SBI FD Rates: ಎಸ್​ಬಿಐಯಿಂದ ದೀಪಾವಳಿ ಕೊಡುಗೆ, ಎಫ್​ಡಿ ಬಡ್ಡಿ ದರ ಹೆಚ್ಚಳ

2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿ ಬಡ್ಡಿ ದರವನ್ನು ಕನಿಷ್ಠ 25 ಮೂಲಾಂಶದಿಂದ ಗರಿಷ್ಠ 80 ಮೂಲಾಂಶಗಳ ವರೆಗೆ ಎಸ್​ಬಿಐ ಹೆಚ್ಚಿಸಿದೆ.

SBI FD Rates: ಎಸ್​ಬಿಐಯಿಂದ ದೀಪಾವಳಿ ಕೊಡುಗೆ, ಎಫ್​ಡಿ ಬಡ್ಡಿ ದರ ಹೆಚ್ಚಳ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on:Oct 22, 2022 | 10:34 AM

ನವದೆಹಲಿ: ದೀಪಾವಳಿ ಹಬ್ಬಕ್ಕೆ ಎರಡು ದಿನಗಳಿರುವ ಬೆನ್ನಲ್ಲೇ ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ (SBI) ತನ್ನ ಗ್ರಾಹಕರಿಗೆ ಉತ್ತಮ ಕೊಡುಗೆ ಘೋಷಿಸಿದೆ. 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿ (FDs) ಬಡ್ಡಿ ದರವನ್ನು ಕನಿಷ್ಠ 25 ಮೂಲಾಂಶದಿಂದ ಗರಿಷ್ಠ 80 ಮೂಲಾಂಶಗಳ ವರೆಗೆ ಹೆಚ್ಚಿಸಿದೆ. ಹಿರಿಯ ನಾಗರಿಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಪರಿಷ್ಕೃತ ಬಡ್ಡಿ ದರ ಇಂದಿನಿಂದಲೇ (ಅಕ್ಟೋಬರ್ 22) ಜಾರಿಗೆ ಬರಲಿದೆ.

211 ದಿನಗಳಿಂದ 1 ವರ್ಷದ ಅವಧಿಯ ಸ್ಥಿರ ಠೇವಣಿಯ ಬಡ್ಡಿ ದರವನ್ನು 80 ಮೂಲಾಂಶಗಳಷ್ಟು ಹೆಚ್ಚಿಸಲಾಗಿದೆ. ಈವರೆಗೆ ಇದ್ದ ಶೇಕಡಾ 4.70ರ ಬದಲಾಗಿ ಶೇಕಡಾ 5.50ಗೆ ಹೆಚ್ಚಿಸಲಾಗಿದೆ.

180ರಿಂದ 210 ದಿನಗಳ ಅವಧಿಯ ಎಫ್​ಡಿ ಬಡ್ಡಿ ದರವನ್ನು ಶೇ 5.25ಕ್ಕೆ ಹೆಚ್ಚಿಸಲಾಗಿದೆ. 2 ವರ್ಷಕ್ಕಿಂತ ಹೆಚ್ಚಿನ ಹಾಗೂ 3 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್​ಡಿ ಬಡ್ಡಿ ದರವನ್ನು ಶೇಕಡಾ 6.25ಕ್ಕೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ: SBI Interest Hike: ನೀವು ಎಸ್​ಬಿಐ ಗ್ರಾಹಕರೇ? ಹೆಚ್ಚು ಮೊತ್ತದ ಇಎಂಐ ಪಾವತಿಸಲು ಸಿದ್ಧರಾಗಿ

46ರಿಂದ 179 ದಿನಗಳ ಅವಧಿಯ ಎಫ್​ಡಿಗೆ ಪರಿಷ್ಕೃತ ಬಡ್ಡಿ ದರ ಶೇಕಡಾ 4.50 ಆಗಿದೆ. 180ರಿಂದ 210 ದಿನಗಳ ಅವಧಿಯ ಎಫ್​ಡಿಗೆ ಶೇಕಡಾ 5.25; 211ದಿನಗಳಿಂದ 1 ವರ್ಷದೊಳಗಿನ ಅವಧಿಯ ಸ್ಥಿರ ಠೇವಣಿಗೆ ಶೇಕಡಾ 5.50, 1ರಿಂದ 2 ವರ್ಷಗಳ ಅವಧಿಯ ಎಫ್​ಡಿಗೆ ಶೇಕಡಾ 6.10. 2ರಿಂದ 3 ವರ್ಷಗಳ ಅವಧಿಯ ಎಫ್​ಡಿಗೆ ಶೇಕಡಾ 6.25, 3ರಿಂದ 5 ವರ್ಷಗಳ ಅವಧಿಯ ಹಾಗೂ 5ರಿಂದ 10 ವರ್ಷಗಳ ಎಫ್​ಡಿಗೆ ಶೇಕಡಾ 6.10 ರ ಬಡ್ಡಿ ದರ ನಿಗದಿಪಡಿಸಲಾಗಿದೆ.

ಹಿರಿಯ ನಾಗರಿಕರಿಗೆ ಹೆಚ್ಚಿನ ಪ್ರಯೋಜನ:

ಹಿರಿಯ ನಾಗರಿಕರಿಗೆ 3ರಿಂದ 5 ವರ್ಷಗಳ ಸ್ಥಿರ ಠೇವಣಿಗೆ ಶೇಕಡಾ 6.60ರಷ್ಟು, 5ರಿಂದ 10 ವರ್ಷಗಳ ಸ್ಥಿರ ಠೇವಣಿಗೆ ಶೇಕಡಾ 6.90ರಷ್ಟು ಬಡ್ಡಿ ಸಿಗಲಿದೆ.

ಇತ್ತೀಚೆಗಷ್ಟೇ 10 ಕೋಟಿ ರೂ. ಮತ್ತು ಅದಕ್ಕಿಂತ ಹೆಚ್ಚಿನ ಉಳಿತಾಯದ ಮೇಲಿನ ಬಡ್ಡಿ ದರವನ್ನು ಎಸ್​ಬಿಐ ಶೇಕಡಾ 0.30ರಷ್ಟು ಹೆಚ್ಚಿಸಿತ್ತು. ಅದಕ್ಕೂ ಮುನ್ನ, ಐದು ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ಅವಧಿಯ ಸಾಲಗಳ ಬಡ್ಡಿ ದರವನ್ನೂ ಶೇಕಡಾ 5.65ರಿಂದ 5.85ಕ್ಕೆ ಹೆಚ್ಚಿಸಿತ್ತು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ರೆಪೊ ದರಕ್ಕೆ ಅನುಗುಣವಾಗಿ ಇತರ ಬ್ಯಾಂಕ್​ಗಳು ಮತ್ತು ಹಣಕಾಸು ಸಂಸ್ಥೆಗಳು ಬಡ್ಡಿ ದರದಲ್ಲಿ ಪರಿಷ್ಕರಣೆ ಮಾಡುತ್ತವೆ. ಸೆಪ್ಟೆಂಬರ್ 30ರಂದು ಪ್ರಕಟಿಸಿದ್ದ ಹಣಕಾಸು ನೀತಿಯಲ್ಲಿ ಆರ್​ಬಿಐ ರೆಪೊ ದರವನ್ನು ಶೇಕಡಾ 0.50 ಹೆಚ್ಚಿಸಿತ್ತು. ಇದರೊಂದಿಗೆ ಪರಿಷ್ಕೃತ ರೆಪೊ ದರ ಶೇಕಡಾ 5.9 ಆಗಿತ್ತು. ಹಣದುಬ್ಬರ ನಿಯಂತ್ರಿಸುವ ನಿಟ್ಟಿನಲ್ಲಿ ಆರ್​ಬಿಐ ಈ ಕ್ರಮ ಕೈಗೊಂಡಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:32 am, Sat, 22 October 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ