AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಟಾಗೆ ಮತ್ತೊಂದು ಆ್ಯಪಲ್ ಬ್ಯುಸಿನೆಸ್; ಐಫೋನ್, ಮ್ಯಾಕ್​​ಬುಕ್ ದುರಸ್ತಿ ಸರ್ವಿಸ್ ವ್ಯವಹಾರ ಪಡೆದ ಟಾಟಾ ಕಂಪನಿ

Tata gets iPhone repair business from Apple: ಟಾಟಾ ಕಂಪನಿ ಆ್ಯಪಲ್​​ನ ಐಫೋನ್ ಮತ್ತು ಮ್ಯಾಕ್​​ಬುಕ್ ಉತ್ಪನ್ನಗಳ ದುರಸ್ತಿ ಕಾರ್ಯದ ಬ್ಯುಸಿನೆಸ್ ಅನ್ನು ಗಿಟ್ಟಿಸಿದೆ. ವಿಸ್ಟ್ರಾನ್ ಕಂಪನಿಯಿಂದ ಈ ಬ್ಯುಸಿನೆಸ್ ಅನ್ನು ಟಾಟಾ ಗ್ರೂಪ್ ಪಡೆದಿದೆ. ಕೋಲಾರದಲ್ಲಿರುವ ತನ್ನ ಐಫೋನ್ ಘಟಕದಲ್ಲಿ ಈ ರಿಪೇರಿ ಸರ್ವಿಸ್ ಅನ್ನು ಟಾಟಾ ನೀಡಲಿದೆ. ಇಲ್ಲಿರುವ ಐಫೋನ್ ಘಟಕವನ್ನು ಟಾಟಾ ಕಂಪನಿ ವಿಸ್ಟ್ರಾನ್​​ನಿಂದಲೇ ಪಡೆದಿತ್ತು.

ಟಾಟಾಗೆ ಮತ್ತೊಂದು ಆ್ಯಪಲ್ ಬ್ಯುಸಿನೆಸ್; ಐಫೋನ್, ಮ್ಯಾಕ್​​ಬುಕ್ ದುರಸ್ತಿ ಸರ್ವಿಸ್ ವ್ಯವಹಾರ ಪಡೆದ ಟಾಟಾ ಕಂಪನಿ
ಐಫೋನ್ ದುರಸ್ತಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 05, 2025 | 6:10 PM

Share

ನವದೆಹಲಿ, ಜೂನ್ 5: ಟಾಟಾ ಗ್ರೂಪ್ ಮತ್ತು ಆ್ಯಪಲ್ ಕಂಪನಿ ನಡುವಿನ ವ್ಯವಹಾರ ದಿನೇ ದಿನೇ ಗಾಢಗೊಳ್ಳುತ್ತಿದೆ. ಆ್ಯಪಲ್ ಕಂಪನಿಗಾಗಿ ಭಾರತದಲ್ಲಿ ಐಫೋನ್ ಅಸೆಂಬ್ಲಿಂಗ್ ಮಾಡಿಕೊಡುತ್ತಿರುವ ಟಾಟಾ ಸಂಸ್ಥೆ ಈಗ ಐಫೋನ್ ದುರಸ್ತಿಯ ಬ್ಯುಸಿನೆಸ್ ಅನ್ನೂ ಪಡೆದಿದೆ. ಆ್ಯಪಲ್ ಕಂಪನಿಯ ಐಫೋನ್ ಮತ್ತು ಮ್ಯಾಕ್​​ಬುಕ್ ಸಾಧನಗಳ ಆಫ್​ಟರ್ ಸೇಲ್ಸ್ ಸರ್ವಿಸ್ ಕಾರ್ಯಗಳನ್ನು ಟಾಟಾ ಕಂಪನಿಯೇ ಮಾಡಲಿದೆ.

ಭಾರತದಲ್ಲಿ ಐಫೋನ್ ಮಾರಾಟ ಗಣನೀಯವಾಗಿ ಹೆಚ್ಚುತ್ತಿರುವುದು ಮತ್ತು ಭವಿಷ್ಯದಲ್ಲಿ ಇನ್ನೂ ಹೆಚ್ಚಾಗಲಿರುವುದರಿಂದ ಟಾಟಾಗೆ ಈ ಸರ್ವಿಸ್ ದೊಡ್ಡ ಬ್ಯುಸಿನೆಸ್ ಎನಿಸಲಿದೆ. ಅಷ್ಟೇ ಅಲ್ಲ, ಆ್ಯಪಲ್ ಕಂಪನಿಯ ಪ್ರಮುಖ ಸರಬರಾಜುದಾರರ ಸಾಲಿಗೆ ಟಾಟಾ ಸಂಸ್ಥೆ ಸೇರಲಿದೆ.

ಇದನ್ನೂ ಓದಿ: ಭಾರತದಲ್ಲಿ ತಯಾರಾಗಲಿದೆ ರಫೇಲ್ ಯುದ್ಧವಿಮಾನದ ಫ್ಯೂಸಲಾಜ್; ಡಸೋ ಏವಿಯೇಶನ್ ಜೊತೆ ಟಾಟಾ ಗ್ರೂಪ್ ಒಪ್ಪಂದ

ವಿಸ್ಟ್ರಾನ್​​ನಿಂದ ಟಾಟಾ ವರ್ಗಾವಣೆ ಆಗುತ್ತಿದೆ ಐಫೋನ್ ರಿಪೇರ್ ಬ್ಯುಸಿನೆಸ್…

ತೈವಾನ್ ಮೂಲದ ವಿಸ್ಟ್ರಾನ್ ಸಂಸ್ಥೆಯ ಐಸಿಟಿ ಸರ್ವಿಸ್ ಮ್ಯಾನೇಜ್ಮೆಂಟ್ ಸಲ್ಯೂಶನ್ಸ್ ವಿಭಾಗವು ಐಫೋನ್​​ನ ಆಫ್ಟರ್ ಸೇಲ್ಸ್ ಸರ್ವಿಸ್ ಕಾರ್ಯಗಳನ್ನು ಮಾಡುತ್ತದೆ. ಈಗ ಈ ವ್ಯವಹಾರವನ್ನು ಟಾಟಾ ಸಂಸ್ಥೆ ಪಡೆದಿದೆ. ಕರ್ನಾಟಕದಲ್ಲಿರುವ ಐಫೋನ್ ಅಸೆಂಬ್ಲಿಂಗ್ ಯುನಿಟ್​​ನಲ್ಲೇ ರಿಪೇರಿ ಸರ್ವಿಸ್ ಕೂಡ ನಡೆಯಲಿದೆ.

ಕೋಲಾರದ ನರಸಾಪುರದಲ್ಲಿ ಈಗ ಟಾಟಾ ಕಂಪನಿಯ ಐಫೋನ್ ಘಟಕ ಏನಿದೆಯೋ ಅದು ಹಿಂದೆ ವಿಸ್ಟ್ರಾನ್​ನದ್ದಾಗಿತ್ತು. ಆ್ಯಪಲ್​​ನ ಪ್ರಮುಖ ಸರಬರಾಜುದಾರರಲ್ಲಿ ವಿಸ್ಟ್ರಾನ್ ಕೂಡ ಒಂದು. ಆದರೆ, ಭಾರತದಲ್ಲಿ ತನ್ನ ಐಫೋನ್ ಅಸೆಂಬ್ಲಿಂಗ್ ವ್ಯವಹಾರವನ್ನು ಟಾಟಾ ಕಂಪನಿಗೆ ಮಾರಿದೆ. ಅದೂ ಸೇರಿದಂತೆ ಭಾರತದಲ್ಲಿ ಟಾಟಾ ಕಂಪನಿ ಮೂರು ಐಫೋನ್ ಮ್ಯಾನುಫ್ಯಾಕ್ಚರಿಂಗ್ ಯುನಿಟ್​​ಗಳನ್ನು ಹೊಂದಿದೆ. ಈ ಪೈಕಿ ಒಂದು ಯುನಿಟ್​​​ನಲ್ಲಿ ಐಫೋನ್​​ನ ಬಿಡಿಭಾಗಗಳನ್ನು ತಯಾರಿಸುವ ಕೆಲಸ ಮಾಡುತ್ತದೆ ಟಾಟಾ.

ಇದನ್ನೂ ಓದಿ: ವಿರಳ ಭೂಖನಿಜದೊಂದಿಗೆ ಚೀನಾ ಆಟ; ಇಡೀ ವಿಶ್ವಕ್ಕೆ ಸಂಕಟ; ಭಾರತದಿಂದ ಪರ್ಯಾಯ ಮಾರ್ಗ ಹುಡುಕಾಟ

ಇತ್ತ, ವಿಸ್ಟ್ರಾನ್ ಸಂಸ್ಥೆಯು ಬೇರೆ ಕೆಲ ಕ್ಲೈಂಟ್​​ಗಳಿಗೆ ಆಫ್ಟರ್ ಸೇಲ್ಸ್ ಸರ್ವಿಸ್ ಒದಗಿಸುವುದನ್ನು ಮುಂದುವರಿಸಲಿದೆ. ಆದರೆ, ಭಾರತದಲ್ಲಿ ಆ್ಯಪಲ್ ಕಂಪನಿಯೊಂದಿಗೆ ವಿಸ್ಟ್ರಾನ್​​ನ ನಂಟು ಬಹುತೇಕ ಸಮಾಪ್ತಿಯಾಗಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ