Xiaomi India: ಶವೋಮಿಗೆ ಮತ್ತಷ್ಟು ಸಂಕಷ್ಟ; ಮುಖ್ಯ ಉದ್ಯಮ ಅಧಿಕಾರಿ ಹುದ್ದೆಗೆ ರಘು ರೆಡ್ಡಿ ರಾಜೀನಾಮೆ

ಭಾರತದಲ್ಲಿ ಸ್ಮಾರ್ಟ್​​ಫೋನ್ ಹಾಗೂ ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲಿ ಅಗ್ರ ಸ್ಥಾನದಲ್ಲಿ ಗುರುತಿಸಿಕೊಳ್ಳಲು ಕಂಪನಿಗೆ ನೆರವಾಗಿದ್ದ ಮುಖ್ಯ ಉದ್ಯಮ ಅಧಿಕಾರಿ ರಘು ರೆಡ್ಡಿ ರಾಜೀನಾಮೆ ನೀಡಿದ್ದಾರೆ ಎಂದು ಶವೋಮಿ ತಿಳಿಸಿದೆ.

Xiaomi India: ಶವೋಮಿಗೆ ಮತ್ತಷ್ಟು ಸಂಕಷ್ಟ; ಮುಖ್ಯ ಉದ್ಯಮ ಅಧಿಕಾರಿ ಹುದ್ದೆಗೆ ರಘು ರೆಡ್ಡಿ ರಾಜೀನಾಮೆ
ಶವೋಮಿImage Credit source: Reuters
Follow us
TV9 Web
| Updated By: Ganapathi Sharma

Updated on: Dec 07, 2022 | 6:00 PM

ನವದೆಹಲಿ: ಚೀನಾದ (China) ಸ್ಮಾರ್ಟ್​ಫೋನ್ (Smartphone) ತಯಾರಿಕಾ ಕಂಪನಿ ಶವೋಮಿ(Xiaomi) ಭಾರತ ಘಟಕದ ಮುಖ್ಯ ಉದ್ಯಮ ಅಧಿಕಾರಿ ಹುದ್ದೆಗೆ ರಘು ರೆಡ್ಡಿ ರಾಜೀನಾಮೆ ನೀಡಿದ್ದಾರೆ. ಕಂಪನಿಯು ವಿದೇಶಿ ವಿನಿಮಯ ನಿಯಮ ಉಲ್ಲಂಘನೆ ಹಾಗೂ ಅಕ್ರಮ ಹಣ ವರ್ಗಾವಣೆಯ ಆರೋಪ ಎದುರಿಸುತ್ತಿರುವ ಸಂದರ್ಭದಲ್ಲೇ ಮುಖ್ಯ ಕಾರ್ಯನಿರ್ವಾಹಕರೊಬ್ಬರು ರಾಜೀನಾಮೆ ನೀಡಿದಂತಾಗಿದೆ. ನಿಯಮ ಉಲ್ಲಂಘನೆ ಆರೋಪ ಎದುರಿಸುತ್ತಿರುವ ಶವೋಮಿ ಮೇಲೆ ಸರ್ಕಾರದ ತನಿಖಾ ಸಂಸ್ಥೆಗಳು ನಿಗಾ ಇರಿಸಿವೆ.

ಭಾರತದಲ್ಲಿ ಸ್ಮಾರ್ಟ್​​ಫೋನ್ ಹಾಗೂ ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲಿ ಅಗ್ರ ಸ್ಥಾನದಲ್ಲಿ ಗುರುತಿಸಿಕೊಳ್ಳಲು ಕಂಪನಿಗೆ ನೆರವಾಗಿದ್ದ ಮುಖ್ಯ ಉದ್ಯಮ ಅಧಿಕಾರಿ ರಘು ರೆಡ್ಡಿ ರಾಜೀನಾಮೆ ನೀಡಿದ್ದಾರೆ ಎಂದು ಶವೋಮಿ ಪ್ರಕಟಣೆ ತಿಳಿಸಿದೆ. ಸದ್ಯ ನೊಟೀಸ್ ಅವಧಿಯಲ್ಲಿರುವ ರೆಡ್ಡಿ ಅವರು ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿಲ್ಲ.

ಮುಖ್ಯ ಉದ್ಯಮ ಅಧಿಕಾರಿಯಾಗಿ ನೇಮಕಗೊಳ್ಳುವುದಕ್ಕೂ ಮುನ್ನ ರೆಡ್ಡಿ ಅವರು ಶವೋಮಿಯ ಆನ್​ಲೈನ್ ಮಾರಾಟ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರು. ಅದಕ್ಕೂ ಮುನ್ನ ಸಾಫ್ಟ್​​ಬ್ಯಾಂಕ್ ಗ್ರೂಪ್​ ಬೆಂಬಲಿತ ಸ್ನ್ಯಾಪ್​ಡೀಲ್​ನಲ್ಲಿ ಕಾರ್ಯನಿರ್ವಹಿಸಿದ್ದರು.

ಇದನ್ನೂ ಓದಿ: Vivo Smartphones: ವಿವೊ ಸ್ಮಾರ್ಟ್​​ಫೋನ್ ರಫ್ತಿಗೆ ಭಾರತ ತಡೆ; ಚೀನಾ ಕಂಪನಿಗೆ ಭಾರೀ ಹಿನ್ನಡೆ

ವಿದೇಶಿ ವಿನಿಮಯ ನಿಯಮ ಉಲ್ಲಂಘನೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿ ಕಳೆದ ಏಪ್ರಿಲ್​ನಲ್ಲಿ ಜಾರಿ ನಿರ್ದೇಶನಾಲಯವು ಶವೋಮಿ ಇಂಡಿಯಾದ 5,551 ಕೋಟಿ ರೂ.ಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಈ ಮಧ್ಯೆ, ಭಾರತದಲ್ಲಿ ಶವೋಮಿ ಕಾರ್ಪೊರೇಷನ್‌ ಹಣಕಾಸು ಸೇವೆಗಳ ವಹಿವಾಟನ್ನು ನಿಲ್ಲಿಸಿರುವುದಾಗಿ ಇತ್ತೀಚೆಗೆ ಶವೋಮಿ ಇಂಡಿಯಾ ತಿಳಿಸಿತ್ತು.

2020ರಲ್ಲಿ ಭಾರತ, ಚೀನಾ ಸೇನಾಪಡೆಗಳ ನಡುವೆ ಪೂರ್ವ ಲಡಾಖ್​ನ ಗಾಲ್ವನ್ ಕಣಿವೆಯಲ್ಲಿ ನಡೆದಿದ್ದ ಸಂಘರ್ಷದ ಬಳಿಕ ಕೇಂದ್ರ ಸರ್ಕಾರ ಚೀನಾ ಕಂಪನಿಗಳ ವಿರುದ್ಧ ಅನೇಕ ನಿರ್ಬಂಧಗಳನ್ನು ಹೇರಿತ್ತು. ನೂರಾರು ಚೀನೀ ಆ್ಯಪ್​ಗಳನ್ನು ನಿಷೇಧಿಸಿತ್ತು. ಶವೋಮಿಯ ಪ್ರತಿಸ್ಪರ್ಧಿ ಕಂಪನಿ ವಿವೊದ ಸ್ಮಾರ್ಟ್​ಫೋನ್​ಗಳ ರಫ್ತಿಗೆ ಬುಧವಾರ ಬೆಳಿಗ್ಗೆಯಷ್ಟೇ ಕೇಂದ್ರ ಸರ್ಕಾರ ತಡೆಯೊಡ್ಡಿತ್ತು. ಸ್ಮಾರ್ಟ್​​ಫೋನ್​ಗಳ ಮಾದರಿಗಳು ಮತ್ತು ಅವುಗಳ ಮೌಲ್ಯದ ಬಗ್ಗೆ ತಪ್ಪಾದ ವಿವರ ನೀಡಿದ್ದಕ್ಕಾಗಿ ಕಂದಾಯ ಗುಪ್ತಚರ ಘಟಕ ರಫ್ತಿಗೆ ತಡೆಯೊಡ್ಡಿದೆ ಎಂದು ಮೂಲಗಳು ಹೇಳಿದ್ದವು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ