ಪ್ರಧಾನಮಂತ್ರಿ ನರೇಂದ್ರ ಮೋದಿ ಅಕ್ಟೋಬರ್ 5ನೇ ತಾರೀಕಿನಂದು ನವದೆಹಲಿಯಲ್ಲಿ ಹಿರಿಯ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾರನ್ನು ಭೇಟಿ ಆಗಿದ್ದು, ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. “ಒನ್ ಅಂಡ್ ಓನ್ಲಿ” ಜುಂಜುನ್ವಾಲಾ ಅವರ ಈ ಭೇಟಿಯಿಂದ ಬಹಳ ಸಂತೋಷ ಆಯಿತು. ಅವರು ಬಹಳ “ಉತ್ಸಾಹಿಗಳು ಹಾಗೂ ಒಳನೋಟ ಇರುವವರು” ಎಂದು ಬಣ್ಣಿಸಿದ್ದಾರೆ. ಪ್ರಧಾನಿ ತಮ್ಮ ಟ್ವೀಟ್ನಲ್ಲಿ, ಜುಂಜುನ್ವಾಲಾ ಭಾರತದ ಬಗ್ಗೆ ಬಹಳ ಸಕಾರಾತ್ಮಕ (ಬುಲ್ಲಿಷ್) ಆಗಿರುವುದಾಗಿ ಹೇಳಿದ್ದಾರೆ. ವಾರಗಳ ಹಿಂದಷ್ಟೇ ಜುಂಜುನ್ವಾಲಾ ಅವರು ರೀಟೇಲ್ ಹೂಡಿಕೆದಾರರು ಉತ್ತಮ ರಿಟರ್ನ್ಸ್ಗಾಗಿ ಅಮೆರಿಕದಲ್ಲಿ ಅಲ್ಲ, ಭಾರತದಲ್ಲೇ ಹೂಡಿಕೆ ಮಾಡಬೇಕು ಎಂದಿದ್ದರು. ದಯವಿಟ್ಟು ಅಮೆರಿಕದಲ್ಲಿ ಹೂಡಿಕೆ ಮಾಡಬೇಡಿ. ಮನೆಯ ಆಹಾರವೇ ಚೆನ್ನಾಗಿರುವಾಗ ಏಕೆ ಹೊರಗೆ ತಿಂತೀರಿ. ಭಾರತವನ್ನು ನಂಬಿ. ಭಾರತೀಯರೇ ಹೂಡಿಕೆ ಮಾಡಿ ಮತ್ತು ಶ್ರೀಮಂತರಾಗಿ ಎಂದು ಜೂನ್ 21ರಂದು ಸಿಎನ್ಬಿಸಿ- ಟಿವಿ18ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.
ಭಾರತದ ಆರ್ಥಿಕತೆಯು ಆರೋಗ್ಯಕರ ಬೆಳವಣಿಗೆಯನ್ನು ಕಂಡಿರುವುದರಿಂದ ಭಾರತೀಯ ಮಾರ್ಕೆಟ್ ಬಗ್ಗೆ ಸಕಾರಾತ್ಮಕವಾಗಿ ಇರುವುದಾಗಿ ಹಲವು ಸಲ ಜುಂಜುನ್ವಾಲಾ ಹೇಳಿದ್ದರು. ಅಂದಹಾಗೆ ಭಾರತದಲ್ಲೇ ಅತ್ಯಂತ ಯಶಸ್ವಿ ಹೂಡಿಕೆದಾರ ಎನಿಸಿಕೊಂಡಿದ್ದಾರೆ ರಾಕೇಶ್ ಜುಂಜುನ್ವಾಲಾ. ಆರ್ಥಿಕತೆಯು ಮೇಲೇರುವ (ಟೇಕ್ ಆಫ್) ಹಂತದಲ್ಲಿದೆ. ನಾವು ಎನ್ಪಿಎ ಚಕ್ರವನ್ನು ದಾಟಿ ಬಂದಿದ್ದೇವೆ ಮತ್ತು ಜನ್ ಧನ್, ಐಬಿಸಿ, ರೇರಾ, ಗಣಿಗಾರಿಕೆಯಲ್ಲಿನ ಸುಧಾರಣೆಗಳು, ಕಾರ್ಮಿಕ ಮತ್ತು ಕೃಷಿ ಕಾನೂನುಗಳು ಹೀಗೆ ಹಲವು ಬದಲಾವಣೆಗಳನ್ನು ದಾಟಿದ್ದೇವೆ. ಭಾರತೀಯರು ಉತ್ತಮ ಹಾಗೂ ದೀರ್ಘವಾದ ಆರ್ಥಿಕ ಬೆಳವಣಿಗೆಯ ಹೊಸ್ತಿಲಲ್ಲಿದ್ದಾರೆ. ಭಾರತದ ಆರ್ಥಿಕತೆಯಲ್ಲಿಇ ರಚನಾತ್ಮಕ ಬದಲಾವಣೆಯು ಮುನ್ನೆಲೆಗೆ ಬರಲಿದೆ ಎಂದು ಈ ವರ್ಷದ ಆರಂಭದಲ್ಲಿ ಅವರು ಹೇಳಿದ್ದರು.
ಭಾರತದ ಅತಿ ಶ್ರೀಮಂತರ ಪಟ್ಟಿಯಲ್ಲಿ ಜುಂಜುನ್ವಾಲಾ ಮತ್ತು ಅವರ ಕುಟುಂಬ ಸಹ ಇದೆ. ಈಚೆಗೆ ಬಿಡುಗಡೆ ಆದ ಐಐಎಫ್ಎಲ್ ವೆಲ್ತ್ ಹ್ಯುರನ್ ಇಂಡಿಯಾ ಶ್ರೀಮಂತರ ಪಟ್ಟಿಯ ಪ್ರಕಾರ, ಜುಂಜುನ್ವಾಲಾ ಅವರ ಕುಟುಂಬದ ಆಸ್ತಿ ಮೌಲ್ಯ 22,300 ಕೋಟಿ ರೂಪಾಯಿ ಎನ್ನಲಾಗಿದೆ.
ಇದನ್ನೂ ಓದಿ: Sovereign Rating: ಭಾರತದ ಸವರನ್ ರೇಟಿಂಗ್ ಸ್ಥಿರಕ್ಕೆ ಅಪ್ಗ್ರೇಡ್ ಮಾಡಿದ ಮೂಡೀಸ್; ಏನಿದು Baa3 ರೇಟಿಂಗ್?
Stock Market Tips: 60 ಸಾವಿರ ಪಾಯಿಂಟ್ಸ್ ತಲುಪಿದ ನಂತರ ಷೇರು ಮಾರ್ಕೆಟ್ ಮುಂದೆ ಏನಾಗಬಹುದು?
Delighted to meet the one and only Rakesh Jhunjhunwala…lively, insightful and very bullish on India. pic.twitter.com/7XIINcT2Re
— Narendra Modi (@narendramodi) October 5, 2021
Published On - 11:24 am, Wed, 6 October 21