
ನವದೆಹಲಿ, ಜೂನ್ 6: ರಿಪೋ ದರವನ್ನು 50 ಮೂಲಾಂಕಗಳಷ್ಟು ಭರ್ಜರಿ ಕಡಿತ ಮಾಡಿರುವ ಆರ್ಬಿಐ (RBI MPC meeting) ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಆಶಾದಾಯಕವಾಗಿದೆ. ಜಾಗತಿಕವಾಗಿ ಬಹಳ ಅನಿಶ್ಚಿತ ಸ್ಥಿತಿ ಇರುವುದರಿಂದ ಆರ್ಥಿಕ ಬೆಳವಣಿಗೆ ದೃಷ್ಟಿಯಿಂದ ಮುನ್ನೆಚ್ಚರಿಕೆಯಾಗಿ ರಿಪೋ ದರವನ್ನು ಆರ್ಬಿಐ ಇಳಿಸಿದೆ. ಆದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 6.5ರಷ್ಟು ಬೆಳೆಯಬಹುದು ಎಂದು ಹಿಂದಿನ ಎಂಪಿಸಿ ಸಭೆಯಲ್ಲಿ ಮಾಡಿದ್ದ ಅಂದಾಜನ್ನೇ ಆರ್ಬಿಐ ಪುನರುಚ್ಚರಿಸಿದೆ.
ವಾರ್ಷಿಕ ಹಣದುಬ್ಬರ ದರ ಮಾತ್ರವಲ್ಲ, ತ್ರೈಮಾಸಿಕ ಜಿಡಿಪಿ ದರಗಳ ಬಗೆಗಿನ ಆರ್ಬಿಐ ಅಂದಾಜಿನಲ್ಲಿ ಬದಲಾವಣೆ ಆಗಿಲ್ಲ. 2025-26ಕ್ಕೆ ಜಿಡಿಪಿ ವೃದ್ಧಿ ಎಷ್ಟಿರಬಹುದು ಎಂದು ಆರ್ಬಿಐ ಮಾಡಿರುವ ಅಂದಾಜು ಈ ಕೆಳಕಂಡಂತಿದೆ:
2025-26ಕ್ಕೆ ಒಟ್ಟಾರೆ ಜಿಡಿಪಿ ದರ: ಶೇ. 6.5
ಇದನ್ನೂ ಓದಿ: ಆರ್ಬಿಐ ರಿಪೋ ದರ 50 ಮೂಲಾಂಕಗಳಷ್ಟು ಕಡಿತ; ಬಡ್ಡಿದರ ಈಗ ಶೇ. 5.50ಕ್ಕೆ ಇಳಿಕೆ
ಹಣದುಬ್ಬರದ ಬಗ್ಗೆ ರಿಸರ್ವ್ ಬ್ಯಾಂಕ್ ಬಹಳ ವಿಶ್ವಾಸದಲ್ಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರವು ಶೇ. 3.7ರಷ್ಟಿರಬಹುದು ಎಂದು ಅಂದಾಜು ಮಾಡಿದೆ. ಹಿಂದಿನ ಸಭೆಯಲ್ಲಿ ಅದು ಹಣದುಬ್ಬರ ಶೇ. 4ರಷ್ಟಿರಬಹುದು ಎಂದು ಅಭಿಪ್ರಾಯಪಟ್ಟಿತ್ತು. ಈ ಬಾರಿ ಮುಂಗಾರು ಮಳೆ ಬೆಳೆ ಉತ್ತಮವಾಗಿ ಆಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಪ್ರಮಾಣ ತಗ್ಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ಆರ್ಬಿಐ ಹಣದುಬ್ಬರ ಕಡಿಮೆ ಆಗಬಹುದು ಎಂದು ಹೇಳಿದೆ.
ಇಡೀ ವರ್ಷಕ್ಕೆ: ಶೇ. 3.7
ಇದನ್ನೂ ಓದಿ: ಸರ್ಕಾರಕ್ಕೆ ಅದಾನಿ ಗ್ರೂಪ್ನಿಂದ ಸಖತ್ ಟ್ಯಾಕ್ಸ್ ಕಲೆಕ್ಷನ್; ಇಡೀ ಬೆಂಗಳೂರು ಮೆಟ್ರೋ ನಿರ್ಮಾಣಕ್ಕಾಗುವಷ್ಟು ಹಣ ಅದು
ಆರ್ಬಿಐ ಅಂದಾಜು ಮಾಡಿರುವಂತೆ ಹಣದುಬ್ಬರವು ಶೇ. 3.7ಕ್ಕೆ ಮಿತಿಗೊಂಡರೆ ಅದು ಗಮನಾರ್ಹ ಸಾಧನೆ ಎನಿಸಲಿದೆ. ಕೋವಿಡ್ ಬಳಿಕ ಹಣದುಬ್ಬರವು ಶೇ. 7ಕ್ಕಿಂತಲೂ ಹೆಚ್ಚಿನ ಮಟ್ಟಕ್ಕೆ ಹೋಗಿತ್ತು. ಆರ್ಬಿಐ ಹಣದುಬ್ಬರವನ್ನು ಶೇ. 4ಕ್ಕೆ ಇಳಿಸುವ ಟಾರ್ಗೆಟ್ ಇಟ್ಟಿತ್ತು. ಹಣದುಬ್ಬರದ ತಾಳಿಕೆ ಮಿತಿಯಾಗಿ ಶೇ. 2ರಿಂದ 6 ಎಂದು ನಿಗದಿ ಮಾಡಿದೆ. ಹಣದುಬ್ಬರವು ಈ ತಾಳಿಕೆ ಮಿತಿಯೊಳಗೇ ಇರುವುದು ಆರ್ಬಿಐನ ಮುಖ್ಯ ಗುರಿಯಾಗಿದೆ.
ಈಗ್ಗೆ ಹಲವು ತಿಂಗಳಿಂದ ಹಣದುಬ್ಬರವು ಈ ತಾಳಿಕೆ ಮಿತಿಯೊಳಗೆಯೇ ಇದೆ. ಇದರಿಂದ ಆರ್ಬಿಐ ತನ್ನ ಬಡ್ಡಿದರಗಳನ್ನು ಇಳಿಸುವಂತಹ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ