ESIC: ಕಾರ್ಮಿಕ ವಿಮಾ ನಿಗಮದ ನಿರುದ್ಯೋಗ ಪ್ರಯೋಜನ 2022ರ ಜೂನ್ 30ರ ತನಕ ವಿಸ್ತರಣೆ

ಕಾರ್ಮಿಕರ ನಿರುದ್ಯೋಗ ಪ್ರಯೋಜನವನ್ನು 2022ರ ಜೂನ್​ ತನಕ ವಿಸ್ತರಣೆ ಮಾಡಲಾಗಿದೆ ಎಂದು ರಾಜ್ಯ ಕಾರ್ಮಿಕ ವಿಮಾ ನಿಗಮದಿಂದ ತಿಳಿಸಲಾಗಿದೆ.

ESIC: ಕಾರ್ಮಿಕ ವಿಮಾ ನಿಗಮದ ನಿರುದ್ಯೋಗ ಪ್ರಯೋಜನ 2022ರ ಜೂನ್ 30ರ ತನಕ ವಿಸ್ತರಣೆ
ಸಾಂದರ್ಭಿಕ ಚಿತ್ರ

ಉದ್ಯೋಗಿಗಳ ರಾಜ್ಯ ವಿಮಾ ನಿಗಮವು (ಇಎಸ್ಐಸಿ) ಶುಕ್ರವಾರ ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆಯನ್ನು ಜೂನ್ 30, 2022ರ ವರೆಗೆ ವಿಸ್ತರಿಸಿರುವುದಾಗಿ ಘೋಷಿಸಿದೆ. ಈ ಯೋಜನೆಯಡಿ ಕೈಗಾರಿಕಾ ಕಾರ್ಮಿಕರಿಗೆ ನಿರುದ್ಯೋಗ ಪ್ರಯೋಜನಗಳನ್ನು ಒದಗಿಸಲಾಗುತ್ತದೆ. ಈ ಅವಧಿಯು 30ನೇ ಜೂನ್, 2021ರಲ್ಲಿ ಮುಕ್ತಾಯವಾಗಿದೆ. ಆದರೆ ಈಗ ಹೊಸದಾಗಿ ಗಡುವನ್ನು 2021ರ ಜುಲೈ 1ರಿಂದ 2022ರ ಜೂನ್ 30ರ ವರೆಗೆ ಪೂರ್ವಾನ್ವಯ ಆಗುವಂತೆ ನೀಡಲಾಗಿದೆ. ಯಾವುದೋ ಕಾರಣಕ್ಕೆ ಕೆಲಸ ಕಳೆದುಕೊಳ್ಳುವ ವಿಮೆ ಮಾಡಿದ ವ್ಯಕ್ತಿಗಳಿಗೆ 3 ತಿಂಗಳವರೆಗೆ ಶೇಕಡಾ 50ರಷ್ಟು ವೇತನ ಪಾವತಿಸುವ ನಿರುದ್ಯೋಗ ಭತ್ಯೆಯ ಯೋಜನೆ ಇದು. ವಿಮಾದಾರರು ನೇರವಾಗಿ ESIC ಶಾಖೆ ಕಚೇರಿಗೆ ಕ್ಲೇಮ್ ಸಲ್ಲಿಸಬಹುದು. ಬದಲಿಗೆ ಕ್ಲೇಮ್ ಅನ್ನು ಕೊನೆಯ ಉದ್ಯೋಗದಾತರಿಂದ ನೇರವಾಗಿ ಚಂದಾದಾರರ ಬ್ಯಾಂಕ್ ಖಾತೆಗೆ ಪಾವತಿಯೊಂದಿಗೆ ಫಾರ್ವರ್ಡ್ ಮಾಡಲಾಗುತ್ತದೆ. ಕೊವಿಡ್-19 ಆರಂಭವಾದಾಗಿನಿಂದ 50,000ಕ್ಕೂ ಹೆಚ್ಚು ಜನರು ಈ ಯೋಜನೆಯ ಲಾಭ ಪಡೆದಿದ್ದಾರೆ.

ಕಾರ್ಮಿಕ ಸಚಿವಾಲಯದ ಅಡಿಯಲ್ಲಿರುವ ಎರಡು ಅತಿದೊಡ್ಡ ಸಾಮಾಜಿಕ ಭದ್ರತಾ ಸಂಸ್ಥೆಗಳಲ್ಲಿ ಒಂದಾದ ESICಯ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. “ಉದ್ಯೋಗ ಕಳೆದುಕೊಳ್ಳುವ ESIC ಚಂದಾದಾರರಿಗೆ ಇದು ಪ್ರಯೋಜನಕಾರಿಯಾಗಿದೆ. ಆದರೆ ಕೊವಿಡ್-19 ಅವಧಿಯಲ್ಲಿ ಕೆಲಸದಿಂದ ಹಿಂತೆಗೆದುಕೊಳ್ಳುವ ಕಾರ್ಮಿಕರ ಸಂಖ್ಯೆಯನ್ನು ಪಾರದರ್ಶಕವಾಗಿ ವರದಿ ಮಾಡುತ್ತಿಲ್ಲ ಮತ್ತು ಇಎಸ್‌ಐಸಿ ಈ ಬಗ್ಗೆ ಕ್ರಮಗಳನ್ನು ಹೆಚ್ಚು ಮಾಡುತ್ತದೆ ಎಂಬ ಬಲವಾದ ನಂಬಿಕೆ ಇದೆ,” ಎಂದು ಇಎಸ್‌ಐಸಿ ಮಂಡಳಿ ಸದಸ್ಯ ಅಮರ್‌ಜೀತ್ ಕೌರ್ ಹೇಳಿದ್ದಾರೆ.

ನೌಕರರ ರಾಜ್ಯ ವಿಮಾ ನಿಗಮದ 185ನೇ ಸಭೆಯಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದರ್ ಯಾದವ್ ಘೋಷಿಸಿದ ಮಹತ್ವದ ನಿರ್ಧಾರಗಳನ್ನು ಮಾಡಲಾಗಿದೆ. ಕರ್ನಾಟಕದ ಹಾರೋಹಳ್ಳಿ ಮತ್ತು ನರಸಾಪುರದಲ್ಲಿ 100 ಹಾಸಿಗೆಯ ಇಎಸ್‌ಐಸಿ ಹೊಸ ಆಸ್ಪತ್ರೆಗಳನ್ನು ಸ್ಥಾಪಿಸಲು 5 ಎಕರೆ ಜಮೀನನ್ನು ಅನುಮೋದಿಸಲಾಗಿದೆ ಎಂದು ಸಚಿವರು ಘೋಷಿಸಿದ್ದಾರೆ. ಇಎಸ್‌ಐಸಿ ಆಸ್ಪತ್ರೆಗಳಲ್ಲಿ ಎಲ್ಲೆಲ್ಲಿ ಇನ್​-ಹೌಸ್​ ಸೌಲಭ್ಯಗಳು ಲಭ್ಯವಿಲ್ಲವೋ ಅಲ್ಲಿ ರೋಗಿಗಳನ್ನು ಪಟ್ಟಿ ಮಾಡಲಾದ ಖಾಸಗಿ ವೈದ್ಯಕೀಯ ಸೇವಾ ಪೂರೈಕೆದಾರರಿಗೆ ರೆಫರ್ ಮಾಡಲಾಗುತ್ತದೆ. ಮತ್ತು ಯಾವುದೇ ಇಎಸ್‌ಐ ಸೌಲಭ್ಯವು ಐಪಿಯಿಂದ 10 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರದಲ್ಲಿದ್ದಲ್ಲಿ ಅಂಥ ರೋಗಿಗಳು ಚಿಕಿತ್ಸೆಗಾಗಿ ಪಟ್ಟಿ ಮಾಡಲಾದ ಆಸ್ಪತ್ರೆಗಳನ್ನು ಸಂಪರ್ಕಿಸಬಹುದು ಎಂದು ಹೇಳಲಾಗಿದೆ.

ಉತ್ತರಪ್ರದೇಶದ ಶಹಜಹಾನ್​ಪುರಕ್ಕೆ 30 ಹಾಸಿಗೆಯ ಒಂದು ಆಸ್ಪತ್ರೆಯನ್ನು ಅನುಮೋದಿಸಲಾಗಿದೆ ಮತ್ತು ಇಎಸ್ಐಸಿ ಕೊವಿಡ್ ಪರಿಹಾರ ಯೋಜನೆಗಾಗಿ ದೀರ್ಘಾವಧಿಯ ಹೊಣೆಗಾರಿಕೆಗಳನ್ನು ಒದಗಿಸಲು ಮೀಸಲಿಟ್ಟ ನಿಧಿಗೆ ಅನುಮೋದನೆ ನೀಡಲಾಗಿದೆ. ದೆಹಲಿಯ ರೋಹಿಣಿಯಲ್ಲಿ ತಾತ್ಕಾಲಿಕ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿರುವ ಇಎಸ್‌ಐಸಿ ದಂತವೈದ್ಯಕೀಯ ಕಾಲೇಜನ್ನು ಇಎಸ್‌ಐಸಿ ಆಸ್ಪತ್ರೆ ಬಸೈ ದಾರಾ ಪುರ್ ಕ್ಯಾಂಪಸ್‌ನ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ESIC ಸದಸ್ಯರ ನಿರುದ್ಯೋಗ ಭತ್ಯೆ, ಮತ್ತಿತರ ಸವಲತ್ತಿನ ಬಗ್ಗೆ ನಿಮಗೆ ಮಾಹಿತಿ ಇದೆಯಾ?

(ESIC Unemployment Benefits Extended Till 2022 June Here Is The Details)

Click on your DTH Provider to Add TV9 Kannada