AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಕ್ಕೆ ಅದಾನಿ ಗ್ರೂಪ್​​ನಿಂದ ಸಖತ್ ಟ್ಯಾಕ್ಸ್ ಕಲೆಕ್ಷನ್; ಇಡೀ ಬೆಂಗಳೂರು ಮೆಟ್ರೋ ನಿರ್ಮಾಣಕ್ಕಾಗುವಷ್ಟು ಹಣ ಅದು

Adani group highest tax contributing business empire: ಅದಾನಿ ಗ್ರೂಪ್​​ನ ಕಂಪನಿಗಳಿಂದ ಸರ್ಕಾರಕ್ಕೆ ಸಲ್ಲಿಕೆಯಾದ ತೆರಿಗೆ ಮೊತ್ತ 74,945 ಕೋಟಿ ರೂ. ಇದು 2024-25ರ ಒಂದೇ ವರ್ಷದಲ್ಲಿ ಸಂದಾಯವಾದ ಹಣ. ಬೆಂಗಳೂರು ಮೆಟ್ರೋದ ಇಲ್ಲಿಯವರೆಗಿನ ಯೋಜನೆಗಳ ಎಲ್ಲಾ ವೆಚ್ಚವನ್ನು ಭರಿಸುವಷ್ಟು ಹಣ ಇದು. ಅದಾನಿ ಪೋರ್ಟ್ಸ್, ಅದಾನಿ ಎಂಟರ್​​​ಪ್ರೈಸಸ್, ಅದಾನಿ ಸಿಮೆಂಟ್ಸ್ ಕಂಪನಿಗಳು ಅತಿಹೆಚ್ಚು ಟ್ಯಾಕ್ಸ್ ಕೊಡುಗೆ ನೀಡಿವೆ.

ಸರ್ಕಾರಕ್ಕೆ ಅದಾನಿ ಗ್ರೂಪ್​​ನಿಂದ ಸಖತ್ ಟ್ಯಾಕ್ಸ್ ಕಲೆಕ್ಷನ್; ಇಡೀ ಬೆಂಗಳೂರು ಮೆಟ್ರೋ ನಿರ್ಮಾಣಕ್ಕಾಗುವಷ್ಟು ಹಣ ಅದು
ಗೌತಮ್ ಅದಾನಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 05, 2025 | 7:01 PM

Share

ಬೆಂಗಳೂರು, ಜೂನ್ 5: ಅದಾನಿ ಗ್ರೂಪ್ ಸಂಸ್ಥೆಗೆ ಸೇರಿದ ವಿವಿಧ ಕಂಪನಿಗಳು 2024-25ರ ಹಣಕಾಸು ವರ್ಷದಲ್ಲಿ ಸರ್ಕಾರಕ್ಕೆ ಪಾವತಿಸಿರುವ ತೆರಿಗೆಗಳನ್ನು ಒಟ್ಟು ಸೇರಿಸಿದರೆ ಬರೋಬ್ಬರಿ 74,945 ಕೋಟಿ ರೂ ಆಗುತ್ತದೆ. ಹಿಂದಿನ ವರ್ಷದಲ್ಲಿ (2023-24) ಅದಾನಿ ಗ್ರೂಪ್​​ನಿಂದ (Adani group) ಸರ್ಕಾರಕ್ಕೆ 58,104 ಕೋಟಿ ರೂ ಟ್ಯಾಕ್ಸ್ ಪಾವತಿಯಾಗಿತ್ತು. ಈ ವರ್ಷ ಅದು ನೀಡಿದ ತೆರಿಗೆ ಹಣದಲ್ಲಿ ಶೇ. 29ರಷ್ಟು ಹೆಚ್ಚಾಗಿದೆ. ಭಾರತದಲ್ಲಿ ಅತಿಹೆಚ್ಚು ತೆರಿಗೆ ನೀಡುವ ಬ್ಯುಸಿನೆಸ್ ಗ್ರೂಪ್ ಇದಾಗಿದೆ.

ಅದಾನಿ ಗ್ರೂಪ್​​ನಿಂದ ಸಿಕ್ಕ ತೆರಿಗೆ ಹಣ ಸಾಮಾನ್ಯ ಮೊತ್ತವಲ್ಲ…

ಅದಾನಿ ಗ್ರೂಪ್ 2024-25ರಲ್ಲಿ ನೀಡಿದ ಒಟ್ಟು ತೆರಿಗೆ ಹಣ 75,000 ಕೋಟಿ ರೂ. ಇದು ಸಾಮಾನ್ಯ ಮೊತ್ತವಲ್ಲ. ಬೆಂಗಳೂರು ಮೆಟ್ರೋ ಯೋಜನೆಯ ಇಲ್ಲಿಯವರೆಗಿನ ವೆಚ್ಚವನ್ನು ಭರಿಸುವಷ್ಟು ಹಣ ಇದು. ಅಂದರೆ, ನಮ್ಮ ಮೆಟ್ರೋದ ಮೊದಲ ಹಂತ, ಎರಡನೇ ಹಂತ ಹಾಗೂ ಮೂರನೇ ಹಂತದ ಯೋಜನೆಯ ಎಲ್ಲ ವೆಚ್ಚವನ್ನೂ ಈ ಹಣದಿಂದ ಭರಿಸಬಹುದು.

ಇದನ್ನೂ ಓದಿ: ವಿರಳ ಭೂಖನಿಜದೊಂದಿಗೆ ಚೀನಾ ಆಟ; ಇಡೀ ವಿಶ್ವಕ್ಕೆ ಸಂಕಟ; ಭಾರತದಿಂದ ಪರ್ಯಾಯ ಮಾರ್ಗ ಹುಡುಕಾಟ

ಭಾರೀ ಉದ್ದಿಮೆಗಳಿರುವ ಅದಾನಿ ಗ್ರೂಪ್

ಅದಾನಿ ಗ್ರೂಪ್​ನಲ್ಲಿ 10ರಿಂದ 20 ಕಂಪನಿಗಳಿವೆ. ಅದಾನಿ ಎಂಟರ್​​ಪ್ರೈಸಸ್, ಅದಾನಿ ಪೋರ್ಟ್ಸ್, ಅದಾನಿ ಸಿಮೆಂಟ್ಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪವರ್, ಅದಅನಿ ಎನರ್ಜಿ ಸಲ್ಯೂಷನ್ಸ್, ಅದಾನಿ ಡಿಫೆನ್ಸ್, ಅದಾನಿ ವಿಲ್ಮರ್, ಅದಾನಿ ಟೋಟಲ್ ಗ್ಯಾಸ್ ಇತ್ಯಾದಿ ಕಂಪನಿಗಳಿವೆ. ಈ ಎಲ್ಲಾ ಕಂಪನಿಗಳಿಂದ ಸರ್ಕಾರಕ್ಕೆ ಸಂದಾಯವಾದ ತೆರಿಗೆ ಹಣ ಅದು. ಇದರಲ್ಲಿ ಅದಾನಿ ಎಂಟರ್​​ಪ್ರೈಸಸ್, ಅದಾನಿ ಸಿಮೆಂಟ್, ಅದಾನಿ ಪೋರ್ಟ್ಸ್ ಮತ್ತು ಅದಾನಿ ಗ್ರೀನ್ ಎನರ್ಜಿ ಕಂಪನಿಗಳಿಂದ ಅತಿಹೆಚ್ಚು ಟ್ಯಾಕ್ಸ್ ಸಲ್ಲಿಕೆ ಆಗಿದೆ.

ಒಟ್ಟಾರೆ 74,945 ಕೋಟಿ ರೂನಲ್ಲಿ ನೇರ ತೆರಿಗೆ ರೂಪದಲ್ಲಿ 28,720 ಕೋಟಿ ರೂ, ಇನ್​ಡೈರೆಕ್ಟ್ ಟ್ಯಾಕ್ಸ್ ರೂಪದಲ್ಲಿ 45,407 ಕೋಟಿ ರೂ ಸಲ್ಲಿಕೆ ಆಗಿರುವುದು ತಿಳಿದುಬಂದಿದೆ.

ಇತರ ಕಾರ್ಪೊರೇಟ್ ಕಂಪನಿಗಳಿಂದ ಎಷ್ಟು ಟ್ಯಾಕ್ಸ್?

ಅದಾನಿ ಗ್ರೂಪ್ ಬಿಟ್ಟರೆ ಭಾರತದಲ್ಲಿ ಅತಿಹೆಚ್ಚು ಟ್ಯಾಕ್ಸ್ ಕೊಡುಗೆ ನೀಡುವುದು ಟಾಟಾ ಗ್ರೂಪ್. ಇದರಲ್ಲಿ 25ಕ್ಕೂ ಹೆಚ್ಚು ಕಂಪನಿಗಳಿವೆ. 2022-23ರಲ್ಲೇ ಈ ಗ್ರೂಪ್ ಕಂಪನಿಗಳಿಂದ 30,000 ಕೋಟಿ ರೂನಷ್ಟು ಟ್ಯಾಕ್ಸ್ ಸಂದಾಯವಾಗಿತ್ತು.

ಇದನ್ನೂ ಓದಿ: ಟಾಟಾಗೆ ಮತ್ತೊಂದು ಆ್ಯಪಲ್ ಬ್ಯುಸಿನೆಸ್; ಐಫೋನ್, ಮ್ಯಾಕ್​​ಬುಕ್ ದುರಸ್ತಿ ಸರ್ವಿಸ್ ವ್ಯವಹಾರ ಪಡೆದ ಟಾಟಾ ಕಂಪನಿ

ಮುಕೇಶ್ ಅಂಬಾನಿಯವರ ರಿಲಾಯನ್ಸ್ ಗ್ರೂಪ್​​ಗೆ ಸೇರಿದ ಕಂಪನಿಗಳಿಂದಲೂ ಸಾಕಷ್ಟು ಟ್ಯಾಕ್ಸ್ ಬರುತ್ತದೆ. ಬಿರ್ಲಾ ಗ್ರೂಪ್, ಮಹೀಂದ್ರ, ಜೆಎಸ್​​ಡಬ್ಲ್ಯು, ಬಜಾಜ್, ವೇದಾಂತ, ಎಲ್ ಅಂಡ್ ಟಿ, ಗೋದ್ರೇಜ್, ಹಿಂದೂಜಾ ಇತ್ಯಾದಿ ದೊಡ್ಡ ದೊಡ್ಡ ಬ್ಯುಸಿನೆಸ್ ಗ್ರೂಪ್​​ಗಳಿದ್ದು ಅವುಗಳಿಂದ ಸಾವಿರಾರು ಕೋಟಿ ರೂ ಟ್ಯಾಕ್ಸ್ ಆದಾಯವು ಸರ್ಕಾರಕ್ಕೆ ಬರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ