Public Alert: ಕೆವೈಸಿ ನವೀಕರಣದ ಹೆಸರಲ್ಲಿ ವಂಚಿಸುತ್ತಿರುವವರ ಬಗ್ಗೆ ಎಚ್ಚರಿಕೆ ನೀಡಿದ ಆರ್​ಬಿಐ

| Updated By: Srinivas Mata

Updated on: Sep 13, 2021 | 11:42 PM

ಕೆವೈಸಿ ಹೆಸರಲ್ಲಿ ವಂಚನೆ ಮಾಡುವವರ ಬಗ್ಗೆ ಆರ್​ಬಿಐನಿಂದ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

Public Alert: ಕೆವೈಸಿ ನವೀಕರಣದ ಹೆಸರಲ್ಲಿ ವಂಚಿಸುತ್ತಿರುವವರ ಬಗ್ಗೆ ಎಚ್ಚರಿಕೆ ನೀಡಿದ ಆರ್​ಬಿಐ
ಆರ್​ಬಿಐ (ಸಾಂದರ್ಭಿಕ ಚಿತ್ರ)
Follow us on

“ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ” ಅಥವಾ ಕೆವೈಸಿ ವಿವರಗಳನ್ನು ನವೀಕರಿಸುವ ನೆಪದಲ್ಲಿ ನಡೆಯುತ್ತಿರುವ ವಂಚನೆಗಳ ವಿರುದ್ಧ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೋಮವಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಅಪರಿಚಿತ ವ್ಯಕ್ತಿಗಳೊಂದಿಗೆ ಯಾವುದೇ ವಯಕ್ತಿಕ ಅಥವಾ ಹಣಕಾಸಿನ ಮಾಹಿತಿಯನ್ನು ಹಂಚಿಕೊಳ್ಳದಂತೆ ನಿಯಂತ್ರಕರು (ಆರ್​ಬಿಐ) ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಆರ್‌ಬಿಐ ಹಲವಾರು ದೂರುಗಳನ್ನು ಸ್ವೀಕರಿಸಿದ ನಂತರ ಮತ್ತು ಕೆವೈಸಿ ನವೀಕರಣದ ಹೆಸರಿನಲ್ಲಿ ವಂಚನೆಗಳಿಗೆ ಗ್ರಾಹಕರು ಬಲಿ ಆಗುತ್ತಿರುವ ವರದಿಗಳಾಗುತ್ತಿರುವ ನಂತರ ಹೊಸ ಎಚ್ಚರಿಕೆ ಹೇಳಿಕೆಗಳು ಬಂದಿವೆ.

ವಂಚನೆಗಾಗಿ ಅನುಸರಿಸುತ್ತಿರುವ ವಿಧಾನವನ್ನು ವಿವರಿಸಿರುವ ಆರ್​ಬಿಐ, ಅಪರಿಚಿತ ಕರೆಗಳು, ಇಮೇಲ್‌ಗಳು ಅಥವಾ ಅಪರಿಚಿತ ವ್ಯಕ್ತಿಯಿಂದ ಸಂದೇಶಗಳನ್ನು ಸ್ವೀಕರಿಸುವುದು, ಖಾತೆ ಲಾಗಿನ್, ಕಾರ್ಡ್ ಅಥವಾ ಪಿನ್​ನಂತಹ ವಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಲು ಗ್ರಾಹಕರನ್ನು ಒತ್ತಾಯಿಸಲಾಗುತ್ತದೆ ಎಂದು ಹೇಳಿದೆ. “ಅಂತಹ ಸಂವಹನಗಳಲ್ಲಿ ಖಾತೆಯ ಸ್ಥಗಿತ ಅಥವಾ ನಿರ್ಬಂಧ/ಮುಚ್ಚುವಿಕೆ ಬೆದರಿಕೆ ಹಾಕಲಾಗುತ್ತವೆ ಎಂದು ವರದಿಯಾಗಿದೆ” ಎಂಬುದಾಗಿ ಆರ್‌ಬಿಐ ಹೇಳಿದೆ. “ಒಮ್ಮೆ ಗ್ರಾಹಕರು ಕರೆ/ಸಂದೇಶ/ಅನಧಿಕೃತ ಅಪ್ಲಿಕೇಷನ್ ಮೂಲಕ ಮಾಹಿತಿಯನ್ನು ಹಂಚಿಕೊಂಡರೆ, ವಂಚಕರು ಗ್ರಾಹಕರ ಖಾತೆಗೆ ಸಂಪರ್ಕ ಪಡೆದು ವಂಚಿಸುತ್ತಾರೆ,” ಎನ್ನಲಾಗಿದೆ.

ಅಕೌಂಟ್ ಲಾಗಿನ್ ವಿವರಗಳು, ವಯಕ್ತಿಕ ಮಾಹಿತಿ, ಕೆವೈಸಿ ದಾಖಲೆ ಪ್ರತಿಗಳು, ಕಾರ್ಡ್ ಮಾಹಿತಿ, ಪಿನ್, ಪಾಸ್‌ವರ್ಡ್, ಒಟಿಪಿ ಇತ್ಯಾದಿಗಳನ್ನು ಅಪರಿಚಿತ ವ್ಯಕ್ತಿಗಳು ಅಥವಾ ಏಜೆನ್ಸಿಗಳೊಂದಿಗೆ ಹಂಚಿಕೊಳ್ಳದಂತೆ ಆರ್‌ಬಿಐ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಅಂತಹ ಮಾಹಿತಿಯನ್ನು ಪರಿಶೀಲಿಸದ ಅಥವಾ ಅನಧಿಕೃತ ವೆಬ್‌ಸೈಟ್‌ಗಳ ಮೂಲಕ ಹಂಚಿಕೊಳ್ಳಬಾರದು ಎಂದೂ ಅದು ಹೇಳಿದೆ. ಕೆವೈಸಿ ಅಪ್‌ಡೇಟ್ ಬಾಕಿ ಇರುವ ಖಾತೆಗಳ ಕಾರ್ಯಾಚರಣೆಗೆ ಯಾವುದೇ ನಿರ್ಬಂಧಗಳನ್ನು ಡಿಸೆಂಬರ್ 31, 2021ರ ವರೆಗೆ ವಿಧಿಸಬಾರದು ಎಂದು ಆರ್‌ಬಿಐ ಬ್ಯಾಂಕ್‌ಗಳಿಗೆ ಸಲಹೆ ನೀಡಿದೆ.

ಇದನ್ನೂ ಓದಿ: RBI: ಜನವರಿ 1, 2022ರಿಂದ ನಿಮ್ಮ ಕಾರ್ಡ್ ಡೇಟಾ ಆನ್​ಲೈನ್​ನಲ್ಲಿ ಸೇವ್​ ಆಗಲ್ಲ; ಇಲ್ಲಿದೆ ಆರ್​ಬಿಐ ಹೊಸ ನಿಯಮ

(Public Alert By RBI About KYC Updation Frauds Here Is The Details)