10 ಲಕ್ಷ ಮಂದಿಗೆ ಉದ್ಯೋಗ ನೀಡುವ ಬೃಹತ್ ಉದ್ಯೋಗ ಮೇಳಕ್ಕೆ (Rozgar Mela) ಪ್ರಧಾನಿ (Prime Minister) ನರೇಂದ್ರ ಮೋದಿ (Narendra Modi) ದೆಹಲಿಯಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ. ಸುಮಾರು 75,000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರವನ್ನೂ ಅವರು ಈ ಕಾರ್ಯಕ್ರಮದಲ್ಲಿ ವಿತರಣೆ ಮಾಡಿದ್ದಾರೆ. ಈ ಉದ್ಯೋಗ ಮೇಳ ಎಷ್ಟು ದಿನಗಳ ವರೆಗೆ ನಡೆಯಲಿದೆ? ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದೇ? ಈ ಪ್ರಶ್ನೆಗಳ ಕುರಿತು ಇಲ್ಲಿದೆ ಮಾಹಿತಿ.
ಏನಿದು ಯೋಜನೆ?
ಯುವಕರಿಗೆ ಉದ್ಯೋಗ ಕಲ್ಪಿಸುವುದಕ್ಕಾಗಿ ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮವು ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಮಾರ್ಗದರ್ಶನದಲ್ಲಿ ಉದ್ಯೋಗ ಮೇಳ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಯೋಜನೆ ಅಡಿಯಲ್ಲಿ ಸುಮಾರು 10 ಲಕ್ಷ ಮಂದಿಗೆ ಉದ್ಯೋಗ ನೀಡುವ ಗುರಿ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: Rozgar Mela: 10 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ರೋಜ್ಗಾರ್ ಮೇಳಕ್ಕೆ ಪ್ರಧಾನಿ ಮೋದಿ ಚಾಲನೆ
ಯುವಕರಿಗೆ ಉದ್ಯೋಗ ನೀಡುವುದರ ಜತೆಗೆ ನಾಗರಿಕರ ಕಲ್ಯಾಣವನ್ನು ಖಾತರಿಪಡಿಸುವ ಪ್ರಧಾನ ಮಂತ್ರಿಗಳ ಆಶಯದ ಮತ್ತು ನಿರ್ದೇಶನದ ಮೇರೆಗೆ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯ (ಪಿಎಂಒ) ಇತ್ತೀಚೆಗೆ ಪ್ರಕಟಣೆಯಲ್ಲಿ ತಿಳಿಸಿತ್ತು.
ಎಲ್ಲೆಲ್ಲ ಉದ್ಯೋಗಾವಕಾಶ?
ಪಿಎಂಒ ನೀಡಿರುವ ಮಾಹಿತಿ ಪ್ರಕಾರ, ಕೇಂದ್ರದ 38 ಸಚಿವಾಲಯ ಅಥವಾ ಇಲಾಖೆಗಳಿಗಾಗಿ ದೇಶದಾದ್ಯಂತ ನೇಮಕಾತಿ ನಡೆಯಲಿದೆ. ಗ್ರೂಪ್ ಎ ಶ್ರೇಣಿಯಿಂದ ಹುದ್ದೆಗಳಿಂದ ತೊಡಗಿ ಗ್ರೂಪ್ ಸಿ ಶ್ರೇಣಿಯ ಹುದ್ದೆಗಳ ವರೆಗೆ ನೇಮಕಾತಿ ನಡೆಯಲಿದೆ. ಕೇಂದ್ರ ಸಶಸ್ತ್ರ ಪಡೆ ಸಿಬ್ಬಂದಿ, ಸಬ್-ಇನ್‌ಸ್ಪೆಕ್ಟರ್‌ಗಳು, ಕಾನ್‌ಸ್ಟೆಬಲ್‌ಗಳು, ಎಲ್‌ಡಿಸಿ, ಸ್ಟೆನೋ, ಪಿಎ, ಆದಾಯ ತೆರಿಗೆ ಇನ್ಸ್‌ಪೆಕ್ಟರ್‌ಗಳು ಮತ್ತು ಎಂಟಿಎಸ್ ಕೂಡ ನೇಮಕವಾಗುತ್ತಿರುವ ಹುದ್ದೆಗಳಲ್ಲಿ ಒಳಗೊಂಡಿವೆ.
ಯಾವ ಗ್ರೂಪ್ನ ಎಷ್ಟು ಹುದ್ದೆ ಖಾಲಿ ಇವೆ?
ಗ್ರೂಪ್ ಎ ಶ್ರೇಣಿಯ 23,876, ಗ್ರೂಪ್ ಬಿ ಶ್ರೇಣಿಯ 25,836 ಹಾಗೂ ಗ್ರೂಪ್ ಸಿ ಶ್ರೇಣಿಯ 7.6 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ‘ಸಿಸಿಐಎಂ ಇಂಡಿಯಾ’ ತಾಣವು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ರಕ್ಷಣೆ, ರೈಲ್ವೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಿಗೆ 10,000 ಹುದ್ದೆಗಳನ್ನು ನಿಗದಿಪಡಿಸಲಾಗಿದೆ. 2023ರ ಅಂತ್ಯದ ಒಳಗಾಗಿ ಎಲ್ಲ ನೇಮಕಾತಿಗಳನ್ನು ಮಾಡಿಕೊಳ್ಳಲು ಉದ್ದೇಶಿಸಲಾಗಿದೆ.
ಅರ್ಜಿ ಸಲ್ಲಿಸಲು ಅರ್ಹತೆಗಳೇನು?
ಹೀಗೆ ಅರ್ಜಿ ಸಲ್ಲಿಸಬಹುದು?
ಯಾವಾಗ ಅರ್ಜಿ ಸಲ್ಲಿಸಬಹುದು?
ಪಿಎಂ ರೋಜ್ಗಾರ್ ಯೋಜನೆಯಡಿ 2022ರ ಅಕ್ಟೋಬರ್ 22ರಿಂದ ಅರ್ಜಿ ಸಲ್ಲಿಸಬಹುದು. 2023ರ ಕೊನೆಯವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:45 am, Sat, 22 October 22