AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

US Green Card: ಗ್ರೀನ್​ ಕಾರ್ಡ್​ಗಾಗಿ ಅಮೆರಿಕದಲ್ಲಿ ಕಾಯುತ್ತಿರುವ ಸಾವಿರಾರು ಭಾರತೀಯರಿಗೆ ಗುಡ್​ ನ್ಯೂಸ್

ಗ್ರೀನ್​ ಕಾರ್ಡ್​ಗಾಗಿ ಅಮೆರಿಕದಲ್ಲಿ ಕಾಯುತ್ತಿರುವ ಸಾವಿರಾರು ಮಂದಿ ಭಾರತೀಯರಿಗೆ ಶುಭ ಸುದ್ದಿ ಇದು. ಪೂರಕ ಶುಲ್ಕ ಪಾವತಿಸಿ, ಶಾಶ್ವತ ವಾಸ್ತವ್ಯ ಅವಕಾಶ ಪಡೆಯಬಹುದು.

US Green Card: ಗ್ರೀನ್​ ಕಾರ್ಡ್​ಗಾಗಿ ಅಮೆರಿಕದಲ್ಲಿ ಕಾಯುತ್ತಿರುವ ಸಾವಿರಾರು ಭಾರತೀಯರಿಗೆ ಗುಡ್​ ನ್ಯೂಸ್
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Sep 13, 2021 | 6:35 PM

Share

ಉದ್ಯೋಗ- ಆಧಾರಿತವಾದ ಗ್ರೀನ್​ ಕಾರ್ಡ್ ಬಾಕಿ ಉಳಿದಿರುವ ಹತ್ತಾರು ಲಕ್ಷ ಮಂದಿ ವರ್ಷಗಳಿಂದ ಅಮೆರಿಕದಲ್ಲಿ ಕಾಯುತ್ತಿದ್ದಾರೆ. ಅದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಭಾರತೀಯರು ಸಹ ಇದ್ದಾರೆ. ಇದೀಗ ಕಾನೂನುಬದ್ಧವಾಗಿಯೇ ಅಮೆರಿಕದಲ್ಲಿ ಶಾಶ್ವತ ವಾಸ್ತವ್ಯದ ಅವಕಾಶ ಸಿಗುವ ಭರವಸೆ ಮೂಡಿದೆ. ಇದಕ್ಕಾಗಿ ಅಮೆರಿಕ ಸಂಸತ್​ನಲ್ಲಿ ಮಸೂದೆಗೆ ಒಪ್ಪಿಗೆ ಸಿಗಬೇಕು. ಆಗ ಪೂರಕ ಶುಲ್ಕ ಪಾವತಿಸಿ, ಗ್ರೀನ್ ಕಾರ್ಡ್ ಪಡೆಯಬಹುದು. ಒಂದು ವೇಳೆ ಈ ನಡೆಯನ್ನು ರಿಕನ್ಸಲಿಯೇಷನ್ ಪ್ಯಾಕೇಜ್​ನಲ್ಲಿ ಸೇರ್ಪಡೆ ಮಾಡಿ, ಕಾನೂನಾಗಿ ಜಾರಿಗೆ ತಂದಲ್ಲಿ ಇದರಿಂದ ಹತ್ತಾರು ಸಾವಿರ ಮಂದಿ ಭಾರತೀಯ ಐ.ಟಿ. ವೃತ್ತಿಪರರಿಗೆ ನೆರವಾಗುವ ನಿರೀಕ್ಷೆ ಇದೆ. ಸದ್ಯಕ್ಕೆ ಗ್ರೀನ್​ ಕಾರ್ಡ್​ಗಾಗಿ ಕಾಯುತ್ತಿರುವ ಸಾವಿರಾರು ಮಂದಿ ಇದ್ದಾರೆ.

ಗ್ರೀನ್ ಕಾರ್ಡ್ ಅಂದರೆ, ಅಧಿಕೃತವಾಗಿ ಶಾಶ್ವತ ವಾಸ್ತವ್ಯದ ಕಾರ್ಡ್. ಅಮೆರಿಕದಲ್ಲೇ ಶಾಶ್ವತವಾಗಿ ನೆಲೆಸಬಹುದು ಎಂಬ ಸಮ್ಮತಿಯೊಂದಿಗೆ ವಲಸಿಗರಿಗೆ ಇದನ್ನು ವಿತರಿಸಲಾಗುತ್ತದೆ. ಸಮಿತಿಯೊಂದರ ಪ್ರಕಾರ, 2 ವರ್ಷಕ್ಕೂ ಹಿಂದೆ ಅರ್ಜಿ ಹಾಕಿರುವವರಿಗೆ ಶಾಶ್ವತ ವಾಸ್ತವ್ಯಕ್ಕೆ ಹೊಂದಾಣಿಕೆ ಮಾಡಲಾಗುತ್ತದೆ. ಅದಕ್ಕೆ ಯಾವುದೇ ಸಂಖ್ಯೆಯ ಮಿತಿ ಇಲ್ಲ. ಅದಕ್ಕಾಗಿ ಪೂರಕ ಶುಲ್ಕ 5000 ಯುಎಸ್​ಡಿ (3,65,000 ರೂಪಾಯಿ) ಪಾವತಿಸಬೇಕಾಗುತ್ತದೆ. EB- 5 ವಿಭಾಗದವರಿಗೆ (ವಲಸಿಗ ಹೂಡಿಕೆದಾರರು) 50,000 ಯುಎಸ್​ಡಿ ಇದೆ. ಈ ಪ್ರಾವಿಷನ್​ಗಳು 2031ಕ್ಕೆ ಕೊನೆಯಾಗುತ್ತದೆ ಎಂದು ಫೋರ್ಬ್ಸ್​ ನಿಯತಕಾಲಿಕೆ ವರದಿ ಮಾಡಿದೆ.

ಎಷ್ಟು ಪೂರಕ ಶುಲ್ಕ ಪಾವತಿಸಬೇಕು? ಕುಟುಂಬ ಆಧಾರಿತವಾದ ವಲಸಿಗರಾಗಿ, ಅಮೆರಿಕ ನಾಗರಿಕರು ಪ್ರಾಯೋಜಕರಾಗಿದ್ದು, 2 ವರ್ಷಕ್ಕೂ ಹೆಚ್ಚು ಹಿಂದೆ ಗ್ರೀನ್​ ಕಾರ್ಡ್​ಗೆ ಅರ್ಜಿ ಹಾಕಿಕೊಂಡಿದ್ದಲ್ಲಿ 2500 ಯುಎಸ್​ಡಿ ಪಾವತಿಸಬೇಕು. ಎರಡು ವರ್ಷದೊಳಗೆ ಇಲ್ಲದಿದ್ದಲ್ಲಿ ಅಂಥ ಅರ್ಜಿದಾರರು 1500 ಯುಎಸ್​ಡಿ ಪೂರಕ ಶುಲ್ಕ ಪಾವತಿಸಬೇಕು, ಆದರೆ ಅವರು ಅದೇ ದೇಶದಲ್ಲಿ ಇರಬೇಕು ಎಂದು ಮುದ್ರಿತ ಮಾಹಿತಿಯಲ್ಲಿ ಇದೆ. ಅರ್ಜಿದಾರರು ಪಾವತಿಸುವ ಇತರ ಆಡಳಿತಾತ್ಮಕ ಪ್ರೊಸೆಸಿಂಗ್ ಶುಲ್ಕದ ಮೇಲೆ ಹೆಚ್ಚುವರಿಯಾಗಿ ಈ ಪೂರಕ ಶುಲ್ಕವನ್ನು ಭರಿಸಬೇಕಾಗುತ್ತದೆ. ಆದರೆ ಕಾನೂನಾತ್ಮಕ ವಲಸೆ ವ್ಯವಸ್ಥೆಯ ರಚನೆಯಲ್ಲಿ ಯಾವುದೇ ಶಾಶ್ವತವಾದ ಬದಲಾವಣೆ ಆಗಲ್ಲ. ಅದರಲ್ಲಿ ಗ್ರೀನ್​ ಕಾರ್ಡ್​ಗಳ ಮಿತಿ ಅಥವಾ H-1B ವೀಸಾದ ವಾರ್ಷಿಕ ಕೋಟಾದಲ್ಲಿ ಯಾವುದೇ ಹೆಚ್ಚಳ ಆಗುವುದಿಲ್ಲ.

ಇದು ಕಾನೂನು ಆಗುವ ಮುನ್ನ, ನ್ಯಾಯಾಂಗ ಸಮಿತಿಯಲ್ಲಿ, ಜನಪ್ರತಿನಿಧಿಗಳ ಸಭೆ ಹಾಗೂ ಸೆನೆಟ್​ನಲ್ಲಿ ಪ್ರಾವಿಷನ್ ಅನುಮೋದನೆ ಪಡೆದು, ಅಮೆರಿಕ ಅಧ್ಯಕ್ಷರಿಂದ ಸಹಿ ಆಗಬೇಕು, ಎಂದು ವರದಿಯಲ್ಲಿ ತಿಳಿಸಲಾಗಿದೆ. ಸಿಬಿಎಸ್​ನ್ಯೂಸ್​ ವರದಿ ಪ್ರಕಾರ, ಯಶಸ್ಸು, ಕಾನೂನುಬದ್ಧ ಯೋಜನೆಯು ದಾಖಲೆಗಳು ಇಲ್ಲದ ವಲಸಿಗರು ಅಮೆರಿಕಕ್ಕೆ ಮಕ್ಕಳಾಗಿ, ಟೆಂಪೊರರಿ ಪ್ರೊಟೆಕ್ಟೆಡ್ ಸ್ಟೇಟಸ್ (ಟಿಪಿಎಸ್) ಫಲಾನುಭವಿಗಳು, ಕೃಷಿ ಕಾರ್ಮಿಕರು ಮತ್ತು ಕೊರೊನಾ ಕಾಲದಲ್ಲಿ ಬಂದಿರುವ ಇತರ ಅಗತ್ಯ ಸೇವೆ ಕಾರ್ಮಿಕರು ಅಮೆರಿಕದ ವಾಸ್ತವ್ಯ ಅಥವಾ ಗ್ರೀನ್ ಕಾರ್ಡ್​ಗಳಿಗೆ ಅರ್ಜಿ ಹಾಕಬಹುದು.

ಒಂದು ದೇಶದಲ್ಲಿ ಶೇ 7ಕ್ಕಿಂತ ಹೆಚ್ಚು ಅವಕಾಶ ಇಲ್ಲ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ಮಂಜೂರಿಗೆ ಬಾಕಿ ಉಳಿದುಕೊಂಡಿರುವ ಹಲವು ಕಾರ್ಮಿಕರು ಈಗಾಗಲೇ ಅಮೆರಿಕದಲ್ಲಿ ತಾತ್ಕಾಲಿಕ ವಲಸೆಯೇತರ ವೀಸಾದಲ್ಲಿ ಇದ್ದಾರೆ. H-1B ವೀಸಾದ ಅಡಿಯಲ್ಲಿ ಇರುವವರಿಗೆ ನವೀಕರಣ ಮಾಡಬಹುದು. ಆದರೆ ಪೂರ್ಣ ಸಾಮರ್ಥ್ಯವನ್ನು ತಲುಪುವುದಕ್ಕೆ ಫಲಾನುಭವಿಗಳಿಗೆ ನಿರ್ಬಂಧವಾಗುತ್ತದೆ. ಸದ್ಯಕ್ಕೆ ಇರುವ ನಿಯಮದ ಪ್ರಕಾರ, ಒಂದು ದೇಶದಿಂದ ಈಗ ಶೇ 7ಕ್ಕಿಂತ ಹೆಚ್ಚಿನ ಪ್ರಮಾಣದ ಉದ್ಯೋಗ ಆಧಾರಿತ ಗ್ರೀನ್​ ಕಾರ್ಡ್​ಗಳು ದೊರೆಯುವುದಿಲ್ಲ. ಇದರಿಂದ ಭಾರತ ಮತ್ತು ಚೀನಾದಿಂದ ವಲಸಿಗರ ಬಾಕಿಯನ್ನು ದಶಕಗಳಿಂದ ಸೃಷ್ಟಿ ಮಾಡಿದೆ.

ಭಾರತೀಯ ನಾಗರಿಕರಿಂದ ನಿರ್ದಿಷ್ಟವಾಗಿ 80 ವರ್ಷಗಳಿಂದ ಬಾಕಿ ಉಳಿದಿದೆ. 2 ಲಕ್ಷ ಮಂದಿ ಶಾಶ್ವತ ವಾಸ್ತವ್ಯ ಪಡೆಯುವ ಮುಂಚೆಯೇ ಸಾವನ್ನಪ್ಪುತ್ತಾರೆ ಎನ್ನುತ್ತಾರೆ ಜನಪ್ರತಿನಿಧಿಗಳು. H-1B ವೀಸಾ ಇರುವಂಥವರು ತಮ್ಮ ಉದ್ಯೋಗ ಬದಲಾವಣೆ ಮಾಡಲು ಸಾಧ್ಯವಿಲ್ಲ ಅಥವಾ ಹೊಸದಾಗಿ ಸ್ವಂತ ವ್ಯವಹಾರ ಮಾಡುವುದಕ್ಕೆ ಅವಕಾಶ ಇಲ್ಲ. ಅವರಿಂದ ಒಟ್ಟಾರೆ ಉತ್ಪಾದಕತೆ ಹೆಚ್ಚಾದರೂ, ಹೊಸ ಪೇಟೆಂಟ್​ಗಳನ್ನು, ವೇತನವನ್ನು ತೋರಿದರೂ ಸಹಾಯ ಆಗಲ್ಲ. H-1B ವೀಸಾ ತಾತ್ಕಾಲಿಕವಾದದ್ದು. ಅನಿಶ್ಚತತೆ ಇದ್ದೇ ಇರುತ್ತದೆ. ಏಕೆಂದರೆ ಅವರು ಉದ್ಯಮಿಗಳಾಗಲು ಸಾಧ್ಯವಿಲ್ಲ, ಮನೆ ಖರೀದಿಸಲು ಆಗಲ್ಲ.

ಇದನ್ನೂ ಓದಿ: ಗ್ರೀನ್​ ಕಾರ್ಡ್ ಆಕಾಂಕ್ಷಿಗಳಿಗೆ ಟ್ರಂಪ್ ವಿಧಿಸಿದ್ದ ನಿಷೇಧ ತೆರವುಗೊಳಿಸಿದ ಬೈಡನ್

(Good News For Indian IT Professionals Who Are Waiting For Green Card In US Pay And Avail Green Card Know How)

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ