Weekly Horoscope: ವಾರಭವಿಷ್ಯ, ಈ ವಾರ ಪ್ರತಿಕೂಲ ವಾತಾವರಣದ ನಡುವೆಯೂ ಅನುಕೂಲಕರವಾದ ಸಂಗತಿಗಳು ಈ ರಾಶಿಯವರಿಗೆ ಸಿಗಲಿದೆ
ದ್ವಾದಶ ರಾಶಿಗಳ ವಾರ ಭವಿಷ್ಯ: 2023ರ ಆಗಸ್ಟ್ 6 ರಿಂದ ಆಗಸ್ಟ್ 12 ರ ವರೆಗಿನ ವಾರ ಭವಿಷ್ಯದಲ್ಲಿ (Weekly Horoscope) ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ಆಗಸ್ಟ್ 6 ರಿಂದ ಆಗಸ್ಟ್ 12 ರ ವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.
ಮೇಷ ರಾಶಿ: ಈ ವಾರದಲ್ಲಿ ನೀವು ಶುಭಫಲದ ನಿರೀಕ್ಷೆಯಲ್ಲಿ ಇರಬಹುದು. ಪಂಚಮದಲ್ಲಿ ಇರುವ ಶುಕ್ರನು ಚತುರ್ಥಕ್ಕೆ ಬಂದು ಸೂರ್ಯನ ಜೊತೆ ಇರುವನು. ಮಂಗಲ ಕಾರ್ಯಗಳಿಗೆ ನೂತನ ಗೃಹನಿರ್ಮಾಣ ಹಾಗೂ ವಿವಾಹ ಮೊದಲಾದ ಕಾರ್ಯಗಳಿಗೆ ನಿಷೇಧವಿರಲಿದೆ. ಅದನ್ನು ಬಿಟ್ಟರೆ ಉಳಿದಂತೆ ಶುಕ್ರನು ಶುಭಫಲವನ್ನೇ ಕೊಡುವನು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವು ಇರಲಿದೆ. ದಾಂಪತ್ಯದಲ್ಲಿ ಸರಸಸಲ್ಲಾಪಗಳು ಈ ಸಮಯದಲ್ಲಿ ಅಧಿಕವಾಗಿ ನಡೆಯಬಹುದು. ಸೂರ್ಯನೂ ಚಂದ್ರನ ರಾಶಿಯಲ್ಲಿ ಇದ್ದ ಕಾರಣ ದಾಂಪತ್ಯ ಏರ್ಪಡುವುದು. ಜೊತೆಗೆ ಸಪ್ತಮ ಮತ್ತು ದ್ವಿತೀಯಾಧಿಪತಿಯಾದ ಶುಕ್ರನು ಕಲತ್ರಕಾರಕನಾದ ಕಾರಣ ನಿಮಗೆ ಹೆಚ್ಚು ಅನುಕೂಲವಿರಲಿದೆ. ಈ ವಾರವನ್ನು ನೀವು ನೆಮ್ಮದಿಯಿಂದ ಕಳೆಯಬಹುದು.
ವೃಷಭ ರಾಶಿ: ಆಗಸ್ಟ್ ತಿಂಗಳ ಎರಡನೇ ವಾರವಾಗಿದ್ದು ನಿಮಗೆ ಅಷ್ಟಾಗಿ ಶುಭವು ಇರದು. ಕುಜ ಹಾಗೂ ಬುಧರ ಜೊತೆಗಿದ್ದ ಶುಕ್ರನು ಈ ವಾರದ ಮಧ್ಯದಲ್ಲಿ ತೃತೀಯಸ್ಥಾನಕ್ಕೆ ಬರಲಿದ್ದಾನೆ. ಸೂರ್ಯನ ಜೊತೆಗೆ ಸೇರಿಕೊಳ್ಳುವನು. ಕಲತ್ರಕಾರಕನಾದ ಶುಕ್ರನು ತೃತೀಯದಲ್ಲಿ ಇದ್ದಕರಾಣ ಪತ್ನಿಯ ಅಥವಾ ಪತಿಯ ಪ್ರತಿಷ್ಠೆಯು ಹೆಚ್ಚಾದೀತು. ಸಹೋದರರ ನಡುವೆ ಹೊಂದಾಣಿಕೆಯ ಕೊರತೆ ಕಾಣಿಸಿಬಹುದು. ಸಪ್ತಮಾಧಿಪತಿಯಾದ ಕುಜನು ಪಂಚಮದಲ್ಲಿ ಇರಲುದ್ದಾನೆ. ಬುಧನೂ ಇಲ್ಲಿರುವ ಕಾರಣ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಹೆಚ್ಚು ಅನುಕೂಲವೂ ಇರಲಿದೆ. ವಿವಾಹಕ್ಕೆ ಸಂಬಂಧಿಸಿದಂತೆ ನೋಡುವುದಾರೆ ವಿವಾಹಕ್ಕೇ ವಧೂ ಅಥವಾ ವರರನ್ನು ಅನ್ವೆಷಣೆ ಮಾಡುತ್ತಿದ್ದರೆ ಬಂಧುಗಳ ಮಧ್ಯದಲ್ಲಿ ವಿವಾಹವು ಕೂಡಿಬರಲಿದೆ. ಗುರುವಿನ ಅನುಗ್ರಹದ ಅವಶ್ಯಕತೆ ನಿಮಗೆ ಇದೆ. ಗುರುಚರಿತ್ರೆಯ ಪಠನವನ್ನೋ ಗುರುಸಮಾಧಿಗೆ ನಮಸ್ಕಾರವನ್ನೂ ಗುರುವಾರದಂದು ಮಾಡಿ.
ಮಿಥುನ ರಾಶಿ: ಈ ವಾರವು ಹಣಕಾಸಿನ ವಿಚಾರದಲ್ಲಿ ಕೆಲವು ಖರ್ಚುಗಳು ಕಾಣಿಸುವುದು. ದ್ವಾದಶಾಧಿಪತಿಯೂ ಹಾಗೂ ಪಂಚಮಾಧಿಪತಿಯೂ ಆದ ಶುಕ್ರನು ದ್ವಿತೀಯಕ್ಕೆ ಬಂದು ಸೂರ್ಯನ ಜೊತೆಗಿರುವನು. ಸೌಂದರ್ಯವರ್ಧಕ ವಸ್ತುಗಳಿಗೆ ಹೆಚ್ಚು ಪ್ರಾಧಾನ್ಯವು ಸಿಗಲಿದೆ. ಆಭರಣ ಮಾರಾಟಗಾರರೂ ಗ್ರಾಹಕರೂ ಈ ವಾರ ಖುಷಿಪಡುವರು. ಸರ್ಕಾರದ ಕಡೆಯಿಂದ ಬರುವ ಹಣವನ್ನು ನೀವು ಈ ವಾರ ನಿರೀಕ್ಷಿಸಬಹುದು. ಕುಜನು ತೃತೀಯದಲ್ಲಿ ಇರುವ ಕಾರಣ ನಿಮ್ಮ ಕೆಲಸಗಳು ಒಂದಾದಮೇಲೆ ಒಂದರಂತೆ ಮುಕ್ತಾಯವಾಗಬಹುದು. ಬೌದ್ಧಿಕ ವಿಚಾರಗಳ ಮೇಲೆ ನೀವು ಹಿಡಿತ ಸಾಧಿಸಬಹುದು.
ಕಟಕ ರಾಶಿ: ಈ ತಿಂಗಳ ಎರಡನೇ ವಾರವು ಸ್ವಲ್ಪಮಟ್ಟಿಗೆ ಉದ್ವೇಗದ ಹಾಗೂ ಒತ್ತಡದ ವಾರವೆಂದೇ ಹೇಳಬೇಕು. ದ್ವಿತೀಯದಲ್ಲಿರುವ ಶುಕ್ರನು ಮಧ್ಯದಲ್ಲಿ ಪ್ರಥಮಸ್ಥಾನಕ್ಕೆ ಬರಲಿದ್ದಾನೆ. ಸೂರ್ಯನ ಜೊತೆಗಿದ್ದು ನಿಮ್ಮ ದೇಹಕ್ಕೆ ತೊಂದರೆಗಳನ್ನು ಕೊಡಬಹುದು. ನರಕ್ಕೆ ಸಂಬಂಧಿಸಿದಂತೆ ತೊಂದರೆಗಳು ಅಧಿಕವಾಗಬಹುದು. ವೈದ್ಯರನ್ನು ಭೇಟಿಯಾಗುವ ಸಂದರ್ಭವೂ ಬರಬಹುದು. ಎಚ್ಚರಿಕೆಯಿಂದ ಇರಬೇಕಾದೀತು. ಲಾಭಾಧಿಪತಿಯೂ ಚತುರ್ಥಾಧಿಪತಿಯೂ ಆಗಿರುವ ಶುಕ್ರನು ಪ್ರೇಮದಲ್ಲಿ ಇರುವುದರಿಂದ ಕುಟುಂಬದಿಂದ ಸಹಾಯವು ಸಿಗಲಿದೆ. ವಿವಾಹಕ್ಕೆ ಸಂಬಂಧಿಸಿದಂತೆ ನಿಮಗೆ ಮನೆಯವರು ಸಹಾಯವನ್ನು ಮಾಡುವರು. ತಂದೆಯಿಂದ ಲಾಭವನ್ನು ನೀವು ನಿರೀಕ್ಷಿಸಬಹುದು.
ಸಿಂಹ ರಾಶಿ: ಈ ವಾರ ಪ್ರತಿಕೂಲ ವಾತಾವರಣದ ನಡುವೆಯೂ ಅನುಕೂಲಕರವಾದ ಸಂಗತಿಗಳು ನಿಮಗೆ ಸಿಗಲಿದೆ. ತೃತೀಯ ಹಾಗೂ ದಶಮಸ್ಥಾನದ ಅಧಿಪತಿಯು ದ್ವಾದಶದಲ್ಲಿ ಇರುವ ಕಾರಣ ಈ ವಾರ ವೃತ್ತಿಯಲ್ಲಿ ನಿಮಗೆ ಕಿರಿಕಿರಿ ಎನಿಸಬಹುದು. ನಿಮ್ಮ ಸಾಮರ್ಥ್ಯವು ಗೊತ್ತಾಗದೇ ಇರಲಿದೆ. ದ್ವಿತೀಯ ಮತ್ತು ಏಕಾದಶದ ಅಧಿಪತಿಯಾದ ಬುಧನು ಪ್ರಥಮಸ್ಥಾನದಲ್ಲಿ ಕುಜನ ಜೊತೆಗೆ ಇದ್ದು ಬಂಧುಗಳ ವಿಚಾರದಲ್ಲಿ ಅಸಮಾಧಾನ ಬರುವಂತೆ ಮಾಡುವನು. ಚತುರ್ಥ ಮತ್ತು ನವಮಾಧಿಪತಿಯಾದ ಕುಜನು ಸೂರ್ಯನ ಮನೆಯಲ್ಲಿ ಇದ್ದು ನಿಮಗೆ ಉಂಟಾಗುವ ದೇಹಘಾತವನ್ನು ತಡೆಯುವನು. ತಂದೆಯ ಕಡೆಯಿಂದ ಬೆಂಬಲವು ಕಡಿಮೆ ಆಗಬಹುದು. ಅದಕ್ಕಾಗಿ ನೀವು ತಾಳ್ಮೆಯನ್ನು ಕಳೆದುಕೊಳ್ಳುವುದು ಬೇಡ. ಸಹನಶೀಲರಾಗಿ ಮುಂದುರಿಯಿರಿ.
ಕನ್ಯಾ ರಾಶಿ: ಈ ವಾರ ನಿಮಗೆ ಮಿಶ್ರಫಲವು ಅಧಿಕವಾಗಿ ಇರುವುದು. ದಶಮಾಧಿಪತಿಯಾದ ಬುಧನು ಕುಜನ ಜೊತೆಗೆ ದ್ವಾದಶದಲ್ಲಿ ಇದ್ದು ನಿಮಗೆ ಹಲವು ರೀತಿಯಲ್ಲಿ ಮಾನಸಿಕ ಏರಿಳಿತಗಳನ್ನು ತರಿಸಬಹುದು. ವಿದ್ಯಾಭ್ಯಾಸದಲ್ಲಿ ನೀವು ಕುತಂತ್ರವನ್ನು ಬಳಸುವ ಸಾಧ್ಯತೆ ಇದೆ. ಅಥವಾ ವಿದ್ಯಾಭ್ಯಾಸಕ್ಕೆ ತೊಂದರೆಗಳು ನಾನಾ ರೀತಿಯಲ್ಲಿ ಬರಬಹುದು. ಓದಲು ನೀವು ಹಿಂದಡಿಬಿಡುವಿರಿ. ದ್ವಿತೀಯಾಧಿಪತಿಯೂ ನವಮಾಧಿಯೂ ಆಗಿರುವ ಶುಕ್ರನು ಏಕಾದಶದಲ್ಲಿ ಇರುವ ಕಾರಣ ಯಾವ ಕೆಲಸಕ್ಕೂ ತೊಂದರೆಯಾಗದು. ತೃತೀಯ ಮತ್ತು ಅಷ್ಟಮಾಧಿಪತಿಯಾದ ಕುಜನು ದ್ವಾದಶದಲ್ಲಿ ರವಿಯ ಮನೆಯಲ್ಲಿ ಇದ್ದು ಉಪಕರಣ, ಯಂತ್ರ ಇವುಗಳಿಂದ ತೊಂದರೆಯು ಉಂಟಾಗುವಂತೆ ಮಾಡುವನು. ಸುಬ್ರಹ್ಮಣ್ಯ ಹಾಗೂ ಮಹಾವಿಷ್ಣುವಿನ ಆರಾಧನೆಯನ್ನು ಮಾಡಬೇಕಾಗುವುದು.
ತುಲಾ ರಾಶಿ: ಈ ವಾರ ಹೆಚ್ಚು ಶುಭಸಮಾಚಾರಗಳನ್ನು ಕೇಳುವಿರಿ ಹಾಗೂ ನೀವು ಅನುಭವಿಸುವಿರಿ. ಸಪ್ತಮದಲ್ಲಿ ರಾಹು ಸಹಿತನಾಗಿ ಇರುವ ಗುರು ನಿಮಗೆ ವಿವಾಹಯೋಗವನ್ನು ತಂದುಕೊಡುವನು. ಏಕಾದಶಾಧಿಪತಿಯಾದ ಸೂರ್ಯನು ದಶಮದಲ್ಲಿ ಇದ್ದು, ಶುಕ್ರನೂ ಜೊತೆಯಾಗುವನು. ಇದು ನಿಮ್ಮ ವೃತ್ತಿಜೀವನಕ್ಕೆ ಹೆಚ್ಚು ಪೂರಕವಾಗುವುದು. ಸ್ಥಾನಲಾಭವೂ ಈ ಯೋಗದಿಂದ ಸಿಗಲಿದೆ. ದ್ವಿತೀಯ ಹಾಗೂ ಸಪ್ತಮಾಧಿಪತಿಯಾದ ಕುಜನು ಏಕಾದಶದಲ್ಲಿ ಇದ್ದು ನಿಮ್ಮ ಸುಖವನ್ನು ಹೆಚ್ಚು ಮಾಡಿಸುವನು. ಸಂಗಾತಿಯಿಂದ ಸುಖವನ್ನು ನೀವು ಪಡೆಯುವಿರಿ. ನವಮ ಮತ್ತು ದ್ವಾದಶಾಧಿಪತಿಯಾದ ಬುಧನು ಏಕಾದಶದಲ್ಲಿ ಬಂಧುಗಳಿಂದ ಮಿಶ್ರಫಲಗಳನ್ನು ಪಡೆಯುವನು.
ವೃಶ್ಚಿಕ ರಾಶಿ: ಈ ವಾರ ನಿಮಗೆ ಹೆಚ್ಚಿನ ಶುಭವು ಸಿಗಲಿದೆ. ದ್ವಾದಶ ಹಾಗೂ ಸಪ್ತಮಾಧಿಪತಿಯಾದ ಶುಕ್ರನು ನವಮಸ್ಥಾನದಲ್ಲಿ ಇದ್ದಾನೆ. ಸಂಗಾತಿಯ ನಡುವೆ ವಾದ ವಿವಾದಗಳು ನಡೆದು ಪ್ರಶಾಂತವಾಗುತ್ತದೆ. ಅಷ್ಟಮ ಮತ್ತು ಏಕಾದಶಾಧಿಪತಿಯಾದ ಬುಧನು ದಶಮದಲ್ಲಿ ಇದ್ದು ವೃತ್ತಿಗೆ ಬಲವನ್ನು ತುಂಬುವ ಕೆಲಸವನ್ನು ಮಾಡುವಿರಿ. ಬಂಧುಗಳ ಸಹಾಯವನ್ನು ನೀವು ಪಡೆಯಬಹುದು. ಷಷ್ಠದಲ್ಲಿ ದ್ವಿತೀಯ ಹಾಗೂ ಪಂಚಮಾಧಿಪತಿಯಾದ ಗುರು ರಾಹುವಿನ ಜೊತೆಗೆ ಇದ್ದು ನಿಮ್ಮ ಕುಟುಂಬದ ವಿಚಾರದಲ್ಲಿ ಹೆಚ್ಚು ವೈಮನಸ್ಸು ಉಂಟಾಗುವಂತೆ ಮಾಡುವನು. ದ್ವಾದಶದಲ್ಲಿ ಕೇತುವಿದ್ದು ಅನಗತ್ಯ ವಿಚಾರದಲ್ಲಿ ಮೂಗು ತೂರಿಸುವುದು, ಹಣವನ್ನು ಖರ್ಚು ಮಾಡಿಸುವುದು, ತಿರುಗಾಟಗಳನ್ನು ಮಾಡಿಸುವನು.
ಧನು ರಾಶಿ: ಇದು ಆಗಸ್ಟ್ ತಿಂಗಳ ಎರಡನೇ ವಾರವಾಗಿದ್ದು ಗ್ರಹಗತಿಗಳಲ್ಲಿ ಅತಿಯಾದ ಬದಲಾವಣೆ ಇಲ್ಲದಿದ್ದರೂ ಆದ ಬದಲವಾಣೆಯು ನಿಮ್ಮ ಜೀವನಕ್ಕೆ ಅನುಕೂಲವನ್ನೇ ಮಾಡಿಕೊಡುವುದು. ದಶಮ ಮತ್ತು ಸಪ್ತಮಾಧಿಪತಿಯಾದ ಬುಧನು ನವಮದಲ್ಲಿ ಇದ್ದು ವಿದ್ಯಾಭ್ಯಾಸ ಹಾಗೂ ಗೌರವವನ್ನು ತಂದುಕೊಡುವನು. ಬಂಧುಗಳ ಸಹವಾಸವನ್ನು ಹೆಚ್ಚಿಸುವುವನು. ಪಂಚಮ ಹಾಗೂ ದ್ವಾದಶಾಧಿಪತಿಯಾದ ಕುಜನು ನವಮದಲ್ಲಿ ಇದ್ದು ಯಂತ್ರೋಪಕರಣದ ವ್ಯಾಪಾರಗಳನ್ನು ಮಾಡುವವರು ಲಾಭವನ್ನು ಪಡೆಯುವರು. ಭೂಮಿಗೆ ಸಂಬಂಧಿಸದ ವಸ್ತುಗಳಿಂದ ಅಧಿಕ ಲಾಭವು ಸಿಗುವುದು. ನವಮಾಧಿಪತಿಯಾದ ಸೂರ್ಯನು ಷಷ್ಠದಲ್ಲಿ ಇರುವ ಕಾರಣ ತಂದೆಯ ಅಥವಾ ಮನೆಯ ಹಿರಿಯರ ಆರೋಗ್ಯದ ಮೇಲೆ ಹೆಚ್ಚು ಗಮನವಿರಲಿ. ಪಂಚಮದಲ್ಲಿ ಇರುವ ಗುರು ಹಾಗೂ ರಾಹುವುದು ಮಕ್ಕಳಿಂದ ಶುಭಾಶುಭ ಸಮಾಚಾರವನ್ನು ತಿಳಿಸುವನು.
ಮಕರ ರಾಶಿ: ಈ ವಾರ ನೀವು ಮಿಶ್ರಫಲದ ನಿರೀಕ್ಷೆಯಲ್ಲಿ ಇರಬಹುದು. ದ್ವಾದಶ ಹಾಗೂ ತೃತೀಯಾಧಿಪತಿಯಾದ ಗುರುವು ಚತುರ್ಥದಲ್ಲಿ ಇದ್ದು ಕುಟುಂಬದಲ್ಲಿ ದುಖವು ಸಿಗದು. ರಾಹುವೂ ಇರುವುದರಿಂದ ಸಮಾಧನಾನದ ವಾತಾವರಣವು ನಿಮಗೆ ಸಿಗದು. ಅಷ್ಟಮದಲ್ಲಿ ಪಂಚಮ ಮತ್ತು ದಶಮಾಧಿಪತಿಯಾದ ಶುಕ್ರನು ಸಪ್ತಮಕ್ಕೆ ಬರಲಿದ್ದು ವಿವಾಹ ಕಾರ್ಯಗಳು ನಡೆಲಿವೆ. ಸೂರ್ಯನ ಜೊತೆ ಇರುವ ಕಾರಣ ಸಂಗಾತಿಗಳ ನಡುವೆ ಸಣ್ಣ ವಿಚಾರಕ್ಕೆ ವೈಮನಸ್ಯ ಉಂಟಾಗಿ ವಾದಗಳು ನಡೆಯಬಹುದು. ತೃತೀಯ ಮತ್ತು ಏಕಾದಶಾಧಿಪತಿಯಾದ ಕುಜನು ಅಷ್ಟಮದಲ್ಲಿ ಇರುವ ಕಾರಣ ವಾಹನ ಭೀತಿ, ಅಪಘಾತ ಇವುಗಳು ನಿವಾರಣೆಯಾಗಲಿದೆ. ನಿಮಗೆ ಸಾಡೇಸಾಥ್ ಶನಿಯು ಅಂತಿ ಹಂತದಲ್ಲಿ ಶನಿಯ ಅನುಗ್ರಹಕ್ಕೆ ಬೇಕಾದ ಮಂಗಲ ಕಾರ್ಯಗಳನ್ನು ಮಾಡಿ. ಶನೈಶ್ಚರನಿಗೆ ದೀಪ ಬೆಳಗುವುದನ್ನು ಮಾರೆಯಬೇಡಿ. ಮುಂದೇ ಅವನೇ ನಿಮಗೆ ದಾರಿದೀಪವಾಗುವನು.
ಕುಂಭ ರಾಶಿ: ಈ ವಾರವು ನೆಮ್ಮದಿಯು ಕಡಿಮೆ ಇರುವ ವಾರವೆಂದೇ ಹೇಳಬಹುದು. ಸಪ್ತಮದಲ್ಲಿ ಇರುವ ಶುಕ್ರನು ಷಷ್ಠಕ್ಕೆ ಬರಲಿದ್ದು ಸಂಗಾತಿಯಿಂದ ಸುಖವು ಕಡಿಮೆ ಆಗಬಹುದು. ಸಿಟ್ಟುಗೊಂಡು ದೂರ ನಡೆಯಬಹುದು. ತೃತೀಯ ಹಾಗೂ ದಶಮಾಧಿಪತಿಯಾದ ಕುಜನು ಸಪ್ತಮದಲ್ಲಿ ಇರುವ ಕಾರಣ ವೃತ್ತಿಯನ್ನು ಅದರಲ್ಲಿ ತಂತ್ರಜ್ಞರಾಗಿದ್ದಲ್ಲಿ ನಿಮಗೆ ಶುಭವಿದೆ. ಪಂಚಮ ಮತ್ತು ಅಷ್ಟಮಾಧಿಪತಿಯಾದ ಬುಧನು ಕುಜನ ಜೊತೆ ಸಪ್ತಮದಲ್ಲಿ ಇರುವುದರಿಂದ ಆರೋಗ್ಯದಲ್ಲಿ ತೊಂದರೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ ಆಗಬಹುದು. ಷಷ್ಠದಲ್ಲಿ ಸೂರ್ಯನಿರುವ ಕಾರಣ ತಂದೆಯ ಜೊತೆ ವೈಮನಸ್ಯ ಬರಬಹುದು. ಸಾಡೇಸಾಥ್ ನ ಮಧ್ಯ ಅವಧಿಯು ನಿಮಗೆ ನಡೆಯುತ್ತಿದ್ದು ದೇವತಾ ಕಾರ್ಯವನ್ನು ಬಲವಾದ ಮನಸ್ಸು ತಂದುಕೊಂಡು ಮಾಡಬೇಕಿದೆ.
ಮೀನ ರಾಶಿ: ಆಗಷ್ಟ್ ತಿಂಗಳ ಎರಡನೇ ವಾರವು ಇದಾಗಿದ್ದು ಕೆಲವು ಬದಲಾವಣೆಗಳನ್ನು ನೀವು ಈ ವಾರದಲ್ಲಿ ಕಾಣಬಹುದು. ಷಷ್ಠದಲ್ಲಿ ಇರುವ ಶುಕ್ರನು ಪಂಚಮಕ್ಕೆ ಬರುವನು. ಸೂರ್ಯನ ಜೊತೆಗೆ ಇರುವ ಕಾರಣ ಮಕ್ಕಳ ವಿಚಾರದಲ್ಲಿ ನಿಮಗೆ ಒಳ್ಳೆಯ ಸುದ್ದಿಗಳು ಬರಬಹುದು. ದ್ವಿತೀಯ ಹಾಗೂ ನವಮಾಧಿಪತಿಯಾದ ಕುಜನು ಷಷ್ಠದಲ್ಲಿ ಇದ್ದು ಶತ್ರುಗಳನ್ನು ನಾಶ ಮಾಡುವನು. ಷಷ್ಠದಲ್ಲಿ ಇರುವ ಬುಧನು ಬಂಧುಗಳಿಂದ ದೂರವಿರುವಂತೆ ಮಾಡುವನು. ವಿದ್ಯಾಭ್ಯಾಸಕ್ಕೆ ಕುಳಿತುಕೊಳ್ಳಲು ಬಿಡನು. ಗುರುವು ದ್ವಿತೀಯದಲ್ಲಿ ಇದ್ದರೂ ರಾಹುವಿನ ಪ್ರಭಾವವು ಇರುವ ಕಾರಣ ಕುಟುಂಬದಲ್ಲಿ ಹಿರಿಯರ ಜೊತೆ ವಾಗ್ವಾದಗಳು ನಡೆಯಬಹುದು. ಅಷ್ಟಮದಲ್ಲಿ ಕೇತುವು ಇರುವ ಕಾರಣ ಆರೋಗ್ಯವು ದೃಢವಾಗಿ ಇರುವುದು.
-ಲೋಹಿತಶರ್ಮಾ (ವಾಟ್ಸ್ಆ್ಯಪ್ 8762924271)