ಲಿನ ಎನ್​​ಡಿಎ ಸರ್ಕಾರದ (NDA Government) ವಿರುದ್ಧ ಕೇಂದ್ರಕ್ಕೆ ಸವಾಲು ಎನಿಸುವ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಾರತದ ಈಗಿನ ಪರಿಸ್ಥಿತಿ ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಜನಪ್ರಿಯತೆಯ ಗ್ರಾಫ್ ಹಾಗೂ ಮುಂಬರುವ ಲೋಕಸಭಾ ಚುನಾವಣೆ ಕಾರಣಕ್ಕೆ ಅವರ ಅಧಿಕಾರದ ಸ್ಥಿತಿಯನ್ನು ಇಲ್ಲಿ ಪುನರ್​ ವಿಮರ್ಶಿಸಿದ್ದೇನೆ.

ಜ್ಯೋತಿಷ್ಯದ ರೀತಿಯಿಂದ ಬಹಳ ಸವಾಲಾದ ಸನ್ನಿವೇಶದಲ್ಲಿ ನಾವಿದ್ದೇವೆ. ಇಡೀ ಜಗತ್ತಿನಾದ್ಯಂತ ಪ್ರಮುಖ ನಾಯಕರು ಎದುರಿಸುತ್ತಿರುವ ಸಮಸ್ಯೆ ಇದು. ನೀವು ಯಾವುದೇ ಪ್ರಮುಖ ನಾಯಕರ ಹೆಸರು ಹೇಳಿ, ಅವರೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಕಷ್ಟದ ಸಮಯವನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ ಸದ್ಯದ ಗ್ರಹ ಸ್ಥಿತಿ. ಇನ್ನು ಭಾರತದ ಬಗ್ಗೆ ಹೇಳುವುದಾದರೆ, ಸ್ವಾತಂತ್ರ್ಯ ಬಂದಾಗ ಕರ್ಕಾಟಕ ರಾಶಿಯಲ್ಲಿ ಶನಿ ಗ್ರಹ ಇತ್ತು. ಅಲ್ಲಿಂದ ಲೆಕ್ಕ ಹಾಕಿದರೆ ಎಂಟನೇ ಮನೆಯಲ್ಲಿ, ಅಂದರೆ ಕುಂಭ ರಾಶಿಯಲ್ಲಿ ಶನೈಶ್ಚರ ಸ್ಥಿತನಾಗಿದ್ದಾನೆ. ಇದು ಬಹಳ ಕಷ್ಟದ ಸಮಯ. ಇದು ಹೆಚ್ಚು ಕಡಿಮೆ ಮುಂದಿನ ಎರಡು ವರ್ಷಗಳ ಕಾಲ ಹೀಗೇ ಇರುತ್ತದೆ. 2025ರ ಮಾರ್ಚ್ ತನಕ ಪರಿಸ್ಥಿತಿ ಹೀಗಿರುತ್ತದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಕಡಿಮೆ ಆಗುವುದಕ್ಕೆ, ಕಳೆದುಕೊಳ್ಳುವುದಕ್ಕೆ ಒಂದೇ ಒಂದು ನಡೆ ಸಾಕು ಎನಿಸುವಂಥ ಸ್ಥಿತಿ ಇದು. ಅವರು ಆಕ್ರಮಣಕಾರಿಯಾದ ನಿರ್ಧಾರ ತೆಗೆದುಕೊಂಡಲ್ಲಿ ಪರಿಸ್ಥಿತಿ ಮತ್ತೂ ಭೀಕರವಾಗುತ್ತದೆ. ಇವತ್ತಿಗೆ ಮಣಿಪುರದಲ್ಲಿ ಇರುವಂಥ ಸ್ಥಿತಿಯು ಭಾರತದ ಬಹುತೇಕ ರಾಜ್ಯಗಳಲ್ಲಿ ಉದ್ಭವಿಸಬಹುದು. ಮುಖ್ಯವಾಗಿ ಮೂಲ ಕಾರಣವನ್ನು ಪತ್ತೆ ಹಚ್ಚಿ, ಸಮಸ್ಯೆಯನ್ನು ಶಾಶ್ವತವಾಗಿ ಇಲ್ಲವಾಗಿಸುವ ಕಡೆಗೆ ಆಲೋಚನೆ ಮಾಡಬೇಕು. ಈ ನಿಟ್ಟಿನಲ್ಲಿ ಮಾಡುವ ಪ್ರಯತ್ನಗಳಲ್ಲೇ ಬಹಳ ಆಕ್ಷೇಪ, ಟೀಕೆಗಳು ವ್ಯಕ್ತವಾಗುತ್ತವೆ.

ಎರಡು ವರ್ಷಗಳು ಸಹ ದೇಶದಲ್ಲಿ ದ್ವೇಷ- ದಳ್ಳುರಿ

ಆದರೆ, ರಾಜಕೀಯ ವಿಶ್ಲೇಷಕರೋ ಅಥವಾ ವಿಪಕ್ಷದಲ್ಲಿ ಇರುವವರೋ ಅಂದಾಜಿಸುತ್ತಿರುವಂತೆ ಬಿಜೆಪಿ ಅಧಿಕಾರವನ್ನೇನೂ ಕಳೆದುಕೊಳ್ಳುವುದಿಲ್ಲ. ಬಹುಮತಕ್ಕೆ ಬೇಕಾದಷ್ಟು ಸ್ಥಾನಗಳನ್ನು ಭಾರತೀಯ ಜನತಾ ಪಕ್ಷವು ಸುಲಭವಾಗಿ ಗೆದ್ದುಕೊಳ್ಳುತ್ತದೆ. ಅಲ್ಲಿಂದ ಎರಡು ವರ್ಷಗಳ ಕಾಲ ನರೇಂದ್ರ ಮೋದಿಯವರೇ ಅಧಿಕಾರವನ್ನು ನಡೆಸುತ್ತಾರೆ. ಆಗಲೂ ಅಂದರೆ ಆ ಎರಡು ವರ್ಷಗಳು ಸಹ ದೇಶದಲ್ಲಿ ದ್ವೇಷ- ದಳ್ಳುರಿಗಳು ಕಂಡುಬರುತ್ತವೆ.

ಆದರೆ, ಅಲ್ಲಿಂದ ಮುಂದೆ, ಅಂದರೆ ಎರಡು ವರ್ಷಗಳ ನಂತರ ಈ ದೇಶಕ್ಕೆ ನರೇಂದ್ರ ಮೋದಿ ಅವರಿಗಿಂತ ಪ್ರಬಲವಾದ ನಾಯಕ ಸಿಗುತ್ತಾರೆ. ಆತ ಸರ್ವಸಂಗ ಪರಿತ್ಯಾಗಿ. ಆತ ಕಠಿಣ ಕ್ರಮ ತೆಗೆದುಕೊಳ್ಳುವುದಕ್ಕೆ ಯಾವುದೇ ಹಿಂದೆ- ಮುಂದೆ ಆಲೋಚಿಸುವುದಿಲ್ಲ. ತಪ್ಪು ಮಾಡಿದವರಿಗೆ ಕಠಿಣ ರೀತಿಯ ಶಿಕ್ಷೆಗಳು ನೀಡಲಾಗುತ್ತದೆ. ಈ ಮಧ್ಯ ಕೆಲವು ಪ್ರಮುಖ ಶಾಸನಗಳು, ಅಂದರೆ ಕಾಯ್ದೆಗಳು ಜಾರಿಗೆ ಬರುತ್ತವೆ. ಅದರಿಂದ ಒಂದಿಷ್ಟು ಶಾಂತಿ ಕದಡುವಂಥ ವಾತಾವರಣ ಸೃಷ್ಟಿ ಆಗುತ್ತದೆ.

ಶತ್ರು ಬಾಧೆ ವಿಪರೀತ

ಸದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಗೋಚರ ರೀತಿಯಲ್ಲಿ ಲಗ್ನ, ಲಗ್ನದ ರಾಶ್ಯಾಧಿಪ (ಕುಜ) ಇರುವ ರಾಶಿಗೆ ಷಷ್ಟದಲ್ಲಿ (ಆರನೇ ಮನೆಯಲ್ಲಿ) ಗುರು ಸಂಚಾರ. ಇದರರ್ಥ ಏನೆಂದರೆ, ಆಯ್ಕೆಗಳು ಬಹಳ ಸೂಕ್ಷ್ಮವಾಗಿರುತ್ತದೆ. ಪರಿಸ್ಥಿತಿ ಸುಧಾರಿಸುವುದಕ್ಕೆ ತೆಗೆದುಕೊಳ್ಳುವ ಯಾವುದೇ ಕ್ರಮ ಬೂಮ್ ರಾಂಗ್ ಆಗಬಹುದು. ಶತ್ರು ಬಾಧೆ ವಿಪರೀತ ಆಗುತ್ತದೆ. ಅವಮಾನ, ಹಿಂಸೆಗಳು ಆಗುತ್ತಿರುತ್ತದೆ.

ಇದನ್ನೂ ಓದಿ: 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಆಗಸ್ಟ್ 6ರಂದು ಮೋದಿಯವರಿಂದ ಶಂಕುಸ್ಥಾಪನೆ

ಇದು 2024ನೇ ಇಸವಿಯ ಮೇ ತಿಂಗಳ ತನಕ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ಜಾತಕ ಪ್ರಕಾರ, ಅವರು ದೀರ್ಘಾವಧಿ ಪರಿಣಾಮಗಳ ಬಗ್ಗೆಯೇ ಹೆಚ್ಚು ಯೋಚಿಸುವಂಥವರು. ಆದ್ದರಿಂದ ಟೀಕೆ, ಆಕ್ಷೇಪ. ಅವಮಾನಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಕಾಲಾಕಾಲದ ನಡವಳಿಕೆ ಹೇಗಿರಬೇಕು ಎಂಬ ವಿವೇಚನೆ ಈ ಜಾತಕರಿಗೆ ಇರುತ್ತದೆ.

ಬಿಜೆಪಿಗೆ ಗೆಲುವು

ಇನ್ನು ಮುಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ವೃಷಭ ಗುರುವು ಕನ್ಯಾರಾಶಿ ವೀಕ್ಷಣೆ, ನರೇಂದ್ರ ಮೋದಿಯವರ ಲಗ್ನ ವೀಕ್ಷಣೆ (ವೃಶ್ಚಿಕ), ತೃತೀಯ ವೀಕ್ಷಣೆ, ಸಪ್ತಮ ಸ್ಥಿತಿಯಲ್ಲಿ ಲಾಭದಾಯಕನಾಗುತ್ತಾನೆ. ಶತ್ರುಗಳು ಮುಂದಿನ ಚುನಾವಣೆಯಲ್ಲಿ ನಾವೇ ಗೆಲ್ಲೋದು ಎಂದು ತೊಡೆ ತಟ್ಟಿದರೂ ಗೆಲುವು ಮೋದಿಯದ್ದೇ. ಯಾಕೆಂದರೆ ಈ ಶತ್ರುಗಳು ಈಗಿನ ಮೋದಿಯವರ ಜಾತಕದಲ್ಲಿ (ಷಷ್ಟ ಗುರು) ಗೋಚರ ಪ್ರಕಾರ ಗಲಭೆ ಎಬ್ಬಿಸುವಂಥದ್ದು ತಾರಕಕ್ಕೇರಬಹುದು. ಕೊನೆಯ ಅಸ್ತ್ರ ಕೋಮು ಗಲಭೆ, ಬೆಂಕಿ, ಬಾಂಬ್ ಇತ್ಯಾದಿಗಳ ಮೂಲಕ ಭೀಕರ ಸಮಸ್ಯೆ ತರಬಹುದು. ಮೋದಿಯವರು ಸಾವಧಾನದಿಂದ ಗಲಭೆಗಳ ಮೂಲ ಶೋಧಿಸಿ ಪ್ರಜೆಗಳ ಮುಂದೆ ಇಟ್ಟೇ ಇಡುತ್ತಾರೆ. ಇದುವೇ ಅದ್ಭುತ ಗೆಲುವಿಗೆ ಕಾರಣವೂ ಆಗುತ್ತದೆ. ವಿಪಕ್ಷಗಳಿಗೆ ಅಧಿಕಾರ ಬರಲು ಸಾಧ್ಯವೇ ಇಲ್ಲ. ಈಗಿನ ವಿದ್ಯಮಾನ (ಗಲಭೆಗಳಿಗೆ) ಕೇವಲ ಮೋದಿಯ ಜಾತಕದ ಗೋಚರ ಎಂದು ಹೇಳಲಾಗದು. ಆರಂಭದಲ್ಲೇ ತಿಳಿಸಿದಂತೆ, ಭಾರತಕ್ಕೆ ಸ್ವಾತಂತ್ರ್ಯ ಲಭಿಸುವ ಸಂದರ್ಭದ ಗ್ರಹ ಸ್ಥಿತಿಯಲ್ಲಿ ಕರ್ಕರಾಶಿಯಲ್ಲಿ ಶನಿ ಇದ್ದ. ಈಗ ಅದೇ ಶನಿಗೆ ಮಂದಾಷ್ಟಮ (ಕುಂಭ) ಶನಿ ಇರುವುದರಿಂದ ಉಂಟಾಗುವ ಗಲಾಟೆಗಳನ್ನು ನೋಡುವ, ನಿಭಾಯಿಸುವ, ಅನುಭವಿಸುವ ಯೋಗ ಮೋದಿಗೂ ಇದೆ.

ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ) (ಇಲ್ಲಿ ಪ್ರಕಟವಾಗಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ. ಇದು ಟಿವಿ9 ನ ಅಭಿಪ್ರಾಯ ಆಗಿರುವುದಿಲ್ಲ. -ಸಂಪಾದಕರು)

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ