AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI Interest Rate Hike: ಉಳಿತಾಯ ಖಾತೆ ಬಡ್ಡಿ ದರ ಹೆಚ್ಚಿಸಿದ ಎಸ್​ಬಿಐ

10 ಕೋಟಿ ರೂ. ಮತ್ತು ಅದಕ್ಕಿಂತ ಹೆಚ್ಚಿನ ಉಳಿತಾಯದ ಮೇಲಿನ ಬಡ್ಡಿ ದರವನ್ನು ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ ಮಂಗಳವಾರ ಶೇಕಡಾ 0.30ರಷ್ಟು ಹೆಚ್ಚಿಸಿದೆ.

SBI Interest Rate Hike: ಉಳಿತಾಯ ಖಾತೆ ಬಡ್ಡಿ ದರ ಹೆಚ್ಚಿಸಿದ ಎಸ್​ಬಿಐ
ಭಾರತೀಯ ಸ್ಟೇಟ್ ಬ್ಯಾಂಕ್ (ಸಂಗ್ರಹ ಚಿತ್ರ)
Follow us
Ganapathi Sharma
|

Updated on:Oct 18, 2022 | 4:57 PM

ನವದೆಹಲಿ: 10 ಕೋಟಿ ರೂ. ಮತ್ತು ಅದಕ್ಕಿಂತ ಹೆಚ್ಚಿನ ಉಳಿತಾಯದ ಮೇಲಿನ ಬಡ್ಡಿ (Interest Rate) ದರವನ್ನು ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ (SBI) ಮಂಗಳವಾರ ಶೇಕಡಾ 0.30ರಷ್ಟು ಹೆಚ್ಚಿಸಿದೆ. 10 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಉಳಿತಾಯದ ಮೇಲೆ ಈಗಿರುವ ಶೇಕಡಾ 2.70 ಬಡ್ಡಿ ದರ ಮುಂದುವರಿಯಲಿದೆ ಎಂದು ಬ್ಯಾಂಕ್ ತಿಳಿಸಿದೆ. ಪರಿಷ್ಕೃತ ಬಡ್ಡಿ ದರ ಅಕ್ಟೋಬರ್ 15ರಿಂದಲೇ ಪೂರ್ವಾನ್ವಯವಾಗಲಿದೆ ಎಂದು ಬ್ಯಾಂಕ್ ತಿಳಿಸಿರುವುದಾಗಿ ‘ಎಎನ್​ಐ’ ಸುದ್ದಿಸಂಸ್ಥೆ ವರದಿ ಮಾಡಿದೆ.

ಸಾಲದ ಮೇಲಿನ ಕನಿಷ್ಠ ಬಡ್ಡಿ ದರವನ್ನು ಎಸ್​ಬಿಐ ಸೋಮವಾರವಷ್ಟೇ 25 ಮೂಲಾಂಶಗಳಷ್ಟು ಹೆಚ್ಚಿಸಿತ್ತು. ಇದೂ ಕೂಡ ಅಕ್ಟೋಬರ್ 15ರಿಂದಲೇ ಪೂರ್ವಾನ್ವಯವಾಗಲಿದೆ. ಎಲ್ಲ ಅವಧಿಯ ಸಾಲಗಳಿಗೆ ಅನ್ವಯವಾಗಲಿದೆ ಎಂದು ಬ್ಯಾಂಕ್ ತಿಳಿಸಿತ್ತು. 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿಗಳ (ಎಫ್​ಡಿ) ಬಡ್ಡಿ ದರವನ್ನು ಅಕ್ಟೋಬರ್ 15ರಂದು ಎಸ್​ಬಿಐ 20 ಮೂಲಾಂಶಗಳ ವರೆಗೆ ಹೆಚ್ಚಿಸಿತ್ತು.

ಇದನ್ನೂ ಓದಿ: SBI Interest Rate on FD: ಎಫ್​ಡಿ ಬಡ್ಡಿ ಹೆಚ್ಚಿಸಿದ ಎಸ್​ಬಿಐ, ಇಲ್ಲಿದೆ ಪರಿಷ್ಕೃತ ಬಡ್ಡಿ ದರ ಮಾಹಿತಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ರೆಪೊ ದರ ಹೆಚ್ಚಿಸಿದಾಗಲೆಲ್ಲ ಬ್ಯಾಂಕ್​ಗಳು ಮತ್ತು ಹಣಕಾಸು ಸಂಸ್ಥೆಗಳು ಬಡ್ಡಿ ದರ ಪರಿಷ್ಕರಿಸುವ ಮೂಲಕ ಅದನ್ನು ಗ್ರಾಹಕರಿಗೆ ವರ್ಗಾಯಿಸುವುದು ಸಾಮಾನ್ಯ. ಅದೇ ರೀತಿ ಎಸ್​ಬಿಐ ಬಡ್ಡಿ ದರ ಪರಿಷ್ಕರಣೆ ಮಾಡಿದೆ. ಸೆಪ್ಟೆಂಬರ್ 30ರಂದು ಆರ್​ಬಿಐ ರೆಪೊ ದರವನ್ನು ಶೇಕಡಾ 0.50 ಹೆಚ್ಚಿಸಿ, 5.9ಕ್ಕೆ ನಿಗದಿಪಡಿಸಿತ್ತು. ಇದಕ್ಕೂ ಮುನ್ನ ಸತತ 3 ಬಾರಿ ಆರ್​ಬಿಐ ರೆಪೊ ದರ ಹೆಚ್ಚಳ ಮಾಡಿತ್ತು. ಆವಾಗಲೂ ಪ್ರಮುಖ ಬ್ಯಾಂಕ್​ಗಳು ಬಡ್ಡಿ ದರವನ್ನು ಹೆಚ್ಚಿಸಿದ್ದವು.

Published On - 2:07 pm, Tue, 18 October 22