Axis Bank: ನಿಯಮಾವಳಿಗಳ ಉಲ್ಲಂಘನೆಗಾಗಿ ಆಕ್ಸಿಸ್​ ಬ್ಯಾಂಕ್​ಗೆ 10 ಕೋಟಿ ರೂ. ದಂಡ ಹಾಕಿದ ಆರ್​ಬಿಐ

| Updated By: Srinivas Mata

Updated on: Jul 29, 2021 | 12:21 PM

ಪಾವತಿ ವ್ಯವಸ್ಥೆಗೆ ಸಂಬಂಧಿಸಿದ ಕಾರ್ಪೊರೇಟ್ ಗ್ರಾಹಕರಾಗಿ ಬ್ಯಾಂಕ್​ಗಳ ಮಧ್ಯದ ವಹಿವಾಟು, ಸೈಬರ್ ಭದ್ರತೆ ಮತ್ತು ಹಣಕಾಸು ಒಳಗೊಳ್ಳುವಿಕೆಯೂ ಸೇರಿದಂತೆ ಕೇಂದ್ರ ಬ್ಯಾಂಕ್​ನ ಕೆಲವು ನಿಯಮಾವಳಿಗಳನ್ನು ಪಾಲನೆ ಮಾಡಿಲ್ಲ ಎಂಬ ಕಾರಣಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಆಕ್ಸಿಸ್ ಬ್ಯಾಂಕ್ ಮೇಲೆ ಬುಧವಾರ 5 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಈ ಕ್ರಮಕ್ಕೆ ಸಂಬಂಧಿಸಿದಂತೆ ಆರ್​ಬಿಐ ಸ್ಪಷ್ಟನೆ ನೀಡಿದ್ದು, ನಿಯಂತ್ರಕ ಸಂಸ್ಥೆಯ ನಿಯಮಾವಳಿಗಳನ್ನು ಪಾಲನೆ ಮಾಡುವಲ್ಲಿ ಕೊರತೆ ಕಂಡುಬಂದಿದೆ ಮತ್ತು ಯಾವುದೇ ವಹಿವಾಟಿನ ಸಿಂಧುತ್ವ ಘೋಷಣೆ ಮಾಡುವ ಉದ್ದೇಶ […]

Axis Bank: ನಿಯಮಾವಳಿಗಳ ಉಲ್ಲಂಘನೆಗಾಗಿ ಆಕ್ಸಿಸ್​ ಬ್ಯಾಂಕ್​ಗೆ 10 ಕೋಟಿ ರೂ. ದಂಡ ಹಾಕಿದ ಆರ್​ಬಿಐ
ಆಕ್ಸಿಸ್ ಬ್ಯಾಂಕ್ ಪೋಷಕರು ಈ ಖಾತೆಯನ್ನು 5,000 ರೂಪಾಯಿಯ ಆರಂಭಿಕ ಬ್ಯಾಲೆನ್ಸ್‌ನೊಂದಿಗೆ ತೆರೆಯಬಹುದು. ಪೋಷಕರು ಮತ್ತು ಪಾಲಕರು ಈ ಖಾತೆಯ ಸಂಪೂರ್ಣ ನಿಯಂತ್ರಣದಲ್ಲಿ ಇರುತ್ತಾರೆ. ಮಾಸಿಕ ಸ್ಟೇಟ್​ಮೆಂಟ್​ಗಳನ್ನು ಬ್ಯಾಂಕ್​ನಿಂದ ನೀಡಲಾಗುತ್ತದೆ. ಪ್ರತಿ ವಹಿವಾಟಿನ ಇಮೇಲ್ ಮತ್ತು ಎಸ್ಸೆಮ್ಮೆಸ್ ಅಲರ್ಟ್​ಗಳ ಉಚಿತ ಸೇವೆ ಲಾಭವನ್ನು ಪಡೆಯಬಹುದು. ಈ ಖಾತೆಯ ಕೆಲವು ವಿಶೇಷಗಳೆಂದರೆ, ಆರು ತಿಂಗಳಿಗೊಮ್ಮೆ ಕಾರ್ಡ್ ಅನ್ನು ಸ್ವೈಪ್ ಮಾಡಿದರೆ 2,00,000 ರೂಪಾಯಿ ಮೌಲ್ಯದ ವಯಕ್ತಿಕ ಅಪಘಾತ ವಿಮಾ ರಕ್ಷಣೆಯೊಂದಿಗೆ ಬರುತ್ತದೆ. ಪೋಷಕರು ತಮ್ಮ ಮಗುವಿನ ಡೆಬಿಟ್ ಕಾರ್ಡ್ ಅನ್ನು ಮೋಸದ ಅಥವಾ ಕಾನೂನುಬಾಹಿರ ಬಳಕೆಯಿಂದ ರಕ್ಷಿಸಲು ಒಂದು ಕ್ಷಣದ ಸೂಚನೆಯಲ್ಲಿ ಬ್ಯಾಂಕ್ ಶಾಖೆಯಿಂದ ಖರೀದಿ ರಕ್ಷಣೆ ಹೊಣೆಗಾರಿಕೆ ಮತ್ತು ಕಾರ್ಡ್​ ಕಳೆದುಹೋದಲ್ಲಿ ಅದಕ್ಕೂ ಸೇರಿ ಲಯಾಬಿಲಿಟಿ ಸಹ ಪಡೆಯಬಹುದು. ಅಂದಹಾಗೆ ಈ ಪಾಲಿಸಿಗಳ ಮೌಲ್ಯ ಸುಮಾರು 50,000 ರೂಪಾಯಿಯಷ್ಟಿರುತ್ತದೆ.
Follow us on

ಪಾವತಿ ವ್ಯವಸ್ಥೆಗೆ ಸಂಬಂಧಿಸಿದ ಕಾರ್ಪೊರೇಟ್ ಗ್ರಾಹಕರಾಗಿ ಬ್ಯಾಂಕ್​ಗಳ ಮಧ್ಯದ ವಹಿವಾಟು, ಸೈಬರ್ ಭದ್ರತೆ ಮತ್ತು ಹಣಕಾಸು ಒಳಗೊಳ್ಳುವಿಕೆಯೂ ಸೇರಿದಂತೆ ಕೇಂದ್ರ ಬ್ಯಾಂಕ್​ನ ಕೆಲವು ನಿಯಮಾವಳಿಗಳನ್ನು ಪಾಲನೆ ಮಾಡಿಲ್ಲ ಎಂಬ ಕಾರಣಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಆಕ್ಸಿಸ್ ಬ್ಯಾಂಕ್ ಮೇಲೆ ಬುಧವಾರ 5 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಈ ಕ್ರಮಕ್ಕೆ ಸಂಬಂಧಿಸಿದಂತೆ ಆರ್​ಬಿಐ ಸ್ಪಷ್ಟನೆ ನೀಡಿದ್ದು, ನಿಯಂತ್ರಕ ಸಂಸ್ಥೆಯ ನಿಯಮಾವಳಿಗಳನ್ನು ಪಾಲನೆ ಮಾಡುವಲ್ಲಿ ಕೊರತೆ ಕಂಡುಬಂದಿದೆ ಮತ್ತು ಯಾವುದೇ ವಹಿವಾಟಿನ ಸಿಂಧುತ್ವ ಘೋಷಣೆ ಮಾಡುವ ಉದ್ದೇಶ ಇಲ್ಲ ಎಂದು ಆರ್​ಬಿಐ ಹೇಳಿದೆ.

ವಂಚನೆ ಮತ್ತು ಅದಕ್ಕೆ ಸಂಬಂಧಿಸಿದ ವಹಿವಾಟುಗಳ ಹಿನ್ನೆಲೆಯಲ್ಲಿ ಬ್ಯಾಂಕ್ ಮೇಲೆ ದಂಡ ವಿಧಿಸಲಾಗಿದೆ. ಈ ಬಗ್ಗೆ 2020ರ ಜೂನ್ ತಿಂಗಳಲ್ಲಿ ಬ್ಯಾಂಕ್​ನಿಂದ ಆರ್​ಬಿಐಗೆ ಬ್ಯಾಂಕ್​ನಿಂದ ದೂರು ನೀಡಲಾಗಿತ್ತು. ನಿಯಂತ್ರಕ ಸಂಸ್ಥೆಯಿಂದ ಪರಿಶೀಲನೆ ನಡೆಸುವ ವೇಳೆಯಲ್ಲಿ ನಿಯಮಾವಳಿಗಳ ಉಲ್ಲಂಘನೆ ಆಗಿರುವುದು ತಿಳಿದುಬಂದಿದೆ.

ಭಾರತದಲ್ಲಿ ಬ್ಯಾಂಕ್​ಗಳ ನಿಯಮಾವಳಿಗಳನ್ನು ಸರಿಯಾಗಿ ಪಾಲನೆ ಮಾಡಲಾಗುತ್ತಿದೆಯೋ ಇಲ್ಲವೋ ಎಂಬ ಬಗ್ಗೆ ನಿಗಾ ಮಾಡುವ ನಿಯಂತ್ರಕ ಸಂಸ್ಥೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ. ಈ ಹಿಂದೆ ಕೂಡ ಹಲವು ಸಂದರ್ಭಗಳಲ್ಲಿ ಬ್ಯಾಂಕ್​ಗಳ ಮೇಲೆ ನಿಯಮಾವಳಿ ಉಲ್ಲಂಘನೆಯ ಮೇಲೆ ದಂಡ ವಿಧಿಸಲಾಗಿದೆ.

ಇತ್ತೀಚೆಗೆ ಒಂದೇ ದಿನದಲ್ಲಿ ಹದಿನಾಲ್ಕು ಬ್ಯಾಂಕ್​ಗಳ ಮೇಲೆ ಆರ್​ಬಿಐನಿಂದ ದಂಡ ವಿಧಿಸಲಾಗಿತ್ತು. ಆ ಸಂದರ್ಭದಲ್ಲಿ ಎಲ್ಲ ಬ್ಯಾಂಕ್​ಗಳ ವಹಿವಾಟು ಸಹ ಡಿಎಚ್​ಎಫ್​ಎಲ್​ಗೆ ಸಂಬಂಧಿಸಿದ್ದವೇ ಆಗಿದ್ದವು. ಇನ್ನು ಎಚ್​ಡಿಎಫ್​ಸಿ ಬ್ಯಾಂಕ್ ಸೇರಿದಂತೆ ವಿವಿಧ ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳ ಮೇಲೂ ದಂಢ ಹಾಕಿದ ಉದಾಹರಣೆಗಳು ಕಂಡುಬರುತ್ತವೆ.

ಇದನ್ನೂ ಓದಿ: ಎಸ್​ಬಿಐ ಸೇರಿದಂತೆ ಒಟ್ಟು 14 ಬ್ಯಾಂಕ್​ಗಳಿಗೆ ಒಂದೇ ದಿನದಲ್ಲಿ 50 ಲಕ್ಷದಿಂದ 2 ಕೋಟಿ ತನಕ ದಂಡ ವಿಧಿಸಿದ ಆರ್​ಬಿಐ

ಇದನ್ನೂ ಓದಿ: Penalty to HDFC Bank: ಎಚ್​ಡಿಎಫ್​ಸಿ ಬ್ಯಾಂಕ್​ಗೆ ರೂ. 10 ಕೋಟಿ ದಂಡ ಹಾಕಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

(RBI Imposed Penalty Of Rs 5 Crore On Axis Bank For Non Compliance With Regulator Norms)