Raksha Bandhan: ಆಗಸ್ಟ್ 30, 31- ಎರಡು ದಿನ ರಕ್ಷಾಬಂಧನ; ಯಾವತ್ತು ಬ್ಯಾಂಕಿಗೆ ರಜೆ?; ಇಲ್ಲಿದೆ ಡೀಟೇಲ್ಸ್

Bank Holidays on August 30 and 31st: ರಕ್ಷಾ ಬಂಧನ್ ಹಬ್ಬ ಆಗಸ್ಟ್ 30 ಮತ್ತು 31ರಂದು ಇದೆ. ದೇಶದ ಕೆಲವೆಡೆ 30ಕ್ಕೆ, ಇನ್ನೂ ಕೆಲವೆಡೆ 31ಕ್ಕೆ ರಕ್ಷಾಬಂಧನ್ ಆಚರಿಸಲಾಗುತ್ತದೆ. ವಿವಿಧ ಪ್ರದೇಶಗಳಲ್ಲಿ ಇವೆರಡು ದಿನಗಳು ಬ್ಯಾಂಕುಗಳಿಗೆ ರಜೆ ಇರುತ್ತದೆ. ಕರ್ನಾಟಕದಲ್ಲಿ ಇವ್ಯಾವ ದಿನದಲ್ಲೂ ಬ್ಯಾಂಕ್ ರಜೆ ಇಲ್ಲ. ಸೆಪ್ಟೆಂಬರ್ ತಿಂಗಳಲ್ಲಿ ವಿನಾಯಕ ಚತುರ್ಥಿ ಮತ್ತು ಈದ್ ಮಿಲಾದ್ ಸೇರಿ ಬೆಂಗಳೂರಿನಲ್ಲಿ ಬ್ಯಾಂಕುಗಳಿಗೆ 8 ದಿನ ರಜೆ ಇರುತ್ತದೆ.

Raksha Bandhan: ಆಗಸ್ಟ್ 30, 31- ಎರಡು ದಿನ ರಕ್ಷಾಬಂಧನ; ಯಾವತ್ತು ಬ್ಯಾಂಕಿಗೆ ರಜೆ?; ಇಲ್ಲಿದೆ ಡೀಟೇಲ್ಸ್
ರಕ್ಷಾ ಬಂಧನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 30, 2023 | 10:36 AM

ನವದೆಹಲಿ, ಆಗಸ್ಟ್ 30: ಅಣ್ಣ ತಂಗಿಯರ ಬಾಂಧವ್ಯದ ಸಂಕೇತವಾಗಿ ರಕ್ಷಾ ಬಂಧನ ಹಬ್ಬವನ್ನು (Raksha Bandhan Festival) ದೇಶಾದ್ಯಂತ ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 30 ಮತ್ತು 31ರಂದು ರಕ್ಷಾ ಬಂಧನ್ ಇದೆ. ಇವತ್ತು ಕೆಲ ನಗರಗಳಲ್ಲಿ ಆಚರಿಸಿದರೆ, ನಾಳೆ ಬೇರೆ ಕೆಲ ನಗರಗಳಲ್ಲಿ ರಕ್ಷಾ ಬಂಧನ್ ಹಬ್ಬ ಇದೆ. ಆರ್​ಬಿಐ ಕ್ಯಾಲೆಂಡರ್​ನ ಆಗಸ್ಟ್ ತಿಂಗಳ ರಜಾ ದಿನಗಳ ಪಟ್ಟಿಯಲ್ಲಿ (Bank holidays list) 30 ಮತ್ತು 31ನೇ ತಾರೀಖು ರಕ್ಷಾ ಬಂಧನ ಇದೆ. ಕೆಲ ನಗರಗಳಲ್ಲಿ ಬ್ಯಾಂಕುಗಳಿಗೆ ಆಗಸ್ಟ್ 30ರಂದು ರಜೆ ಇದ್ದರೆ, ಇನ್ನೂ ಕೆಲ ಬ್ಯಾಂಕುಗಳಲ್ಲಿ ಆಗಸ್ಟ್ 31ರಂದು ರಜೆ ಇದೆ.

ರಕ್ಷಾ ಬಂಧನ ಪ್ರಯುಕ್ತ ಬ್ಯಾಂಕುಗಳು ರಜೆ ಇರುವ ನಗರಗಳಿವು:

ಆಗಸ್ಟ್ 30: ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ) ಮತ್ತು ಜೈಪುರ್ (ರಾಜಸ್ಥಾನ).

ಆಗಸ್ಟ್ 31: ತಿರುವನಂತಪುರಂ, ಕೊಚ್ಚಿ (ಕೇರಳ), ಗ್ಯಾಂಗ್​ಟಕ್ (ಸಿಕ್ಕಿಂ), ಲಕ್ನೋ, ಕಾನಪುರ್ (ಉತ್ತರ ಪ್ರದೇಶ), ಡೆಹ್ರಾಡೂನ್ (ಉತ್ತರಾಖಂಡ್) ನಗರಗಳಲ್ಲಿ ರಜೆ ಇದೆ.

ಇದನ್ನೂ ಓದಿ: ಎರಡು ವರ್ಷದಿಂದ ವಹಿವಾಟು ಕಾಣದೆ ನಿಷ್ಕ್ರಿಯಗೊಂಡ ಬ್ಯಾಂಕ್ ಖಾತೆಗಳೆಷ್ಟು? ಜನ್ ಧನ್ ಖಾತೆಗಳೆಷ್ಟು? ಇಲ್ಲಿದೆ ಡೀಟೇಲ್ಸ್

ಕರ್ನಾಟಕದಲ್ಲಿ ರಕ್ಷಾ ಬಂಧನ್ ಹಬ್ಬಕ್ಕೆ ರಜೆ ಇಲ್ಲ

ಬೆಂಗಳೂರು ಸೇರಿದಂತೆ ಕರ್ನಾಟಕ ಯಾವ ಕಡೆಯೂ ರಕ್ಷಾ ಬಂಧನ್ ಹಬ್ಬದ ಪ್ರಯುಕ್ತ ರಜೆಗಳಿಲ್ಲ. ಆಗಸ್ಟ್ 30 ಆಗಲೀ, 31ರಲ್ಲಾಗಲೀ ರಾಜ್ಯದ ಬ್ಯಾಂಕುಗಳಿಗೆ ರಜೆ ಇರುವುದಿಲ್ಲ. ಯಥಾ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ.

ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕುಗಳಿಗೆ ಯಾವ್ಯಾವತ್ತು ರಜೆ?

ಆರ್​ಬಿಐ ಕ್ಯಾಲೆಂಡರ್ ಪ್ರಕಾರ ಭಾರತದಾದ್ಯಂತ ಸೆಪ್ಟಂಬರ್ ತಿಂಗಳಲ್ಲಿ 16 ದಿನ ರಜೆ ಇದೆ. ಭಾನುವಾರ ಮತ್ತು ಶನಿವಾರದ ರಜೆಗಳೂ ಇದರಲ್ಲಿ ಸೇರಿವೆ. ಈದ್ ಮಿಲಾದ್, ಕೃಷ್ಣ ಜನ್ಮಾಷ್ಟಮಿ, ವಿನಾಯಕ ಚತುರ್ಥಿ ಮೊದಲಾದ ಹಬ್ಬಗಳ ರಜೆಯೂ ಇದರಲ್ಲಿ ಒಳಗೊಂಡಿದೆ. ಈ ಪೈಕಿ ಕರ್ನಾಟಕದಲ್ಲಿ 8 ದಿನ ರಜೆ ಇದೆ. ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಬಿಟ್ಟರೆ ಉಳಿದವರು ಭಾನುವಾರ ಮತ್ತು ಶನಿವಾರದ ರಜೆಗಳಾಗಿವೆ.

ಇದನ್ನೂ ಓದಿ: ಸೆಪ್ಟೆಂಬರ್​ನಲ್ಲಿ ಬ್ಯಾಂಕುಗಳಿಗೆ 16 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವತ್ತು ರಜೆ ಇದೆ, ಇದಲ್ಲಿದೆ ಪಟ್ಟಿ

ಬೆಂಗಳೂರಿನಲ್ಲಿ 2023ರ ಸೆಪ್ಟೆಂಬರ್​ನಲ್ಲಿ ಬ್ಯಾಂಕ್ ರಜೆಗಳ ಪಟ್ಟಿ

  1. ಸೆಪ್ಟೆಂಬರ್ 3: ಭಾನುವಾರ
  2. ಸೆಪ್ಟೆಂಬರ್ 9: ಎರಡನೇ ಶನಿವಾರ
  3. ಸೆಪ್ಟೆಂಬರ್ 10: ಭಾನುವಾರ
  4. ಸೆಪ್ಟೆಂಬರ್ 17: ಭಾನುವಾರ
  5. ಸೆಪ್ಟೆಂಬರ್ 18: ವಿನಾಯಕ ಚತುರ್ಥಿ
  6. ಸೆಪ್ಟೆಂಬರ್ 23: ನಾಲ್ಕನೇ ಶನಿವಾರ
  7. ಸೆಪ್ಟೆಂಬರ್ 24: ಭಾನುವಾರ
  8. ಸೆಪ್ಟೆಂಬರ್ 28: ಈದ್ ಮಿಲಾದ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ