Rakesh Jhunjhunwala: ಇದೇ ರಾಕೇಶ್ ಜುಂಜುನ್‌ವಾಲಾರ ಅಕಾಲಿಕ ಸಾವಿಗೆ ಕಾರಣವಾಯ್ತಾ? ಆಪ್ತರು ಹೇಳುವುದು ಏನು?

| Updated By: ಗಂಗಾಧರ​ ಬ. ಸಾಬೋಜಿ

Updated on: Aug 14, 2022 | 5:07 PM

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ರಾಕೇಶ್ ಜುಂಜುನ್‌ವಾಲಾ ಹೃದಯಾಘಾತದಿಂದ ತಮ್ಮ ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ. ಸದ್ಯ ರಾಕೇಶ್ ಜುಂಜುನ್‌ವಾಲಾರ ಸಾವಿಗೆ ಹಲವು ವಿಚಾರಗಳು ಕಾರಣವೆನ್ನಲಾಗುತ್ತಿದೆ.

Rakesh Jhunjhunwala: ಇದೇ ರಾಕೇಶ್ ಜುಂಜುನ್‌ವಾಲಾರ ಅಕಾಲಿಕ ಸಾವಿಗೆ ಕಾರಣವಾಯ್ತಾ? ಆಪ್ತರು ಹೇಳುವುದು ಏನು?
ಷೇರು ಮಾರುಕಟ್ಟೆಯ ದಿಗ್ಗಜ ರಾಕೇಶ್ ಜುಂಜುನ್‌ವಾಲಾ
Follow us on

ಖ್ಯಾತ ಉದ್ಯಮಿ ಮತ್ತು ಷೇರು ಮಾರುಕಟ್ಟೆಯ ದಿಗ್ಗಜ ರಾಕೇಶ್ ಜುಂಜುನ್‌ವಾಲಾ (Rakesh Jhunjhunwala) ಭಾನುವಾರ (14-08) ಬೆಳಗ್ಗೆ ಮುಂಬೈನಲ್ಲಿ ಇಹಲೋಕ ತ್ಯಜಿಸಿದ್ದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ರಾಕೇಶ್ ಜುಂಜುನ್‌ವಾಲಾ ಹೃದಯಾಘಾತದಿಂದ ತಮ್ಮ ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ. ಸದ್ಯ ರಾಕೇಶ್ ಜುಂಜುನ್‌ವಾಲಾರ ಸಾವಿಗೆ ಹಲವು ವಿಚಾರಗಳು ಕಾರಣವೆನ್ನಲಾಗುತ್ತಿದೆ. ರಾಕೇಶ್ ಜುಂಜುನ್‌ವಾಲಾರನ್ನು ಬಹಳ ಹತ್ತಿರದಿಂದ ಬಲ್ಲವರು ಹೇಳುವುದು ಏನೆಂದರೆ, ಅವರು ತಮ್ಮ ಬೆಳಗಿನ ಉಪಾಹಾರವನ್ನು ಸೇವಿಸಿ, ಕಚೇರಿಗೆ ಬಂದು ವ್ಯಾಪಾರ ಮಾಡಿದ್ದಾರೆ. ರಾತ್ರಿಯ ಊಟಕ್ಕೆ ಮನೆಗೆ ಹಿಂತಿರುಗಿ, ಮದ್ಯ (ಡ್ರಿಂಕ್ಸ್​) ಸೇವಿಸಿ ಮಲಗಿದ ಅವರು ಮರುದಿನ ಎದ್ದೇಳಲಿಲ್ಲ. ಆಗಸ್ಟ್ 14 ರ ಭಾನುವಾರ ಬೆಳಿಗ್ಗೆ 7 ಗಂಟೆಗೆ ಅವರ ನಿಧನದ ಸುದ್ದಿ ತಿಳಿಯಿತು. ಅವರ ಅಂತ್ಯವು ಅವರು ಬಯಸಿದ ರೀತಿಯಲ್ಲಿಯೇ ಕೊನೆಗೊಂಡಿದೆ ಎಂದು ಹೇಳಿದರು.

ಇದನ್ನೂ ಓದಿ: Rakesh Jhunjhunwala: ಭಾರತದ ವಾರನ್ ಬಫೆಟ್ ಎಂದೇ ಖ್ಯಾತರಾಗಿದ್ದ ‘ಮನಿ ಮ್ಯಾಗ್ನೆಟ್’ ರಾಕೇಶ್ ಜುಂಜುನ್​ವಾಲಾ ನಿಧನ

ತೀವ್ರ ಹೃದಯಾಘಾತವೇ ರಾಕೇಶ್ ಜುಂಜುನ್‌ವಾಲಾರ ಸಾವಿಗೆ ಕಾರಣವೆಂದರೆ ಹೇಳಲಾಗುತ್ತಿದೆ. ಹೃದಯಾಘಾತವು, ಹೃದಯ ಸ್ತಂಭನಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಜುಂಜುನ್‌ವಾಲಾ ಅವರು ರಕ್ತಕೊರತೆಯ ಹೃದಯ ಕಾಯಿಲೆಯ ರೋಗಿಯಾಗಿದ್ದರು. ಸಾಮಾನ್ಯ ಭಾಷೆಯಲ್ಲಿ, ಇದರರ್ಥ ಹೃದಯ ಸ್ನಾಯುಗಳಿಗೆ ರಕ್ತ ಪೂರೈಕೆಯ ಕೊರತೆಯಿದ್ದು, ಹೃದಯ ಸ್ನಾಯುಗಳಲ್ಲಿನ ಅಡೆತಡೆಗಳ ಕಾರಣದಿಂದಾಗಿರಬಹುದು ಎಂದು ಹೇಳಲಾಗುತ್ತಿದೆ. ಜೊತೆಗೆ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಮತ್ತು ಮಧುಮೇಹದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ಎರಡೂ ಕಿಡ್ನಿಗಳು ವಿಫಲವಾಗಿದ್ದು, ಡಯಾಲಿಸಿಸ್‌ಗೆ ಒಳಗಾಗಿದ್ದರು ಎಂದು ಅವರನ್ನು ಬಲ್ಲ ಕೆಲವರು ಹೇಳುತ್ತಾರೆ. ಇದರ ಪರಿಣಾಮವೆಂದರೆ ಜುಂಜುನ್‌ವಾಲಾ ಅವರು ಚಿಕಿತ್ಸೆ ಪಡೆಯುತ್ತಿದ್ದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಆಗಾಗ್ಗೆ ಭೇಟಿ ನೀಡಬೇಕಾಗಿತ್ತು.

ಇದನ್ನೂ ಓದಿ: Rakesh Jhunjhunwala: ‘ಬಿಗ್​​ ಬುಲ್’​ ರಾಕೇಶ್ ಜುಂಜುನ್​ವಾಲಾ ಬಗ್ಗೆ ನೀವು ತಿಳಿಯಬೇಕಾದ 5 ಅಪರೂಪದ ಸಂಗತಿಗಳಿವು

ಅವರ ಆರೋಗ್ಯ ಸಮಸ್ಯೆಗಳು ಎಷ್ಟರಮಟ್ಟಿಗೆ ಹೆಚ್ಚಾಗಿತ್ತು ಎಂದರೆ ಕಳೆದ ಆರು ತಿಂಗಳಲ್ಲಿ ಸುಮಾರು ನಾಲ್ಕು ತಿಂಗಳು ಆಸ್ಪತ್ರೆಯಲ್ಲಿ ಕಳೆದಿದ್ದಾರೆ. ಅವರು ಸ್ಥೂಲಕಾಯತೆಯನ್ನು ಹೊಂದಿದ್ದರು, ಧೂಮಪಾನ ಮತ್ತು ಮದ್ಯಪಾನವನ್ನು ಅವರು ಬಿಟ್ಟಿರಲಿಲ್ಲ. ಒಟ್ಟಿನಲ್ಲಿ ಅವರ ಅಗಲಿಕೆಯು ಹಲವಾರು ಜನರಿಗೆ ಆಘಾತವನ್ನುಂಟುಮಾಡಿದ್ದು, ಗಣ್ಯರಿಂದ ಸಂತಾಪಗಳು ಹರಿದು ಬರುತ್ತಿವೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 5:05 pm, Sun, 14 August 22