Dubai Expo 2020: ವೈವಿಧ್ಯಮಯ ಭಾರತದಲ್ಲಿದೆ ಅಗಣಿತ ಅವಕಾಶ: ದುಬೈ ಎಕ್ಸ್​ಪೊಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ

PM Narendra Modi: ಭಾರತವು ವೈವಿಧ್ಯಮಯ ದೇಶ. ಇಲ್ಲಿ ಪ್ರತಿಭಾವಂತರು ದೊಡ್ಡಸಂಖ್ಯೆಯಲ್ಲಿದ್ದಾರೆ. ಹೂಡಿಕೆಗೆ ಪೂರಕವಾದ ವಾತಾವರಣವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Dubai Expo 2020: ವೈವಿಧ್ಯಮಯ ಭಾರತದಲ್ಲಿದೆ ಅಗಣಿತ ಅವಕಾಶ: ದುಬೈ ಎಕ್ಸ್​ಪೊಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ
ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 01, 2021 | 9:58 PM

ದೆಹಲಿ: ದುಬೈನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಎಕ್ಸ್​ಪೊ 2020 (Expo 2020) ಹೂಡಿಕೆದಾರರ ಸಮಾವೇಶದಲ್ಲಿ ಭಾರತದ ಪೆವಿಲಿಯನ್​ಗೆ ವಿಶ್ವದ ಎಲ್ಲ ಉದ್ಯಮಿಗಳು ಮತ್ತು ಹೂಡಿಕೆದಾರರನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೊ ಸಂದೇಶದ ಮೂಲಕ ಆಹ್ವಾನಿಸಿದ್ದಾರೆ. ಭಾರತವು ವೈವಿಧ್ಯಮಯ ದೇಶ. ಇಲ್ಲಿ ಪ್ರತಿಭಾವಂತರು ದೊಡ್ಡಸಂಖ್ಯೆಯಲ್ಲಿದ್ದಾರೆ. ಹೂಡಿಕೆಗೆ ಪೂರಕವಾದ ವಾತಾವರಣವಿದೆ. ದುಬೈ ಎಕ್ಸ್​ಪೊದಲ್ಲಿ ಭಾರತದ ಪೆವಿಲಿಯನ್​ಗೆ ಭೇಟಿ ನೀಡಿ. ಭಾರತದಲ್ಲಿ ಹೂಡಿಕೆ ಮಾಡಲು ಮುಂದಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ವಿಡಿಯೊ ಸಂದೇಶದ ಮೂಲಕ ಕರೆ ನೀಡಿದ್ದಾರೆ.

ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೊ ಶೇರ್ ಮಾಡಿರುವ ಅವರು, ಈಚಿನ ದಿನಗಳಲ್ಲಿ ಮಧ್ಯಪ್ರಾಚ್ಯ, ಅಫ್ರಿಕಾ ಮತ್ತು ದಕ್ಷಿಣ ಏಷ್ಯಾದಲ್ಲಿ ನಡೆಯುತ್ತಿರುವ ಪ್ರಮುಖ ಎಕ್ಸ್​ಪೊ ಇದು. ಭಾರತವು ಎಕ್ಸ್​ಪೊದಲ್ಲಿ ದೊಡ್ಡ ಪೆವಿಲಿಯನ್ ಹೊಂದಿದೆ. ಭಾರತ ಮತ್ತು ಯುಎಇ ನಡುವಣ ಸಂಬಂಧ ಎಷ್ಟು ಆಳವಾದುದು ಮತ್ತು ಐತಿಹಾಸಿಕವಾದುದು. ಭಾರತ ಸರ್ಕಾರ ಮತ್ತು ಜನರ ಪರವಾಗಿ ಯುಎಇ ಆಡಳಿತಗಾರರಿಗೆ ಶುಭ ಹಾರೈಸುತ್ತೇನೆ. ಎಕ್ಸ್​ಪೊ 2020 ಅತ್ಯುತ್ತಮ ರೀತಿಯಲ್ಲಿ ಸಂಘಟಿಸಲಾಗಿದೆ. ಜಾಗತಿಕ ಮಹಾಪಿಡುಗಿಗೆ ಮಾನವ ಪ್ರಯತ್ನ ಕೊಟ್ಟ ಉತ್ತರದಂತಿದೆ ಇದು. ಮುಕ್ತ ವಾತಾವರಣ, ಅವಕಾಶಗಳು ಮತ್ತು ಉನ್ನತಿ ಎನ್ನುವುದು ಭಾರತದ ಪೆವಿಲಿನಿಯನ್​ ಆಶಯವಾಗಿದೆ ಎಂದು ಹೇಳಿದರು.

ಭಾರತವು ವಿಶ್ವದ ಅತ್ಯಂತ ಮುಕ್ತ ದೇಶಗಳಲ್ಲಿ ಒಂದಾಗಿದೆ. ಕಲಿಕೆ, ಗ್ರಹಿಕೆ, ದೃಷ್ಟಿಕೋನ, ಆವಿಷ್ಕಾರ, ಹೂಡಿಕೆಗೆ ಭಾರತ ಮುಕ್ತವಾಗಿದೆ. ಅದಕ್ಕಾಗಿಯೇ ಭಾರತಕ್ಕೆ ಬಂದು ಹೂಡಿಕೆ ಮಾಡಿ ಎಂದು ನಿಮ್ಮನ್ನು ಆಹ್ವಾನಿಸುತ್ತೇನೆ. ಭಾರತವು ಇಂದು ಅವಕಾಶಗಳ ಆಗರವಾಗಿದೆ. ಕಲೆ, ವಿಜ್ಞಾನ, ಕೈಗಾರಿಕೆ ಅಥವಾ ಶಿಕ್ಷಣ ಸಂಸ್ಥೆಗಳಿರಬಹುದು. ಸಂಶೋಧನೆಗೆ, ಸಹಭಾಗಿತ್ವಕ್ಕೆ, ಪ್ರಗತಿಗೆ ಭಾರತದಲ್ಲಿ ಅವಕಾಶವಿದೆ. ಭಾರತಕ್ಕೆ ಬನ್ನಿ, ಈ ಅವಕಾಶಗಳನ್ನು ನಿಮ್ಮದಾಗಿಸಿಕೊಳ್ಳಿ ಎಂದು ಕರೆ ನೀಡಿದರು.

ಗಾತ್ರದಲ್ಲಿ, ಮಹತ್ವಾಕಾಂಕ್ಷೆಯಲ್ಲಿ, ಫಲಿತಾಂಶದಲ್ಲಿ ಭಾರತದಲ್ಲಿ ನಿಮಗೆ ಅತ್ಯುತ್ತಮ ಅವಕಾಶಗಳಿವೆ. ಭಾರತಕ್ಕೆ ಬನ್ನಿ. ನಮ್ಮ ಅಭಿವೃದ್ಧಿ ಕಥನದ ಭಾಗಿದಾರರಾಗಿ. ಭಾರತವು ವೈವಿಧ್ಯತೆಗೆ ಹೆಸರುವಾಸಿ. ಭಾರತದ ಸಂಸ್ಕೃತಿ, ಭಾಷೆ, ಆಹಾರ ಪದ್ಧತಿ, ನೃತ್ಯದಲ್ಲಿ ವೈವಿಧ್ಯತೆಯಿದೆ. ಈ ವೈವಿಧ್ಯತೆಯು ನಮ್ಮ ಪೆವಿಲಿಯನ್​ನಲ್ಲಿ ಪ್ರತಿಫಲಿಸಿದೆ. ಭಾರತವು ಬುದ್ಧಿವಂತಿಕೆಯ ಶಕ್ತಿಕೇಂದ್ರವಾಗಿದೆ. ತಂತ್ರಜ್ಞಾನ, ಸಂಶೋಧನೆಯಲ್ಲಿ ಭಾರತ ಮುನ್ನಡೆ ದಾಖಲಿಸುತ್ತದೆ. ಬಹುಕಾಲದಿಂದ ಅಸ್ತಿತ್ವದಲ್ಲಿರುವ ಹಳೆಯ ಕಂಪನಿಗಳ ಜೊತೆಗೆ ಹೊಸ ಕಂಪನಿಗಳ ಸಹಯೋಗವು ಭಾರತದ ಯಶೋಗಾಥೆಗಳನ್ನು ಬರೆಯುತ್ತಿದೆ. ಆರೋಗ್ಯ, ಜವಳಿ, ಮೂಲಸೌಕರ್ಯ, ಸೇವೆಗಳ ವಿಭಾಗದಲ್ಲಿ ಭಾರತದಲ್ಲಿ ಹಲವು ಹೊಸ ದಾಖಲೆಗಳು ನಿರ್ಮಾಣವಾಗಿವೆ. ಭಾರತವು 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿದೆ ಎಂದು ಹೇಳಿದರು.

(PM Narendra Modi Invites Investors Across the World to Dubai Expo 2020)

ಇದನ್ನೂ ಓದಿ: Swachh Bharat Mission Urban 2.0: ನಗರಗಳಲ್ಲಿ ಸ್ವಚ್ಛ ಭಾರತ ಮಿಷನ್ 2.0 ಗೆ ಶುಕ್ರವಾರ ಚಾಲನೆ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ

ಇದನ್ನೂ ಓದಿ: ರಕ್ಷಣಾ ಕ್ಷೇತ್ರಕ್ಕೆ ಹೊಸ ಬಲ ತುಂಬಿದ ಐಎನ್​ಎಸ್​ ವಿಕ್ರಾಂತ್: ಸ್ವಾವಲಂಬನೆಯತ್ತ ನೌಕಾಪಡೆ ದಿಟ್ಟ ಹೆಜ್ಜೆ

Published On - 9:56 pm, Fri, 1 October 21

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ